ಸ್ಟೀವನ್‌ ಸ್ಮಿತ್‌, ಡೇವಿಡ್‌ ವಾರ್ನರ್‌: ನಿಷೇಧ ಮುಗಿಸಿದವರಿಗೆ ವಿಶ್ವಕಪ್‌ ಕರೆ

Team Udayavani, Apr 16, 2019, 9:57 AM IST

ಮೆಲ್ಬರ್ನ್: ನಿರೀಕ್ಷೆಯಂತೆ, ಒಂದು ವರ್ಷದ ನಿಷೇಧ ಪೂರೈಸಿದ ಸ್ಟೀವನ್‌ ಸ್ಮಿತ್‌ ಮತ್ತು ಡೇವಿಡ್‌ ವಾರ್ನರ್‌ ಆಸ್ಟ್ರೇಲಿಯದ ವಿಶ್ವಕಪ್‌ ತಂಡಕ್ಕೆ ಆಯ್ಕೆಯಾಗಿದ್ದಾರೆ. ಹ್ಯಾಝಲ್‌ವುಡ್‌ ಮತ್ತು ಹ್ಯಾಂಡ್ಸ್‌ಕಾಂಬ್‌ ಅವರನ್ನು ಹೊರಗಿಡಲಾಗಿದೆ.

ಕೇಪ್‌ಟೌನ್‌ ಟೆಸ್ಟ್‌ ಪಂದ್ಯದ “ಚೆಂಡು ವಿರೂಪ’ ಪ್ರಕರಣ ದ ವೇಳೆ ಸ್ಮಿತ್‌ ಆಸೀಸ್‌ ನಾಯಕರಾಗಿದ್ದರೆ, ವಾರ್ನರ್‌ ಉಪನಾಯಕರಾಗಿದ್ದರು. ಆದರೆ ವಿಶ್ವಕಪ್‌ ವೇಳೆ ಇವರು ಸಾಮಾನ್ಯ ಆಟಗಾರರಾಗಷ್ಟೇ ಆಗಿರುತ್ತಾರೆ. ತಂಡದ ನಾಯಕತ್ವ ಆರನ್‌ ಫಿಂಚ್‌ ಪಾಲಾಗಿದೆ. ನಿಷೇಧದ ಬಳಿಕ ಪಾಕಿಸ್ಥಾನ ವಿರುದ್ಧದ ಅಂತಿಮ 2 ಪಂದ್ಯಗಳಲ್ಲಿ ವಾರ್ನರ್‌ ಮತ್ತು ಸ್ಮಿತ್‌ ಆಡಬಹುದಿತ್ತಾದರೂ ಆಯ್ಕೆಗಾರರು ಇವರನ್ನು ಪರಿಗಣಿಸಲಿಲ್ಲ. ಇಬ್ಬರೂ ಐಪಿಎಲ್‌ ಆಡಲು ಭಾರತಕ್ಕೆ ಆಗಮಿಸಿದರು. ಇವರಲ್ಲಿ ವಾರ್ನರ್‌ ರನ್‌ ಮಳೆ ಸುರಿಸುತ್ತಿದ್ದಾರೆ.

ವಿಶ್ವಕಪ್‌ಗೆ ಆಯ್ಕೆಯಾದ ಕೆಲವು ಆಸೀಸ್‌ ಆಟಗಾರರೀಗ ಐಪಿ ಎಲ್‌ನಲ್ಲಿ ಆಡುತ್ತಿದ್ದಾರೆ. ಆದರೆ ಐಪಿಎಲ್‌ ಕೊನೆಯ ಹಂತದಲ್ಲಿ ಇವರ ಸೇವೆ ಲಭ್ಯವಾಗದು. ಸ್ಮಿತ್‌, ವಾರ್ನರ್‌, ಸ್ಟೋಯಿನಿಸ್‌, ಬೆಹ್ರಾನ್ಡಾಫ್ ಇವರಲ್ಲಿ ಪ್ರಮುಖರು. ನಥನ್‌ ಕೋಲ್ಟರ್‌ ನೈಲ್‌ ಈಗಾಗಲೇ ಗಾಯಾಳಾಗಿ ತವರಿಗೆ ವಾಪಸಾಗಿದ್ದಾರೆ.

ಆಸ್ಟ್ರೇಲಿಯ ತಂಡ
ಆರನ್‌ ಫಿಂಚ್‌ (ನಾಯಕ), ಉಸ್ಮಾನ್‌ ಖ್ವಾಜಾ, ಡೇವಿಡ್‌ ವಾರ್ನರ್‌, ಸ್ಟೀವನ್‌ ಸ್ಮಿತ್‌, ಶಾನ್‌ ಮಾರ್ಷ್‌, ಗ್ಲೆನ್‌ ಮ್ಯಾಕ್ಸ್‌ ವೆಲ್‌, ಮಾರ್ಕಸ್‌ ಸ್ಟೋಯಿನಿಸ್‌, ಅಲೆಕ್ಸ್‌ ಕ್ಯಾರಿ, ಪ್ಯಾಟ್‌ ಕಮಿನ್ಸ್‌, ಮಿಚೆಲ್‌ ಸ್ಟಾರ್ಕ್‌, ಜೇ ರಿಚರ್ಡ್‌ ಸನ್‌, ನಥನ್‌ ಕೋಲ್ಟರ್‌ ನೈಲ್‌, ಜಾಸನ್‌ ಬೆಹ್ರಾನ್ಡಾಫ್ , ನಥನ್‌ ಲಿಯೋನ್‌, ಆ್ಯಡಂ ಝಂಪ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಹೊಸದಿಲ್ಲಿ : ಭಾರತದ ವರಿಷ್ಠ ನ್ಯಾಯಮೂರ್ತಿ (ಸಿಜೆಐ) ರಂಜನ್‌ ಗೊಗೊಯ್‌ ಅವರಿಂದು ಶನಿವಾರ ಸುಪ್ರೀಂ ಕೋರ್ಟಿನ ವಿಶೇಷ ಪೀಠದಲ್ಲಿದ್ದುಕೊಂಡು ತನ್ನ ವಿರುದ್ಧ...

  • ಇಂದು ನಿತ್ಯ ಹರಿದ್ವರ್ಣ ಕಾಡುಗಳಲ್ಲಷ್ಟೇ ಬೃಹತ್‌ ಗಾತ್ರದ ದೇವದಾರು, ತೇಗ, ಬೀಟೆ ಮೊದಲಾದ ಮರಗಳನ್ನು ಕಾಣಬಹುದು. ಆದರೆ ಸವಣೂರಿನ ಕಲ್ಮಠದಲ್ಲಿ ಸಾವಿರಾರು ವರ್ಷಗಳ...

  • Gadwall (Anas strepera) M -Duck + ಗದ್ವಾಲ್‌ ಬಾತನ್ನು ಚರ್ಲೆ ಅಥವಾ ಸರಳೆ ಬಾತು ಎಂದು ಕರೆಯಲಾಗುತ್ತದೆ. ಈ ಹಕ್ಕಿ, ನೀರಿನಲ್ಲಿ ಮುಳುಗಿ ಅಲ್ಲಿರುವ ಕ್ರಿಮಿ ಕೀಟಗಳನ್ನು ಬೇಟೆಯಾಡುತ್ತದೆ....

  • ವೃತ್ತಿಯಲ್ಲಿ ಶಿಕ್ಷಕರಾದ ಕಲ್ಯಾಣ್‌ ಕುಮಾರ್‌ ಅವರಿಗೆ ಪತ್ರಿಕೆ ಸಂಗ್ರಹಿಸುವ ಹವ್ಯಾಸ. ಇದು ಹುಟ್ಟಿದ್ದು ಪರ ಊರಿಗೆ ಪ್ರಯಾಣಿಸುವಾಗ . ಬೇಜಾರು ಕಳೆಯಲಿಕ್ಕೆ...

  • ಉದ್ದಾನ ವೀರಭದ್ರಸ್ವಾಮಿಗಳು ಈ ಆಂಜನೇಯನಿಗೆ ಲಿಂಗಧಾರಣೆ ಮಾಡಿದ್ದು, ಕೊರಳಿನಲ್ಲಿ ರುದ್ರಾಕ್ಷಿ ಮಾಲೆ ಇರುವುದು ಒಂದು ವಿಶೇಷ. ಸೊಂಟದಲ್ಲಿ ಕತ್ತಿ ಇರುವುದು...

  • ಅರಳಿಮರದ ಬುಡದಲ್ಲಿ ಕುಳಿತು ಸರ್ವಾಂತರ್ಯಾಮಿಯಾದ ಭಗವಂತನ ಸ್ವರೂಪವನ್ನು ಯೋಗಿಗಳಿಂದ ಕೇಳಿ ತಿಳಿದ ರೀತಿಯಲ್ಲೇ ಧ್ಯಾನ ಮಾಡತೊಡಗಿದ್ದರು. ಏಕಾಗ್ರಚಿತ್ತದಿಂದ...