ಸೌತ್‌ ಏಶ್ಯನ್‌ ಗೇಮ್ಸ್‌: ಭಾರತಕ್ಕೆ ಹತ್ತು ಬ್ಯಾಡ್ಮಿಂಟನ್‌ ಪದಕ

Team Udayavani, Dec 6, 2019, 11:45 PM IST

ಪೋಖರಾ (ನೇಪಾಲ): 13ನೇ ಸೌತ್‌ ಏಶ್ಯನ್‌ ಗೇಮ್ಸ್‌ನ ಬ್ಯಾಡ್ಮಿಂಟನ್‌ ಸ್ಪರ್ಧೆಗಳಲ್ಲಿ ಭಾರತ ತನ್ನ ಪ್ರಾಬಲ್ಯ ಮುಂದುವರಿಸಿದೆ. ಶುಕ್ರವಾರ ಆಶ್ಮಿತಾ ಚಾಲಿಹಾ ಮತ್ತು ಸಿರಿಲ್‌ ವರ್ಮ ಕ್ರಮವಾಗಿ ವನಿತಾ ಹಾಗೂ ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ಚಿನ್ನ ಗೆಲ್ಲುವ ಮೂಲಕ ಬ್ಯಾಡ್ಮಿಂಟನ್‌ನಲ್ಲಿ ಭಾರತದ ಪದಕಗಳ ಸಂಖ್ಯೆಯನ್ನು 10ಕ್ಕೆ ಏರಿಸಿದರು. ಇದರಲ್ಲಿ 6 ಚಿನ್ನ, 2 ಬೆಳ್ಳಿ, 2 ಕಂಚಿನ ಪದಕಗಳು ಸೇರಿವೆ.

ಪುರುಷರ ಆಲ್‌ ಇಂಡಿಯನ್‌ ಫೈನಲ್‌ನಲ್ಲಿ ಮಾಜಿ ವಿಶ್ವ ಜೂನಿಯರ್‌ ಚಾಂಪಿಯನ್‌ ಖ್ಯಾತಿಯ ಸಿರಿಲ್‌ ವರ್ಮ 17-21, 23-21, 21-13 ಅಂತರದಿಂದ ಆರ್ಯಮನ್‌ ಟಂಡನ್‌ ಅವರನ್ನು ಮಣಿಸಿದರು. ವನಿತಾ ಸಿಂಗಲ್ಸ್‌ ಕೂಡ ಭಾರತೀಯ ಆಟಗಾರ್ತಿಯರ ನಡುವೆಯೇ ಸಾಗಿತು. ಇಲ್ಲಿ ಅಶ್ಮಿತಾ ಚಾಲಿಹಾ 21-18, 25-23ರಿಂದ ಗಾಯತ್ರಿ ಗೋಪಿಚಂದ್‌ಗೆ ಸೋಲುಣಿಸಿದರು.

ಪುರುಷರ ಡಬಲ್ಸ್‌ ಫೈನಲ್‌ನಲ್ಲಿ ಧ್ರುವ ಕಪಿಲ-ಕೃಷ್ಣಪ್ರಸಾದ್‌ ಗರಂಗ್‌ 21-19, 19-21, 21-18ರಿಂದ ಶ್ರೀಲಂಕಾದ ಸಚಿನ್‌ ಡಾಯಸ್‌-ಬುವನೆಕ ಗುಣತಿಲಕ ಅವರನ್ನು ಪರಾಭವಗೊಳಿಸಿದರು.

ಮಿಶ್ರ ಡಬಲ್ಸ್‌ನಲ್ಲಿ ಅಗ್ರ ಶ್ರೇಯಾಂಕದ ಧ್ರುವ ಕಪಿಲ-ಮೇಘನಾ ಜಕ್ಕಂಪುಡಿ ಲಂಕಾದ ಸಚಿನ್‌ ಡಾಯಸ್‌-ತಿಲಿನಿ ಪ್ರಮೋದಿಕಾ ವಿರುದ್ಧ 21-16, 21-14 ಅಂತರದಿಂದ ಗೆದ್ದು ಸ್ವರ್ಣ ಸಾಧನೆಗೈದರು.

ಧ್ರುವ ಕಪಿಲ ಪುರುಷರ ಎಮರ್ಜಿಂಗ್‌ ಚಾಂಪಿಯನ್‌ ಮತ್ತು ಮಿಕ್ಸೆಡ್‌ ಡಬಲ್ಸ್‌ ವಿಭಾಗದಲ್ಲಿ ಅವಳಿ ಚಿನ್ನ ಗೆದ್ದು ಮೆರೆದರು.

ಅಪೇಕ್ಷಾಗೆ ಈಜು ಚಿನ್ನ
ಸೌತ್‌ ಏಶ್ಯನ್‌ ಗೇಮ್ಸ್‌ ಈಜು ಸ್ಪರ್ಧೆಯಲ್ಲಿ ಕಿನ್ನಿಗೋಳಿ ಮೂಲದ ಅಪೇಕ್ಷಾ ಫೆರ್ನಾಂಡಿಸ್‌ ಚಿನ್ನದ ಪದಕ ಜಯಿಸಿದ್ದಾರೆ. ಅವರು 200 ಮೀ. ಬ್ರೆಸ್ಟ್‌ಸ್ಟ್ರೋಕ್‌ ಸ್ಪರ್ಧೆಯಲ್ಲಿ 2 ನಿಮಿಷ, 38.05 ಸೆಕೆಂಡ್‌ಗಳ ಸಾಧನೆ ದಾಖಲಿಸಿ ಮೊದಲಿಗರಾದರು.

5ನೇ ದಿನವೂ ಪದಕ ಬೇಟೆ
ಸೌತ್‌ ಏಶ್ಯನ್‌ ಗೇಮ್ಸ್‌ನ 5ನೇ ದಿನವೂ ಭಾರತ ಪದಕ ಬೇಟೆ ಮುಂದುವರಿಸಿ ಅಗ್ರಸ್ಥಾನ ಕಾಯ್ದುಕೊಂಡಿತು. ಶುಕ್ರವಾರ ಭಾರತ 19 ಚಿನ್ನ ಸಹಿತ ಒಟ್ಟು 41 ಪದಕಗಳನ್ನು ಗೆದ್ದಿತು. ಇದರಲ್ಲಿ 18 ಬೆಳ್ಳಿ, 4 ಕಂಚು ಸೇರಿವೆ.

ಭಾರತದ ಒಟ್ಟು ಪದಕಗಳ ಸಂಖ್ಯೆಯೀಗ 165ಕ್ಕೆ ಏರಿದೆ (81 ಚಿನ್ನ, 59 ಬೆಳ್ಳಿ, 25 ಕಂಚು). ಆತಿಥೇಯ ನೇಪಾಲ 116 ಪದಕಗಳೊಂದಿಗೆ ದ್ವಿತೀಯ ಸ್ಥಾನದಲ್ಲಿದೆ (41 ಚಿನ್ನ, 27 ಬೆಳ್ಳಿ, 48 ಕಂಚು). 134 ಪದಕ ಜಯಿಸಿರುವ ಶ್ರೀಲಂಕಾ 3ನೇ ಸ್ಥಾನ ಉಳಿಸಿಕೊಂಡಿದೆ (23 ಚಿನ್ನ, 42 ಬೆಳ್ಳಿ, 69 ಕಂಚು).

ಭಾರತದ ಈಜು ತಾರೆಯರು ಅಪ್ರತಿಮ ಪ್ರದರ್ಶನ ಮುಂದುವರಿಸಿದರು. ಕರ್ನಾಟಕದ ಶ್ರೀಹರಿ ನಟರಾಜ್‌ ಹಾಗೂ ಎಸ್‌.ಪಿ. ಲಿಖೀತ್‌ ಚಿನ್ನದ ಪದಕ ಗೆದ್ದು ಮಿಂಚಿದರು. 200 ಮೀ. ಬ್ಯಾಕ್‌ಸ್ಟ್ರೋಕ್‌ನಲ್ಲಿ ಶ್ರೀಹರಿ ನಟರಾಜ್‌ 1 ನಿಮಿಷ 59.69 ಸೆಕೆಂಡ್ಸ್‌ನಲ್ಲಿ ಗುರಿ ತಲುಪಿ ಸ್ವರ್ಣಕ್ಕೆ ಕೊರಳೊಡ್ಡಿದರು. ಎಸ್‌.ಪಿ. ಲಿಖೀತ್‌ 100 ಮೀ. ಬ್ರೆಸ್ಟ್‌ಸ್ಟ್ರೋಕ್‌ನಲ್ಲಿ 1 ನಿಮಿಷ 00.42 ಸೆಕೆಂಡ್ಸ್‌ನಲ್ಲಿ ಗುರಿ ಸೇರಿ ಚಿನ್ನದ ಪದಕ ಗೆದ್ದರು. ಈಜಿನಲ್ಲಿ ಭಾರತೀಯರು ಒಟ್ಟು 10 ಪದಕ ಗೆದ್ದಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಸಮಸ್ಯೆ ಯಾವುದೇ ಇರಲಿ, ಇಷ್ಟಾರ್ಥ ಕಾರ್ಯವಿರಲಿ, ಕೇವಲ 5 ದಿನಗಳಲ್ಲಿ ಪರಿಹಾರಕ್ಕಾಗಿ ಇಂದೇ ಭೇಟಿ ನೀಡಿ
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ