ನೀರಜ್ ಚೋಪ್ರಾಗೆ ಸ್ವಿಸ್ ಪ್ರವಾಸೋದ್ಯಮ ಗೌರವ
Team Udayavani, Feb 8, 2024, 11:39 PM IST
ಲಾಸನ್ನೆ: ಭಾರತದ ಒಲಿಂಪಿಕ್ ಮತ್ತು ವಿಶ್ವ ಚಾಂಪಿಯನ್ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಅವರನ್ನು ಸ್ವಿಟ್ಜರ್ಲ್ಯಾಂಡ್ ಪ್ರವಾಸೋದ್ಯಮವು ಯುರೋಪ್ನ ಉನ್ನತ ಸ್ಥಳವಾದ ಜಂಗ್ಫ್ರಾಜೋಸ್ನಲ್ಲಿರುವ ಪ್ರಖ್ಯಾತ ಐಸ್ ಪ್ಯಾಲೇಸ್ನಲ್ಲಿ ಫಲಕವೊಂದನ್ನು ಸ್ಥಾಪಿಸಿ ಗೌರವಿಸಿದೆ.
ನೀರಜ್ ಚೋಪ್ರಾ ಅವರಿಂದಲೇ ಅವರ ಸ್ಮರಣಾರ್ಥ ಸ್ಥಾಪಿಸಿದ ಫಲಕವನ್ನು ಅನಾವರಣಗೊಳಿಸಲಾಯಿತು ಎಂದು ಸ್ವಿಟ್ಜರ್ಲ್ಯಾಂಡ್ ಪ್ರವಾಸೋದ್ಯಮ ಪ್ರಕಟನೆಯಲ್ಲಿ ತಿಳಿಸಿದೆ. ಇದೇ ಸಂದರ್ಭ ಪ್ರವಾಸಿಗರ ಆಕರ್ಷಣೆಗಾಗಿ ತನ್ನಲ್ಲಿದ್ದ ಜಾವೆಲಿನ್ ಒಂದನ್ನು ದೇಣಿಗೆಯಾಗಿ ನೀಡಿದರು. ಈ ಜಾವೆಲಿನ್ ಅನ್ನು ಫಲಕದ ಬದಿಯಲ್ಲಿ ಇರಿಸಲಾಗಿದೆ.
ಐಸ್ ಪ್ಯಾಲೇಸ್ನಲ್ಲಿ ಈಗಾಗಲೇ ಸ್ಥಾಪಿಸಿದ ರೋಜರ್ ಫೆಡರರ್, ಗಾಲ್ಫ್ ಆಟಗಾರ ರೋರಿ ಮೆಕ್ರಾಯ್ ಅವರ ಫಲಕಗಳ ಸಾಲಿಗೆ ನೀರಜ್ ಚೋಪ್ರಾ ಸೇರಿಕೊಂಡಿದ್ದಾರೆ. ಜಂಗ್ಫ್ರಾಜೋಸ್ನಲ್ಲಿರುವ “ವಾಲ್ ಆಫ್ ಫೇಮ್’ ಆಟಗಾರರ ಸಾಧನೆ ಮತ್ತು ಸಮರ್ಪಣೆಯ ಮನೋಭಾವಕ್ಕೆ ಸಾಕ್ಷಿಯಾಗಿದೆ ಎಂದು ಸ್ವಿಸ್ ಪ್ರವಾಸೋದ್ಯಮ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Americaದ ವಿವಿಯಲ್ಲಿ ತೀವ್ರಗೊಂಡ ಪ್ಯಾಲೆಸ್ತೀನ್ ಪರ ಪ್ರತಿಭಟನೆ; ನೂರಾರು ಮಂದಿ ಬಂಧನ
LS Polls: ಇನ್ನು 24 ಗಂಟೆಯಲ್ಲಿ ಅಮೇಥಿ, ರಾಯ್ಬರೇಲಿ ಕಾಂಗ್ರೆಸ್ ಅಭ್ಯರ್ಥಿಗಳ ಹೆಸರು ಫೈನಲ್
Lok Sabha Polls: ಮೋದಿ ಪ್ರಧಾನಿಯಾಗುವುದನ್ನು ತಡೆಯಲು ಸಾಧ್ಯವಿಲ್ಲ: ಬಿ.ವೈ. ರಾಘವೇಂದ್ರ
LokSabha: ಒಂದೇ ಒಂದು ಪಕ್ಷ 272 ಲೋಕಸಭಾ ಸ್ಥಾನಗಳಲ್ಲಿ ಸ್ಪರ್ಧಿಸಿಲ್ಲ: ಪ್ರಧಾನಿ ವ್ಯಂಗ್ಯ
Lok Sabha Election: ಕಾಂಗ್ರೆಸ್ ಅಭ್ಯರ್ಥಿಗೆ ಸೋಲಿನ ಭೀತಿ: ಗಾಯತ್ರಿ ಸಿದ್ದೇಶ್ವರ