ಟಿ20 ರ್‍ಯಾಂಕಿಂಗ್‌: ಕುಲದೀಪ್‌ ನಂ.2


Team Udayavani, Feb 12, 2019, 12:30 AM IST

kuldeep-no2.jpg

ದುಬಾೖ: ಭಾರತದ ಚೈನಾಮನ್‌ ಬೌಲರ್‌ ಕುಲದೀಪ್‌ ಯಾದವ್‌ ನೂತನ ಟಿ20 ಬೌಲಿಂಗ್‌ ರ್‍ಯಾಂಕಿಂಗ್‌ನಲ್ಲಿ 728 ಅಂಕಗಳೊಂದಿಗೆ 2ನೇ ಸ್ಥಾನ ಅಲಂಕರಿಸಿದ್ದಾರೆ. ಇದು ಅವರ ಜೀವನಶ್ರೇಷ್ಠ ರ್‍ಯಾಂಕಿಂಗ್‌ ಎಂಬುದು ವಿಶೇಷ. ಅಫ್ಘಾನಿಸ್ಥಾನದ ಲೆಗ್‌ಸ್ಪಿನ್ನರ್‌ ರಶೀದ್‌ ಖಾನ್‌ ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ (793).

ಕುಲದೀಪ್‌ ಯಾದವ್‌ ನ್ಯೂಜಿಲ್ಯಾಂಡ್‌ ಎದುರಿನ ಟಿ20 ಸರಣಿಯಲ್ಲಿ ಆಡಿದ್ದು ಕೊನೆಯ ಪಂದ್ಯ ಮಾತ್ರ. ಇದರಲ್ಲಿ ಕಿವೀಸ್‌ ಆರಂಭಿಕರಾದ ಟಿಮ್‌ ಸೀಫ‌ರ್ಟ್‌ ಮತ್ತು ಕಾಲಿನ್‌ ಮುನ್ರೊ ವಿಕೆಟ್‌ ಹಾರಿಸುವಲ್ಲಿ ಯಶಸ್ವಿಯಾಗಿದ್ದರು.

ಈ ಬಾರಿಯ ರ್‍ಯಾಂಕಿಂಗ್‌ನಲ್ಲಿ ಸ್ಪಿನ್ನರ್‌ಗಳೇ ಮೇಲುಗೈ ಸಾಧಿಸಿದ್ದು ಗಮನಾರ್ಹ. ಪಾಕಿಸ್ಥಾನದ ಇಮಾದ್‌ ವಾಸಿಮ್‌ 5 ಸ್ಥಾನ ಮೇಲೇರಿ 4ನೇ ಸ್ಥಾನಕ್ಕೆ ಬಂದರೆ, ನ್ಯೂಜಿಲ್ಯಾಂಡಿನ ಮಿಚೆಲ್‌ ಸ್ಯಾಂಟ್ನರ್‌ 4 ಸ್ಥಾನಗಳ ಪ್ರಗತಿಯೊಂದಿಗೆ 10ನೇ ಸ್ಥಾನಕ್ಕೆ ಜಿಗಿದಿದ್ದಾರೆ.ಈ ಸಾಲಲ್ಲಿ ಎಡಗೈ ಸ್ಪಿನ್ನರ್‌ ಕೃಣಾಲ್‌ ಪಾಂಡ್ಯ ಅವರನ್ನೂ ಸೇರಿಸಬಹುದು. ಅವರು ಒಮ್ಮೆಲೇ 39 ಸ್ಥಾನಗಳ ನೆಗೆತ ಕಂಡಿದ್ದು, ಜೀವನಶ್ರೇಷ್ಠ 58ನೇ ಸ್ಥಾನಕ್ಕೆ ಬಂದು ನಿಂತಿದ್ದಾರೆ.

ರೋಹಿತ್‌, ಧವನ್‌ ಪ್ರಗತಿ
ಬ್ಯಾಟಿಂಗ್‌ ವಿಭಾಗದಲ್ಲಿ ರೋಹಿತ್‌ ಶರ್ಮ 10ರಿಂದ 7ನೇ ಸ್ಥಾನಕ್ಕೆ ಏರಿದ್ದಾರೆ. ಶಿಖರ್‌ ಧವನ್‌ ಅವರದು ಒಂದು ಸ್ಥಾನದ ನೆಗೆತ (11).

ನ್ಯೂಜಿಲ್ಯಾಂಡಿನ ಕೇನ್‌ ವಿಲಿಯಮ್ಸನ್‌ ಒಂದು ಸ್ಥಾನ (12), ರಾಸ್‌ ಟಯ್ಲರ್‌ 7 ಸ್ಥಾನ (51), ಟಿಮ್‌ ಸೀಫ‌ರ್ಟ್‌ 87 ಸ್ಥಾನ (83) ಮೇಲೇರಿದ್ದಾರೆ. ಬಾಬರ್‌ ಆಜಂ ನಂ.1 ಸ್ಥಾನ ಕಾಯ್ದುಕೊಂಡಿದ್ದಾರೆ.

ಎರಡರಲ್ಲೇ ಉಳಿದ ಭಾರತ
ತಂಡ ರ್‍ಯಾಂಕಿಂಗ್‌ನಲ್ಲಿ ಭಾರತ ದ್ವಿತೀಯ ಸ್ಥಾನದಲ್ಲೇ ಉಳಿದಿದೆ (124 ಅಂಕ). ಆದರೆ ನ್ಯೂಜಿಲ್ಯಾಂಡ್‌ ವಿರುದ್ಧ ಸರಣಿ ಕಳೆದುಕೊಂಡಿದ್ದರಿಂದ 2 ಅಂಕಗಳನ್ನು ಕಳೆದುಕೊಂಡಿದೆ. ನ್ಯೂಜಿಲ್ಯಾಂಡ್‌ ಆರರಲ್ಲೇ ಮುಂದುವರಿದಿದೆ. 135 ಅಂಕ ಹೊಂದಿರುವ ಪಾಕಿಸ್ಥಾನಕ್ಕೆ ಅಗ್ರಸ್ಥಾನ.

ಟಿ20: ಟಾಪ್‌-10 ತಂಡಗಳು
1. ಪಾಕಿಸ್ಥಾನ    135
2. ಭಾರತ    124
3. ದಕ್ಷಿಣ ಆಫ್ರಿಕಾ    118
4. ಇಂಗ್ಲೆಂಡ್‌    118
5. ಆಸ್ಟ್ರೇಲಿಯ    117
6. ನ್ಯೂಜಿಲ್ಯಾಂಡ್‌    116
7. ವೆಸ್ಟ್‌ ಇಂಡೀಸ್‌    101
8. ಅಫ್ಘಾನಿಸ್ಥಾನ    92
9. ಶ್ರೀಲಂಕಾ    86
10. ಬಾಂಗ್ಲಾದೇಶ    77

ಟಿ20: ಟಾಪ್‌-10 ಬ್ಯಾಟ್ಸ್‌ಮನ್‌
1. ಬಾಬರ್‌ ಆಜಂ    885
2. ಕಾಲಿನ್‌ ಮುನ್ರೊ    825
3. ಆರನ್‌ ಫಿಂಚ್‌    806
4. ಎವಿನ್‌ ಲೆವಿಸ್‌    751
5. ಗ್ಲೆನ್‌ ಮ್ಯಾಕ್ಸ್‌ವೆಲ್‌    745
6. ಫ‌ಕಾರ್‌ ಜಮಾನ್‌    700
7. ರೋಹಿತ್‌ ಶರ್ಮ    698
8. ಅಲೆಕ್ಸ್‌ ಹೇಲ್ಸ್‌    697
9. ಜಾಸನ್‌ ರಾಯ್‌    688
10. ಕೆ.ಎಲ್‌. ರಾಹುಲ್‌    677

ಟಿ20: ಟಾಪ್‌-10 ಬೌಲರ್
1. ರಶೀದ್‌ ಖಾನ್‌    793
2. ಕುಲದೀಪ್‌ ಯಾದವ್‌    728
3. ಶಾದಾಬ್‌ ಖಾನ್‌    720
4. ಇಮಾದ್‌ ವಾಸಿಮ್‌    705
5. ಆದಿಲ್‌ ರಶೀದ್‌    676
6. ಆ್ಯಡಂ ಝಂಪ    670
7. ಶಕಿಬ್‌ ಅಲ್‌ ಹಸನ್‌    658
8. ಐಶ್‌ ಸೋಧಿ    657
9. ಫಾಹಿಮ್‌ ಅಶ್ರಫ್    655
10. ಮಿಚೆಲ್‌ ಸ್ಯಾಂಟ್ನರ್‌    638

ಟಾಪ್ ನ್ಯೂಸ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-aaaa

Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

17

Team India: ಟಿ20 ವಿಶ್ವಕಪ್‌ ತಂಡ ರಾಹುಲ್‌ಗೆ ಚಾನ್ಸ್‌, ಹಾರ್ದಿಕ್‌ ಪಾಂಡ್ಯಗೆ ಕೊಕ್‌?

Chess: ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್‌

Chess: ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್‌

Archery World Cup: ಆರ್ಚರಿ ವಿಶ್ವಕಪ್‌ ರಿಕರ್ವ್‌ ವಿಭಾಗದಲ್ಲೂ ಭಾರತ ಫೈನಲ್‌ಗೆ

Archery World Cup: ಆರ್ಚರಿ ವಿಶ್ವಕಪ್‌ ರಿಕರ್ವ್‌ ವಿಭಾಗದಲ್ಲೂ ಭಾರತ ಫೈನಲ್‌ಗೆ

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-aaaa

Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.