ಟಿ20 ಸರಣಿ: 2-0 ಗೆಲುವಿನ ನಿರೀಕ್ಷೆಯಲ್ಲಿ ಟೀಮ್ ಇಂಡಿಯಾ
Team Udayavani, Jun 29, 2018, 6:00 AM IST
ಡಬ್ಲಿನ್: ಆತಿಥೇಯ ಅಯರ್ಲ್ಯಾಂಡ್ ಎದುರಿನ ಮೊದಲ ಟಿ20 ಪಂದ್ಯವನ್ನು 76 ರನ್ನುಗಳ ಅಂತರದಿಂದ ಗೆದ್ದ ಭಾರತ ತಂಡ, ಶುಕ್ರವಾರದ 2ನೇ ಹಾಗೂ ಕೊನೆಯ ಪಂದ್ಯ ವನ್ನೂ ಗೆದ್ದು ಸರಣಿಯನ್ನು ಕ್ಲೀನ್ಸ್ವೀಪ್ ಆಗಿ ವಶ ಪಡಿಸಿಕೊಳ್ಳುವ ಯೋಜನೆಯಲ್ಲಿದೆ.
ಬುಧವಾರ ರಾತ್ರಿ ರೋಹಿತ್ ಶರ್ಮ (97) ಹಾಗೂ ಶಿಖರ್ ಧವನ್ (74) ಜೋಡಿಯ ಆಕರ್ಷಕ ಆಟದ ನೆರವಿನಿಂದ ಭಾರತ 5 ವಿಕೆಟಿಗೆ 208 ರನ್ ಪೇರಿಸಿ ಸವಾಲೊಡ್ಡಿತ್ತು. ಜವಾಬಿತ್ತ ಅಯರ್ಲ್ಯಾಂಡ್ 9ಕ್ಕೆ 132 ರನ್ ಮಾತ್ರ ಗಳಿಸಿತ್ತು. ಸ್ಪಿನ್ನರ್ಗಳಾದ ಕುಲದೀಪ್ ಯಾದವ್ (21ಕ್ಕೆ 4) ಹಾಗೂ ಯಜುವೇಂದ್ರ ಚಾಹಲ್ (38ಕ್ಕೆ 3) ಘಾತಕ ದಾಳಿ ಮೂಲಕ ಅಯರ್ಲ್ಯಾಂಡಿನ ದಿಕ್ಕು ತಪ್ಪಿಸಿದ್ದರು. ಭಾರತದ ದಾಳಿಯನ್ನು ತಡೆದು ನಿಂತ ಏಕೈಕ ಐರಿಷ್ ಆಟಗಾರನೆಂದರೆ ಆರಂಭಕಾರ ಜೇಮ್ಸ್ ಶಾನನ್. ಅವರು 35 ಎಸೆತಗಳಿಂದ 60 ರನ್ ಹೊಡೆದರು.
ಶುಕ್ರವಾರದ ಪಂದ್ಯಕ್ಕಾಗಿ ಭಾರತ ತಂಡದಲ್ಲಿ ಕೆಲವು ಬದಲಾವಣೆಗಳಾಗುವ ಸಾಧ್ಯತೆ ಇದೆ. ರಾಹುಲ್, ಕಾರ್ತಿಕ್, ಉಮೇಶ್ ಯಾದವ್ ಅವರು ಆಡುವ ಬಳಗದಲ್ಲಿ ಕಾಣಿಸಿ ಕೊಳ್ಳಬಹುದು.
ಭಾರತ-ಇಂಗ್ಲೆಂಡ್ ಸರಣಿ
ಈ ಸರಣಿ ಬಳಿಕ ಭಾರತ-ಇಂಗ್ಲೆಂಡ್ 3 ಪಂದ್ಯಗಳ ಟಿ20 ಸರಣಿಯಲ್ಲಿ ಸೆಣಸಲಿವೆ. ಮೊದಲ ಪಂದ್ಯ ಜು. 3ರಂದು ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸೀಮರು: ಸಚಿವ ಪ್ರಹ್ಲಾದ್ ಜೋಶಿ
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್
Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ