ಬಂಗಾರ ಗೆದ್ದ ವಿನೇಶ್‌ ಪೋಗಟ್‌

Team Udayavani, Jul 8, 2019, 5:59 AM IST

ಮ್ಯಾಡ್ರಿಡ್‌ (ಸ್ಪೇನ್‌): ಇಲ್ಲಿ ನಡೆಯುತ್ತಿರುವ “ಗ್ರ್ಯಾನ್‌ಪ್ರಿ ಆಫ್ ಸ್ಪೇನ್‌’ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ವಿನೇಶ್‌ ಪೋಗಟ್‌ ಚಿನ್ನದ ಪದಕ ಗೆದ್ದಿದ್ದಾರೆ. ಅವರು ತಮ್ಮ ವಿಭಾಗವನ್ನು 53 ಕೆಜಿಗೆ ಪರಿವರ್ತಿಸಿಕೊಂಡ ಬಳಿಕ ಗೆದ್ದ ಮೊದಲ ಬಂಗಾರ ಇದಾಗಿದೆ.

ರವಿವಾರದ ಫೈನಲ್‌ನಲ್ಲಿ ವಿನೇಶ್‌ ಪೋಗಟ್‌ ನೆದರ್ಲೆಂಡ್ಸ್‌ನ ಜೆಸ್ಸಿಕಾ ಬ್ಲಾಸ್ಕಾ ಅವರನ್ನು ಮಣಿಸಿದರು. 2020ರ ಟೋಕಿಯೊ ಒಲಿಂಪಿಕ್ಸ್‌ ನಲ್ಲಿ ಭಾರತದ ಭರವಸೆಯಾಗಿರುವ ವಿನೇಶ್‌, ಕಳೆದ ಜಕಾರ್ತಾ ಏಶ್ಯಾಡ್‌ನ‌ಲ್ಲಿ ಚಿನ್ನದ ಪದಕ ಜಯಿಸಿದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ