ಭಾರತ ನಮ್ಮ ಹೆಮ್ಮೆ ಎಂದು ಪಠ್ಯಕ್ಕೆ ಸೇರಿದ್ದೇವೆ, ಇದರಲ್ಲಿ ತಪ್ಪೇನು?: ಸಚಿವ ಅಶೋಕ್

ಪಠ್ಯಪುಸ್ತಕ ಕುರಿತು ಸಚಿವರ ಜಂಟಿ ಪತ್ರಿಕಾಗೋಷ್ಠಿ

Team Udayavani, Jun 23, 2022, 2:24 PM IST

ಭಾರತ ನಮ್ಮ ಹೆಮ್ಮೆ ಎಂದು ಪಠ್ಯಕ್ಕೆ ಸೇರಿದ್ದೇವೆ, ಇದರಲ್ಲಿ ತಪ್ಪೇನು?: ಸಚಿವ ಅಶೋಕ್

ಬೆಂಗಳೂರು: ಪಠ್ಯ ಪುಸ್ತಕ ಪರಿಷ್ಕರಣೆ ವಿಚಾರವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮಾಜಿ ಪ್ರಧಾನಿ ಹೆಚ್. ಡಿ. ದೇವೇಗೌಡರು ಪತ್ರ ಬರೆದ ಬೆನ್ನಲ್ಲೇ ವಿಧಾನಸೌಧದಲ್ಲಿ ಆರ್.ಅಶೋಕ್ ನೇತೃತ್ವದಲ್ಲಿ ಜಂಟಿ ಸುದ್ದಿಗೋಷ್ಟಿ ನಡೆಸಲಾಗಿದೆ.

ಸಚಿವರಾದ ಆರ್.ಅಶೋಕ್, ಸಿ.ಸಿ ಪಾಟೀಲ್, ಬೈರತಿ ಬಸವರಾಜ್, ಶಿವರಾಂ ಹೆಬ್ಬಾರ್, ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಗಳು ಉಪಸ್ಥಿತರಿದ್ದರು. ಆದರೆ ಜಂಟಿ ಸುದ್ದಿಗೋಷ್ಟಿಯಿಂದ ಶಿಕ್ಷಣ ಸಚಿವ ಬಿ ಸಿ ನಾಗೇಶ್ ದೂರ ಉಳಿದಿದ್ದಾರೆ.

ಸಚಿವ ಅಶೋಕ್ ಮಾತನಾಡಿ, ಇತಿಹಾಸದಲ್ಲಿ ಯಾವತ್ತೂ ಪಠ್ಯ ಪುಸ್ತಕ ಪರಿಷ್ಕರಣೆ ಇಷ್ಟೊಂದು ಚರ್ಚೆ, ವಾದ-ವಿವಾದ ಆಗಿರಲಿಲ್ಲ. ಕೆಲವು ಸಾಹಿತಿಗಳಿಗೆ ಹಿಡನ್ ಅಜೆಂಡಾ ಇರುತ್ತದೆ. ಬರಗೂರು ರಾಮಚಂದ್ರಪ್ಪ ನೇತೃತ್ವದಲ್ಲಿ ಈ ಹಿಂದೆ ಪಠ್ಯಪರಿಷ್ಕರಣೆಯಾಗಿತ್ತು. ಅಲ್ಪಸಂಖ್ಯಾತರ ಓಲೈಕೆಗಾಗಿ ಪರಿಷ್ಕರಣೆ ಮಾಡಿದ್ದರು. ಹಿಂದೂ ಪದಗಳನ್ನು ತೆಗದು ಹಾಕಿದ್ದರು. ರಾಮ, ಶಿವನ ಹೆಸರು ತೆಗದು ಹಾಕಿದ್ದರು. ಮೈಸೂರು ರಾಜ, ಒಡೆಯರನ್ನು ಸಿದ್ದರಾಮಯ್ಯ ಸರ್ಕಾರ  ಕಡೆಗಣನೆ ಮಾಡಿತ್ತು. ಟಿಪ್ಪು ಕಂಡರೆ ಸಿದ್ದರಾಮಯ್ಯ ರವರಿಗೆ ಅದೇನೋ ಪ್ರೀತಿ. ಟಿಪ್ಪು ಅಂದರೆ ಸಾಕು ಸಿದ್ದರಾಮಯ್ಯಗೆ ಮೈಮೇಲೆ ಬಂದಹಾಗೆ ಆಡುತ್ತಾರೆ ಎಂದರು.

ಸಿದ್ದರಾಮಯ್ಯ ಸರ್ಕಾರದಲ್ಲಿ ಆರನೇ ತರಗತಿಯ ಸಮಾಜ ವಿಜ್ಞಾನ ಪಠ್ಯದಲ್ಲಿ ಕ್ರೈಸ್ತ, ಮುಸ್ಲಿಂ ಆರಾಧನಾ ಸ್ಥಳಗಳನ್ನು ಉಳಿಸಿಕೊಂಡು, ದೇವಾಲಯದ ಚಿತ್ರಗಳನ್ನ ಕೈ ಬಿಟ್ಟಿದ್ದರು. ಹಿಂದೂಗಳ ಕಡೆಗಣನೆ ಮಾಡಿ ಮುಸಲ್ಮಾನರ ಓಲೈಕೆ ಮಾಡಲಾಗಿತ್ತು. ಸಿದ್ದರಾಮಯ್ಯ ಅವಧಿಯಲ್ಲಿ ಶಿವಾಜಿಯನ್ನು ಕಡೆಗಣಿಸಲಾಗಿತ್ತು. ರಜಪೂತರ ಗುಣ ಧರ್ಮಗಳನ್ನು ಕಡೆಗಣಿಸಿದ್ದರು. ಮೊಘಲರ ಇತಿಹಾಸಕ್ಕೆ ಹೆಚ್ಚು ಗಮನ ಕೊಟ್ಟು ರಜಪೂತರ ಬಗ್ಗೆ ಇದ್ದ ವಿವರಗಳನ್ನು ಬರಗೂರು ಸಮಿತಿ ಕಡಿತಗೊಳಿಸಿತ್ತು ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.

ಸಿದ್ದರಾಮಯ್ಯ ಸರ್ಕಾರ ಕುವೆಂಪು ಪಠ್ಯವನ್ನು ಎಂಟು ಇದ್ದಿದ್ದು ಏಳು ಮಾಡಿತ್ತು. ನಮ್ಮ ಸರ್ಕಾರ ಹತ್ತು ಅಧ್ಯಾಯಗಳನ್ನು ಸೇರಿಸಿದೆ. ನಾವೆಲ್ಲಿ ತಪ್ಪು ಮಾಡಿದ್ದೇವೆ ಹೇಳಿ? ಭಾರತ ನಮ್ಮ ಹೆಮ್ಮೆ ಎಂದು ಆರನೇ ತರಗತಿಯ ಸಮಾಜ ವಿಜ್ಞಾನದಲ್ಲಿ ಸೇರಿಸಿದ್ದೇವೆ. ಇದರಲ್ಲಿ ತಪ್ಪೇನಿದೆ? ಕೆ .ಸ್ ನರಸಿಂಹಸ್ವಾಮಿರವರ ಭಾರತೀಯತೆ ಕವನವನ್ನು ಸೇರಿಸಿದ್ದೇವೆ. ಸ್ವಾತಂತ್ರ್ಯ ಹೋರಾಟಗಾರರಾದ ನಿಟ್ಟೂರು ಶ್ರೀನಿವಾಸರಾಯರ ಪಾಠ ಮರು ಸೇರ್ಪಡೆ ಮಾಡಿದ್ದೇವೆ. ಚೆನ್ನಾಭೈರಾದೇವಿ ಕನ್ನಡ ರಾಣಿಯ ಬಗ್ಗೆ ಪಠ್ಯ, ಏಣಗಿ ಬಾಳಪ್ಪನವರ ಜೀವನ ಪರಿಚಯವನ್ನು ಮರು ಸೇರ್ಪಡೆ ಮಾಡಿದ್ದೇವೆ. ವಿವೇಕಾನಂದರ ಜನ್ಮದಿನದ ಕುರಿತ ಪಠ್ಯ ಸೇರ್ಪಡೆ ಮಾಡಲಾಗಿದೆ. ಎಸ್.ಎಲ್.ಭೈರಪ್ಪ ಬರೆದ ಯಾವುದೇ ಪಠ್ಯ ಪುಸ್ತಕ ಇರಲಿಲ್ಲ. 9ನೇ ತರಗತಿಯ ಪಠ್ಯದಲ್ಲಿ ನಾನು ಕಂಡಂತೆ ಬಿಜಿಎಲ್ ಸ್ವಾಮಿ ಎಂಬ ಬರಹವನ್ನು ಸೇರಿಸಿದ್ದೇವೆ. ಸನಾತನ ಧರ್ಮ ಪಾಠವನ್ನು 8ನೇ ತರಗತಿಯ ಸಮಾಜ ವಿಜ್ಞಾನದಲ್ಲಿ ಸೇರಿಸಿದ್ದೇವೆ. ಮಂಜೇಶ್ವರ್ ಗೋವಿಂದ ಪೈ ಬರಹ ಮರು ಸೇರ್ಪಡೆ ಮಾಡಿದ್ದೇವೆ ಎಂದರು.

ಇದನ್ನೂ ಓದಿ:13,940 ಮೊಳೆಗಳಲ್ಲಿ ಕಲಾಕೃತಿ; ಇಂಡಿಯಾ ಬುಕ್ ಆಫ್ ರೆರ್ಕಾಡ್ಸ್‌ ಗೆ ದಾಖಲಾದ ಕಾಪುವಿನ ಶಶಾಂಕ್

ಬರಗೂರು ಸಮಿತಿಯವರು ಮೊಘಲರು, ದೆಹಲಿ ಸುಲ್ತಾನರ ಬಗ್ಗೆ ವಿಷಯ ಹೆಚ್ಚಿತ್ತು. ನಮ್ಮ‌ ನೆಲದ ರಾಜರ ಪರಿಚಯ ಹಿಂದಿನ ಪಠ್ಯಪುಸ್ತಕಗಳಲ್ಲಿ ಇರಲಿಲ್ಲ. ಕ್ರೈಸ್ತ, ಇಸ್ಲಾಂ ಧರ್ಮವನ್ನು ಪಾಶ್ಚಾತ್ಯ ಧರ್ಮಗಳ ಪಾಠ ಬದಲಾಯಿಸಿ ಯಹೂದಿ, ಪಾರ್ಸಿ ಧರ್ಮಗಳನ್ನು ವಿಷಯಗಳನ್ನು ಸೇರಿಸಿದ್ದೇವೆ ಎಂದು ಅಶೋಕ್ ಹೇಳಿದರು.

ಕೆಪಿಸಿಸಿ ಅದ್ಯಕ್ಷ ಡಿಕೆಶಿ ಪುಸ್ತಕ ಹರಿದ ವಿಚಾರವಾಗಿ ಮಾತನಾಡಿದ ಸಚಿವ ಅಶೋಕ್, ಡಿಕೆ ಶಿವಕುಮಾರ್ ಕೆಂಪೇಗೌಡ ಇತಿಹಾಸ ಇರುವ ಪುಸ್ತಕ ಹರಿದು ಹಾಕಿದ್ದರು. ನಾವು ಕೆಂಪೇಗೌಡ ಇತಿಹಾಸವನ್ನು ಪುಸ್ತಕಕ್ಕೆ ಸೇರಿಸಿದ್ದೇವೆ. ಅದನ್ನು ಹರಿದು ಹಾಕಿದ್ದು ಎಷ್ಟು ಸರಿ? ನಾರಾಯಣ ಗುರು, ಭಗತ್ ಸಿಂಗ್ ಪಠ್ಯವನ್ನೂ ಕೈ ಬಿಟ್ಟಿಲ್ಲ. ಕಾಂಗ್ರೆಸ್ ನವರು ಸುಳ್ಳು ಹೇಳುತ್ತಿದ್ದಾರೆ. ನಾವು ನಮ್ಮ‌ ದೇಶದ ಸಂಸ್ಕೃತಿಯನ್ನು ಪಠ್ಯ ಪುಸ್ತಕದಲ್ಲಿ ಸೇರಿಸಿದ್ದೇವೆ ಎಂದರು.

ಟಾಪ್ ನ್ಯೂಸ್

ಮಕ್ಕಳ ಮಾಹಿತಿ ಮುಚ್ಚಿಟ್ಟಿದ್ದೇಕೆ ಮಸ್ಕ್?

ಮಕ್ಕಳ ಮಾಹಿತಿ ಮುಚ್ಚಿಟ್ಟಿದ್ದೇಕೆ ಮಸ್ಕ್?

ಅಂಕೋಲಾ : ಮಾತು ತಪ್ಪಿದ ಪತಿ, ವಿಷ ಸೇವಿಸಿ ಇಹಲೋಕ ತ್ಯಜಿಸಿದ ಸತಿ

ಅಂಕೋಲಾ : ಮಾತು ತಪ್ಪಿದ ಪತಿ, ವಿಷ ಸೇವಿಸಿ ಇಹಲೋಕ ತ್ಯಜಿಸಿದ ಸತಿ

1-asdsad

ಶಿಂಧೆ ಮತ್ತೆ ಮೇಲುಗೈ ; 66 ಥಾಣೆ ಮಹಾನಗರ ಪಾಲಿಕೆ ಸದಸ್ಯರ ಬೆಂಬಲ

cm

ರಾಜ್ಯದಲ್ಲಿ ಭಾರಿ ಮಳೆ; ಅಧಿಕಾರಿಗಳ ಜತೆ ಸಿಎಂ ವಿಡಿಯೋ ಸಂವಾದ

1-ssdsad

ರೆಡ್ ಅಲರ್ಟ್ : ಉಡುಪಿ ಜಿಲ್ಲೆಯಲ್ಲಿ ಇನ್ನೆರಡು ದಿನ ಶಾಲಾ ಕಾಲೇಜು ಗಳಿಗೆ ರಜೆ

1–ffsdfdsf

ಹೊಸಪೇಟೆ: ತುಂಗಭದಾ ಜಲಾಶಯದ ಒಳಹರಿವು ದ್ವಿಗುಣ

TDY-3

ಲಂಚ ಸ್ವೀಕಾರ: ಪವರ್‌ ಗ್ರಿಡ್‌ನ‌ ಅಧಿಕಾರಿ ಸೇರಿ 6 ಮಂದಿ ಬಂಧನಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಂಕೋಲಾ : ಮಾತು ತಪ್ಪಿದ ಪತಿ, ವಿಷ ಸೇವಿಸಿ ಇಹಲೋಕ ತ್ಯಜಿಸಿದ ಸತಿ

ಅಂಕೋಲಾ : ಮಾತು ತಪ್ಪಿದ ಪತಿ, ವಿಷ ಸೇವಿಸಿ ಇಹಲೋಕ ತ್ಯಜಿಸಿದ ಸತಿ

cm

ರಾಜ್ಯದಲ್ಲಿ ಭಾರಿ ಮಳೆ; ಅಧಿಕಾರಿಗಳ ಜತೆ ಸಿಎಂ ವಿಡಿಯೋ ಸಂವಾದ

1–ffsdfdsf

ಹೊಸಪೇಟೆ: ತುಂಗಭದಾ ಜಲಾಶಯದ ಒಳಹರಿವು ದ್ವಿಗುಣ

ಹುಮನಾಬಾದ್ : ಬೇಡ ಜಂಗಮರ ಹೋರಾಟಕ್ಕೆ ರಾಜ್ಯ ಸರ್ಕಾರ ಕೂಡಲೇ ಸ್ಪಂದಿಸಲಿ

ಹುಮನಾಬಾದ್ : ಬೇಡ ಜಂಗಮರ ಹೋರಾಟಕ್ಕೆ ರಾಜ್ಯ ಸರ್ಕಾರ ಕೂಡಲೇ ಸ್ಪಂದಿಸಲಿ

ಪಿಎಸ್‌ಐ ಹಗರಣ ತನಿಖೆ ಸರಿದಾರಿಯಲ್ಲಿದೆ: ಡಾ.ಕೆ.ಸುಧಾಕರ್‌

ಪಿಎಸ್‌ಐ ಹಗರಣ ತನಿಖೆ ಸರಿದಾರಿಯಲ್ಲಿದೆ: ಡಾ.ಕೆ.ಸುಧಾಕರ್‌

MUST WATCH

udayavani youtube

ನ್ಯಾಯ ಸಿಗುವ ನಂಬಿಕೆ ಇಲ್ಲ; ಹರ್ಷ ಸಹೋದರಿ ಅಶ್ವಿನಿ ಅಳಲು

udayavani youtube

ಇಡೀ ದೇಶ ಸೇವೆಗೊಂದು ಅವಕಾಶ: ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ

udayavani youtube

ದೇವಸ್ಥಾನದ ಆವರಣದೊಳಕ್ಕೆ ಉಕ್ಕಿ ಹರಿದ ನದಿಗಳು!

udayavani youtube

ಚಂದ್ರಶೇಖರ ಗುರೂಜಿ ಹತ್ಯೆ : ಕೇವಲ 4 ಗಂಟೆಯಲ್ಲಿ ಹಂತಕರ ಪತ್ತೆ

udayavani youtube

Lightings ನೋಡಿದಾಗ Shock ಆದೆ! – ಪ್ರೇಮಾ

ಹೊಸ ಸೇರ್ಪಡೆ

ಮಕ್ಕಳ ಮಾಹಿತಿ ಮುಚ್ಚಿಟ್ಟಿದ್ದೇಕೆ ಮಸ್ಕ್?

ಮಕ್ಕಳ ಮಾಹಿತಿ ಮುಚ್ಚಿಟ್ಟಿದ್ದೇಕೆ ಮಸ್ಕ್?

ಅಂಕೋಲಾ : ಮಾತು ತಪ್ಪಿದ ಪತಿ, ವಿಷ ಸೇವಿಸಿ ಇಹಲೋಕ ತ್ಯಜಿಸಿದ ಸತಿ

ಅಂಕೋಲಾ : ಮಾತು ತಪ್ಪಿದ ಪತಿ, ವಿಷ ಸೇವಿಸಿ ಇಹಲೋಕ ತ್ಯಜಿಸಿದ ಸತಿ

1-dsadd

ಕೃಷ್ಣೆಗೆ ಹರಿದು ಬಂದ ಅಪಾರ ಪ್ರಮಾಣದ ನೀರು; ಜನ ಜಾಗೃತರಾಗಲು ಸೂಚನೆ

1-asdsad

ಶಿಂಧೆ ಮತ್ತೆ ಮೇಲುಗೈ ; 66 ಥಾಣೆ ಮಹಾನಗರ ಪಾಲಿಕೆ ಸದಸ್ಯರ ಬೆಂಬಲ

cm

ರಾಜ್ಯದಲ್ಲಿ ಭಾರಿ ಮಳೆ; ಅಧಿಕಾರಿಗಳ ಜತೆ ಸಿಎಂ ವಿಡಿಯೋ ಸಂವಾದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.