ಸರಕಾರದ ಜತೆ ಪಠ್ಯವೂ ಬದಲು? ಮೊದಲರ್ಧ ವರ್ಷ ಗೊಂದಲ?


Team Udayavani, May 18, 2023, 8:30 AM IST

ಸರಕಾರದ ಜತೆ ಪಠ್ಯವೂ ಬದಲು? ಮೊದಲರ್ಧ ವರ್ಷ ಗೊಂದಲ?

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರಲಿದ್ದು, ಬಿಜೆಪಿ ಸರಕಾರದ ಅವಧಿಯಲ್ಲಿ ನಡೆದಿದ್ದ ಪಠ್ಯಪುಸ್ತಕ ಪರಿಷ್ಕರಣೆಯ ಭವಿಷ್ಯ ಏನು ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಈಗಾ ಗಲೇ ಶೇ.90ರಷ್ಟು ಪಠ್ಯ ಪುಸ್ತಕಗಳು ವಿತರಣೆಯಾಗಿದ್ದು, ಇದೇ 29ರಿಂದ ಆರಂಭವಾಗಲಿರುವ 2023-24ರ ಶೈಕ್ಷಣಿಕ ವರ್ಷದ ವಿದ್ಯಾರ್ಥಿಗಳು ಪರಿಷ್ಕೃತ ಪಠ್ಯವನ್ನೇ ಓದುತ್ತಾರೋ ಅಥವಾ ಪಠ್ಯ ಪುಸ್ತಕ ಇನ್ನೊಮ್ಮೆ ಪರಿಷ್ಕೃತ ಗೊಳ್ಳಲಿದೆಯೇ ಎಂಬ ಚರ್ಚೆ ಆರಂಭಗೊಂಡಿದೆ.

ಬಿಜೆಪಿ ಸರಕಾರ ರೋಹಿತ್‌ ಚಕ್ರತೀರ್ಥ ನೇತೃತ್ವದಲ್ಲಿ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ ರಚಿಸಿ 5ರಿಂದ 10ನೇ ತರಗತಿ ವರೆಗಿನ ಕೆಲವು ಪಠ್ಯ ಪುಸ್ತಕಗಳನ್ನು ಪರಿಷ್ಕರಿಸಿತ್ತು. ಇದನ್ನು ಖಂಡಿಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು ಪಠ್ಯಪುಸ್ತಕವನ್ನು ಸಾರ್ವಜನಿಕವಾಗಿ ಹರಿದು ಆಕ್ರೋಶ ವ್ಯಕ್ತಪಡಿಸಿದ್ದರು. ವಿಧಾನಸೌಧದ ಗಾಂಧಿ ಪ್ರತಿಮೆ ಮುಂದೆ ನಡೆದ ಪ್ರತಿ ಭಟನೆಯಲ್ಲಿ ಸಿದ್ದರಾಮಯ್ಯ, ಬಿ.ಕೆ. ಹರಿಪ್ರಸಾದ್‌ ಮುಂತಾದವರು ಪಾಲ್ಗೊಂಡಿದ್ದರು.

ಶೈಕ್ಷಣಿಕ ವರ್ಷ ಆರಂಭದ ದಿನದಂದೇ ಮಕ್ಕಳ ಕೈಯಲ್ಲಿ ಪಠ್ಯಪುಸ್ತಕ ಇರಬೇಕು. ಇದರಿಂದ ವೇಳಾ ಪಟ್ಟಿಯಂತೆ ಸುಸೂತ್ರವಾಗಿ ಪಠ್ಯ ಮತ್ತು ಪಠ್ಯೇತರ ಚಟುವಟಿಕೆ ನಡೆಸಿಕೊಂಡು ಹೋಗಲು ಸಾಧ್ಯವಾಗುತ್ತದೆ ಎಂದು ಈಗಾಗಲೇ ಪರಿಷ್ಕೃತ ಪಠ್ಯವನ್ನು ವಿತರಿಸಲಾಗಿದೆ. ಆದರೆ ಹೊಸ ಸರಕಾರ ಪಠ್ಯ ಪುಸ್ತಕವನ್ನು ಪರಿಷ್ಕರಿಸಿ ಈ ವರ್ಷದಲ್ಲೇ ವಿತರಿಸಲು ಮುಂದಾದರೆ ಶೈಕ್ಷಣಿಕ ಚಟುವಟಿಕೆ ಗಳು ಅಸ್ತವ್ಯಸ್ತವಾದೀತು. ಅಲ್ಲದೆ ಪಠ್ಯ ಪುಸಕ್ತ ಪರಿಷ್ಕರಣೆಗೆಂದು ಹೊಸ ಸಮಿತಿ ರಚಿಸಿ, ಅದರ ವರದಿ ಆಧರಿಸಿ ಪರಿಷ್ಕರಿಸಬೇಕಾಗುತ್ತದೆ.

ಆ ಬಳಿಕ ಮತ್ತೆ ಮುದ್ರಣ ಚಟು ವಟಿಕೆಗಳು ಎಂದೆಲ್ಲ ಕನಿಷ್ಠ ಮೊದಲ ಅರ್ಧ ವರ್ಷ ಗೊಂದಲದ ಗೂಡಾ ಗುವ ಸಂಭವವಿದೆ.

ಪರಿಷ್ಕೃತ ಪಠ್ಯದಲ್ಲಿನ ವಿವಾದಿತ ಅಂಶಗಳನ್ನು ಕೈ ಬಿಟ್ಟು ಪಠ್ಯ ಚಟುವಟಿಕೆಯನ್ನು ಸರಕಾರ ನಡೆಸಬಹುದು ಎಂಬ ಅಭಿಪ್ರಾಯಯೂ ಇದೆ. ಆದರೆ ರೋಹಿತ್‌ ಚಕ್ರತೀರ್ಥ ಸಮಿತಿಯು ಪಠ್ಯಗಳನ್ನು ಕೈ ಬಿಟ್ಟಿಲ್ಲ ಅಥವಾ ಹೊಸದನ್ನು ಸೇರಿಸಿಲ್ಲ. ಬದಲಾಗಿ ಕೆಲವು ಪದಪುಂಜ, ವಾಕ್ಯ ಬದಲಾಯಿಸಿದೆ. ಇಂತಹ ಶಬ್ದ, ವಾಕ್ಯ ಗಳನ್ನು ಕೈ ಬಿಟ್ಟು ಪಾಠ ಮಾಡಲು ಸಾಧ್ಯವೇ ಎಂಬುದು ಶಿಕ್ಷಣ ತಜ್ಞರ ಪ್ರಶ್ನೆ.

ಈಗಾಗಲೇ ಪಠ್ಯ ಮುದ್ರಣಕ್ಕೆ ಸುಮಾರು 170 ಕೋಟಿ ರೂ. ಖರ್ಚಾಗಿದೆ. ಈಗ ಮತ್ತೆ ಪುಸ್ತಕ ಮುದ್ರಣ ದೊಡ್ಡ ಸಾಹಸವಾಗಲಿದೆ. ಜತೆಗೆ ಜಾಗತಿಕ ವಿದ್ಯಮಾನಗಳ ಪರಿಣಾಮ ಕಾಗದದ ದರವೂ ಹೆಚ್ಚಾಗಿದ್ದು ಪುಸ್ತಕ ಮುದ್ರಣ ದರ ಮತ್ತಷ್ಟು ಹೆಚ್ಚಾಗುವುದು ನಿಶ್ಚಿತ. ಹಾಗೆಯೇ ರಾಜ್ಯದಲ್ಲಿ ಕಾಗದದ ಮಿಲ್‌ಗ‌ಳಿಲ್ಲ. ಇದರಿಂದಾಗಿ ಸಕಾಲದಲ್ಲಿ ಪುಸ್ತಕ ಸರಬರಾಜು ಮಾಡುವುದು ಕಷ್ಟವಾಗಬಹುದು. ಈ ಹಿನ್ನೆಲೆಯಲ್ಲಿ ಪರಿಷ್ಕೃತ ಪಠ್ಯಪುಸ್ತಕ ಮುಂದುವರಿಯುವ ಸಾಧ್ಯತೆಗಳು ಹೆಚ್ಚಿವೆ. ಆದರೂ ಹೊಸ ಸರಕಾರ ಏನು ನಿರ್ಧಾರ ಕೈಗೊಳ್ಳಲಿದೆ ಎಂಬುದು ಮುಖ್ಯ. ನಾವೀಗ ಏನನ್ನೂ ಹೇಳುವ ಸ್ಥಿತಿಯಲ್ಲಿಲ್ಲ ಎಂದು ಶಿಕ್ಷಣ ಇಲಾಖೆ ಅಧಿಕಾರಿಯೊಬ್ಬರು ಹೇಳುತ್ತಾರೆ.

ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪ್ರೊ| ಬಿ.ವಿ. ವಸಂತ ಕುಮಾರ್‌ ಈ ಬಗ್ಗೆ ಪ್ರತಿಕ್ರಿಯಿಸಿ, ಮೂಡಂಬಡಿತ್ತಾಯ ಅವರು ರೂಪಿಸಿದ್ದ ಪಠ್ಯ ಪುಸ್ತಕವನ್ನು ಬರಗೂರು ರಾಮಚಂದ್ರಪ್ಪ ಅವರ ಸಮಿತಿ ಪರಿಷ್ಕರಿಸಿದೆ. ಆ ಬಳಿಕ ಚಕ್ರತೀರ್ಥ ಸಮಿತಿ ಮತ್ತೆ ಪರಿಷ್ಕರಿಸಿದೆ. ಆದ್ದರಿಂದ ಪದೇಪದೆ ಪರಿಷ್ಕರಿಸಲು ಪಠ್ಯಪುಸ್ತಕ ರಾಜಕೀಯ ಪಕ್ಷದ ಪ್ರಣಾಳಿಕೆಯಲ್ಲ. ದೇಶದ್ರೋಹದ ಅಂಶಗಳಿದ್ದರೆ ಪರಿಷ್ಕರಿಸಲಿ. ಆದರೆ ನಾಡಿನ ಶೈಕ್ಷಣಿಕ, ಸಾಂಸ್ಕೃತಿಕ ಅಂಶಗಳನ್ನು ಹೊಂದಿರುವ, ಮಕ್ಕಳನ್ನು ಸತøಜೆಗಳನ್ನಾಗಿ ರೂಪಿಸುವ ಅಂಶಗಳಿರುವ ಪಠ್ಯವನ್ನು ಪರಿಷ್ಕರಿಸಬಾರದು. ಪಠ್ಯದಲ್ಲಿ ಭಾರತೀಕರಣ ಇರಬೇಕು ಎಂದು ಅಭಿಪ್ರಾಯಪಟ್ಟರು.

ಪಠ್ಯ ಪುಸ್ತಕ ಸಂವಿಧಾನದ ಆಶಯವನ್ನು ಬಿಂಬಿಸ  ಬೇಕೇ ಹೊರತು ಪಕ್ಷದ, ವ್ಯಕ್ತಿಯ ಸಿದ್ಧಾಂತವನ್ನಲ್ಲ. ಆದ್ದ ರಿಂದ ಶಿಕ್ಷಣ ತಜ್ಞರು, ವಿಷಯ ತಜ್ಞರನ್ನು ಒಳಗೊಂಡು ನಿಯಮ ಪ್ರಕಾರ ಪಠ್ಯಪುಸ್ತಕ ಪರಿಷ್ಕರಣೆ ನಡೆಯ ಬೇಕೇ ಹೊರತು ಆತುರ ದಿಂದಲ್ಲ. ಈ ನಿಟ್ಟಿ ನಲ್ಲಿ ಮುಂದಿನ ಸರಕಾರ ವಿವೇಕದ ತೀರ್ಮಾನ ಕೈಗೊಳ್ಳಲಿ.
– ನಿರಂಜನಾರಾಧ್ಯ, ಶಿಕ್ಷಣ ತಜ್ಞ

– ರಾಕೇಶ್ ಎನ್. ಎಸ್

ಟಾಪ್ ನ್ಯೂಸ್

33

Lok Sabha polls: ಹಂತ-1ರ ಮತದಾನಕ್ಕೆ ಭರ್ಜರಿ ಸಿದ್ಧತೆ

voter

ಈ ಲೋಕ ಚುನಾವಣೆ ವಿಶ್ವದಲ್ಲೇ ಅತ್ಯಂತ ದುಬಾರಿ ಚುನಾವಣೆ!

1-weeewq

Hyderabad: ಓವೈಸಿ ಪ್ರತಿಸ್ಪರ್ಧಿ, ಬಿಜೆಪಿಯ ಮಾಧವಿ ಆಸ್ತಿ 221.37 ಕೋಟಿ ರೂ.

1-weewewqe

Emotional; 11 ವರ್ಷ ಬಳಿಕ ಗಲ್ಲಿಗೆ ಗುರಿಯಾದ ಮಗಳನ್ನು ಭೇಟಿಯಾದ ತಾಯಿ!

1-qeqqew

I.N.D.I.A;ಗಂಡೇ ವಿಧಾನಸಭೆ ಕ್ಷೇತ್ರದಿಂದ ಕಲ್ಪನಾ ಸೊರೇನ್‌ ಕಣಕ್ಕೆ?

Ashwin Vaishnav

Train ಪ್ರಯಾಣಿಕರಿಗೆ ಇನ್ನು 20 ರೂ.ಗಳಲ್ಲಿ ಊಟ!

1-sadguru

Sadhguru; ಕಾವೇರಿ ಕಾಲಿಂಗ್‌ ಮೂಲಕ 10.9 ಕೋಟಿ ಸಸಿಗಳ ನಾಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

33

Lok Sabha polls: ಹಂತ-1ರ ಮತದಾನಕ್ಕೆ ಭರ್ಜರಿ ಸಿದ್ಧತೆ

Reservation: ಜನಸಂಖ್ಯೆ ಆಧಾರದಲ್ಲಿ ಮೀಸಲು ನೀಡಲು ಸಿದ್ಧರೇ?

Reservation: ಜನಸಂಖ್ಯೆ ಆಧಾರದಲ್ಲಿ ಮೀಸಲು ನೀಡಲು ಸಿದ್ಧರೇ?

Ra

Congress; ಇಂದು ರಾಜ್ಯಕ್ಕೆ ರಾಹುಲ್‌ ಗಾಂಧಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

33

Lok Sabha polls: ಹಂತ-1ರ ಮತದಾನಕ್ಕೆ ಭರ್ಜರಿ ಸಿದ್ಧತೆ

voter

ಈ ಲೋಕ ಚುನಾವಣೆ ವಿಶ್ವದಲ್ಲೇ ಅತ್ಯಂತ ದುಬಾರಿ ಚುನಾವಣೆ!

1-weeewq

Hyderabad: ಓವೈಸಿ ಪ್ರತಿಸ್ಪರ್ಧಿ, ಬಿಜೆಪಿಯ ಮಾಧವಿ ಆಸ್ತಿ 221.37 ಕೋಟಿ ರೂ.

1-weewewqe

Emotional; 11 ವರ್ಷ ಬಳಿಕ ಗಲ್ಲಿಗೆ ಗುರಿಯಾದ ಮಗಳನ್ನು ಭೇಟಿಯಾದ ತಾಯಿ!

Archery World Cup: ಆರ್ಚರಿ ವಿಶ್ವಕಪ್‌ ರಿಕರ್ವ್‌ ವಿಭಾಗದಲ್ಲೂ ಭಾರತ ಫೈನಲ್‌ಗೆ

Archery World Cup: ಆರ್ಚರಿ ವಿಶ್ವಕಪ್‌ ರಿಕರ್ವ್‌ ವಿಭಾಗದಲ್ಲೂ ಭಾರತ ಫೈನಲ್‌ಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.