ಪ್ರೇಮಿಗಳ ದಿನದಂದೇ ಡೀಸಿ, ಸಿಇಒ ವಿವಾಹ

Team Udayavani, Feb 3, 2019, 1:36 AM IST

ದಾವಣಗೆರೆ: ಜಿಲ್ಲಾಧಿಕಾರಿ ಡಾ| ಬಗಾದಿ ಗೌತಮ್‌, ಜಿಲ್ಲಾ ಪಂಚಾಯತ್‌ ಸಿಇಒ ಎಸ್‌. ಅಶ್ವತಿ ಅವರು ಫೆ. 14ರ ಪ್ರೇಮಿಗಳ ದಿನದಂದು ಕೇರಳದ ಕಲ್ಲಿಕೋಟೆಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಮೂಲತಃ ಆಂಧ್ರ ಪ್ರದೇಶದ ವಿಶಾಖಪಟ್ಟಣಂ (ವೈಜಾಗ್‌)ನ ಡಾ| ಬಗಾದಿ ಗೌತಮ್‌ ಕಾಕಿನಾಡಿನ ರಂಗರಾಯ ಮೆಡಿಕಲ್‌ ಕಾಲೇಜಿನಲ್ಲಿ ವೈದ್ಯಕೀಯ ಪದವಿ ನಂತರ ಭಾರತ ಸೇವಾ ಆಯೋಗದ ಪರೀಕ್ಷೆ ಬರೆದವರು. 2009ನೇ ಬ್ಯಾಚ್ ಐಎಎಸ್‌ ಅಧಿಕಾರಿ ಯಾಗಿರುವ ಅವರು ಬೆಳಗಾವಿ ಜಿ.ಪಂ. ಸಿಇಒ, ರಾಯಚೂರು ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಿಸಿ 4 ತಿಂಗಳ ಹಿಂದೆ ದಾವಣಗೆರೆ ಡೀಸಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.

ಕೇರಳದ ಕಲ್ಲಿಕೋಟೆಯ ನಿವಾಸಿ ಎಸ್‌. ಅಶ್ವತಿ 2013ನೇ ಸಾಲಿನ ಐಎಎಸ್‌ ಅಧಿಕಾರಿ. ಮಣಿಪಾಲದಲ್ಲಿ ಎಂಬಿಎ ಮುಗಿಸಿದ ನಂತರ ಐಎಎಸ್‌ ಪರೀಕ್ಷೆ ಬರೆದಿದ್ದರು. ಡಾ| ಬಗಾದಿ ಗೌತಮ್‌ ಮತ್ತು ಎಸ್‌. ಅಶ್ವತಿ ಅವರದ್ದು ನಾಲ್ಕು ವರ್ಷದ ಗೆಳೆತನ. ಈಗ ಪ್ರೇಮಿಗಳ ದಿನದಂದೇ ಇಬ್ಬರೂ ವಿವಾಹ ಬಂಧನಕ್ಕೆ ಒಳಗಾಗಲಿದ್ದಾರೆ. ಫೆ. 14 ರ ಗುರುವಾರ ಬೆಳಗ್ಗೆ 10ಕ್ಕೆ ಎಸ್‌.ಅಶ್ವತಿಯವರ ತವರೂರು ಕಲ್ಲಿಕೋಟೆಯ ಟ್ಯಾಗೋರ್‌ ಹಾಲ್‌ನಲ್ಲಿ ವಿವಾಹ ಮಹೋತ್ಸವ ನಡೆಯಲಿದೆ. ಫೆ. 17 ರಂದು ವಿಶಾಖಪಟ್ಟಣಂನ ಪಾರ್ಕ್‌ ಹೋಟೆಲ್‌ನಲ್ಲಿ ಆರತಕ್ಷತೆ ಆಯೋಜಿಸಲಾಗಿದೆ.


ಈ ವಿಭಾಗದಿಂದ ಇನ್ನಷ್ಟು

  • ಹುಬ್ಬಳ್ಳಿ: ರಾಜ್ಯದ ಎರಡು ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ದಾಖಲೆ ಮತದಾನವಾಗಿದೆ. ಕುಂದಗೋಳದಲ್ಲಿ ಶೇ.82.42, ಚಿಂಚೋಳಿಯಲ್ಲಿ ಶೇ.71 ಮತದಾನವಾಗಿದೆ. ಅಲ್ಲಲ್ಲಿ...

  • ಬೆಂಗಳೂರು: ರಾಜ್ಯದಲ್ಲಿ ಮೈತ್ರಿ ಉಳಿಸಲು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್ ಪ್ರಯತ್ನಪಡುತ್ತಿರುವಂತೆಯೇ, ಜೆಡಿಎಸ್‌ ಜತೆಗಿನ ಮೈತ್ರಿ ಖತಂಗೊಳಿಸುವುದೇ ಉತ್ತಮ...

  • ಬೆಂಗಳೂರು: ರಾಜ್ಯ ರಾಜಕಾರಣದ ದಿಕ್ಕು ಬದಲಿಸುವ ರೀತಿಯಲ್ಲಿ ಲೋಕಸಭಾ ಚುನಾವಣೋತ್ತರ ಸಮೀಕ್ಷಾ ಫ‌ಲಿತಾಂಶ ಹೊರಬಿದ್ದಿದ್ದು, ಮೈತ್ರಿ ಪಕ್ಷಗಳಿಗೆ ದೊಡ್ಡ ಆಘಾತ...

  • ಬೆಂಗಳೂರು: ತೀವ್ರ ಕುತೂಹಲ ಮೂಡಿಸಿರುವ ಕುಂದಗೋಳ ಮತ್ತು ಚಿಂಚೋಳಿ ವಿಧಾನಸಭಾ ಕ್ಷೇತ್ರಗಳಿಗೆ ಭಾನುವಾರ ನಡೆದ ಮತದಾನ ಬಹುತೇಕ ಶಾಂತಿಯುತವಾಗಿ ಮುಕ್ತಾಯಗೊಂಡಿದ್ದು,...

  • ಕಲಬುರಗಿ: ಚಿಂಚೋಳಿ ಉಪಚುನಾವಣೆಯಲ್ಲಿ ಕಾಂಗ್ರೆಸ್‌ನವರು ಮತದಾರರಿಗೆ ಹಣ ಹಂಚಿಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಬಿಜೆಪಿ ಮುಖಂಡ ಡಾ.ಉಮೇಶ ಜಾಧವ್‌ ಅವರು ಪೊಲೀಸ್‌...

ಹೊಸ ಸೇರ್ಪಡೆ