ಹೊಸ 18 ಕೋವಿಡ್-19 ಸೋಂಕಿತರು: 400 ದಾಟಿದ ಸೋಂಕಿತರ ಸಂಖ್ಯೆ
Team Udayavani, Apr 20, 2020, 6:02 PM IST
ಬೆಂಗಳೂರು: ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 400 ದಾಟಿದ್ದು, ಇಂದು ಹೊಸ 18 ಸೋಂಕು ಪ್ರಕರಣಗಳು ರಾಜ್ಯದಲ್ಲಿ ದೃಢವಾಗಿದೆ.
ಐದು ಪ್ರಕರಣಗಳು ಕಲಬುರಗಿಯಿಂದ ವರದಿಯಾಗಿದ್ದರೆ, ವಿಜಯಪುರದಲ್ಲಿ 11 ಪ್ರಕರಣಗಳು ದಢವಾಗಿದೆ. ಗದಗ ಮತ್ತು ಬೀದರ್ ನಲ್ಲಿ ತಲಾ ಒಂದು ಸೋಂಕು ಪ್ರಕರಣಗಳು ಖಚಿತವಾಗಿದೆ.
ವಿಜಯಪುರದಲ್ಲಿ ಏ.20 ರಂದು ದೃಢಪಟ್ಟಿರುವ 11 ಜನ ಸೋಂಕಿತರು ಕೂಡ ಈ ಹಿಂದಿನಂತೆ ಸೋಂಕು ಹರಡಿದ ಎರಡೇ ಕುಟುಂಬದಲ್ಲಿ ದೃಢಪಟ್ಟಿದೆ.
ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ 408ಕ್ಕೇರಿದ್ದು, 112 ಜನರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. 16 ಜನರು ರಾಜ್ಯದಲ್ಲಿ ಸೋಂಕಿನ ಕಾರಣ ಗುಣಮುಖರಾಗಿದ್ದಾರೆ.