ಕೋವಿಡ್ ಎಫೆಕ್ಟ್: ಘಟಿಕೋತ್ಸವದಲ್ಲಿ ಪದವಿ ಸ್ವೀಕರಿಸಿದ ರೋಬೋಗಳು!
Team Udayavani, Apr 8, 2020, 9:30 PM IST
ಟೊಕಿಯೋ: ಜಪಾನ್ನ ಬ್ಯುಸಿನೆಸ್ ಬ್ರೇಕ್ ತ್ರೂ ವಿಶ್ವವಿದ್ಯಾಲಯದಲ್ಲಿ (ಬಿಬಿಟಿ) ಇತ್ತೀಚೆಗೆ ನಡೆದ ಘಟಿಕೋತ್ಸವ ವಿಶಿಷ್ಟವಾಗಿತ್ತು. ಕೋವಿಡ್ 19 ವೈರಸ್ ಭೀತಿಯಿಂದಾಗಿ ಘಟಿಕೋತ್ಸವದಲ್ಲಿ ಯಾವೊಬ್ಬ ವಿದ್ಯಾರ್ಥಿಯೂ ಪಾಲ್ಗೊಂಡಿರಲಿಲ್ಲ. ಅವರ ಬದಲು ರೋಬೋಗಳು, ವಿವಿಯ ಕುಲಾಧಿಪತಿಯಿಂದ ಪದವಿ ಪ್ರಮಾಣ ಪತ್ರವನ್ನು ಪಡೆದವು!
ಎಲ್ಲ ದೇಶಗಳಂತೆಯೇ ಜಪಾನ್ ಕೂಡ ಕೋವಿಡ್ 19 ವೈರಸ್ ಭೀತಿಯಲ್ಲಿದೆ. ಇಲ್ಲಿಯವರೆಗೆ ಜಪಾನ್ ದೇಶದಲ್ಲಿ 3,906 ಪ್ರಕರಣಗಳು ದಾಖಲಾಗಿವೆ ಹಾಗೂ ಈ ಮಾರಕ ವೈರಸ್ ಗೆ 54 ಜನರು ಮೃತಪಟ್ಟಿದ್ದಾರೆ. ಹಾಗಾಗಿ, ಇಡೀ ಜಪಾನ್ನಲ್ಲಿ ಲಾಕ್ ಡೌನ್ ಪರಿಸ್ಥಿತಿ ಇದೆ. ಇದೆಲ್ಲದರ ನಡುವೆಯೇ ಬಿಬಿಟಿಯ ಘಟಿಕೋತ್ಸವ ನಡೆದಿತ್ತು.
ಸಮಾರಂಭದಲ್ಲಿ, ಪದವಿ ಸ್ವೀಕರಿಸಲಿದ್ದ ಪ್ರತೀ ವಿದ್ಯಾರ್ಥಿಯೂ ಒಂದೊಂದು ರೋಬೋಗಳನ್ನು ತಮ್ಮ ಪರವಾಗಿ ಸಭಾಂಗಣದಲ್ಲಿ ಕೂರಿಸಿದ್ದರು. ಅವುಗಳ ಮುಖಕ್ಕೆ ಪ್ರತಿಯೊಬ್ಬ ವಿದ್ಯಾರ್ಥಿಯು ತನ್ನದೇ ಆದ ಐಪ್ಯಾಡ್ಗಳನ್ನು ಜೋಡಿಸಿದ್ದರು.
ಆ ಐಪ್ಯಾಡ್ಗಳಲ್ಲಿ ವಿದ್ಯಾರ್ಥಿಗಳ ಮುಖ ಕಾಣಿಸುತ್ತಿತ್ತು. ವೇದಿಕೆಯ ಮೇಲೆ ವಿವಿ ಸಿಬ್ಬಂದಿ ಒಬ್ಬೊಬ್ಬ ವಿದ್ಯಾರ್ಥಿಯ ಹೆಸರನ್ನು ಕರೆದಾಗ ಆಯಾ ವಿದ್ಯಾರ್ಥಿಯ ರೋಬೋ ವೇದಿಕೆ ಮೇಲೇರಿ ಪದವಿ ಪ್ರಮಾಣ ಪತ್ರ ಸ್ವೀಕರಿಸಿ ಬರುತ್ತಿದ್ದವು. ವಿದ್ಯಾರ್ಥಿಗಳು ಮನೆಯಲ್ಲಿ ಕುಳಿತೇ ಈ ರೋಬೋಗಳನ್ನು ನಿಯಂತ್ರಿಸಿದ್ದು ವಿಶೇಷ !
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
MUST WATCH
ಹೊಸ ಸೇರ್ಪಡೆ
Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ
ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್