ಚಬಹಾರ್ ಬಂದರಿಗೂ ಸಿಕ್ಕಿತು ವಿನಾಯಿತಿ
Team Udayavani, Nov 8, 2018, 9:56 AM IST
ವಾಷಿಂಗ್ಟನ್: ಇರಾನ್‌ನಿಂದ ಕಚ್ಚಾ ತೈಲ ಆಮದು ಮಾಡಿಕೊಳ್ಳುವ ಬಗ್ಗೆ ಅಮೆರಿಕ ಸರ್ಕಾರದಿಂದ ವಿನಾಯಿತಿ ಪಡೆದುಕೊಂಡ ಭಾರತ ಈಗ ಚಬಹಾರ್‌ನಲ್ಲಿ ನಿರ್ಮಿಸುತ್ತಿರುವ ಬಂದರು ಯೋಜನೆಗಳಿಗೂ ವಿನಾಯಿತಿ ಪಡೆದುಕೊಂಡಿದೆ. ಅಫ್ಘಾನಿಸ್ತಾನ ಮೂಲಕ ರೈಲು ಮಾರ್ಗ ನಿರ್ಮಾಣ ಯೋಜನೆಗೂ ಈ ವಿನಾಯಿತಿ ಅನ್ವಯವಾಗುತ್ತದೆ ಎಂದು ವಿದೇಶಾಂಗ ಇಲಾಖೆ ವಕ್ತಾರರು ಬುಧವಾರ ತಿಳಿಸಿದ್ದಾರೆ. ಸೋಮವಾರವಷ್ಟೇ ಟ್ರಂಪ್ ಸರಕಾರ ಇರಾನ್ ಮೇಲೆ ಇದುವರೆಗಿನ ಅತ್ಯಂತ ಕಠಿಣ ಆರ್ಥಿಕ ದಿಗ್ಬಂಧನೆ ನಿಯಮಗಳನ್ನು ಜಾರಿ ಮಾಡಿತ್ತು.
2016ರ ಮೇನಲ್ಲಿ ಭಾರತ, ಇರಾನ್ ಮತ್ತು ಅಫ್ಘಾನಿಸ್ತಾನ ಸಾರಿಗೆ ಕ್ಷೇತ್ರದಲ್ಲಿ ಮಾಡಿಕೊಂಡ ಒಪ್ಪಂದದ ಅನ್ವಯ ಚಬಹಾರ್ ಬಂದರಿಗೆ ಸಂಪರ್ಕ ಕಲ್ಪಿಸಲೋಸುಗ ರಸ್ತೆ ಮತ್ತು ರೈಲು ಮಾರ್ಗ ನಿರ್ಮಾಣ ಕಾಮಗಾರಿಗೆ ಒಪ್ಪಂದಕ್ಕೆ ಸಹಿ ಹಾಕಿದ್ದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಗೆ ಧನ್ಯವಾದ ಹೇಳಿದ ಲಂಕಾ
ಮಂಕಿ ಪಾಕ್ಸ್ ಆತಂಕಕಾರಿ ವಿಷಯ: ಅಮೆರಿಕಾ ಅಧ್ಯಕ್ಷ ಜೋ ಬಿಡನ್
ತೈಲ ಸುಂಕ ಇಳಿಸಿದ ಮೋದಿ ಸರ್ಕಾರದ ನಿರ್ಧಾರವನ್ನು ಹಾಡಿಹೊಗಳಿದ ಇಮ್ರಾನ್ ಖಾನ್
ಮಂಕಿಪಾಕ್ಸ್ಗೆ ಬ್ರೆಜಿಲ್ನಲ್ಲಿ 21 ದಿನ ಕಡ್ಡಾಯ ಕ್ವಾರಂಟೈನ್
ತಮ್ಮ ಜನ್ಮ ದಿನಾಂಕವನ್ನೇ ಬದಲಾಯಿಸಿಕೊಂಡ ಕಾಂಬೋಡಿಯಾ ಪ್ರಧಾನಿ : ಅಸಲಿ ಕಾರಣ ಇಲ್ಲಿದೆ