ಅಮೆರಿಕಕ್ಕೆ ಹೋಗಲು ಪಾಕ್ ಪ್ರಧಾನಿಗೆ ಸೌದಿ ಅರಸನ ವಿಮಾನ ಭಿಕ್ಷೆ?
ಇಮ್ರಾನ್ ಮಾನ ಹರಾಜಾಗುವುದನ್ನು ತಡೆದ ಸೌದಿ ರಾಜ
Team Udayavani, Sep 22, 2019, 3:53 PM IST
ಇಸ್ಲಾಮಾಬಾದ್: ವಿಶ್ವಸಂಸ್ಥೆ ಮಹಾಧಿವೇಶನಕ್ಕಾಗಿ ಜಗತ್ತಿನ ವಿವಿಧ ದೇಶಗಳಿಂದ ಅಮೆರಿಕಕ್ಕೆ ನಾಯಕರು ಹೋಗುತ್ತಿದ್ದಾರೆ. ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವರು ಅಲ್ಲಿದ್ದಾರೆ. ಆದರೆ ಅಮೆರಿಕಕ್ಕೆ ಹೋಗಲು ಪಾಕಿಸ್ಥಾನ ಪ್ರಧಾನಿ ಇಮ್ರಾನ್ ಖಾನ್ಗೆ ತುಸು ಸಮಸ್ಯೆ. ಸರಕಾರದ ವಿಮಾನದಲ್ಲಿ ಹೋಗೋಣವೆಂದರೆ ಅಷ್ಟೊಂದು ದುಡ್ಡು ಖರ್ಚುಮಾಡಿಕೊಂಡು ಹೋಗುವುದು ತುಂಬ ಕಷ್ಟ. ಅದಕ್ಕಾಗಿ ಅವರು ಸಾಮಾನ್ಯ ಪ್ರಯಾಣಿಕ ವಿಮಾನದಲ್ಲಿ ಹೋಗಲು ಉದ್ದೇಶಿಸಿದ್ದರು. ಕಳೆದ ಬಾರಿಯೂ ಇಮ್ರಾನ್ ಖಾನ್ ಹೀಗೆಯೇ ಹೋಗಿದ್ದರು ಕೂಡ. ಆದರೆ ಈ ಬಾರಿಯೂ ಪ್ರಯಾಣಿಕ ವಿಮಾನದಲ್ಲಿ ಹೋಗುವುದಕ್ಕೆ ಅವರಿಗೆ ಸಾಧ್ಯವಾಗಲಿಲ್ಲ. ಕಾರಣ ಇಮ್ರಾನ್ ಹೋಗುತ್ತೇನೆಂದಾಗ ಸೌದಿ ರಾಜ ಅದಕ್ಕೊಪ್ಪಲಿಲ್ಲ.
ಸೌದಿ ರಾಜರ ಭೇಟಿಗಾಗಿ ಇಮ್ರಾನ್ ಖಾನ್ ಈ ಮೊದಲೇ ಅಲ್ಲಿಗೆ ಹೋಗಿದ್ದು, ಅಲ್ಲಿಂದ ಅವರು ಪ್ರಯಾಣಿಕ ವಿಮಾನ ಹತ್ತುವವರಿದ್ದರು. ಇದು ಗೊತ್ತಾಗಿ ಸೌದಿ ರಾಜ ಮೊಹಮ್ಮದ್ ಬಿನ್ ಸಲ್ಮಾನ್ ಪ್ರತ್ಯೇಕ ವಿಮಾನದ ವ್ಯವಸ್ಥೆ ಮಾಡಿದ್ದಾರೆ. ಈ ಮೂಲಕ ಪಾಕಿಸ್ಥಾನದ ಮಾನ ಜಾಗತಿಕ ನಾಯಕರ ಎದುರು ಹರಾಜಾಗುವುದನ್ನು ತುಸು ತಡೆದಿದ್ದಾರೆ. ನೀವು ನಮ್ಮ ಅತಿಥಿಯಾದ್ದರಿಂದ ನನ್ನ ವಿಶೇಷ ವಿಮಾನದಲ್ಲಿ ಹೋಗಬೇಕೆಂದು ರಾಜರು ಹೇಳಿದ್ದಾರೆ. ಅದರಂತೆ ಇಮ್ರಾನ್ ಆ ವಿಮಾನದಲ್ಲಿ ಅಮೆರಿಕಕ್ಕೆ ಹೋಗಿದ್ದಾರೆ. ಸೆ.27ರಂದು ಇಮ್ರಾನ್ ವಿಶ್ವಸಂಸ್ಥೆಯಲ್ಲಿ ಭಾಷಣ ಮಾಡಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು
MUST WATCH
ಹೊಸ ಸೇರ್ಪಡೆ
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ
IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ; ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ