- Friday 06 Dec 2019
ಐಸಿಸ್ ಸ್ಥಾಪಕ, ಕ್ರೂರಿ ಅಬುಬಕರ್ ಬಗ್ದಾದಿ ಹೇಡಿಯಂತೆ ಕೊನೆಯುಸಿರೆಳೆದ: ಡೊನಾಲ್ಡ್ ಟ್ರಂಪ್
Team Udayavani, Oct 27, 2019, 11:30 PM IST
ವಾಷಿಂಗ್ಟನ್:ಐಸಿಸ್ (ಇಸ್ಲಾಮಿಕ್ ಸ್ಟೇಟ್ ಮುಖಂಡ) ಅಬುಬಕರ್ ಅಲ್ ಬಗ್ದಾದಿ ಅಮೆರಿಕದ ವಿಶೇಷ ಕಾರ್ಯಾಚರಣೆ ಪಡೆ ದಾಳಿಯಲ್ಲಿ ಸಾವನ್ನಪ್ಪಿರುವುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾನುವಾರ ಘೋಷಿಸಿದ್ದಾರೆ.
ಬಗ್ದಾದಿ ಓರ್ವ ಅತ್ಯಂತ ನಿಷ್ಕರುಣಿ ಹಾಗೂ ಹಿಂಸಾತ್ಮಕ ಭಯೋತ್ಪಾದಕ ಸಂಘಟನೆಯ ನಾಯಕನಾಗಿದ್ದು, ಆತನನ್ನು ಅಮೆರಿಕದ ಪಡೆಗಳು ಕಾರ್ಯಾಚರಣೆಯಲ್ಲಿ ಹತ್ಯೆಗೈದಿರುವುದಾಗಿ ಸ್ಪಷ್ಟಪಡಿಸಿದ್ದಾರೆ. ವಿಶ್ವದ ನಂಬರ್ ವನ್ ಉಗ್ರ ಅಬುಬಕರ್ ಅಲ್ ಬಗ್ದಾದಿ ಇನ್ನಿಲ್ಲ ಎಂಬುದನ್ನು ಟ್ರಂಪ್ ಅಧಿಕೃತವಾಗಿ ಬಹಿರಂಗಪಡಿಸಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.
ಬಗ್ದಾದಿ ಐಸಿಸ್ ಉಗ್ರ ಸಂಘಟನೆಯ ಸ್ಥಾಪಕ ಮತ್ತು ಮುಖಂಡನಾಗಿದ್ದ. ಇಡೀ ಜಗತ್ತಿಗೆ ಐಸಿಸ್ ಸಂಘಟನೆ ಕ್ರೂರಿಯಾಗಿತ್ತು ಎಂದು ಟ್ರಂಪ್ ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿದರು.
ವಿಶ್ವದ ಮೋಸ್ಟ್ ವಾಂಟೆಡ್ ಉಗ್ರನ ವಿರುದ್ಧ ಅಮೆರಿಕ ಪಡೆ ನಡೆಸಿದ ಎರಡು ಗಂಟೆಗಳ ಕಾರ್ಯಾಚರಣೆಗೆ ರಷ್ಯಾ, ಇರಾಕ್, ಟರ್ಕಿ, ಸಿರಿಯಾ ಸಹಕರಿಸಿದ್ದಕ್ಕೆ ಟ್ರಂಪ್ ಈ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸಿದರು. ನನ್ನ ಆಡಳಿತಾವಧಿಯಲ್ಲಿ ದೇಶದ ಭದ್ರತೆಯ ದೃಷ್ಟಿಯ ಹಿನ್ನೆಲೆಯಲ್ಲಿ ಬಗ್ಗಾದಿಯನ್ನು ಸೆರೆ ಹಿಡಿಯವುದು ಅಥವಾ ಕೊಲ್ಲುವುದು ಮೊದಲ ಆದ್ಯತೆಯಾಗಿತ್ತು ಎಂದು ಟ್ರಂಪ್ ತಿಳಿಸಿದ್ದಾರೆ.
ಇದ್ಲಿಬ್ ಪ್ರಾಂತ್ಯದ ಬಾಗ್ದಾದಿ ಅಡಗು ತಾಣಗಳ ಮೇಲೆ ಅಮೆರಿಕದ ವಿಶೇಷ ಪಡೆಗಳು ವಾಯುವ್ಯ ಸಿರಿಯಾದಲ್ಲಿ ಭಾರೀ ಸೇನಾ ದಾಳಿ ನಡೆಸಿದ್ದವು. ಈ ಕಾರ್ಯಾಚರಣೆಯಲ್ಲಿ ಬಾಗ್ದಾದಿ ನಾಯಿಯಂತೆ ಸಾವನ್ನಪ್ಪಿರುವುದಾಗಿ ಟ್ರಂಪ್ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ಹೇಡಿಯಂತೆ ಬಾಗ್ದಾದಿ ಸಾವನ್ನಪ್ಪುವ ಮೂಲಕ ಇಡೀ ಜಗತ್ತು ಸುರಕ್ಷಿತ ಸ್ಥಳವಾಗಿದೆ. ಅಮೆರಿಕಕ್ಕೆ ದೇವರ ಆಶೀರ್ವಾದ ಇರಲಿ ಎಂದು ಟ್ರಂಪ್ ತಿಳಿಸಿದ್ದಾರೆ.
ಈ ವಿಭಾಗದಿಂದ ಇನ್ನಷ್ಟು
-
ವಾಷಿಂಗ್ಟನ್: ಸೂರ್ಯನ ಅಧ್ಯಯನಕ್ಕಾಗಿ ಅಮೆರಿಕದ ಬಾಹ್ಯಾಕಾಶ ಸಂಸ್ಥೆ (ನಾಸಾ) ಕಳುಹಿಸಿದ್ದ 'ಪಾರ್ಕರ್', ಮಾನವ ನಿರ್ಮಿತ ಯಾವುದೇ ಆಕಾಶಕಾಯ ಈವರೆಗೆ ತಲುಪದಿರುವ...
-
ಜಕಾರ್ತಾ: ಇಂಡೋನೇಷಿಯಾದ ಸುಮಾತ್ರಾ ದ್ವೀಪದಲ್ಲಿರುವ ಅಶೆ ಪ್ರದೇಶದಲ್ಲಿ ಸ್ಥಳೀಯ ವ್ಯಕ್ತಿಯೊಬ್ಬನಿಗೆ ಛಡಿಯೇಟು ಶಿಕ್ಷೆ ನೀಡುತ್ತಿದ್ದ ಸಂದರ್ಭದಲ್ಲಿ ಆತ ಪ್ರಜ್ಞೆ...
-
ಹೊನಲುಲು: ಹವಾಯಿ ದ್ವೀಪದಲ್ಲಿರುವ ಅಮೆರಿಕಾದ ಸೇನಾ ನೆಲೆ ಪರ್ಲ್ ಹಾರ್ಬರ್ ನಲ್ಲಿ ಅಮೆರಿಕಾ ನೌಕಾ ದಳದ ನಾವಿಕನೊಬ್ಬ ಅಪ್ರಚೋದಿತ ಗುಂಡಿನ ದಾಳಿ ನಡೆಸಿದ ಪರಿಣಾಮ...
-
ರಿಯಾದ್: ಸೌದಿ ಅರೇಬಿಯಾದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ವಿದೇಶೀಯರಿಗೂ ಪೌರತ್ವ ನೀಡಲು ತೀರ್ಮಾನ ಕೈಗೊಳ್ಳಲಾಗಿದೆ. ವಿವಿಧ ವಲಯಗಳಲ್ಲಿನ ವೃತ್ತಿಪರರು,...
-
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಭಾರತೀಯ ಮೂಲದ ಅಮೆರಿಕ ಸಂಸದೆ ಪ್ರಮೀಳಾ ಜಯಪಾಲ್ ವಾಗ್ಧಾಳಿ ನಡೆಸಿದ್ದಾರೆ. ತನ್ನ ಅಧಿಕಾರವನ್ನು...
ಹೊಸ ಸೇರ್ಪಡೆ
-
ಬ್ಯಾಡಗಿ: ಅರಿಯದೇ ಮಾಡಿದ ತಪ್ಪನ್ನು ಜವಾಬ್ದಾರಿಯುತ ನಾಗರಿಕ ಸಮಾಜ ಮನ್ನಿಸುತ್ತಿಲ್ಲ, ಹೀಗಾಗಿ ಎಚ್ಐವಿ(ಏಡ್ಸ್) ಸೋಂಕಿತರು ನೆಲೆ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ....
-
ದಾವಣಗೆರೆ: ಗ್ರಾಮ ಮಟ್ಟದಲ್ಲೂ ವೃದ್ಧಾಪ್ಯ, ವಿಧವಾ ವೇತನದ ಮಧ್ಯವರ್ತಿಗಳ ಹಾವಳಿ ಹೆಚ್ಚಾಗುತ್ತಿದೆ ಎಂಬ ಆರೋಪ ಗುರುವಾರ ಮಮತಾ ಮಲ್ಲೇಶಪ್ಪ ಅಧ್ಯಕ್ಷತೆಯಲ್ಲಿ...
-
ಕಲಬುರಗಿ: ಕೇಬಲ್, ಸೆಟಲೈಟ್ ಮೂಲಕ ಪ್ರಸಾರ ಹೊಂದಿರುವ ಟೆಲಿವಿಷನ್ ನ್ಯೂಸ್ ಮತ್ತು ಮನರಂಜನೆ ಟಿವಿ ಚಾನೆಲ್ಗಳಲ್ಲಿ ಆಕ್ಷೇಪಾರ್ಹ ದೃಶ್ಯಗಳು ಪ್ರಸಾರವಾದಲ್ಲಿ...
-
ರೋಣ: ಪಟ್ಟಣದ ಗೌಡರ ಓಣಿ ಸರ್ಕಾರಿ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನುಶಿ (ಹುಳ), ಕಲ್ಲು ಇರುವ ಕಳಪೆ ಮಟ್ಟದ ಬಿಸಿಯೂಟ ಪೂರೈಸುತ್ತಿರುವುದರಿಂದ ಮಕ್ಕಳು...
-
ನವದೆಹಲಿ:ಏರ್ ಟೆಲ್ ಮತ್ತು ವೊಡಾಫೋನ್ ಸಂಸ್ಥೆಗಳು ಕರೆ ಮತ್ತು ಡೇಟಾ ಪ್ಯಾಕ್ ಗಳ ದರ ಏರಿಕೆ ಮಾಡಿದ ಬೆನ್ನಲ್ಲೇ ರಿಯಲನ್ಸ್ ಜಿಯೋ ಕೂಡಾ ಹೊಸ ದರದ ಪ್ಯಾಕೇಜ್ ಅನ್ನು...