18 ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡುತ್ತಾರಾ ಕೆನಡಾ ಪ್ರಧಾನಿ ಜಸ್ಟಿನ್‌ ಟ್ರೂಡೊ ದಂಪತಿ


Team Udayavani, Aug 3, 2023, 10:17 AM IST

18 ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡುತ್ತಾರಾ ಕೆನಡಾ ಪ್ರಧಾನಿ ಜಸ್ಟಿನ್‌ ಟ್ರೂಡೊ ದಂಪತಿ

ಒಟ್ಟಾವ: ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ತಮ್ಮ ಸುದೀರ್ಘ 18 ವರ್ಷಗಳ ದಾಂಪತ್ಯದ ನಂತರ ಪತ್ನಿ ಸೋಫಿ ಗ್ರೆಗೊಯಿರ್‌ನಿಂದ ಬೇರ್ಪಡುತ್ತಿದ್ದಾರೆ ಎಂಬ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಈ ಕುರಿತು ಪ್ರಧಾನಿ ದಂಪತಿ ಸ್ವತಃ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಹಾಕಿದ್ದಾರೆ.

ಜಸ್ಟಿನ್ ಟ್ರುಡೊ ಮತ್ತು ಸೋಫಿ ಅವರು ಸುದೀರ್ಘ ಸಂಭಾಷಣೆಯ ನಂತರ ಬೇರ್ಪಡಲು ನಿರ್ಧರಿಸಿದ್ದಾರೆ ಎಂದು Instagram ನಲ್ಲಿ ಪೋಸ್ಟ್ ಮಾಡಿ ತಿಳಿಸಿದ್ದಾರೆ. ಇದಲ್ಲದೆ, ಪ್ರಧಾನಿ ಕಾರ್ಯಾಲಯ ಹೊರಡಿಸಿದ ಹೇಳಿಕೆಯಲ್ಲಿ, ಇಬ್ಬರೂ ಕಾನೂನು ಪ್ರತ್ಯೇಕ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ ಎಂದು ಹೇಳಲಾಗಿದೆ.. ಇದರೊಂದಿಗೆ ಇವರಿಬ್ಬರ ಹದಿನೆಂಟು ವರ್ಷಗಳ ದಾಂಪತ್ಯ ಜೀವನ ಅಂತ್ಯಗೊಂಡಂತಾಗಿದೆ.

2005ರಲ್ಲಿ ಇಬ್ಬರೂ ವಿವಾಹವಾಗಿದ್ದರು:
ಜಸ್ಟಿನ್ ಟ್ರುಡೊ ಮೇ 28, 2005 ರಂದು ಮಾಂಟ್ರಿಯಲ್‌ನಲ್ಲಿ ವಿವಾಹವಾದರು. ಕಳೆದ ವರ್ಷ ವಿವಾಹ ವಾರ್ಷಿಕೋತ್ಸವದ ನಂತರ, ಸೋಫಿ ತಮ್ಮ ನಡುವೆ ಎಲ್ಲವೂ ಸರಿಯಾಗಿ ನಡೆಯುತ್ತಿಲ್ಲ ಎಂದು ಹೇಳಿದರು. ಮೇ ತಿಂಗಳಲ್ಲಿ ನಡೆದ ಕಿಂಗ್ ಚಾರ್ಲ್ಸ್ III ರ ಪಟ್ಟಾಭಿಷೇಕದಲ್ಲಿ PM ಟ್ರುಡೊ ಮತ್ತು ಅವರ ಪತ್ನಿ ಒಟ್ಟಿಗೆ ಕಾಣಿಸಿಕೊಂಡರು. 48 ವರ್ಷದ ಸೋಫಿ ಕ್ವಿಬೆಕ್‌ನಲ್ಲಿ ದೂರದರ್ಶನ ವರದಿಗಾರ್ತಿಯೂ ಆಗಿದ್ದಾರೆ. ಅವರು 51 ವರ್ಷದ ಜಸ್ಟಿನ್ ಟ್ರುಡೊ ಅವರೊಂದಿಗೆ ಮೂರು ಚುನಾವಣೆಗಳಿಗೆ ಪ್ರಚಾರವನ್ನೂ ಮಾಡಿದ್ದಾರೆ.

ದಂಪತಿಗೆ ಮೂವರು ಮಕ್ಕಳು:
ಟ್ರುಡೊ ದಂಪತಿಗೆ ಜೇವಿಯರ್ ಮತ್ತು ಹ್ಯಾಡ್ರಿಯನ್ ಮತ್ತು ಮಗಳು ಎಲಾ-ಗ್ರೇಸ್ ಮೂವರು ಮಕ್ಕಳಿದ್ದಾರೆ. ಮಕ್ಕಳ ಹಿತದೃಷ್ಟಿ ಮುಖ್ಯವಾಗಿದ್ದು ಮುಂದಿನ ವಾರ ಜಸ್ಟಿನ್ ಟ್ರುಡೋ ಅವರು ತಮ್ಮ ವಿಚ್ಛೇದನದ ಕುರಿತು ಮಾತನಾಡುವ ಸಾಧ್ಯತೆ ಇದೆ ಎನ್ನಲಾಗಿದ್ದು ಇದೇ ವೇಳೆ ದಂಪತಿ ತಮ್ಮ ಮಕ್ಕಳನ್ನು ಬೆಳೆಸುವ ಬಗ್ಗೆಯೂ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.

ವಿಪರ್ಯಾಸ ಅಂದ್ರೆ ಜಸ್ಟಿನ್ ಟ್ರುಡೊ ಅವರ ತಂದೆ, ಮಾಜಿ ಪ್ರಧಾನಿ ಪಿಯರೆ ಟ್ರುಡೊ ಅವರು ಕೂಡ ಅಧಿಕಾರದಲ್ಲಿದ್ದಾಗ 1977 ರಲ್ಲಿ ಅವರ ಪತ್ನಿ ಮಾರ್ಗರೆಟ್‌ರಿಂದ ವಿಚ್ಚೇದನ ಪಡೆದಿದ್ದರು.

 

 

 

View this post on Instagram

 

A post shared by Justin Trudeau (@justinpjtrudeau)

ಟಾಪ್ ನ್ಯೂಸ್

Madikeri ಕಾಳು ಮೆಣಸು ಕಳವು ಪ್ರಕರಣ: 24 ಗಂಟೆಗಳಲ್ಲಿ ಆರೋಪಿಗಳ ಬಂಧನ

Madikeri ಕಾಳು ಮೆಣಸು ಕಳವು ಪ್ರಕರಣ: 24 ಗಂಟೆಗಳಲ್ಲಿ ಆರೋಪಿಗಳ ಬಂಧನ

Brahmavar ಚೆಂಡು ತೆಗೆಯುವಾಗ ಬಾವಿಗೆ ಬಿದ್ದು ವ್ಯಕ್ತಿ ಸಾವು

Brahmavar ಚೆಂಡು ತೆಗೆಯುವಾಗ ಬಾವಿಗೆ ಬಿದ್ದು ವ್ಯಕ್ತಿ ಸಾವು

Road Mishap ಬೈಕ್‌ ಅಪಘಾತದ ಗಾಯಾಳು ಸಾವು

Road Mishap ಬೈಕ್‌ ಅಪಘಾತದ ಗಾಯಾಳು ಸಾವು

Kadaba ಸಾಲಭಾದೆ ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ

Kadaba ಸಾಲಭಾದೆ ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ

Road Mishap ಬೈಕ್‌-ಸ್ಕೂಟರ್‌ ಢಿಕ್ಕಿ; ಮೂವರಿಗೆ ಗಾಯ

Road Mishap ಬೈಕ್‌-ಸ್ಕೂಟರ್‌ ಢಿಕ್ಕಿ; ಮೂವರಿಗೆ ಗಾಯ

Uppunda ಅಪರಿಚಿತ ವಾಹನ ಢಿಕ್ಕಿ; ಕೂಲಿ ಕಾರ್ಮಿಕ ಸಾವು

Uppunda ಅಪರಿಚಿತ ವಾಹನ ಢಿಕ್ಕಿ; ಕೂಲಿ ಕಾರ್ಮಿಕ ಸಾವು

Crime News: ಕಾಸರಗೋಡು ಅಪರಾಧ ಸುದ್ದಿಗಳು

Crime News: ಕಾಸರಗೋಡು ಅಪರಾಧ ಸುದ್ದಿಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3 students of Indian origin passed away in Georgia

Georgia ಕಾರು ಅಪಘಾತ: ಭಾರತ ಮೂಲದ 3 ವಿದ್ಯಾರ್ಥಿಗಳ ಸಾವು

ಅಪಘಾತದಿಂದ ತೀವ್ರ ಗಾಯ: ಆಂಬ್ಯುಲೆನ್ಸ್ ಬರುವವರೆಗೆ ಸೆಲ್ಫಿಗೆ ಪೋಸ್‌ ಕೊಟ್ಟ ಯುವತಿಯರು.!

ಅಪಘಾತದಿಂದ ತೀವ್ರ ಗಾಯ: ಆಂಬ್ಯುಲೆನ್ಸ್ ಬರುವವರೆಗೆ ಸೆಲ್ಫಿಗೆ ಪೋಸ್‌ ಕೊಟ್ಟ ಯುವತಿಯರು.!

5

ಜಾರ್ಜಿಯಾದಲ್ಲಿ ಕಾರು ಪಲ್ಟಿಯಾಗಿ ಮೂವರು ಇಂಡೋ-ಅಮೆರಿಕನ್‌ ವಿದ್ಯಾರ್ಥಿಗಳು ದುರ್ಮರಣ

1-wewew

Dubai; 12 ವರ್ಷದ ಯತ್ನ: 8 ಕೋಟಿ ರೂ. ಗೆದ್ದ ಭಾರತೀಯ ಮಹಿಳೆ!

police USA

China ಶಾಲೆಯಲ್ಲಿ ಚಾಕು ಇರಿತ: 5 ಮಂದಿಗೆ ಗಾಯ

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

Madikeri ಕಾಳು ಮೆಣಸು ಕಳವು ಪ್ರಕರಣ: 24 ಗಂಟೆಗಳಲ್ಲಿ ಆರೋಪಿಗಳ ಬಂಧನ

Madikeri ಕಾಳು ಮೆಣಸು ಕಳವು ಪ್ರಕರಣ: 24 ಗಂಟೆಗಳಲ್ಲಿ ಆರೋಪಿಗಳ ಬಂಧನ

Brahmavar ಚೆಂಡು ತೆಗೆಯುವಾಗ ಬಾವಿಗೆ ಬಿದ್ದು ವ್ಯಕ್ತಿ ಸಾವು

Brahmavar ಚೆಂಡು ತೆಗೆಯುವಾಗ ಬಾವಿಗೆ ಬಿದ್ದು ವ್ಯಕ್ತಿ ಸಾವು

Hubli; ಜಾನುವಾರು ಮೇಯಿಸಲು ಹೋಗಿದ್ದ ಯುವಕ ಸಿಡಿಲು ಬಡಿದು ಸಾವು

Hubli; ಜಾನುವಾರು ಮೇಯಿಸಲು ಹೋಗಿದ್ದ ಯುವಕ ಸಿಡಿಲು ಬಡಿದು ಸಾವು

Road Mishap ಬೈಕ್‌ ಅಪಘಾತದ ಗಾಯಾಳು ಸಾವು

Road Mishap ಬೈಕ್‌ ಅಪಘಾತದ ಗಾಯಾಳು ಸಾವು

Kadaba ಸಾಲಭಾದೆ ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ

Kadaba ಸಾಲಭಾದೆ ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.