ಅಫ್ಘಾನಿಸ್ತಾನದ ಹೆರಾತ್ ಮಸೀದಿಯಲ್ಲಿ ಸ್ಫೋಟ: 15 ಮಂದಿ ಸಾವು
Team Udayavani, Sep 2, 2022, 6:51 PM IST
ಕಾಬೂಲ್: ಪಶ್ಚಿಮ ಅಫ್ಘಾನ್ ನಗರದ ಹೆರಾತ್ನಲ್ಲಿರುವ ಮಸೀದಿಯಲ್ಲಿ ಶುಕ್ರವಾರ ಸ್ಫೋಟ ಸಂಭವಿಸಿದ್ದು, 15 ಜನರು ಸಾವನ್ನಪ್ಪಿದ್ದಾರೆ ಎಂದು ತಾಲಿಬಾನ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಶುಕ್ರವಾರ ಮಧ್ಯಾಹ್ನದ ಪ್ರಾರ್ಥನೆಯ ಸಮಯದಲ್ಲಿ ಹೆರಾತ್ನ ಗುಜರ್ಗಾ ಮಸೀದಿಯಲ್ಲಿ ಸ್ಫೋಟ ಸಂಭವಿಸಿದೆ. ಇಂದು ಮುಸ್ಲಿಂ ಧಾರ್ಮಿಕ ವಾರದ ಪ್ರಮುಖ ದಿನವಾಗಿದ್ದು, ಮಸೀದಿಯಲ್ಲಿ ವಿಶೇಷ ಜನಸಂದಣಿಯಿತ್ತು.
ಈ ಘಟನೆಯ ಹೊಣೆಯನ್ನು ಇದುವರೆಗೂ ಯಾವುದೇ ಸಂಘಟನೆ ಹೊತ್ತುಕೊಂಡಿಲ್ಲ. ಈ ಹಿಂದಿನ ಮಸೀದಿ ದಾಳಿಗಳನ್ನು ಇಸ್ಲಾಮಿಕ್ ಸ್ಟೇಟ್ ಉಗ್ರಗಾಮಿ ಗುಂಪು ನಡೆಸಿದ್ದು, ಇದು ಅಫ್ಘಾನಿಸ್ತಾನದಲ್ಲಿ ಧಾರ್ಮಿಕ ಮತ್ತು ಜನಾಂಗೀಯ ಅಲ್ಪಸಂಖ್ಯಾತರ ವಿರುದ್ಧ ಸರಣಿ ದಾಳಿಗಳನ್ನು ನಡೆಸಿ, ತಾಲಿಬಾನ್ ಅನ್ನು ಗುರಿಯಾಗಿಸಿಕೊಂಡಿದೆ.
ಇದನ್ನೂ ಓದಿ:ಉಕ್ರೇನ್ನೊಂದಿಗಿನ ಯುದ್ಧವನ್ನು ಕೊನೆಗೊಳಿಸಲು ಭಾರತ ರಷ್ಯಾದ ಮನವೊಲಿಸಬೇಕು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Report; 2023ರಲ್ಲಿ 28.2 ಕೋಟಿ ಜನರಿಗೆ ತೀವ್ರ ಆಹಾರ ಬಿಕ್ಕಟ್ಟು
India VISA ನೀತಿ ಬಗ್ಗೆ ಅಲ್ಲಿನ ಸರಕಾರ ಮಾತನಾಡಲಿ: ಅಮೆರಿಕ
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ