“ಲೀಥಿಯಂ-ಅಯಾನ್‌ ಬ್ಯಾಟರಿ’ ಕರ್ತೃವಿಗೆ ನೊಬೆಲ್‌ ಗೌರವ

Team Udayavani, Oct 10, 2019, 6:00 AM IST

ಸ್ಟಾಕ್‌ಹೋಂ (ಸ್ವೀಡನ್‌): ಎಲೆಕ್ಟ್ರಾನಿಕ್‌ ಉಪ ಕರಣಗಳಲ್ಲಿ ಬಳಸುವ “ಲೀಥಿಯಂ- ಅಯಾನ್‌ ಬ್ಯಾಟರಿ’ಯನ್ನು ಪರಿಚಯಿಸಿದ ಅಮೆರಿಕದ ವಿಜ್ಞಾನಿ ಜಾನ್‌ ಗುಡ್‌ಎನಫ್ (97) ಅವರನ್ನು ರಾಸಾಯನ ಶಾಸ್ತ್ರ ವಿಭಾಗಕ್ಕೆ ನೀಡಲಾಗುವ ನೋಬೆಲ್‌ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಈ ಪ್ರಶಸ್ತಿಗೆ, ಬ್ರಿಟನ್‌ನ ಸ್ಟಾನ್ಲಿ ವಿಟ್ಟಿಂಗ್‌ಹ್ಯಾಮ್‌ ಹಾಗೂ ಜಪಾನ್‌ನ ಅಕಿರಾ ಯೊಶಿನೊ ಅವರಿಗೂ ನೀಡಲಾಗಿದ್ದು, ಜಾನ್‌ ಅವರು, 6.49 ಕೋಟಿ ರೂ. ಮೊತ್ತದ ಈ ಪ್ರಶಸ್ತಿಯನ್ನು ಸ್ಟಾನ್ಲಿ ಮತ್ತು ಅಕಿರಾ ಜತೆಗೆ ಹಂಚಿಕೊಳ್ಳಲಿದ್ದಾರೆ.

ಆಯ್ಕೆಯ ಬಗ್ಗೆ ಪ್ರಕಟಣೆ ನೀಡಿದ ರಾಯಲ್‌ ಸ್ವೀಡಿಶ್‌ ಅಕಾಡೆಮಿ ಆಫ್ ಸೈನ್ಸಸ್‌, “ಲೀಥಿಯಂ ಅಯಾನ್‌ ಬ್ಯಾಟರಿಗಳು ಹೆಚ್ಚು ಕಾಲದವರೆಗೆ ವಿದ್ಯುತ್ಛಕ್ತಿಯನ್ನು ಹಿಡಿದಿಟ್ಟುಕೊಳ್ಳಬಲ್ಲ, ಹಗುರ ವಾದ, ರೀಚಾರ್ಜ್‌ ಮಾಡಬಹುದಾದ ಹಾಗೂ ಅತ್ಯಂತ ಶಕ್ತಿಶಾಲಿ ಬ್ಯಾಟರಿಗಳಾಗಿವೆ. 1991ರಲ್ಲಿ ಮೊದಲ ಬಾರಿಗೆ ಇವು ಮಾರುಕಟ್ಟೆಗೆ ಬಂದ ಅನಂತರ ಬ್ಯಾಟರಿಗಳ ಲೋಕದಲ್ಲಿ ದೊಡ್ಡ ಕ್ರಾಂತಿ ಯನ್ನು ಮಾಡಿದ್ದು, ಮೊಬೈಲು, ಲ್ಯಾಪ್‌ಟಾಪ್‌ಗ್ಳಿಂದ ಹಿಡಿದು ಇಂದು ಕಾರುಗಳವರೆಗೆ ಇವುಗಳ ಬಳಕೆಯಿದೆ’ ಎಂದು ತಿಳಿಸಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ