
ಮನುಷ್ಯರಿಗೆ ಮಾತ್ರವಲ್ಲ ,ಚೀನದಲ್ಲಿ ಮೀನು, ಏಡಿಗಳಿಗೂ ಕೋವಿಡ್ ಟೆಸ್ಟ್
Team Udayavani, Aug 20, 2022, 7:15 AM IST

ಬೀಜಿಂಗ್/ನವದೆಹಲಿ: ಕೋವಿಡ್ ಉತ್ತುಂಗಕ್ಕೆ ಏರಿದ್ದ ಸಂದರ್ಭದಲ್ಲಿ ಜಗತ್ತಿನ ಹಲವೆಡೆ ಸಿಂಹಗಳಿಗೂ ಪರೀಕ್ಷೆ ನಡೆಸಿದ್ದು ಹಳೆಯ ಕತೆ.
ಇದೀಗ, ಮೀನು, ಏಡಿಗಳಿಗೆ ಕೂಡ ಸೋಂಕು ಪತ್ತೆ ಪರೀಕ್ಷೆ ನಡೆಸಲಾಗುತ್ತಿದೆ. ಜಗತ್ತಿಗೆ ಸೋಂಕು ಹಬ್ಬಿಸಿದ ಚೀನದ ಸದ್ಯದ ಪರಿಸ್ಥಿತಿ ಇದು. ಆಗ್ನೇಯ ಭಾಗದ ನಗರ ಕ್ಸಿಯಾಮೆನ್ ಎಂಬಲ್ಲಿ ಕೆಲ ದಿನಗಳಿಂದ ಸೋಂಕು ಹೆಚ್ಚಾಗಿದೆ.
ಇದರಿಂದ ಕಂಗಾಲಾಗಿರುವ ಸ್ಥಳೀಯ ಆಡಳಿತ ಮೀನು, ಏಡಿಗಳಿಗೆ ಕೂಡ ಸೋಂಕು ಪತ್ತೆ ಪರೀಕ್ಷೆ ನಡೆಸಲಾಗುತ್ತಿದೆ.
“ಸೌತ್ ಚೀನ ಮಾರ್ನಿಂಗ್ ಪೋಸ್ಟ್’ನ ಟ್ವಿಟರ್ ಖಾತೆಯಲ್ಲಿ ಅಪ್‌ಲೋಡ್ ಮಾಡಿರುವ ವಿಡಿಯೋ ಪ್ರಕಾರ ಪಿಪಿಇ ಕಿಟ್ ಧರಿಸಿದ ಆರೋಗ್ಯ ಕಾರ್ಯಕರ್ತರು ಮಾನವರಿಗೆ ಮಾತ್ರವಲ್ಲದೆ ಪ್ರಾಣಿಗಳಿಗೆ ಕೂಡ ಸೋಂಕು ಪತ್ತೆ ಪರೀಕ್ಷೆ ಮಾಡುತ್ತಿದ್ದಾರೆ. ಇಷ್ಟು ಮಾತ್ರವಲ್ಲ ಮೀನು ಹಿಡಿಯಲು ಸಮುದ್ರಕ್ಕೆ ತೆರಳುವ ಮೀನುಗಾರರಿಗೂ ಪ್ರತಿ ದಿನ ಪರೀಕ್ಷೆ ಮಾಡಲಾಗುತ್ತಿದೆ.
ಸೀರೋ ಸರ್ವೆ:
ಈ ನಡುವೆ, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಸೀರೋ ಸರ್ವೆ ನಡೆಸಲು ತೀರ್ಮಾನಿಸಿದೆ. ವಿಶೇಷವಾಗಿ ಮಂಕಿಪಾಕ್ಸ್ ದೃಢಪಟ್ಟವರ ಸಂಪರ್ಕಕ್ಕೆ ಬಂದವರನ್ನು ಪರೀಕ್ಷೆಗೆ ಒಳಪಡಿಸಲು ತೀರ್ಮಾನಿಸಲಾಗಿದೆ.
Videos of pandemic medical workers giving live seafood PCR tests have gone viral on Chinese social media. pic.twitter.com/C7IJYE7Ses
— South China Morning Post (@SCMPNews) August 18, 2022
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

World Record: 24 ಗಂಟೆಯಲ್ಲಿ 99 ಬಾರ್‌ಗಳಲ್ಲಿ ಕುಡಿದು ಗಿನ್ನಿಸ್ ದಾಖಲೆ ಬರೆದ ಸ್ನೇಹಿತರು

Philippines ; ಪ್ರಬಲ ಭೂಕಂಪದ ಬೆನ್ನಲ್ಲೇ ಉಗ್ರರ ದಾಳಿ : 4 ಮೃತ್ಯು, ಹಲವರಿಗೆ ಗಾಯ

Gaza: ದಕ್ಷಿಣ ಭಾಗದಲ್ಲಿ ದಾಳಿ- ಇಸ್ರೇಲ್ ಸಂಧಾನಕಾರರು ವಾಪಸ್- ಸಾವಿನ ಸಂಖ್ಯೆ 15 ಸಾವಿರ

IQ: 2.5 ವರ್ಷದ ಪೋರಿ ಮೆನ್ಸಾದ ಅತ್ಯಂತ ಕಿರಿಯ ಸದಸ್ಯೆ

Islamabad: 2 ಸಾವಿರ ವರ್ಷಗಳ ಹಿಂದಿನ ತಾಮ್ರದ ನಾಣ್ಯಗಳು ಪತ್ತೆ