FB, ಗೂಗಲ್, ಟ್ವಿಟರ್ ಸಿಇಓಗಳಿಗೆ US ಸೆನೆಟ್ ಕಮಿಟಿ ಸಮನ್ಸ್
Team Udayavani, Mar 27, 2018, 3:53 PM IST
ವಾಷಿಂಗ್ಟನ್ : ಬ್ರಿಟನ್ ನ ಕೇಂಬ್ರಿಜ್ ಅನಾಲಿಟಿಕಾ ಸಂಸ್ಥೆ ಸಾಮಾಜಿಕ ಮಾಧ್ಯಮಗಳ ಸುಮಾರು 5 ಕೋಟಿ ಬಳಕೆದಾರರ ವೈಯಕ್ತಿಕ ಮಾಹಿತಿಗಳನ್ನು ರಾಜಕೀಯ ಉದ್ದೇಶಕ್ಕಾಗಿ ಕದ್ದ ಪ್ರಕರಣಕ್ಕೆ ಸಂಬಂಧಿಸಿ ಸ್ಪಷ್ಟೀಕರಣ ನೀಡುವುದಕ್ಕಾಗಿ ಅಮೆರಿಕ ಸಂಸತ್ತಿನ ಶಕ್ತಿಶಾಲಿ ಸಮಿತಿಯೊಂದು ಫೇಸ್ ಬುಕ್, ಟ್ವಿಟರ್ ಮತ್ತು ಗೂಗಲ್ ಕಂಪೆನಿಗಳ ಸಿಇಓ ಗಳಿಗೆ ಸಮನ್ಸ್ ನೀಡಿದೆ.
ಫೇಸ್ ಬುಕ್ನ ಮಾರ್ಕ್ ಝುಕರ್ಬರ್ಗ್, ಗೂಗಲ್ ಕಂಪೆನಿಯ ಭಾರತೀಯ ಅಮೆರಿಕನ್ ಸುಂದರ್ ಪಿಚೈ ಮತ್ತು ಟ್ವಿಟರ್ನ ಜ್ಯಾಕ್ ಡೋರ್ಸೇ ಅವರಿಗೆ ಮುಂದಿನ ಎ.10ರಂದು ಸೆನೆಟ್ ನ್ಯಾಯಾಂಗ ಸಮಿತಿಯ ಮುಂದೆ ಹಾಜರಾಗಿ ಪ್ರಮಾಣೀಕೃತ ಹೇಳಿಕೆ ನೀಡುವಂತೆ ಸಮನ್ಸ್ ಜಾರಿ ಮಾಡಲಾಗಿರುವುದಾಗಿ ಸಮಿತಿಯ ಅಧ್ಯಕ್ಷ ಚಕ್ ಗ್ರಾಸ್ಲೇ ತಿಳಿಸಿದ್ದಾರೆ.
ಫೇಸ್ ಬುಕ್ ಬಳಕೆದಾರರ ವೈಯಕ್ತಿಕ ಮಾಹಿತಿಗಳ ರಕ್ಷಣೆ ಮತ್ತು ವಿಚಕ್ಷಣೆಗೆ ಸಂಬಂಧಿಸಿದ ಭೂತ ಮತ್ತು ಭವಿಷ್ಯತ್ ನೀತಿಗಳ ಬಗ್ಗೆ ಚರ್ಚಿಸುವಂತೆಯೂ ಫೇಸ್ ಬುಕ್ನ ಝುಕರ್ ಬರ್ಗ್ಗೆ ಆಹ್ವಾನಿಸಲಾಗಿರುವುದಾಗಿ ಗ್ರಾಸ್ಲೇ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು