
ಚೀನದಲ್ಲಿ ಸೇನಾ ದಂಗೆ? ಅಧ್ಯಕ್ಷ ಕ್ಸಿ ಗೃಹಬಂಧನ? ಬೀಜಿಂಗ್ ಸಂಪರ್ಕ ಕಡಿತ:
ಚೀನದಲ್ಲಿ ನಿಗೂಢ ಬೆಳವಣಿಗೆ; ವದಂತಿಗಳದ್ದೇ ಕಾರುಬಾರು!
Team Udayavani, Sep 25, 2022, 7:15 AM IST

ಬೀಜಿಂಗ್/ನವದೆಹಲಿ: ಜಗತ್ತಿನಲ್ಲೇ ಅತ್ಯಂತ ಪ್ರಬಲ ನಾಯಕನಾಗಬೇಕು ಎಂದು ಹೊರಟಿದ್ದ ಚೀನ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ವಿರುದ್ಧ ಕಮ್ಯೂನಿಸ್ಟ್ ಕ್ರಾಂತಿ ಆಗಿದೆಯೇ? ಇಂಥದ್ದೊಂದು ವದಂತಿಗಳು ಶನಿವಾರ ಹರಿದಾಡುತ್ತಿದ್ದು.
ಟ್ವಿಟರ್‌ನಲ್ಲೂ ವಿಶ್ವವ್ಯಾಪಿ ಟ್ರೆಂಡ್ ಆಗಿದ್ದು, ಚೀನ ಮೂಲದ ಮಾನವ ಹಕ್ಕುಗಳ ಹೋರಾಟರಾರ್ತಿಯೊಬ್ಬರು ಬೀಜಿಂಗ್‌ಗೆ ಸೇನಾ ವಾಹನಗಳು ತೆರಳುತ್ತಿರುವ ವಿಡಿಯೋವೊಂದನ್ನು ಟ್ವಿಟರ್‌ನಲ್ಲಿ ಹಾಕಿ ಇದೇ ಸಂಶಯ ವ್ಯಕ್ತಪಡಿಸಿದ್ದಾರೆ.
ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಆಗುತ್ತಿರುವ ಚರ್ಚೆ ಪ್ರಕಾರ, ಈಗಾಗಲೇ ಸೇನೆಯು ಬೀಜಿಂಗ್ ಅನ್ನು ತನ್ನ ವಶಕ್ಕೆ ತೆಗೆದುಕೊಂಡಿದ್ದು, ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರನ್ನು ಗೃಹ ಬಂಧನದಲ್ಲಿ ಇರಿಸಿದೆಯಂತೆ. ಜನರಲ್ ಲಿ ಕ್ವಿಯಾಮಿಂಗ್ ಅವರನ್ನು ಕ್ಸಿ ಜಿನ್‌ಪಿಂಗ್ ಅವರ ಉತ್ತರಾಧಿಕಾರಿ ಮಾಡಲಾಗಿದೆಯಂತೆ. ಈ ಬಗ್ಗೆ ಸ್ವತಃ ಚೀನೀಯರೇ ಟ್ವಿಟರ್‌ನಲ್ಲಿ ನಾನಾ ರೀತಿಯ ಮಾಹಿತಿ ನೀಡುತ್ತಿದ್ದಾರೆ.
ವಿಚಿತ್ರವೆಂದರೆ, ಈ ಯಾವುದೇ ಸಂಗತಿಗಳ ಬಗ್ಗೆ ಚೀನಾ ಸರ್ಕಾರ ಇದುವರೆಗೆ ಯಾವುದೇ ದೃಢೀಕರಣ ನೀಡಿಲ್ಲ. ಅಷ್ಟೇ ಅಲ್ಲ, ಚೀನದ ಯಾವುದೇ ಮಾಧ್ಯಮಗಳೂ ಏನನ್ನೂ ಹೇಳುತ್ತಿಲ್ಲ. ಹೀಗಾಗಿ, ಎಲ್ಲವೂ ನಿಗೂಢವಾಗಿಯೇ ಉಳಿದಿದೆ.
ಈಗಾಗಲೇ ಜಿನ್‌ಪಿಂಗ್ ಅವರನ್ನು ಗೃಹಬಂಧನದಲ್ಲಿ ಇರಿಸಿ, ಸೇನಾ ಮುಖ್ಯಸ್ಥರ ಸ್ಥಾನದಿಂದಲೂ ಕಿತ್ತುಹಾಕಲಾಗಿದೆಯಂತೆ. ಮೂಲಗಳು ಹೇಳಿರುವಂತೆ, ಉಜ್ಬೇಕಿಸ್ತಾನದ ಸಮರಖಂಡದಿಂದ ಕ್ಸಿ ಜಿನ್‌ಪಿಂಗ್ ವಾಪಸ್ ಬಂದ ಕೂಡಲೇ, ವಿಮಾನ ನಿಲ್ದಾಣದಲ್ಲೇ ಅವರನ್ನು ಬಂಧಿಸಿ ಕರೆದೊಯ್ಯಲಾಗಿದೆ. ಚೀನಾದಲ್ಲಿ ಆಡಳಿತದಲ್ಲಿರುವ ಕಮ್ಯೂನಿಸ್ಟ್ ಪಕ್ಷದ ಹಿರಿಯ ನಾಯಕರೇ ಈ ದಂಗೆಗೆ ಕಾರಣ ಎಂದು ಹೇಳಲಾಗುತ್ತಿದೆ.
ವಿಮಾನಗಳ ಸಂಚಾರ ರದ್ದು
ಕ್ಸಿ ವಿರುದ್ಧದ ದಂಗೆಗೆ ಪೂರಕವೆಂಬಂತೆ, ಬೀಜಿಂಗ್‌ನಿಂದ ದೇಶದೊಳಗೆ ಮತ್ತು ವಿದೇಶಿ ವಿಮಾನ ಪ್ರಯಾಣವನ್ನು ಸ್ಥಗಿತಗೊಳಿಸಲಾಗಿದೆ. ಈ ವಿಚಾರ ವಿಮಾನಯಾನ ಟ್ರಾಫಿಕ್‌ಗೆ ಸಂಬಂಧಿಸಿದ ವೆಬ್‌ಸೈಟ್‌ಗಳಲ್ಲಿ ದೃಢಪಟ್ಟಿದೆ. ಆದರೆ ಯಾವ ಕಾರಣಕ್ಕಾಗಿ ವಿಮಾನ ಸಂಚಾರ ಸ್ಥಗಿತಗೊಳಿಸಲಾಗಿದೆ ಎಂಬುದನ್ನು ಯಾರೂ ಹೇಳಿಲ್ಲ. ದಂಗೆಯ ಕಾರಣದಿಂದಲೇ ಬೀಜಿಂಗ್ ನಗರವನ್ನು ಸ್ತಬ್ಧಗೊಳಿಸಿ, ವಿಮಾನ ಸಂಚಾರ ಸ್ಥಗಿತ ಮಾಡಲಾಗಿದೆ ಎಂಬ ಕುರಿತಂತೆಯೂ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗಿದೆ. ಬೀಜಿಂಗ್ ಅನ್ನು ಸೇನೆ ತನ್ನ ವಶಕ್ಕೆ ತೆಗೆದುಕೊಂಡಿದೆ ಎನ್ನಲಾಗಿದೆ.
ಸುಬ್ರಮಣಿಯನ್ ಸ್ವಾಮಿ ಟ್ವೀಟ್
ಅತ್ತ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಕೂಡ ಚೀನ ಬೆಳವಣಿಗೆ ಬಗ್ಗೆ ಟ್ವೀಟ್ ಮಾಡಿದ್ದಾರೆ. ವದಂತಿಗಳ ಪ್ರಕಾರ, ಕ್ಸಿ ಜಿನ್‌ಪಿಂಗ್ ಅವರನ್ನು ಗೃಹ ಬಂಧನದಲ್ಲಿ ಇರಿಸಲಾಗಿದೆ. ಚೀನಾದ ಕಮ್ಯೂನಿಸ್ಟ್ ನಾಯಕರು, ಕ್ಸಿ ಜಿನ್‌ಪಿಂಗ್ ಅವರನ್ನು ಪಕ್ಷದ ಅಧ್ಯಕ್ಷ ಸ್ಥಾನದಿಂದ ತೆಗೆದು ಹಾಕಿದ್ದಾರೆ ಎಂದು ಟ್ವೀಟಿಸಿದ್ದಾರೆ.
ಏನಿರಬಹುದು ಕಾರಣ?
ಇತ್ತೀಚೆಗಷ್ಟೇ ಚೀನದ ಕಮ್ಯೂನಿಸ್ಟ್ ಪಕ್ಷವು ಭ್ರಷ್ಟಾಚಾರ ವಿರುದ್ಧ ದೊಡ್ಡ ಆಂದೋಲನವನ್ನೇ ಶುರು ಮಾಡಿದೆ. ಇದರಲ್ಲಿ ಕ್ಸಿ ಜಿನ್‌ಪಿಂಗ್ ವಿರುದ್ಧವಿದ್ದ ಪಕ್ಷದ ಕೆಲವು ನಾಯಕರ ವಿರುದ್ಧ ಭ್ರಷ್ಟಾಚಾರ ಆರೋಪದ ಮೇಲೆ ಅವರನ್ನು ಗಲ್ಲುಶಿಕ್ಷೆಗೆ ಗುರಿಪಡಿಸಲಾಗಿದೆ. ಇದರಿಂದ ಕೆರಳಿರುವ ಮಾಜಿ ಅಧ್ಯಕ್ಷರೊಬ್ಬರು ಇಡೀ ದಂಗೆಯ ಹಿಂದೆ ಇದ್ದಾರೆ ಎಂದು ಹೇಳಲಾಗಿದೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನೇಪಾಲ ಉಪ ಪ್ರಧಾನಿ ರಬಿ ಲಾಮಿಚಾನೆ ವಜಾಗೊಳಿಸಿದ ಸುಪ್ರೀಂ ಕೋರ್ಟ್

ಚೀನದಿಂದ ತಾಲಿಬಾನ್ ಬ್ಲೋಫಿಶ್ ಡ್ರೋನ್ ಖರೀದಿ: ಅಮೆರಿಕ ಆತಂಕ

ಅಮೆರಿಕ ಪೊಲೀಸ್ ವಾಹನ ಡಿಕ್ಕಿ; ಭಾರತೀಯ ವಿದ್ಯಾರ್ಥಿನಿ ಸಾವು !

ಸೋಮಾಲಿಯಾ: ಅಮೆರಿಕ ಸೇನೆಯ ಕಾರ್ಯಾಚರಣೆಯಲ್ಲಿ ಐಸಿಸ್ ಮುಖಂಡ ಬಿಲಾಲ್ ಸೇರಿ ಹತ್ತು ಉಗ್ರರು ಹತ

ಅಫ್ಘಾನಿಸ್ತಾನದಲ್ಲಿ ವಿಪರೀತ ಚಳಿಗೆ 160 ಕ್ಕೂ ಹೆಚ್ಚಿನ ಮಂದಿ ಮೃತ್ಯು
MUST WATCH

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?

ಕೃಷ್ಣ ನಗರಿಯ ಕುರಿತು ಅಭಿಮಾನದ ಮಾತುಗಳನ್ನಾಡಿದ Melody King Rajesh Krishnan
