ಕೆಲಸದ ಬದ್ಧತೆಗಾಗಿ ಜಪಾನಿನಲ್ಲಿ ಸೋಲೋ ವೆಡ್ಡಿಂಗ್…!

ವೈಯಕ್ತಿಕ ಸ್ವಾತಂತ್ರ್ಯದ ಜತೆಗೆ ಜೀವನದ ಭದ್ರತೆಗಾಗಿ ಕೆಲಸದ ಬದ್ಧತೆ

Team Udayavani, Aug 10, 2019, 7:45 PM IST

ಮಣಿಪಾಲ: ಹೆಣ್ಣು ಮಗುವೊಂದು ಹುಟ್ಟಿದ ಬಳಿಕ ಹೆತ್ತವರು ಅದರ ಪಾಲನೆ ಪೋಷಣೆಯಲ್ಲೇ ಮೈ ಮರೆಯುತ್ತಾರೆ. ಅತ್ಯಂತ ಜಾಗರೂಕತೆಯಿಂದ ಹೆಣ್ಣು ಮಗುವನ್ನು ಸಾಕಿ ಸಲುಹಿ ದೊಡ್ಡವಳನ್ನಾಗಿ ಮಾಡುತ್ತಾರೆ. ಹೆಣ್ತನದ ಆಗಮನವಾದ ಬಳಿಕ ಜವಾಬ್ದಾರಿಯ ಅರಿವು ಅವರಿಗೆ ಆಗುತ್ತದೆ ಎಂಬುದು ವಾಸ್ತವ.

ಬಳಿಕ ಪದವಿ, ಸ್ನಾತಕೋತ್ತರ ಪದವಿ ಹೀಗೆ ತನ್ನ ಶಿಕ್ಷಣವನ್ನು ಪೂರೈಸಲು ಮನೆಯವರು ಎಲ್ಲಾ ರೀತಿಯ ಸಹಾಯ ಮಾಡುತ್ತಾರೆ. ಬಳಿಕ ಉದ್ಯೋಗ ಹೀಗೆ ಜೀವನ ಶೈಲಿ ಮುಂದುವರೆಯುತ್ತದೆ. ಅಷ್ಟರಲ್ಲಿ ವಯಸ್ಸು 25 ಆಗುತ್ತದೆ. ಒಂದು ಒಳ್ಳೆಯ ಸಂಬಂಧವನ್ನು ನೋಡಿ ಮದುವೆ ಮಾಡಿಕೊಡುತ್ತಾರೆ. ಇದು ಭಾರತ ಸಂಪ್ರದಾಯ. ಹೆಣ್ಣನ್ನ ಮದುವೆ ಮಾಡಿಕೊಟ್ಟ ಬಳಿಕ ತನ್ನ ಜವಾಬ್ದಾರಿ ಮುಗಿಯಿತು ಎಂದು ಹೆಣ್ಣೆತ್ತ ಮನೆಯವರು ಅಭಿಪ್ರಾಯಿಸುವುದೂ ಇದೆ. ಹೀಗೆ ಮದುವೆಯಾಗಿ ಕುಟುಂಬದ ಜತೆ ಹಾಯಾಗಿ ಇದ್ದು ಬಿಡುತ್ತಾರೆ. ಆದರೆ ಮದುವೆ ಬಳಿಕ ಬಹುತೇಕರು ಉದ್ಯೋಗ ತ್ಯಜಿಸುವುದು ಭಾರತದಲ್ಲಿ ಹೆಚ್ಚು ಇದೆ. ಈ ಕಾರಣಕ್ಕಾಗಿಯೇ ಕೆಲವು ಕಂಪೆನಿಗಳು ಹುಡುಗಿಯರನ್ನು ಕಲಸಕ್ಕೆ ಇಟ್ಟುಕೊಳ್ಳುವುದಿಲ್ಲ.

ಆದರೆ ಜಪಾನ್ ಮಾತ್ರ ಇದಕ್ಕೆ ತದ್ವಿರುದ್ದ. ತನ್ನ ದಣಿವರಿಯದ ಕೆಲಸಗಳು ಮತ್ತು ಬದ್ಧತೆಗಳಿಗೆ ಹೆಸರಾಗಿರುವ ಜಪಾನ್‌ ನಲ್ಲಿ ಉದ್ಯೋಗದ ಸಲುವಾಗಿ ಸ್ವಾತಂತ್ರ್ಯವನ್ನು ಕಂಡುಕೊಳ್ಳಲು ಮದುವೆಯನ್ನೇ ಆಗುತ್ತಿಲ್ಲ. ಈ ಮೂಲಕ ಕೆಲಸದತ್ತ ಶೇ. 100 ಗಮನ ಹರಿಸುತ್ತಿದ್ದಾರೆ. ಜಪಾನಿಗರು ಕೆಲಸದ ಬದ್ಧತೆ ಮೂಲಕ ತಮ್ಮ ಜೀವನದ ಭದ್ರತೆಯನ್ನು ಕಾಪಾಡಿಕೊಳ್ಳಲು ಹಾತೋರೆಯುತ್ತಾರೆ. ಇದಕ್ಕಾಗಿಯೇ ಜಪಾನ್ ದೇಶ ಹಲವು ಬಾರಿ ನಮ್ಮಲ್ಲಿ ಉದಾಹರಿಸಲ್ಪಡುತ್ತದೆ. ಜಪಾನಿನ ಹೆಣ್ಣು ಮಕ್ಕಳೂ ಅಷ್ಟೇ ಕೆಲಸದ ಕುರಿತು ಅತ್ಯಂತ ಹೆಚ್ಚು ಒಲವು ಕಂಡುಕೊಂಡಿರುವ ವ್ಯಕ್ತಿಗಳು. ವ್ಯಕ್ತಿಗಳು ಎನ್ನುವುದಕ್ಕಿಂತ ಶ್ರಮ ಜೀವಿ ಎನ್ನಬಹುದು.

ಟೋಕಿಯೋದಲ್ಲಿ ಇತ್ತೀಚೆಗೆ ಹೆಣ್ಣೊಬ್ಬಳು ಒಂಟಿಯಾಗಿ ಮದುವೆಯಾಗಿದ್ದಾರೆ. ಅದು ಭಾರತಕ್ಕೆ ಹೊಸ ಸುದ್ದಿಯಾದರೂ ಜಪಾನ್‌ ಗೆ ಹೊಸತಲ್ಲ. ಟೋಕಿಯೋದ ಮೀಟಿಂಗ್ ಹಾಲ್ನಲ್ಲಿ ಇತ್ತಿಚೆಗೆ ಹೆಣ್ಣೊಬ್ಬಳು ತನ್ನಿಚ್ಚೆಯಂತೆಯೇ ತನ್ನನ್ನೇ ವರಿಸಿದ್ದಾಳೆ. ಅ ಕಾರ್ಯಕ್ಕೆ 30 ರಿಂದ 40 ಜನ ಸೇರಿದ್ದಾರೆ. ಮಂಟಪದಲ್ಲಿ ಏಕ ಮಾತ್ರ ಹೆಣ್ಣು ಮೈತುಂಬಾ ಬಟ್ಟೆ ಹಾಕಿ, ಮದುಮಗಳಂತೆ ಕಂಗೊಳಿಸುತ್ತಿದ್ದಳು. ಆಗಮಿಸಿದ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸುತ್ತಿದ್ದಳು. ಜಗತ್ತಿನಲ್ಲಿ ಸಲಿಂಗಿ ವಿವಾಹಗಳು ಇತ್ತೀಚೆಗೆ ಹೆಚ್ಚು ಪ್ರಾಮುಖ್ಯ ಪಡೆದುಕೊಳ್ಳಲು ಆರಂಭವಾದ ಈ ಕಾಲಘಟ್ಟದಲ್ಲಿ, ಸ್ವ ವಿವಾಹ ಜಗತ್ತನ್ನೇ ಮೂಗಿನ ಮೇಲೆ ಬೆರಳು ಇಡುವಂತೆ ಮಾಡಿದೆ.

ಯಾಕೆ ಜಪಾನಿಯರ ಈ ಕ್ರಮ
ಮದುವೆಯಾದ ಬಳಿಕ ಒಂಟಿಯಾಗಿ ವಾಸಿಸುತ್ತಿದ್ದಾರೆ. ಕೆಲಸ ಮಾಡುವ ಕಚೇರಿಯ ಹತ್ತಿರ ಅಥವ ಕೂಗಳತೆ ದೂರದಲ್ಲಿ ಮನೆ ನಿರ್ಮಿಸಿಸಿದ್ದಾರೆ. ಇದಕ್ಕೆ ಅವಳು ಕೊಡುವ ಕಾರಣ ಸ್ವಾತಂತ್ರ್ಯ. 25 ವಯಸ್ಸಿನಲ್ಲಿ ಭಾರತದಂತೆ ಜಪಾನಿನಲ್ಲೂ ಮದುವೆ ಮಾಡಿಸಲಾಗುತ್ತದೆ. “25 ಕಳೆದರೆ ಕ್ರಿಸ್ಮಸ್ ಕೇಕ್ ನಂತೆ’ ಎಂಬ ಮಾತಿದೆ. (ಕ್ರಿಸ್ಮಸ್ ಕೆಕ್ ಅನ್ನು ಡಿಸೆಂಬರ್ 25ರ ಬಳಿಕ ಮಾರಾಟ ಮಾಡಲಾಗುವುದಿಲ್ಲ) ಈ ಕಾರಣಕ್ಕೆ 25ನೇ ವಯಸ್ಸಿಗೆ ಮದುವೆಯಾಗುತ್ತಾರೆ. ದಾಂಪತ್ಯದಲ್ಲಿ ಅಥವ ಇತರ ಯಾವುದೇ ಸಂಬಂಧಗಳಲ್ಲಿ ಇಷ್ಟವಿಲ್ಲದವರು ಏಕಾಂಗಿತಾಗಿ ವಿವಾಹವಾಗುತ್ತಿದ್ದಾರೆ.

ತನ್ನನ್ನೇ ಮದುವೆಯಾದ ಬಳಿಕ ಉದ್ಯೋಗದತ್ತ ಇವರು ತಮ್ಮ ಬದ್ಧತೆರಯನ್ನು ಮುಂದುವರೆಸುತ್ತಾರೆ. ಕುಟುಂಬ ಇದ್ದರೆ ಹೆಚ್ಚಿನ ಸಮಯವನ್ನು ಮೀಸಲಿರಿಸಲು ಅಸಾಧ್ಯವಾಗುತ್ತದೆ. ಇದರಿಂದ ಅತ್ತ ಕುಟುಂಬವೂ ಅಲ್ಲ, ಇತ್ತ ಕೆಲಸವೂ ಅಲ್ಲದೇ ಒಂದು ನಿಷ್ಕ್ರೀಯ ಜೀವನವನ್ನು ಅನುಭವಿಸಬೇಕಾಗುತ್ತದೆ. ಈ ರೀತಿ ಒಂಟಿ ಮದುವೆಯಾದರೆ ಇದರಿಂದ ವೈಯಕ್ತಿಕ ಸ್ವಾತಂತ್ರ್ಯ ಇಲ್ಲವಾಗುತ್ತದೆ. ಈ ಕಾರಣಕ್ಕೆ ಈ 25 ವರ್ಷಕ್ಕೆ ಒಂಟಿಯಾಗಿ ಮದುವೆಯಾಗಿ ಬಿಡುತ್ತಾರೆ.

ಮಹಿಳಾ ಉದ್ಯೋಗಿಗಳ ಸಂಖ್ಯೆ ಹೆಚ್ಚು
ಜಪಾನ್‌ ನಲ್ಲಿ  ಈ ಹಿಂದಿಗಿಂತಲೂ ಹೆಚ್ಚು ಮಹಿಳಾ ಸಿಬಂದಿಗಳನ್ನು ನಾವು ಕಾಣಬಹುದಾಗಿದೆ. ಈಗ ಅವರಿಗೆ ಸಂಸ್ಕೃತಿಕ ಕಟ್ಟುಪಾಡುಗಳು ಅನ್ವಯವಾಗುವುದಿಲ್ಲ. ತನ್ನದೇ ಜೀವನ, ತನ್ನದೇ ನಿರ್ಧಾರ. ಅಲ್ಲದಿದ್ದರೆ ತಮ್ಮ ಮಕ್ಕಳನ್ನು ನೋಡಿಕೊಳ್ಳಲು ಜನಗಳು ಇರುವುದಿಲ್ಲ. ಮುಖ್ಯ ಕಾರಣ ಎಂದರೆ ಅಲ್ಲಿನ “ಓವರ್ ಟೈಮ್’ ಕೆಲಸ. ಯಾಕೆಂದರೆ ಅವರು ಶ್ರಮ ಜೀವಿಗಳು.

ಮದುವೆ ಪ್ರಮಾಣ ಇಳಿಕೆ
ಜಪಾನ್‌ ನಲ್ಲಿ  ಮದುವೆ ಪ್ರಮಾಣ ಇಳಿಕೆಯಾಗಿದೆ. 7 ಜನರಲ್ಲಿ 1 ಮದುವೆಯಾಗುತ್ತಿಲ್ಲ. ಅವರಿಗೆ ವಯಸ್ಸು 50 ಆದರೂ ಮದುವೆಯತ್ತ ಗಮನ ಕೆಂದ್ರೀಕರಿಸಿಲ್ಲ. 1990ರ ಬಳಿಕ ಈ ಪ್ರಮಾಣದಲ್ಲಿ ಮದುವೆಗಳ ಸಂಖ್ಯೆ ಇಳಿಕೆಯಾಗಿದೆ. ಇದು ದ್ವಿತೀಯ ಮಹಾಯುದ್ದದ ಸಂದರ್ಭ ನಡೆಯುತ್ತ ಮದುವೆಗಳ ಸಂಖ್ಯೆಗೂ ಇದು ಕಡಿಮೆ.

ಜೀವನ ಶೈಲಿಯೂ ಭಿನ್ನ
ಒಂಟಿ ಮಹಿಳೆಯವರು/ಸ್ವ ಮದುವೆ ಮಾಡಿಕೊಂಡವರ ಜೀವನ ಶೈಲಿಯೇ ಕುತೂಹಲದಿಂದ ಕೂಡಿದೆ. ಏಕಾಂಗಿ ಜೀವನ, ಏಕಾಂಗಿ ಪಯಣ, ಊಟ, ನಿದ್ದೆಯೂ ಏಕಾಂಗಿಯಾಗಿಯೇ, ಶಾಪಿಂಗ್ ಹೊರಟಾಗಲೂ ಏಕಾಂಗಿಯೇ. ಶಾಪಿಂಗ್ ಮಾಲ್‌ ಗಳಲ್ಲಿ ಅಲ್ಲಿನ ಕನ್ನಡಿಗಳೇ ಇವರ ಸಹವರ್ತಿಗಳು. ನಮ್ಮ ಶಾಪಿಂಗ್ ಬಟ್ಟೆಗಳು ನನಗೆ ಓಕೆ ಆಗಿದೆಯೇ ಎಂಬುದನ್ನು ಖಚಿತಪಡಿಸಲು ಕನ್ನಡಿ ಎದುರಿನ ವ್ಯಕ್ತಿಯದ್ದೇ ಆಯ್ಕೆ.

ಜನಸಂಖ್ಯೆ ಕುಸಿತ
ಜಪಾನ್ ಮಹಿಳೆಯರು ಮದುವೆಯಿಂದ ಅಂತರ ಖಾಯ್ದುಕೊಂಡಿರುವುದು ಅಲ್ಲಿನ ಜನ ಸಂಖ್ಯೆಗೆ ಏಟು ನೀಡಿದೆ. ಯುವ ಜನತೆ ಮದುವೆಯಾಗಲು ಅಲ್ಲಿ ಕ್ಯಾಂಪೇನ್‌ ಗಳನ್ನು ಸರಕಾರ ಹಮ್ಮಿಕೊಂಡಿವೆ. ಆದರೆ ಯುವ ಜನರು ಮಾತ್ರ ಏಕಾಂಗಿಯಾಗಿ ಇರಲು ಆಶಿಸುತ್ತಾರೆ. ಜಪಾನ್ನಂತಹ ದೇಶಕ್ಕೇ ಈಗ ಫ್ಯಾಮೀಲಿ ಪ್ಲಾನಿಂಗ್ ಅಗತ್ಯವೇ ಇಲ್ಲ.

– ಕಾರ್ತಿಕ್ ಅಮೈ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ