ಟ್ರಂಪ್ ಆಜ್ಞೆ ಕೊಟ್ರೆ ಚೀನಾದ ಮೇಲೆ ನ್ಯೂಕ್ಲಿಯರ್ ದಾಳಿ; ಸ್ಕ್ವಾಟ್
Team Udayavani, Jul 29, 2017, 11:52 AM IST
ವಾಷಿಂಗ್ಟನ್: ಸಿಕ್ಕಿಂ ಗಡಿಯಲ್ಲಿ ಉದ್ಭವಿಸಿರುವ ಡೋಕ್ ಲಾಂ ಬಿಕ್ಕಟ್ಟನ್ನು ನಿವಾರಿಸುವ ನಿಟ್ಟಿನಲ್ಲಿ ಭಾರತ ಮತ್ತು ಚೀನಾ ಮಾತುಕತೆಗೆ ಮುಂದಾಗಿರುವ ಬೆನ್ನಲ್ಲೇ ಒಂದು ವೇಳೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಜಾನ್ ಟ್ರಂಪ್ ಅವರು ಆದೇಶ ನೀಡಿದರೆ ಮುಂದಿನ ವಾರವೇ ಚೀನಾ ಮೇಲೆ ನ್ಯೂಕ್ಲಿಯರ್ ದಾಳಿ ನಡೆಸಲು ಸಿದ್ಧ ಎಂದು ಯುನೈಟೆಡ್ ಸ್ಟೇಟ್ಸ್ ನೌಕಾದಳದ ಕಮಾಂಡರ್ ಸ್ಕ್ವಾಟ್ ಸ್ವಿಫ್ಟ್ ತಿಳಿಸಿದ್ದಾರೆ.
ಆಸ್ಟ್ರೇಲಿಯಾದ ನ್ಯಾಷನಲ್ ಯೂನಿರ್ವಸಿಟಿಯಲ್ಲಿ ಭದ್ರತಾ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ವೇಳೆ ಸ್ಕ್ವಾಟ್ ಈ ಉದ್ರೇಕಕಾರಿ ಹೇಳಿಕೆಯನ್ನು ನೀಡಿರುವುದಾಗಿ ಮಾಧ್ಯಮದ ವರದಿ ಹೇಳಿದೆ.
ಒಂದು ವೇಳೆ ಡೊನಾಲ್ಡ್ ಟ್ರಂಪ್ ಅವರು ಮುಂದಿನ ವಾರ ಚೀನಾದ ಮೇಲೆ ನ್ಯೂಕ್ಲಿಯರ್ ದಾಳಿ ನಡೆಸಲು ಆದೇಶ ನೀಡಿದರೆ ಏನು ಮಾಡುತ್ತೀರಿ ಎಂಬ ಕಲ್ಪಿತ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದ ಸ್ವಿಫ್ಟ್, ಹೌದು ಎಂದು ಉತ್ತರಿಸಿದರು.
ಪ್ರತಿಯೊಬ್ಬರ ಅಮೆರಿಕ ಸೇನಾಪಡೆಯ ಪ್ರತಿಯೊಬ್ಬ ಯೋಧರು ವಿದೇಶಿ ಮತ್ತು ದೇಶಿಯ ಶತ್ರುಗಳ ವಿರುದ್ಧ ಹೋರಾಡುವ ಬಗ್ಗೆ ಪ್ರತಿಜ್ಞೆ ಸ್ವೀಕರಿಸಿರುತ್ತಾರೆ. ಆ ನಿಟ್ಟಿನಲ್ಲಿ ಅಮೆರಿಕ ಅಧ್ಯಕ್ಷರು ನೀಡುವ ಆಜ್ಞೆಯನ್ನು ಅಧಿಕಾರಿಗಳು ಪಾಲಿಸಬೇಕಾಗುತ್ತದೆ ಎಂದು ಸ್ವಿಫ್ಟ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
National Conference ರೋಡ್ ಶೋ ವೇಳೆ ಮೂವರಿಗೆ ಚಾಕು ಇರಿತ
ಸಾವಿರ ವರ್ಷಗಳ ಭಾರತಕ್ಕಾಗಿ ಯೋಜನೆ; ಈಗಿನ ಯೋಜನೆಗಳಿಂದ ಭಾರತದ ಭವಿಷ್ಯ ಉಜ್ವಲ
Charmady: ರಸ್ತೆಯಲ್ಲಿ ಸಿಲುಕಿದ ಕಂಟೈನರ್ ಲಾರಿ; ಟ್ರಾಫಿಕ್ ಜಾಮ್
ಅನಾಮಧೇಯ ಲಿಂಕ್ ಕ್ಲಿಕ್ಕಿಸಿ ಲಕ್ಷಾಂತರ ರೂ. ಕಳೆದುಕೊಂಡ ವ್ಯಕ್ತಿ
Madhya Pradesh:ಮಗ ಮಾಡಿದ ತಪ್ಪಿಗೆ ದಲಿತ ತಂದೆ,ತಾಯಿಗೆ ಕಂಬಕ್ಕೆ ಕಟ್ಟಿ ಥಳಿಸಿ,ಬೂಟಿನ ಹಾರ