Udayavni Special

ಕೋವಿಡ್ ಆತಂಕದ ನಡುವೆ ವಿಶ್ವ ಯುದ್ಧದ ಆತಂಕ: ಈ ಆರು ದೇಶಗಳಲ್ಲಿ ಏನಾಗ್ತಿದೆ?

ನೇರ ಯುದ್ಧ ಆರಂಭವಾಗಿರುವುದರಿಂದ ಜಗತ್ತಿನ ಇತರ ಬೇರೆ ದೇಶಗಳ ನಡುವೆಯೂ ಆತಂಕ ಹೆಚ್ಚಾಗತೊಡಗಿದೆ.

Team Udayavani, Oct 1, 2020, 11:39 AM IST

ಕೋವಿಡ್ ಆತಂಕದ ನಡುವೆ ವಿಶ್ವ ಯುದ್ಧದ ಆತಂಕ: ಈ ಆರು ದೇಶಗಳಲ್ಲಿ ಏನಾಗ್ತಿದೆ?

ನವದೆಹಲಿ/ಮಾಸ್ಕೋ:ಜಗತ್ತಿನಾದ್ಯಂತ ಮಹಾಮಾರಿ ಕೋವಿಡ್ 19 ಸೋಂಕಿನ ಅಟ್ಟಹಾಸ ಮುಂದುವರಿಯುತ್ತಿರುವ ನಡುವೆಯೇ ವಿಶ್ವದ ಆರು ದೇಶಗಳ ನಡುವೆ ಸಂಘರ್ಷ ತೀವ್ರವಾಗುವುದರ ಜತೆಗೆ ಯಾವುದೇ ಹೊತ್ತಿನಲ್ಲಿಯೂ ಜಾಗತಿಕ ಯುದ್ಧಕ್ಕೆ ನಾಂದಿ ಹಾಡಬಹುದು ಎಂಬ ಆತಂಕ ಎದುರಾಗಿದೆ ಎಂದು ವರದಿಯೊಂದು ವಿಶ್ಲೇಷಿಸಿದೆ.

ಬಹುದೊಡ್ಡ ಯುದ್ಧಭೂಮಿಯಾಗುತ್ತಿರುವ ಪ್ರದೇಶಗಳು ರಷ್ಯಾದ ಸಮೀಪವೇ ಇದೆ. ಇದರಲ್ಲಿ ಈಗಾಗಲೇ ಅರ್ಮೇನಿಯಾ ಮತ್ತು ಅಝರ್ ಬೈಜಾನ್ ನಡುವೆ ಯುದ್ಧ ಆರಂಭವಾಗಿಬಿಟ್ಟಿದೆ. ಎರಡು ದೇಶಗಳು ಮಿಸೈಲ್ ಗಳನ್ನು  ಹಾಗೂ ಯುದ್ಧ ಟ್ಯಾಂಕ್ ಗಳನ್ನು ಉಪಯೋಗಿಸಿ ದಾಳಿ ನಡೆಸುತ್ತಿವೆ. ಅಷ್ಟೇ ಅಲ್ಲ ಮುಸ್ಲಿಂ ಬಾಹುಳ್ಯದ ಅಝರ್ ಬೈಜಾನ್ ಡ್ರೋಣ್ ದಾಳಿ ನಡೆಸಲು ಆರಂಭಿಸಿದೆ ಎಂದು ವಿವರಿಸಿದೆ.

ಅಝರ್ ಬೈಜಾನ್ ಮತ್ತು ಅರ್ಮೇನಿಯಾ ನಡುವೆ ನೇರ ಯುದ್ಧ ಆರಂಭವಾಗಿರುವುದರಿಂದ ಜಗತ್ತಿನ ಇತರ ಬೇರೆ ದೇಶಗಳ ನಡುವೆಯೂ ಆತಂಕ ಹೆಚ್ಚಾಗತೊಡಗಿದೆ. ಮತ್ತೊಂದೆ ಲಡಾಖ್ ನ ವಾಸ್ತವ ಗಡಿನಿಯಂತ್ರಣ ರೇಖೆ ವಿಚಾರದಲ್ಲಿ ಭಾರತ ಮತ್ತು ಚೀನಾ ನಡುವೆ ದಿನದಿಂದ ದಿನಕ್ಕೆ ಸಂಘರ್ಷ ಹೆಚ್ಚಾಗುತ್ತಲೇ ಇದೆ. ಅದೇ ರೀತಿ  ಸೌದಿ ಅರೇಬಿಯಾ ಮತ್ತು ಇರಾನ್ ನಡುವೆ ಸಂಘರ್ಷ ತಾರಕಕ್ಕೇರಿದೆ. ಈ ಸಂದರ್ಭದಲ್ಲಿ ಅಝರ್ ಬೈಜಾನ್ ಮತ್ತು ಅರ್ಮೇನಿಯಾವನ್ನು ಬೆಂಬಲಿಸುತ್ತಿರುವ ವಿಚಾರದಲ್ಲಿ ಪಾಕಿಸ್ತಾನ ಹಾಗೂ ಟರ್ಕಿ ವಿರುದ್ಧ ರಷ್ಯಾ ಕಠಿಣ ಕ್ರಮ ತೆಗೆದುಕೊಳ್ಳಲು ಮುಂದಾಗಬಹುದು ಎಂಬ ಭಯ ಕಾಡುತ್ತಿರುವುದಾಗಿಯೂ ವರದಿ ತಿಳಿಸಿದೆ.

ಇದನ್ನೂ ಓದಿ:ನ.4ರಿಂದ 9ರವರೆಗೆ ಯುಎಇನಲ್ಲಿ ನಡೆಯಲಿದೆ ಕಿರು ಮಹಿಳಾ ಐಪಿಎಲ್‌

ಚೀನಾ ಮತ್ತು ತೈವಾನ್ ನಡುವೆ ಇತ್ತೀಚೆಗೆ ಸಂಘರ್ಷ ತಾರಕಕ್ಕೇರಿದ್ದು, ಎರಡೂ ಕಡೆಯಿಂದಲೂ ಹಿಂದೆ ಸರಿಯಲು ಒಪ್ಪದ ಪರಿಣಾಮ ಪರಿಸ್ಥಿತಿ ಮತ್ತಷ್ಟು ವಿಕೋಪಕ್ಕೆ ತಿರುಗುವ ಸಾಧ್ಯತೆ ಇದೆ ಎಂದು ವರದಿ ವಿಶ್ಲೇಷಿಸಿದೆ.

ಸೌದಿ ಅರೇಬಿಯಾ ಇತ್ತೀಚೆಗೆ ಹತ್ತು ಮಂದಿ ಇರಾನ್ ಉಗ್ರರನ್ನು ಬಂಧಿಸಿತ್ತು. ಇದರಿಂದಾಗಿ ಸೌದಿ ಅರೇಬಿಯಾ ಮತ್ತು ಇರಾನ್ ನಡುವೆ ಪೂರ್ಣ ಪ್ರಮಾಣದ ಯುದ್ಧಕ್ಕೆ ನಾಂದಿಯಾಗಬಹುದು ಎಂದು ಶಂಕಿಸಲಾಗಿದೆ.

ಜಮ್ಮು-ಕಾಶ್ಮೀರದ ಲಡಾಖ್ ನಲ್ಲಿಯೂ ಭಾರತ ಮತ್ತು ಚೀನಾ ನಡುವಿನ ಸಂಘರ್ಷ ಇನ್ನೂ ಮುಂದುವರಿದಿದೆ. ಲಡಾಖ್ ಭಾರತದ ಅವಿಭಾಜ್ಯ ಅಂಗ ಎಂಬುದನ್ನು ಒಪ್ಪಿಕೊಳ್ಳಲು ಚೀನಾ ಸಿದ್ಧವಿಲ್ಲದ ಪರಿಣಾಮ ಎಲ್ ಎಸಿಯಲ್ಲಿ ಉಭಯ ದೇಶಗಳು ಯುದ್ಧಕ್ಕೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳತೊಡಗಿವೆ.

ಇದನ್ನೂ ಓದಿ:ಕದನ ವಿರಾಮ ಉಲ್ಲಂಘಿಸಿ ಪಾಕ್ ನಿಂದ ಗುಂಡಿನ ದಾಳಿ: ಭಾರತದ ಯೋಧ ಹುತಾತ್ಮ

ಅಝರ್ ಬೈಜಾನ್-ಅರ್ಮೇನಿಯಾ ನಡುವಿನ ಯುದ್ಧದ ವಿಚಾರದಲ್ಲಿ ರಷ್ಯಾ ಮತ್ತು ಟರ್ಕಿ ಕೈಜೋಡಿಸುವ ಸಾಧ್ಯತೆ ಇದ್ದಿರುವುದಾಗಿ ತಜ್ಞರು ವಿಶ್ಲೇಷಿಸಿದ್ದಾರೆ. ಟರ್ಕಿ ಈಗಾಗಲೇ ಬಹಿರಂಗವಾಗಿ ಅಝರ್ ಬೈಜಾನ್ ಗೆ ಬೆಂಬಲ ಘೋಷಿಸಿದೆ. ಆದರೆ ಅರ್ಮೇನಿಯಾ ವಿಚಾರದಲ್ಲಿ ರಷ್ಯಾ ಇನ್ನೂ ಬೆಂಬಲಿಸುವ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ.

ಅರ್ಮೇನಿಯಾದ ಮಿಸೈಲ್ ದಾಳಿಗೆ ಅಝರ್ ಬೈಜಾನ್ ನ ಸೇನೆಯ ಹಲವಾರು ಯುದ್ಧ ಟ್ಯಾಂಕ್ ಗಳು ನಾಶವಾಗಿ ಹೋಗಿವೆ. ಅರ್ಮೇನಿಯಾ ಪಡೆ ಮಲೆ ಅಝರ್ ಬೈಜಾನ್ ಸೇನೆ ಡ್ರೋನ್ ದಾಳಿ ನಡೆಸಲು ಸಿದ್ಧತೆ ನಡೆಸಿದೆ. ಮತ್ತೊಂದೆಡೆ ರಷ್ಯಾ ನಿರ್ಮಿತ ಅಣು ಸಿಡಿತಲೆಯ ಮಿಸೈಲ್ ದಾಳಿ ನಡೆಸುವುದಾಗಿ ಅರ್ಮೇನಿಯಾ ಅಝರ್ ಬೈಜಾನ್ ಗೆ ಎಚ್ಚರಿಕೆ ನೀಡಿದೆ.

ಉದಯವಾಣಿ ಸುದ್ದಿ ಈಗ ಟೆಲಿಗ್ರಾಂನಲ್ಲೂ ಲಭ್ಯ; ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

whatsapp-call

ವಾಟ್ಸಾಪ್ ಕಾಲ್ ಗಳನ್ನು ರೆಕಾರ್ಡ್ ಮಾಡುವುದು ಹೇಗೆ? ಇಲ್ಲಿದೆ ಟಿಪ್ಸ್

ಲೆಜೆಂಡ್ ಆಲ್ ರೌಂಡರ್ ಕಪಿಲ್ ದೇವ್ ಗುಣಮುಖ: ಆಸ್ಪತ್ರೆಯಿಂದ ಬಿಡುಗಡೆ

ಲೆಜೆಂಡ್ ಆಲ್ ರೌಂಡರ್ ಕಪಿಲ್ ದೇವ್ ಗುಣಮುಖ: ಆಸ್ಪತ್ರೆಯಿಂದ ಬಿಡುಗಡೆ

ಆಸೀಸ್‌ ಪ್ರವಾಸಕ್ಕೆ ಭಾರತೀಯ ಕ್ರಿಕೆಟಿಗರ ಪತ್ನಿಯರಿಗೆ ತೆರಳಲು ಅವಕಾಶವಿಲ್ಲ!

ಆಸೀಸ್‌ ಪ್ರವಾಸಕ್ಕೆ ಭಾರತೀಯ ಕ್ರಿಕೆಟಿಗರ ಪತ್ನಿಯರಿಗೆ ತೆರಳಲು ಅವಕಾಶವಿಲ್ಲ!

ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಸಿದ್ದರಾಮಯ್ಯ ಪ್ರವಾಸ: ಸಂತೃಸ್ಥರ ಜೊತೆ ಮಾತುಕತೆ

ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಸಿದ್ದರಾಮಯ್ಯ ಪ್ರವಾಸ: ಸಂತೃಸ್ಥರ ಜೊತೆ ಮಾತುಕತೆ

000.

ಆರ್ ಸಿಬಿ vs ಚೆನ್ನೈ ಕಾದಾಟ : ಟಾಸ್ ಗೆದ್ದ ಕೊಹ್ಲಿ ಪಡೆ ಬ್ಯಾಟಿಂಗ್ ಆಯ್ಕೆ

ಕಿರಿಯ ಆಟಗಾರರಿಗೆ ಜೆರ್ಸಿ ವಿತರಿಸುತ್ತಿರುವ ಧೋನಿ; ಐಪಿಎಲ್‌ ವಿದಾಯ ಸೂಚನೆಯೇ?

ಕಿರಿಯ ಆಟಗಾರರಿಗೆ ಜೆರ್ಸಿ ವಿತರಿಸುತ್ತಿರುವ ಧೋನಿ; ಐಪಿಎಲ್‌ ವಿದಾಯ ಸೂಚನೆಯೇ?

bihar

ಬಿಹಾರ: ಚುನಾವಣೆಗೆ ಸ್ಪರ್ಧಿಸಿದ್ದ ಅಭ್ಯರ್ಥಿಯನ್ನು ಗುಂಡಿಕ್ಕಿ ಹತ್ಯೆಗೈದ ದುಷ್ಕರ್ಮಿಗಳು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಾಬೂಲ್ ಶಿಕ್ಷಣ ಸಂಸ್ಥೆಯ ಬಳಿ ಆತ್ಮಾಹುತಿ ದಾಳಿ: 18 ಜನರ ಸಾವು, 57 ಜನರಿಗೆ ಗಾಯ

ಕಾಬೂಲ್ ಶಿಕ್ಷಣ ಸಂಸ್ಥೆಯ ಬಳಿ ಆತ್ಮಾಹುತಿ ದಾಳಿ: 18 ಜನರ ಸಾವು, 57 ಜನರಿಗೆ ಗಾಯ

joe biden

ಗೆದ್ದರೆ ಉಚಿತ ಕೋವಿಡ್ ಲಸಿಕೆ: ಅಧ್ಯಕ್ಷೀಯ ಅಭ್ಯರ್ಥಿ ಬೈಡೆನ್ ಮಹತ್ವದ ಘೋಷಣೆ

US-ELECTION

ಅಮೆರಿಕದ ರಸ್ಟ್‌ ಬೆಲ್ಟ್ ನಲ್ಲಿ ಯಾರ ಪರ ಒಲವು?

ಅಮೆರಿಕ ಅಧ್ಯಕ್ಷೀಯ ಚುನಾವಣೆ ಅಂತಿಮ ಚರ್ಚೆ: ಭಾರತದ ವಿರುದ್ಧ ಟ್ರಂಪ್ ಆರೋಪವೇನು?

ಅಮೆರಿಕ ಅಧ್ಯಕ್ಷೀಯ ಚುನಾವಣೆ ಅಂತಿಮ ಚರ್ಚೆ: ಭಾರತದ ವಿರುದ್ಧ ಟ್ರಂಪ್ ಆರೋಪವೇನು?

ಭಾರತದಲ್ಲಿ ಗಾಳಿ ಕಲುಷಿತವಾಗಿದೆ: ಹವಾಮಾನ ಬದಲಾವಣೆ ಸಮರ್ಥನೆಗೆ ಭಾರತವನ್ನು ಟೀಕಿಸಿದ ಟ್ರಂಪ್

ಭಾರತದಲ್ಲಿ ಗಾಳಿ ಕಲುಷಿತವಾಗಿದೆ: ಹವಾಮಾನ ಬದಲಾವಣೆ ಸಮರ್ಥನೆಗೆ ಭಾರತವನ್ನು ಟೀಕಿಸಿದ ಟ್ರಂಪ್

MUST WATCH

udayavani youtube

ರಸ್ತೆಯಲ್ಲಿ ಉಂಟಾದ ಕೃತಕ ನೆರೆಯಲ್ಲೇ ಈಜಾಡಿದ ಯುವಕ

udayavani youtube

ಕೊರೋನಾ: ಶೋಚನೀಯವಾದ ತಿರುಗುವ ತೊಟ್ಟಿಲು ತಿರುಗಿಸುವ ಕೈಗಳ ಕಥೆ!

udayavani youtube

Story behind Vijayadashami celebration | ವಿಜಯದಶಮಿ ಆಚರಣೆಯ ಹಿಂದಿನ ಕಥೆ | Udayavani

udayavani youtube

450 ಕ್ಕೂ ಅಧಿಕ ಬೀದಿ ಬದಿ ಶ್ವಾನಗಳಿಗೆ ನಿತ್ಯ ಆಹಾರ ನೀಡುತ್ತಾರೆ ರಜನಿ ಶೆಟ್ಟಿ!

udayavani youtube

The Sharada statue embodied in the artist’s finesse | Navaratri Specialಹೊಸ ಸೇರ್ಪಡೆ

MANDYA-TDY-1

ಹದಗೆಟ್ಟ ರಸ್ತೆ : ವಾಹನ ಸವಾರರ ಪರದಾಟ

mysuru-tdy-1

ತಂಬಾಕು ದರ ದಿಢೀರ್‌ ಕುಸಿತ ಖಂಡಿಸಿ ರೈತರ ಪ್ರತಿಭಟನೆ

whatsapp-call

ವಾಟ್ಸಾಪ್ ಕಾಲ್ ಗಳನ್ನು ರೆಕಾರ್ಡ್ ಮಾಡುವುದು ಹೇಗೆ? ಇಲ್ಲಿದೆ ಟಿಪ್ಸ್

rn-tdy-1

ಧಾರಾಕಾರ ಮಳೆಗೆ ಮಂಚನಬೆಲೆ ಜಲಾಶಯ ಭರ್ತಿ

c-tdy-1

ಕಿತ್ತೂರು ಚೆನ್ನಮ್ಮ ಮಹಿಳೆಯರಿಗೆ ಆದರ್ಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.