ಎಸ್ಸೆಸ್ಸೆಲ್ಸಿ ಚಿಣ್ಣರೇ… ಗಾಬರಿ ಬೇಡ, ಚೆನ್ನಾಗಿ ಪರೀಕ್ಷೆ ಬರೆಯಿರಿ… All The Best !
ಜೂ. 23: ಕೋವಿಡ್ ನಿಂದಾಗಿ ದೇಶಾದ್ಯಂತ ಲಾಕ್ಡೌನ್ ಆದ ಪರಿಣಾಮ ಮುಂದೂಡಲ್ಪಟ್ಟಿದ್ದ ಎಸೆಸೆಲ್ಸಿ ಪರೀಕ್ಷೆಗಳು ಜೂ. 25ರಿಂದ ಆರಂಭವಾಗಲಿದ್ದು, ಜು. 4ರ ವರೆಗೆ ನಡೆಯಲಿವೆ. ಪರೀಕ್ಷೆಗೆ ರಾಜ್ಯದ ಅಷ್ಟೂ ವಿದ್ಯಾರ್ಥಿಗಳು ಸಜ್ಜಾಗಿದ್ದಾರೆ. ಮಹಾಮಾರಿ ಕೋವಿಡ್ ನ ನಡುವೆ ನಡೆಯುತ್ತಿರುವ ಈ ಪರೀಕ್ಷೆ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಪೋಷಕರಿಗೆ ಹಾಗೂ ಸರ್ಕಾರಕ್ಕೆ ಮಹಾ ಪರೀಕ್ಷೆಯೇ ಸರಿ. ಸರಕಾರವು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ ವಿದ್ಯಾರ್ಥಿಗಳೇ ಯಾವುದೇ ಆತಂಕವಿಲ್ಲದೆ ಚೆನ್ನಾಗಿ ಪರೀಕ್ಷೆ ಬರೆಯಿರಿ.
ರಾಜ್ಯಾದ್ಯಂತ ನಡೆಯಲಿರುವ ಪರೀಕ್ಷೆಯ ಪೂರ್ವಭಾವಿ ಸಿದ್ದತೆಯ ಕೆಲವೊಂದು ಚಿತ್ರಗಳು.