
ಗೌಡ್ರ ಅಭಿಮಾನಿಗಳೂ…ಕಾಗೇರಿ ಅವರ ಫ್ಯಾನ್ಸ್…! ; ಸೆಲ್ಫಿಗೆ ಮುಗಿಬಿದ್ದರು
Team Udayavani, Apr 2, 2023, 6:15 PM IST

ಶಿರಸಿ: ಗೌಡ್ರ ಅಭಿಮಾನಿಗಳೂ…ಕಾಗೇರಿ ಅವರ ಫ್ಯಾನೂ …. ಇಂಥದ್ದೊಂದು ಸ್ವಾರಸ್ಯಕರ ಪ್ರಸಂಗ ಶಿರಸೀಲಿ ಭಾನುವಾರ ನಡೆಯಿತು.
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಬಂದಿದ್ದ ಅರಸೀಕೆರೆ ಶಾಸಕ ಶಿವಲಿಂಗೇಗೌಡ ಅವರೊಂದಿಗೆ ಆಗಮಿಸಿದ್ದ 500ಕ್ಕೂ ಅಧಿಕ ಬೆಂಬಲಿಗರು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಜೊತೆ ಸೆಲ್ಫಿಗೆ ಮುಗಿಬಿದ್ದ ಘಟನೆ ಗಮನ ಸೆಳೆಯಿತು.
ವಿಧಾನಸೌಧಕ್ಕೆ ಬಂದರೂ ಸಿಗಲ್ಲಸರ್… ಒಂದು ಫೋಟೋ ತೆಗೀಬೇಕು… , ಶಾಸನಸಭೆ ಚಲೋ ನಡೆಸ್ತೀರಿ ಎಂದು ಹೊಗಳುತ್ತಲೇ ಮೊಬೈಲ್ ಗಳಲ್ಲಿ ಒಬ್ಬರಾದ ಮೇಲೆ ಒಬ್ಬರು ಸೆಲ್ಪಿಗಳನ್ನ ಕ್ಲಿಕ್ಕಿಸಿಕೊಂಡರು.
ಶಿವಲಿಂಗೇಗೌಡ ಅವರು ರಾಜೀನಾಮೆ ನೀಡಿ ಹೊರಗಡೆ ಮಾತನಾಡುತ್ತಿದ್ದರೆ, ಬೆಂಬಲಿಗರು ಬಿಜೆಪಿಯಿಂದ ಶಿರಸಿಯಿಂದ ಕಣಕ್ಕಿಳಿಯಲಿರುವ ಕಾಗೇರಿ ಅವರೊಂದಿಗೆ ಸೆಲ್ಪಿ ಕ್ಲಿಕ್ಕಿಸಿಕೊಳ್ಳುವುದರಲ್ಲಿ ನಿರತರಾಗಿದ್ದರು.ಕಚೇರಿಯಿಂದ ಹೊರಗೆ ಬರಲಾಗಷ್ಟು ಮಂದಿ ಸುತ್ತುವರಿದಿದ್ದರು ಎನ್ನುವುದು ಕಾಗೇರಿ ಅವರಿಗೆ ಪಕ್ಷಾತೀತವಾಗಿ ಅಭಿಮಾನಿಗಳಿದ್ದಾರೆ ಅನ್ನುವುದಕ್ಕೆ ಸಾಕ್ಷಿಯಾಯಿತು.
ಟಾಪ್ ನ್ಯೂಸ್
