ಮುಂದಿನ ತಿಂಗಳಿಗೆ ಜ್ಯೋತಿ ಸರ್ಕಲ್‌!

Team Udayavani, May 23, 2019, 6:00 AM IST

“ಕಟಪಾಡಿ ಕಟ್ಟಪ್ಪ ಸಿನೆಮಾ ಸದ್ಯ ಕೋಸ್ಟಲ್‌ವುಡ್‌ನ‌ಲ್ಲಿ ಹೊಸ ಕ್ರೇಝ್ ಹುಟ್ಟುಹಾಕಿದೆ. ರಾಜೇಶ್‌ ಬ್ರಹ್ಮಾವರ ನಿರ್ಮಾಣ, ಜೆ.ಪಿ. ತುಮಿನಾಡ್‌ ನಿರ್ದೇಶನದ ಕಟ್ಟಪ್ಪ ತುಳು ಸಿನೆಮಾ 50ರ ದಿನದ ಭರ್ಜರಿ ಪ್ರದರ್ಶನದ ಮೂಲಕ ಕೋಸ್ಟಲ್‌ವುಡ್‌ನ‌ಲ್ಲಿ ಹೊಸ ದಾಖಲೆ ಬರೆದಿದೆ.

ಇದೇ ಮೂಡ್‌ನ‌ಲ್ಲಿ ರಾಜೇಶ್‌ ಬ್ರಹ್ಮಾವರ ಮತ್ತೂಂದು ಸಿನೆಮಾ
“ಮಾಜಿ ಮುಖ್ಯಮಂತ್ರಿ’ಯ ಕೊನೆಯ ಹಂತದ ಶೂಟಿಂಗ್‌ನಲ್ಲಿದ್ದಾರೆ. ಅದೇ ವೇಳೆಗೆ “ಜ್ಯೋತಿ ಸರ್ಕಲ್‌’ ಶೂಟಿಂಗ್‌ ಮಾಡುವ ಬಗ್ಗೆ ಸಿದ್ಧತೆ ನಡೆಸಿದ್ದರು.

ವಿಶೇಷವೆಂದರೆ ಇದೇ ತಿಂಗಳಿನಲ್ಲಿ ಶೂಟಿಂಗ್‌ ಆರಂಭಿಸುವ ಬಗ್ಗೆ ನಿರ್ಧರಿಸಿದ್ದರು. ಆದರೆ, ಕಲಾವಿದರ ಡೇಟ್‌ ಕರೆಕ್ಟಾಗಿ ಸಿಗದ ಕಾರಣದಿಂದ ಈ ತಿಂಗಳಿನಲ್ಲಿ ಶೂಟಿಂಗ್‌ ಆಗಬೇಕಾದ ಜ್ಯೋತಿ ಸರ್ಕಲ್‌ ಮುಂದಿನ ತಿಂಗಳಿಗೆ ಶಿಫ್ಟ್ ಆಗಿದೆ. ರಾಜೇಶ್‌ ಬಂದ್ಯೋಡು ನಿರ್ದೇಶನದಲ್ಲಿ ಈ ಸಿನೆಮಾ ಮೂಡಿಬರಲಿದೆ. ತುಳುವಿನಲ್ಲಿ ವಿಭಿನ್ನ ಕಥಾನಕವನ್ನು ಹೊಂದಿರುವ ಸಿನೆಮಾ ಎಂಬ ಹೆಗ್ಗಳಿಕೆಯನ್ನು ಜ್ಯೋತಿ ಸರ್ಕಲ್‌ ಪಡೆದುಕೊಳ್ಳಲಿದೆ.

ಹೊಸ ತರದ ಕಥೆಯಾಧಾರಿತವಾಗಿ ಸಿನೆಮಾ ರೂಪುಗೊಳ್ಳಲಿದೆ. ಸಿನೆಮಾದಲ್ಲಿ ಯಾರಿರಲಿದ್ದಾರೆ ಎಂಬುದಕ್ಕೆ ಸದ್ಯ ಉತ್ತರವಿಲ್ಲ. ಆದರೆ, ಹೊಸ ಮುಖಗಳೊಂದಿಗೆ ಹೊಸ ಜಮಾನ ಸೃಷ್ಟಿಸಬೇಕು ಎಂಬುದು ರಾಜೇಶ್‌ ಅವರ ಚಿಂತನೆ. ಹೀಗಾಗಿ ಯಾರೆಲ್ಲ ಕಲಾವಿದರು ಇದ್ದಾರೆ ಎಂಬುದಕ್ಕೆ ಸದ್ಯಕ್ಕೆ ಉತ್ತರವಿಲ್ಲ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ