ಸಬ್ಬಸಿಗೆ ಸೊಪ್ಪಿನಿಂದ ಹಬ್ಬದ ಅಡುಗೆ 

Team Udayavani, Oct 6, 2018, 3:08 PM IST

6-october-11.gif

ಸುವಾಸನೆಯಿಂದ ಕೂಡಿದ ಸಬ್ಬಸಿಗೆ ಸೊಪ್ಪು, ಅಧಿಕ ತೇವಾಂಶ, ನಾರಿನಂಶ, ಕ್ಯಾಲ್ಸಿಯಂ, ಕಬ್ಬಿಣ ಹಾಗೂ ಸಿ ಜೀವಸತ್ವವನ್ನು ಒಳಗೊಂಡಿದೆ. ಸಬ್ಬಸಿಗೆ ಸೊಪ್ಪನ್ನು ಬಳಸಿ ಸುಲಭವಾಗಿ ಮಾಡಬಹುದಾದ ಕೆಲವೊಂದು ಅಡುಗೆ ವಿಧಾನಗಳು ಇಲ್ಲಿವೆ. 

ಸೂಪ್‌
ಬೇಕಾಗುವ ಸಾಮಗ್ರಿಗಳು
ಸಣ್ಣಗೆ ಹೆಚ್ಚಿದ ಸಬ್ಬಸಿಗೆ ಸೊಪ್ಪು- 2 ಕಪ್‌, ಕ್ಯಾರೆಟ್‌ ತುರಿ- ಅರ್ಧ ಕಪ್‌, ಟೊಮೆಟೊ- ಅರ್ಧ ಕಪ್‌, ಆಲೂಗಡ್ಡೆ ತುರಿ- ಅರ್ಧ ಕಪ್‌, ಕಾಳು ಮೆಣಸಿನಪುಡಿ- ಅರ್ಧ ಚಮಚ, ಶುಂಠಿ- ಸಣ್ಣ ತುಂಡು, ಸಕ್ಕರೆ- ಅರ್ಧ ಚಮಚ, ಉಪ್ಪು ರುಚಿಗೆ, ತುಪ್ಪ- 1 ಚಮಚ, ಬೆಣ್ಣೆ ಸ್ವಲ್ಪ. 

ಮಾಡುವ ವಿಧಾನ
ಬಾಣಲೆಗೆ ತುಪ್ಪ ಹಾಕಿ, ಟೊಮೆಟೊ, ಈರುಳ್ಳಿ, ಕ್ಯಾರೆ ಟ್‌, ಆಲೂಗಡ್ಡೆಯನ್ನು ಚೆನ್ನಾಗಿ ಬಾಡಿಸಿ. ಅನಂತರ ಶುಂಠಿ, ಸಬ್ಬಸಿಗೆ ಸೊಪ್ಪು, ಕಾಳು ಮೆಣಸು, ಸಕ್ಕರೆ, ಉಪ್ಪು ಸೇರಿಸಿ ಅರೆಯಿರಿ. ಅರೆದ ಮಿಶ್ರಣವನ್ನು ಚೆನ್ನಾಗಿ ಕುದಿಸಿದರೆ ಸಬ್ಬಸಿಗೆ ಸೂಪ್‌ ರೆಡಿ. ಅದಕ್ಕೆ ಬೆಣ್ಣೆ ಸೇರಿಸಿ ಸವಿಯಿರಿ. 

ಚಟ್ನಿ ಪುಡಿ
ಬೇಕಾಗುವ ಸಾಮಗ್ರಿಗಳು
ಹೆಚ್ಚಿದ ಸಬ್ಬಸಿಗೆ ಸೊಪ್ಪು- 2 ಕಪ್‌, ಕರಿಬೇವಿನ ಎಲೆ-1 ಕಪ್‌, ಕಡಲೆಬೇಳೆ- ಅರ್ಧ ಕಪ್‌, ಉದ್ದಿನಬೇಳೆ- ಕಾಲು ಕಪ್‌, ಒಣಕೊಬ್ಬರಿ ತುರಿ- 1 ಕಪ್‌, ಅಚ್ಚ ಖಾರದ ಪುಡಿ- ಅರ್ಧ ಕಪ್‌, ಹುಣಸೆಹಣ್ಣು- 1 ಇಂಚು, ಸಕ್ಕರೆ- 1 ಚಮಚ, ಉಪ್ಪು-ರುಚಿಗೆ, ಎಣ್ಣೆ- ಕಾಲು ಕಪ್‌, ಸಾಸಿವೆ- 1 ಚಮಚ, ಇಂಗು- ಕಾಲು ಚಮಚ. 

ಮಾಡುವ ವಿಧಾನ
ಸಬ್ಬಸಿಗೆ ಸೊಪ್ಪು, ಕರಿಬೇವು, ಕಡಲೆಬೇಳೆ, ಉದ್ದಿನಬೇಳೆ, ಒಣಕೊಬ್ಬರಿ ತುರಿ, ಖಾರದ ಪುಡಿಯನ್ನು ಬೇರೆಬೇರೆಯಾಗಿ ಹುರಿದು, ಒಟ್ಟಿಗೆ ಸೇರಿಸಿಡಿ. ಆ ಮಿಶ್ರಣಕ್ಕೆ ಹುಣಸೆಹಣ್ಣು, ಸಕ್ಕರೆ, ಉಪ್ಪು ಸೇರಿಸಿ ನುಣ್ಣಗೆ ಪುಡಿ ಮಾಡಿ. ಆ ಪುಡಿಗೆ ಸಾಸಿವೆ- ಇಂಗಿನ ಒಗ್ಗರಣೆ ಸೇರಿಸಿದರೆ ಚಟ್ನಿ ಪುಡಿ ಸಿದ್ಧ. 

ಸಬ್ಬಸಿಗೆ ದಾಲ್‌
ಬೇಕಾಗುವ ಸಾಮಗ್ರಿಗಳು
ಹೆಚ್ಚಿದ ಸಬ್ಬಸಿಗೆ ಸೊಪ್ಪು- 2 ಕಪ್‌, ತೊಗರಿಬೇಳೆ- 1 ಕಪ್‌, ಅರಿಸಿನ- ಅರ್ಧ ಚಮಚ, ಜೀರಿಗೆ ಪುಡಿ- 1 ಚಮಚ, ಕಾಳು ಮೆಣಸಿನಪುಡಿ- ಅರ್ಧ ಚಮಚ, ಉಪ್ಪು, ತೆಂಗಿನತುರಿ- 3 ಚಮಚ, ಹಸಿಮೆಣಸು- 3, ಎಣ್ಣೆ- 3 ಚಮಚ, ಸಾಸಿವೆ- 1ಚಮಚ.

ಮಾಡುವ ವಿಧಾನ
ತೊಗರಿಬೇಳೆಗೆ ಚಿಟಿಕೆ ಅರಿಸಿನ, ಅರ್ಧ ಚಮಚ ಎಣ್ಣೆ ಹಾಕಿ ಕುಕ್ಕರ್‌ನಲ್ಲಿ ಬೇಯಿಸಿ. ಸಾಸಿವೆ ಒಗ್ಗರಣೆ ಮಾಡಿ, ಹಸಿಮೆಣಸು ಹಾಗೂ ಸಬ್ಬಸಿಗೆ ಸೊಪ್ಪು ಹಾಕಿ ಚೆನ್ನಾಗಿ ಬಾಡಿಸಿ. ಅದಕ್ಕೆ ಬೇಯಿಸಿದ ಬೇಳೆ, ಜೀರಿಗೆ, ಕಾಳುಮೆಣಸು, ಉಪ್ಪು, ತೆಂಗಿನತುರಿ ಹಾಕಿ ಕುದಿಸಿ.  

ಪರೋಟಾ
ಬೇಕಾಗುವ ಸಾಮಗ್ರಿ

ಗೋಧಿ ಹಿಟ್ಟು- 2 ಕಪ್‌, ಹೆಚ್ಚಿದ ಸಬ್ಬಸಿಗೆ ಸೊಪ್ಪು- 1ಕಪ್‌, ಗರಂ ಮಸಾಲೆ ಪುಡಿ- 2 ಚಮಚ, ಹೆಚ್ಚಿದ ಕೊತ್ತಂಬರಿ ಸೊಪ್ಪು- ಅರ್ಧ ಕಪ್‌, ಜೀರಿಗೆ ಪುಡಿ- 1 ಚಮಚ, ಎಣ್ಣೆ- ಅರ್ಧ ಕಪ್‌, ಉಪ್ಪು- ರುಚಿಗೆ.

ಮಾಡುವ ವಿಧಾನ
ಗೋಧಿ ಹಿಟ್ಟಿಗೆ ಸ್ವಲ್ಪ ಎಣ್ಣೆ, ಉಪ್ಪು, ಗರಂ ಮಸಾಲೆ ಪುಡಿ, ಜೀರಿಗೆ ಪುಡಿ, ಸಬ್ಬಸಿಗೆ ಸೊಪ್ಪು, ಕೊತ್ತಂಬರಿ ಸೊಪ್ಪು ಹಾಕಿ, ನೀರಿನಲ್ಲಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ. ಎರಡು ಗಂಟೆ ಬಿಟ್ಟು ಕಲಸಿದ ಹಿಟ್ಟಿನಿಂದ ಉಂಡೆ ಮಾಡಿ, ಚಪಾತಿಯ ಆಕಾರದಲ್ಲಿ ಲಟ್ಟಿಸಿ, ಕಾವಲಿ ಮೇಲೆ ಎರಡೂ ಬದಿ ಬೇಯಿಸಿದರೆ ರುಚಿಯಾದ ಪರೋಟಾ ರೆಡಿ.

ಕಟ್ಲೆಟ್‌
ಬೇಕಾಗುವ ಸಾಮಗ್ರಿಗಳು

ಕತ್ತರಿಸಿದ ಸಬ್ಬಸಿಗೆ ಸೊಪ್ಪು- 1 ಕಪ್‌, ಆಲೂಗಡ್ಡೆ- 2, ಈರುಳ್ಳಿ- ಅರ್ಧ ಕಪ್‌, ಕೊತ್ತಂಬರಿ ಸೊಪ್ಪು- 4 ಚಮಚ, ಪುದಿನಾ ಸೊಪ್ಪು- 2 ಚಮಚ, ಖಾರದ ಪುಡಿ-1 ಚಮಚ, ಎಣ್ಣೆ- 1 ಕಪ್‌, ಅರಿಸಿನ- ಅರ್ಧ ಚಮಚ, ಉಪ್ಪು- ರುಚಿಗೆ, ಜೀರಿಗೆ- 1 ಚಮಚ, ಬಟಾಣಿ- ಅರ್ಧ ಕಪ್‌, ಅಕ್ಕಿ ಹಿಟ್ಟು- ಅರ್ಧ ಕಪ್‌.

ಮಾಡುವ ವಿಧಾನ
ಆಲೂಗಡ್ಡೆಯನ್ನು ಬೇಯಿಸಿ, ಸಿಪ್ಪೆ ತೆಗೆದು ತುರಿಯಿರಿ. ಬಾಣಲೆಯಲ್ಲಿ ನಾಲ್ಕು ಚಮಚ ಎಣ್ಣೆ ಕಾಯಿಸಿ, ಕ್ರಮವಾಗಿ ಅರಿಸಿನ, ಜೀರಿಗೆ, ಖಾರದ ಪುಡಿ, ಈರುಳ್ಳಿ, ಬಟಾಣಿ ಹಾಕಿ ಬಾಡಿಸಿ. ಈ ಮಿಶ್ರಣಕ್ಕೆ, ಬೇಯಿಸಿದ ಆಲೂಗಡ್ಡೆ, ಸಬ್ಬಸಿಗೆ, ಕೊತ್ತಂಬರಿ, ಪುದೀನಾ ಸೊಪ್ಪು, ಉಪ್ಪು ಸೇರಿಸಿ ಕಲಸಿ ಒಲೆಯಿಂದ ಕೆಳಗಿರಿಸಿ. ತಣಿದ ಮೇಲೆ, ಅಕ್ಕಿ ಹಿಟ್ಟು ಸೇರಿಸಿ, ವಡೆಯ ಹದಕ್ಕೆ ಕಲಸಿ. ಈ ಮಿಶ್ರಣದಿಂದ ಚಿಕ್ಕ ಉಂಡೆಗಳನ್ನು ಮಾಡಿ, ವಡೆಯಾಕಾರದಲ್ಲಿ ತಟ್ಟಿ.ಎಣ್ಣೆ ಸವರಿದ ಕಾವಲಿಯ ಮೇಲೆ, ಎರಡೂ ಬದಿಗಳನ್ನು ಹೊಂಬಣ್ಣ ಬರುವವರೆಗೆ ಕಾಯಿಸಿ.

ಜಯಶ್ರೀ ಕಾಲ್ಕುಂದ್ರಿ 

ಟಾಪ್ ನ್ಯೂಸ್

Yogendra Yadav:ಕೃಷಿ ಉಳಿಯಬೇಕಾದರೆ ರೈತರು ಕಾಂಗ್ರೆಸ್‌ಗೆ ಮತಹಾಕಲಿ: ಯೋಗೇಂದ್ರ ಯಾದವ್

Yogendra Yadav:ಕೃಷಿ ಉಳಿಯಬೇಕಾದರೆ ರೈತರು ಕಾಂಗ್ರೆಸ್‌ಗೆ ಮತಹಾಕಲಿ: ಯೋಗೇಂದ್ರ ಯಾದವ್

ರಜಿನಿಕಾಂತ್‌ ʼಕೂಲಿʼಯಲ್ಲಿ ಅನುಮತಿಯಿಲ್ಲದೆ ಹಾಡು ಬಳಕೆ: ಲೀಗಲ್‌ ನೋಟಿಸ್‌ ಕಳುಹಿಸಿದ ಇಳಯರಾಜ

ರಜಿನಿಕಾಂತ್‌ ʼಕೂಲಿʼಯಲ್ಲಿ ಅನುಮತಿಯಿಲ್ಲದೆ ಹಾಡು ಬಳಕೆ: ಲೀಗಲ್‌ ನೋಟಿಸ್‌ ಕಳುಹಿಸಿದ ಇಳಯರಾಜ

Viral: ಮದುವೆಯ ದಿನ ವಧುವಿಗೆ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಭಾವಚಿತ್ರ ಉಡುಗೊರೆ ನೀಡಿದ ವರ

Viral: ಮದುವೆಯ ದಿನ ವಧುವಿಗೆ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಭಾವಚಿತ್ರ ಉಡುಗೊರೆ ನೀಡಿದ ವರ

15-1

ಖಡಕ್ ಬಿಸಿಲು- ಪೊಲೀಸ್ ತಳ್ಳಾಟದಿಂದ ಸಂಸದ ಡಾ.‌ಜಾಧವ್ ಅಸ್ವಸ್ಥ: ಆಸ್ಪತ್ರೆಗೆ ದಾಖಲು

14-bidar

Prajwal Pendrive Case: ವಿಶ್ವದ ನಾಗರಿಕ ಸಮಾಜವೇ ತಲೆ ತಗ್ಗಿಸುವಂತಹ ಘಟನೆ ಇದು

ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಕ್ರಮ ಕೈಗೊಳ್ಳಲು ವಿಳಂಬವಾಗಿಲ್ಲ: ಗೃಹ ಸಚಿವ ಜಿ.‌ಪರಮೇಶ್ವರ್

ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಕ್ರಮ ಕೈಗೊಳ್ಳಲು ವಿಳಂಬವಾಗಿಲ್ಲ: ಗೃಹ ಸಚಿವ ಜಿ.‌ಪರಮೇಶ್ವರ್

ಸಲ್ಮಾನ್‌ ನಿವಾಸದ ಮೇಲೆ ಗುಂಡಿನ ದಾಳಿ: ಪೊಲೀಸ್‌ ಕಸ್ಟಡಿಯಲ್ಲಿದ್ದ ಆರೋಪಿ ಆತ್ಮಹತ್ಯೆ – ವರದಿ

ಸಲ್ಮಾನ್‌ ನಿವಾಸದ ಮೇಲೆ ಗುಂಡಿನ ದಾಳಿ: ಪೊಲೀಸ್‌ ಕಸ್ಟಡಿಯಲ್ಲಿದ್ದ ಆರೋಪಿ ಆತ್ಮಹತ್ಯೆ – ವರದಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

ಬ್ರೆಡ್‌ನಿಂದ ಬಗೆ ಬಗೆ ತಿನಿಸು

ಬ್ರೆಡ್‌ನಿಂದ ಬಗೆ ಬಗೆ ತಿನಿಸು

ಕಾಳಿನ ಉಂಡೆ ಸಿಹಿಸಿಹಿ ಲಡ್ಡು

ಕಾಳಿನ ಉಂಡೆ ಸಿಹಿಸಿಹಿ ಲಡ್ಡು

ಸ್ವಾದಿಷ್ಟಕರ ಹಲ್ವ

ಸ್ವಾದಿಷ್ಟಕರ ಹಲ್ವ

ಮಸಾಲೆ ನೀರುದೋಸೆ, ಬಾಳೆಹಣ್ಣು ಫುಡ್ಡಿಂಗ್‌

ಮಸಾಲೆ ನೀರುದೋಸೆ, ಬಾಳೆಹಣ್ಣು ಫುಡ್ಡಿಂಗ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Yogendra Yadav:ಕೃಷಿ ಉಳಿಯಬೇಕಾದರೆ ರೈತರು ಕಾಂಗ್ರೆಸ್‌ಗೆ ಮತಹಾಕಲಿ: ಯೋಗೇಂದ್ರ ಯಾದವ್

Yogendra Yadav:ಕೃಷಿ ಉಳಿಯಬೇಕಾದರೆ ರೈತರು ಕಾಂಗ್ರೆಸ್‌ಗೆ ಮತಹಾಕಲಿ: ಯೋಗೇಂದ್ರ ಯಾದವ್

Manipal ಆಸ್ಪತ್ರೆಯ ಡಾ.ರಾಮದಾಸ್‌ ಪೈ ಬ್ಲಾಕ್; 161 ವಿಶೇಷ ಹಾಸಿಗೆಗಳ ವಾರ್ಡ್‌ ಸೇವೆ ಆರಂಭ

Manipal ಆಸ್ಪತ್ರೆಯ ಡಾ.ರಾಮದಾಸ್‌ ಪೈ ಬ್ಲಾಕ್; 161 ವಿಶೇಷ ಹಾಸಿಗೆಗಳ ವಾರ್ಡ್‌ ಸೇವೆ ಆರಂಭ

ರಜಿನಿಕಾಂತ್‌ ʼಕೂಲಿʼಯಲ್ಲಿ ಅನುಮತಿಯಿಲ್ಲದೆ ಹಾಡು ಬಳಕೆ: ಲೀಗಲ್‌ ನೋಟಿಸ್‌ ಕಳುಹಿಸಿದ ಇಳಯರಾಜ

ರಜಿನಿಕಾಂತ್‌ ʼಕೂಲಿʼಯಲ್ಲಿ ಅನುಮತಿಯಿಲ್ಲದೆ ಹಾಡು ಬಳಕೆ: ಲೀಗಲ್‌ ನೋಟಿಸ್‌ ಕಳುಹಿಸಿದ ಇಳಯರಾಜ

Viral: ಮದುವೆಯ ದಿನ ವಧುವಿಗೆ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಭಾವಚಿತ್ರ ಉಡುಗೊರೆ ನೀಡಿದ ವರ

Viral: ಮದುವೆಯ ದಿನ ವಧುವಿಗೆ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಭಾವಚಿತ್ರ ಉಡುಗೊರೆ ನೀಡಿದ ವರ

ಅಯ್ಯೋ ಬಿಸಿಲು! ಕರಾವಳಿಯಲ್ಲಿ ಮಣ್ಣಿನ ತೇವಾಂಶ ಕಡಿಮೆ: ನೀರಿಲ್ಲ, ಫಸಲಿಲ್ಲ

ಅಯ್ಯೋ ಬಿಸಿಲು! ಕರಾವಳಿಯಲ್ಲಿ ಮಣ್ಣಿನ ತೇವಾಂಶ ಕಡಿಮೆ: ನೀರಿಲ್ಲ, ಫಸಲಿಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.