
Food Special : ಸ್ಮಾರ್ಟ್ Tips
Team Udayavani, Mar 28, 2017, 1:14 PM IST

– ಹಾಲನ್ನು ಯಾವಾಗಲೂ ಸ್ವಲ್ಪ ದಪ್ಪ ತಳವಿರುವ ಪಾತ್ರೆಯಲ್ಲೇ ಕಾಯಿಸಿ. ಜತೆಗೆ ನೇರವಾಗಿ ಹಾಲನ್ನೇ ಪಾತ್ರೆಗೆ ಹಾಕಿ ಕಾಯಿಸಲು ಇಡಬೇಡಿ. ಅದಕ್ಕಿಂತ ಮೊದಲು ಸ್ವಲ್ಪವೇ ನೀರು ಹಾಕಿ. ಬಳಿಕ ಹಾಲನ್ನು ಸೇರಿಸಿ. ಆಗ ತತ್‌ಕ್ಷಣ ತಳ ಹಿಡಿಯವುದಿಲ್ಲ.
– ಪಲಾವಿಗೆ ಹಸಿ ಬಟಾಣಿ ಇಲ್ಲದಿದ್ದಾಗ ಒಣ ಬಟಾಣಿ ಬಳಸುವುದು ವಾಡಿಕೆ. ಆದರೆ ಒಣ ಬಟಾಣಿ ಕನಿಷ್ಠ 4 ಗಂಟೆಯಾದರೂ ನೆನೆಯದಿದ್ದರೆ ಬೇಯದು. ಅಂಥ ಸಂದರ್ಭದಲ್ಲಿ ಬಿಸಿ ನೀರಿನಲ್ಲಿ ಒಂದು ಗಂಟೆ ನೆನೆಸಿದರೆ ಸಾಕು. ಸಮಸ್ಯೆ ಬಗೆಹರಿದಂತೆ.
– ಸಾಮಾನ್ಯವಾಗಿ ಸಕ್ಕರೆ ಪಾಕ ಮಾಡುವಾಗ ಕಪ್ಪಗಿರುತ್ತದೆ. ಇದನ್ನು ಬೆಳ್ಳಗೆ ಮಾಡಲು, ಸಕ್ಕರೆ ಕುದಿಯವಾಗಲೇ ಸ್ವಲ್ಪ ಹಾಲನ್ನು ಹಾಕಿ. ಆಗ ಕಪ್ಪು ನೊರೆಯೆಲ್ಲ ಬದಿಗೆ ಬಂದು ನಿಲ್ಲತೊಡಗುತ್ತದೆ. ಅದನ್ನು ತೆಗೆದರೆ ಪಾಕ ಬೆಳ್ಳಗಾಗುತ್ತದೆ.
– ಬಂಗಾಳಿ ಸ್ವೀಟ್ಸ್ ಮಾಡುವಾಗ ಹಾಲನ್ನು ಕುದಿಸಿ ಅದನ್ನು ಒಡೆಯಲು ಲಿಂಬೆಹಣ್ಣಿನ ರಸ ಬಳಸುವ ಕ್ರಮವಿದೆ. ಅದರ ಬದಲು ವಿನೆಗರ್ ಅನ್ನು ಬಳಸಿದರೆ ಇನ್ನಷ್ಟು ಸ್ಪಷ್ಟವಾಗಿ ಹಾಲು – ನೀರು ಬೇರೆಯಾಗುತ್ತದೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?

ಕೃಷ್ಣ ನಗರಿಯ ಕುರಿತು ಅಭಿಮಾನದ ಮಾತುಗಳನ್ನಾಡಿದ Melody King Rajesh Krishnan
