ಮನೆಯ ಅಂದ ಹೆಚ್ಚಿಸುವ ಸಿಮೆಂಟ್‌ ಕರಕುಶಲ ವಸ್ತುಗಳು

Team Udayavani, Jan 19, 2019, 9:28 AM IST

19-january-11.jpg

ಮನೆಯ ಅಲಂಕಾರಕ್ಕಾಗಿ ನಾವು ಬಹುವೆಚ್ಚದ ಪೀಠೊಪಕರಣ ಹಾಗೂ ಅಲಂಕೃತ ವಸ್ತುಗಳನ್ನು ತಂದು ಶ್ರೀಮಂತಿಕೆಯನ್ನು ಹೆಚ್ಚಿಸುತ್ತೇವೆ. ಮನೆಯ ಸೊಬಗನ್ನು ಹೆಚ್ಚಿಸಲು ಈ ಕ್ರಮ ಒಳ್ಳೆಯದು ಎಂದೇ ನಾವು ಭಾವಿಸಬಹುದು. ಆದರೆ ಇದರ ಬದಲಾಗಿ ನಾವು ನಮ್ಮ ಕೈಯಿಂದ ಅರಳಿಸಬಹುದಾದ ಕಲೆಯಿಂದ ಮನೆಯ ಸೊಬಗನ್ನು ಹೆಚ್ಚಿಸಿದರೆ ಮನೆಯ ಅಂದವೂ ಹೆಚ್ಚಾಗುವುದು ಮಾತ್ರವಲ್ಲದೇ ಎಲ್ಲರ ಮೆಚ್ಚುಗೆಗೂ ನಾವು ಪಾತ್ರರಾಗಲು ಸಾಧ್ಯವಿದೆ.

ಅಂತಹ ಕಲೆಗಳಲ್ಲಿ ಕೇವಲ ಒಂದು ಕೆ.ಜಿ. ಸಿಮೆಂಟ್‌ನಿಂದಲೇ ನಾವು ಹಲವಾರು ರೀತಿಯ ಆಲಂಕಾರಿಕ ವಸ್ತುಗಳನ್ನು ತಯಾರಿಸಬಹುದು. ಇದರಿಂದ ಮನೆಯ ಸೊಬಗು ಹೆಚ್ಚಾಗುವುದಲ್ಲದೇ ತುಂಬಾ ಆಕರ್ಷಿಣೀಯವಾಗುತ್ತದೆ.

ಸಿಮೆಂಟ್‌ ಶೂನಲ್ಲಿ ಹೂ ಕುಂಡ
ನಾವು ಮನೆಯಲ್ಲಿ ಹೂ ಇಡಲು ಹೂ ಕುಂಡಗಳಿಗಾಗಿ ಹೆಚ್ಚಿನ ಹಣ ವ್ಯಯಿಸುತ್ತೇವೆ. ಆದರೆ ಅದನ್ನು ಮನೆಯಲ್ಲಿ ಸಿಮೆಂಟ್‌ನಿಂದ ಮಾಡಬಹುದು. ಹಳೆಯ ಶೂ ಇದ್ದರೆ ಅದಕ್ಕೆ ಸಿಮೆಂಟ್‌ ಅನ್ನು ನೀರಿನಲ್ಲಿ ಕಲಸಿ ಮೆತ್ತಬೇಕು. ಅದು ಗಟ್ಟಿಯಾಗುವವರೆಗೆ ಬಿಟ್ಟು ಬಳಿಕ ಹೂಗಳನ್ನು ಇಟ್ಟು ಮನೆಯ ಹೊರಾಂಗಣದಲ್ಲಿ ಇಡಬಹುದು. ಇದು ನೋಡಲು ಆಕರ್ಷಣೀಯವಾಗಿರುತ್ತದೆ.

ವಸ್ತುಗಳನ್ನು ಇಡಲು
ಸ್ನಾನದ ಕೋಣೆಯಲ್ಲಿ ಸಾಬೂನು, ಟೂಥ್‌ಪೇಸ್ಟ್‌ ಹಾಗೂ ಬ್ರಶ್‌ಗಳನ್ನಿಡಲು ಪ್ಲಾಸ್ಟಿಕ್‌ ವಸ್ತುಗಳನ್ನು ಬಳಸುತ್ತೇವೆ. ಇದಕ್ಕೆ ಪರ್ಯಾಯವಾಗಿ ಸಿಮೆಂಟ್‌ ನಿಂದ ನಾವೇ ಅವುಗಳನ್ನು ತಯಾರಿಸಬಹುದು. ಒಂದು ಡಬ್ಬಕ್ಕೆ ಪ್ಲಾಸ್ಟಿಕ್‌ ಹಾಳೆ ಹೊದೆಸಿ, ಅದರ ಮೇಲೆ ನೀರಿನಲ್ಲಿ ಕಲಸಿದ ಸಿಮೆಂಟ್‌ನ್ನು ಪೂರ್ಣವಾಗಿ ಹಾಕಿ. ಅನಂತರ ಅದರ ಮೇಲೆ ಭಾರವಾದ ವಸ್ತು ಇಡಬೇಕು. ಬಳಿಕ ಅದನ್ನು ತೆಗೆದರೆ, ಕೆಳಗಡೆ ಸಿಮೆಂಟ್‌ ಗಟ್ಟಿಯಾಗಿ ಡಬ್ಬ ತರಹವಾಗಿದ್ದು, ಇದನ್ನು ಪೇಸ್ಟ್‌, ಸಾಬೂನು ಇಡಲು ಬಳಸಬಹುದು.

ಶೋಕೇಸ್‌ ಗಳು
ಖಾಸಗಿಯಾಗಿ ತರುವ ಸಿಮೆಂಟ್‌ನ ಶೋಕೇಸ್‌ ಗಳಿಗೆ ಹೆಚ್ಚು ಹಣ ಭರಿಸಬೇಕಾಗುತ್ತದೆ. ಅದಕ್ಕಾಗಿ ನಾವೇ ನಮ್ಮ ಕೈಯಿಂದ ಕಡಿಮೆ ಬೆಲೆಯಲ್ಲಿ ಶೋಕೇಸ್‌ ಗಳನ್ನು ತಯಾರಿಸಬಹುದು. ಅದರಲ್ಲಿ ಒಂದು ಪ್ಲಾಸ್ಟಿಕ್‌ ಕಪ್‌ಗೆ ಸಿಮೆಂಟ್‌ ಬರಿಸಿ, ಅದು ಗಟ್ಟಿಯಾದಾಗ ಪ್ಲಾಸ್ಟಿಕ್‌ ಕಪ್‌ ತೆಗೆದರೆ ಅಲ್ಲಿ ಒಂದು ಶೋಕೇಸ್‌ ಆಗತ್ತದೆ. ಅದರಲ್ಲಿ ಆಲಂಕಾರಿಕ ವಸ್ತುಗಳನ್ನು ಇಡಬಹುದು. ಇಂತಹ ಹತ್ತು ಹಲವು ಉಪಾಯಗಳು ನಮ್ಮ ಕೌಶಲದಿಂದ ಮಾಡಿ, ಮನೆಯ ಸೊಬಗನ್ನು ಹೆಚ್ಚಿಸಬಹುದು. ಕೇವಲ ಸಿಮೆಂಟ್‌ನಿಂದಲೇ ಮನೆಯ ಸೌಂದರ್ಯವನ್ನು ಹೆಚ್ಚಿಸಬಹುದು. ಸಿಮೆಂಟ್‌ ನಿಂದ ತಯಾರಿಸುವ ವಸ್ತುಗಳು ಹೆಚ್ಚು ಸುದೃಢವಾಗಿ ಬಾಳಿಕೆ ಬರುತ್ತದೆ ಮಾತ್ರವಲ್ಲ ನೋಡಲೂ ಆಕರ್ಷಣೀಯವಾಗಿರುತ್ತದೆ.

 ಅಭಿನವ

ಟಾಪ್ ನ್ಯೂಸ್

11fiyasto

ಮಂಗಳೂರು ವಿಮಾನ ನಿಲ್ದಾಣ: ಬಂದೂಕು ಮತ್ತು ಸ್ಪೋಟಕ ತಂದಿದ್ದ ವ್ಯಕ್ತಿ ಬಂಧನ

ಜಿಮ್ ಲೇಕರ್, ಕುಂಬ್ಳೆ ದಾಖಲೆ ಸರಿಗಟ್ಟಿದ ಮುಂಬೈ ಮೂಲದ ಅಜಾಜ್ ಪಟೇಲ್: ಕುಂಬ್ಳೆ ಪ್ರಶಂಸೆ

ಜಿಮ್ ಲೇಕರ್, ಕುಂಬ್ಳೆ ದಾಖಲೆ ಸರಿಗಟ್ಟಿದ ಮುಂಬೈ ಮೂಲದ ಅಜಾಜ್ ಪಟೇಲ್: ಕುಂಬ್ಳೆ ಪ್ರಶಂಸೆ

ಮುಂಬೈ ಟೆಸ್ಟ್: ಹತ್ತಕ್ಕೆ ಹತ್ತೂ ವಿಕೆಟ್ ಕಿತ್ತ ಅಜಾಜ್ ಪಟೇಲ್ ಹೊಸ ದಾಖಲೆ

ಮುಂಬೈ ಟೆಸ್ಟ್: ಹತ್ತಕ್ಕೆ ಹತ್ತೂ ವಿಕೆಟ್ ಕಿತ್ತ ಅಜಾಜ್ ಪಟೇಲ್ ಹೊಸ ದಾಖಲೆ

arrest-25

ಕಾವೂರಿನಲ್ಲಿ ಮಾರಕಾಯುಧ ಝಳಪಿಸಿ 3 ಗೋವುಗಳ ಕಳ್ಳತನ : ಮೂವರ ಬಂಧನ

ಒಮಿಕ್ರಾನ್ ಸೋಂಕಿನ ಭಯ: ಪತ್ನಿ, ಮಕ್ಕಳನ್ನು ಕೊಂದು ಪರಾರಿಯಾದ ಪ್ರೊಫೆಸರ್

ಒಮಿಕ್ರಾನ್ ಸೋಂಕಿನ ಭಯ: ಪತ್ನಿ, ಮಕ್ಕಳನ್ನು ಕೊಂದು ಪರಾರಿಯಾದ ಪ್ರೊಫೆಸರ್

cm-b-bommai

ಕ್ಲಸ್ಟರ್ ಅಪಾರ್ಟ್ಮೆಂಟ್ ಗಳಲ್ಲಿ ಹೊರಗಡೆಯವರಿಗೆ ಪ್ರವೇಶ ನಿರ್ಬಂಧ: ಸಿಎಂ ಬೊಮ್ಮಾಯಿ

ಟೀಂ ಇಂಡಿಯಾದ ದ.ಆಫ್ರಿಕಾ ಸರಣಿ ಮೊಟಕು: ಕೋವಿಡ್ ಭೀತಿಯಿಂದ ಟಿ20 ಸರಣಿ ಮುಂದೂಡಿಕೆ

ಟೀಂ ಇಂಡಿಯಾದ ದ.ಆಫ್ರಿಕಾ ಸರಣಿ ಮೊಟಕು: ಕೋವಿಡ್ ಭೀತಿಯಿಂದ ಟಿ20 ಸರಣಿ ಮುಂದೂಡಿಕೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

Omicron Virus ಕುರಿತು CM Highprofile ಮೀಟಿಂಗ್ !!

udayavani youtube

ಎಚ್ಚರಿಕೆ! ದೆಹಲಿ ಆಸ್ಪತ್ರೆಯಲ್ಲಿ ಒಮಿಕ್ರಾನ್

udayavani youtube

Podcast ಲೋಕದಲ್ಲಿ ಏನಿದು ಹೊಸ ಸಂಚಲನ ?!

udayavani youtube

ಸರ್ಕಾರಿ ಕಚೇರಿಯಲ್ಲಿನ ಕಾಗದ ಹೊತ್ತೊಯ್ದ ಮೇಕೆ ಹಿಂದೆ ಓಡುತ್ತಿರುವ ನೌಕರರು

udayavani youtube

ಅಜ್ಜಂಪುರ ತಾಲೂಕಿನ ಹಲವೆಡೆ ವರುಣನ ಅಬ್ಬರ

ಹೊಸ ಸೇರ್ಪಡೆ

11fiyasto

ಮಂಗಳೂರು ವಿಮಾನ ನಿಲ್ದಾಣ: ಬಂದೂಕು ಮತ್ತು ಸ್ಪೋಟಕ ತಂದಿದ್ದ ವ್ಯಕ್ತಿ ಬಂಧನ

ಜಿಮ್ ಲೇಕರ್, ಕುಂಬ್ಳೆ ದಾಖಲೆ ಸರಿಗಟ್ಟಿದ ಮುಂಬೈ ಮೂಲದ ಅಜಾಜ್ ಪಟೇಲ್: ಕುಂಬ್ಳೆ ಪ್ರಶಂಸೆ

ಜಿಮ್ ಲೇಕರ್, ಕುಂಬ್ಳೆ ದಾಖಲೆ ಸರಿಗಟ್ಟಿದ ಮುಂಬೈ ಮೂಲದ ಅಜಾಜ್ ಪಟೇಲ್: ಕುಂಬ್ಳೆ ಪ್ರಶಂಸೆ

10bjp

ಬಿಜೆಪಿಗೆ ಪಾಠ ಕಲಿಸಿ: ಡಾ| ಅಜಯಸಿಂಗ್‌

ಮುಂಬೈ ಟೆಸ್ಟ್: ಹತ್ತಕ್ಕೆ ಹತ್ತೂ ವಿಕೆಟ್ ಕಿತ್ತ ಅಜಾಜ್ ಪಟೇಲ್ ಹೊಸ ದಾಖಲೆ

ಮುಂಬೈ ಟೆಸ್ಟ್: ಹತ್ತಕ್ಕೆ ಹತ್ತೂ ವಿಕೆಟ್ ಕಿತ್ತ ಅಜಾಜ್ ಪಟೇಲ್ ಹೊಸ ದಾಖಲೆ

10kannada

ಕನ್ನಡ-ತಮಿಳು ಪರಸ್ಪರ ಆಪ್ತ ಸಂಬಂಧ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.