ಪೇಪರ್‌ ಹುಡುಗನ ಸಾಧನೆಗೆ ಸಲಾಂ

Team Udayavani, May 13, 2019, 6:00 AM IST

boy

ಜಾಗಿಂಗ್‌ಗಾಗಿ ಗೇಟಿನ ಬಳಿ ಬಂದಾಗ ಪೇಪರ್‌ ಹಾಕುವ ಹುಡುಗ ಬರುವುದು ಕಾಣಿಸಿತು. ಖುಷಿ ಖುಷಿಯಾಗಿದ್ದ. ‘ಏನು ವಿಶೇಷ’ ಎಂದು ಕೇಳಿದೆ. ನಿನ್ನೆ ಸೆಕೆಂಡ್‌ ಪಿಯು ಫ‌ಲಿತಾಂಶ ಬಂತಲ್ಲ? ನಂಗೆ ಶೇ.88 ಅಂಕ ಬಂದಿದೆ ಎಂದ.

‘ಹೋ ಕಂಗ್ರಾಟ್ಸ್‌’ ಎಂದು ಕೈ ಕುಲುಕಿದೆ. ಥ್ಯಾಂಕ್ಯೂ ಅಣ್ಣ. ಆಮೇಲೆ ಸಿಗ್ತೀನೆ. ಇನ್ನೂ ಕೆಲವು ಮನೆಗೆ ಪೇಪರ್‌ ಹಾಕುವುದು ಬಾಕಿ ಇದೆ’ ಎಂದು ಸೈಕಲ್ ಏರಿ ಹೊರಟ.

ಇಡೀ ಸಂಸಾರದ ನೊಗ ಹೊತ್ತು ಬೆಳಗ್ಗೆ, ರಾತ್ರಿ ಕೆಲಸ ಮಾಡುತ್ತಾ ಓದುವ ಹುಡುಗನದ್ದು ಅತ್ಯುತ್ತಮ ಸಾಧನೆ ಎನಿಸಿತು. ಹೌದು, ಆತನದ್ದು ಹೋರಾಟದ ಬದುಕು. ಅವನ ತಂದೆ 3 ವರ್ಷದ ಹಿಂದೆ ನಿಧನರಾದಾಗ ಅವನು ಒಂಬತ್ತನೇ ತರಗತಿಯಲ್ಲಿದ್ದ. 10 ಸೆಂಟ್ಸ್‌ ಹಿತ್ತಿಲು, ಚಿಕ್ಕ ಮನೆ ಅಷ್ಟೇ ಅವರಿಗಿದ್ದ ಆಸ್ತಿ. ಆದರೂ ಅವನು ಧೃತಿಗೆಡಲಿಲ್ಲ. ತಾನೇ ಮುಂದೆ ನಿಂತು ಮನೆಯ ಜವಾಬ್ದಾರಿ ಹೊತ್ತುಕೊಂಡ. ಅಕ್ಕ, ತಮ್ಮ ಜತೆಗೆ ತನ್ನ ಓದಿಗೆ ಕೆಲಸ ನಿರ್ವಹಿಸಲು ಮುಂದಾದ. ಜತೆಗೆ ತಾಯಿ ಬೀಡಿ ಕಟ್ಟಿ ಅವನ ನೆರವಿಗೆ ನಿಂತಳು. ಅಂದಿನಿಂದ ಅವನ ದಿನಚರಿಯೇ ಬದಲಾಗಿತ್ತು. ಮುಂಜಾನೆ 4 ಗಂಟೆಗೇ ಆತ ಎದ್ದೇಳುತ್ತಿದ್ದ. ಸ್ನಾನ ಮಾಡಿ ಸೈಕಲ್ ಏರಿ ಹೊರಟನೆಂದರೆ ಅಂದಿನ ಚಟುವಟಿಕೆ ಆರಂಭವಾದಂತೆ. 7 ಗಂಟೆವರೆಗೆ ಪೇಪರ್‌ ಹಾಕುತ್ತಿದ್ದ. ಮತ್ತೆ ಮನೆಗೆ ಬಂದು ಹೊಟೇಲ್ ಒಂದಕ್ಕೆ ಹೋಗುತ್ತಿದ್ದ. ಅಲ್ಲಿ ಅದು- ಇದು ಕೆಲಸ ಮಾಡಿ ಅಲ್ಲೇ ತಿಂಡಿ ತಿಂದು ಕಾಲೇಜಿಗೆ ತೆರಳುತ್ತಿದ್ದ. ಮತ್ತೆ ರಾತ್ರಿ 9.30ರಿಂದ ಬಸ್‌ ತೊಳೆಯುವ ಕೆಲಸವಿರುತ್ತಿತ್ತು. ಇಷ್ಟಾಗಿಯೂ ತರಗತಿಯಲ್ಲಿ ಶ್ರದ್ಧೆಯಿಂದ ಪಾಠ ಕೇಳುತ್ತಿದ್ದ. ಬಿಡುವಿನ ಸಮಯದಲ್ಲಿ ಏಕಾಗ್ರತೆಯಿಂದ ಅಧ್ಯಯನ ನಡೆಸುತ್ತಿದ್ದ. ಹೀಗೆ ಆತ ಎಸೆಸೆಲ್ಸಿಯಲ್ಲೂ ಉತ್ತಮ ಅಂಕ ಗಳಿಸಿದ್ದ ಪಿಯುನಲ್ಲೂ ಸಾಧನೆ ತೋರಿದ್ದ. ಮುಂದೆ ಲೆಕ್ಚರರ್‌ ಆಗಿ ಓದಲು ಕಷ್ಟ ಪಡುವ ವಿದ್ಯಾರ್ಥಿಗಳಿಗೆ ನೆರವಾಗಬೇಕು ಎನ್ನುವ ಕನಸು ಆತನದ್ದು.

ಇಷ್ಟೆಲ್ಲ ಕಷ್ಟಪಡುವ ಆತ ಒಂದು ದಿನವಾದರೂ ಗೊಣಗಿದ್ದಾಗಲೀ, ಸಾಕಪ್ಪ ಜೀವನ ಎಂದು ಹತಾಶೆ ಭಾವ ತೋರಿದ್ದಾಗಲಿ ನಾನು ಕಂಡಿಲ್ಲ. ಹೌದು, ಕೆಲವರೇ ಹಾಗೆ. ತಾವು ಬೇಗೆಯಲ್ಲಿ ಬೇಯುತ್ತಿದ್ದರೂ ತಮ್ಮ ಬಳಿಗೆ ಬರುವವರಿಗೆ ನ ಕೈ ತುಂಬಾ ಸಿಹಿ ಹಣ್ಣು ಕೊಡುವಂತಹವರು.

-ರಮೇಶ್‌ ಬಳ್ಳಮೂಲೆ

ಟಾಪ್ ನ್ಯೂಸ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

2-rain

Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ

1-24-saturday

Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್‌ ಧನಪ್ರಾಪ್ತಿ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

voter

Vote ಮಾಡದಿದ್ದರೆ ಬ್ಯಾಂಕ್‌ ಖಾತೆಯಿಂದ 350 ರೂ. ಕಡಿತ?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

2-rain

Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ

1-24-saturday

Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್‌ ಧನಪ್ರಾಪ್ತಿ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.