ಸೋನಿ ಯುಬಿಪಿ-ಎಕ್ಸ್ 700 ಯುಎಚ್ಡಿಬ್ಲೂ- ರೇ ಪ್ಲೇಯರ್
Team Udayavani, Aug 24, 2018, 3:34 PM IST
ಕಲರ್ ಮೊಡ್ಯುಲೇಶನ್ ನಲ್ಲಿ ಲಭ್ಯವಿರುವ ಸೋನಿ ಯುಬಿ ಪಿ- ಎಕ್ಸ್ 700 ಅಲ್ಟ್ರಾ ಎಚ್ಡಿ ಬ್ಲೂ- ರೇ ಪ್ಲೇಯರ್ ಗುಣ ಮಟ್ಟದ ಎಚ್ಡಿ ಪ್ಲೇಯರ್ಗಿಂತ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಇದರಲ್ಲಿ ಡೊಲಬಿ ವರ್ಷನ್ ಅಳವಡಿಕೆಯಾಗಿದೆ. ಎಚ್ಡಿ ಡಿಸ್ ಪ್ಲೇಗಿಂತ ನಾಲ್ಕು ಪಟ್ಟು ಹೆಚ್ಚಿನ ಸಾಮರ್ಥ್ಯವನ್ನು ಹೊಂದಿದೆ. ಚಿತ್ರದ ಗುಣಮಟ್ಟ 4ಕೆ ಸ್ಪಷ್ಟ ತೆಗೆ ತಕ್ಕಂತೆ ಇದೆ. ಇದರಲ್ಲಿ ಸಂಗೀತ, ವಿಡಿಯೋ ಎಲ್ಲವನ್ನು ನೀವು ಹೈರೆಸಲ್ಯೂಶನ್ಗಳಲ್ಲಿ ವಿಕ್ಷಿಸಬಹುದಾಗಿದೆ. 4ಕೆ ಎಸ್ ಡಿಆರ್ ಟಿವಿ ಹೊಂದಿರುವವರು ಕೂಡ ಸೋನಿಯ ಅನನ್ಯ ತಂತ್ರಜ್ಞಾನವನ್ನು ಬಳಸಿಕೊಂಡು ಹೆಚ್ಚಿನ ಗುಣ ಮಟ್ಟದಲ್ಲಿ ವೀಕ್ಷಿಸಬಹುದಾಗಿದೆ.
ಮನೆಗಳಲ್ಲಿ ಹೋಮ್ ಥಿಯೇಟರ್ ಅಳವಡಿಸಿಕೊಂಡು ಆನಂದ ಪಡುವವರಿಗೆ ಇದು ಹೆಚ್ಚು ಸೂಕ್ತವಾಗಿದೆ. ಅನೇಕ ರೀತಿಯ ಸೌಲಭ್ಯಗಳು ಇದರಲ್ಲಿದ್ದು, ಸುಲಭವಾಗಿ ಅಪರೇಟ್ ಮಾಡಬಹುದಾಗಿದೆ.