ಬದುಕಿನ ಸಂಘರ್ಷವನ್ನು ತೆರೆದಿರುವ ದ ರಿನೆವೆಂಟ್‌

Team Udayavani, Aug 6, 2018, 3:15 PM IST

6-agust-14.jpg

ಹ್ಯು ಗ್ಲಾಸ್‌ ಎಂಬ ಬೇಟೆಗಾರನೊಬ್ಬನ ಕತೆಯಿದು. 1823ರಲ್ಲಿ ಆ್ಯಂಡ್ರೂ ಹೆನ್ರಿ ಎಂಬಾತನ ನೇತೃತ್ವದ ಬೇಟೆಗಾರರ ಗುಂಪಿಗೆ ಮಾರ್ಗದರ್ಶಕನಾಗಿದ್ದ ಹ್ಯು ಗ್ಲಾಸ್‌. ಒಮ್ಮೆ ಇವರ ಗುಂಪು ಕಾಡಿನ ಆದಿವಾಸಿಗಳ ದಾಳಿಗೆ ಸಿಲುಕುತ್ತದೆ. ಗ್ಲಾಸ್‌ ಗೆ ಕಾಡಿನ ಅಡ್ಡದಾರಿಗಳೆಲ್ಲ ಚಿರಪರಿಚಿತ. ಸಹವರ್ತಿಗಳ ಪ್ರಾಣ ಕಾಪಾಡುವ ಸಂಕಷ್ಟದಲ್ಲಿದ್ದಾಗ ಒಂದು ಅಡ್ಡದಾರಿಯಲ್ಲಿ ಕರೆದೊಯ್ಯುತ್ತಾನೆ. ಆದರೆ ಅನಿರೀಕ್ಷಿತವಾಗಿ ಕರಡಿಯೊಂದು ಅವನ ಮೇಲೆ ದಾಳಿ ನಡೆಸುತ್ತದೆ. ಒಂದು ಅಪಾಯದಿಂದ ಪಾರಾಗಲು ಹೋಗಿ ಅದಕ್ಕಿಂತಲೂ ದೊಡ್ಡ ಅಪಾಯಕ್ಕೆ ತುತ್ತಾಗುತ್ತಾನೆ. ಗ್ಲಾಸ್‌ ಮತ್ತು ಕರಡಿ ಮಧ್ಯೆ ಭೀಕರ ಕಾದಾಟವೇ ನಡೆದುಹೋಗುತ್ತದೆ. ಆತ ತೀವ್ರವಾಗಿ ಗಾಯಗೊಂಡು, ಸಾವು ಬದುಕಿನ ನಡುವೆ ನರಳಾಡುವ ಸ್ಥಿತಿ ತಲುಪುತ್ತಾನೆ.

ಅರ್ಧ ದಾರಿಯವರೆಗೆ ಬಂದುಬಿಟ್ಟಿರುವ ಬೇಟೆಗಾರರ ತಂಡ ಅನಿವಾರ್ಯವಾಗಿ ಹ್ಯು ಗ್ಲಾಸ್‌ ಚೇತರಿಸಿಕೊಳ್ಳುವ ತನಕ ಕಾಯಬೇಕಾಗುತ್ತದೆ. ಏಕೆಂದರೆ ದಾರಿ ಗೊತ್ತಿರುವುದು ಅವನೊಬ್ಬನಿಗೆ ಮಾತ್ರ. ಎಲ್ಲರೂ ಅಲ್ಲೇ ಬಿಡಾರ ಹೂಡುತ್ತಾರೆ. ಒಂದೆರಡು ದಿನಗಳಲ್ಲಿಯೇ ಗುಂಪಿನಲ್ಲಿ ಭಿನ್ನಾಭಿಪ್ರಾಯಗಳು ಏಳುತ್ತವೆ.

ಅರಣ್ಯದಲ್ಲೇ ಕಾಯಬೇಕು ಎನ್ನುವವರದ್ದೊಂದು ಗುಂಪು. ಅಲ್ಲೇ ಇದ್ದರೆ ಆದಿವಾಸಿಗಳ ಬಾಯಿಗೆ ತುತ್ತಾಗಬೇಕಾಗುತ್ತದೆ ಎನ್ನುವವರದ್ದು ಇನ್ನೊಂದು ಗುಂಪು. ಗ್ಲಾಸ್‌ನನ್ನು ಬಿಟ್ಟು ಹೋಗುವುದು ಹೇಗೆ ಎಂಬ ಪ್ರಶ್ನೆ ಎದುರಾದಾಗ ಆತನಿಗೆ ದಯಾಮರಣ ನೀಡುವ ಬಗ್ಗೆ ಮಾತಾಗುತ್ತದೆ. ಈ ನಡುವೆ ಗ್ಲಾಸ್‌ ಅನುಭವಿಸುವ ನರಕ ಯಾತನೆಯ ನೋವು ನೋಡುಗರ ಹೃದಯ ಹಿಂಡುವಂತೆ ಮಾಡುತ್ತದೆ. 

ಅಲೆಹಾಂಡ್ರೊ ಇನರಿತು ನಿರ್ದೇಶನದ 2016ರಲ್ಲಿ ತೆರೆಗೆ ಬಂದ ಈ ಚಿತ್ರದ ಕಥಾಹಂದರ ನೋಡುಗರನ್ನು ಕೊನೆಯವರೆಗೂ ಕುತೂಹಲದಿಂದ ಕಾಯುವಂತೆ ಮಾಡುತ್ತದೆ. ಬದುಕಿನ ಸಂಘರ್ಷವನ್ನು ತೆರೆದಿಡುವ ಈ ಚಿತ್ರದ ಸಣ್ಣ ಸಣ್ಣ ಮಾತುಗಳು ಕೂಡ ಅರ್ಥಪೂರ್ಣವಾಗಿರುವಂತೆ ಭಾಸವಾಗುತ್ತದೆ. ಬದುಕಿನುದ್ದಕ್ಕೂ ಗ್ಲಾಸ್‌ನ ಸಾಹಸಗಾಥೆ ಚಿತ್ರವನ್ನು ಮೆಚ್ಚುವಂತೆ ಮಾಡುತ್ತದೆ.  

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.