Udayavni Special

ಅನಿರೀಕ್ಷಿತ ಸಹಾಯ ಅವಿಸ್ಮರಣೀಯ


Team Udayavani, Feb 25, 2019, 7:32 AM IST

25-february-10.jpg

ಬದುಕಿನಲ್ಲಿ ಅನಿರೀಕ್ಷಿತ ಸಹಾಯ ಸದಾ ನೆನಪಿನಲ್ಲಿ ಇರುತ್ತದೆ. ಅದರಲ್ಲೂ ಯಾರಾದರೂ ಅಪರಿಚಿತರು ನೆರವಿಗೆ ಬಂದಾಗ ಉಂಟಾಗುವ ಭಾವ ವಿಶೇಷವಾಗಿರುತ್ತದೆ. ಬೇಷರತ್‌, ಜತೆಗೆ ಅಯಾಚಿತವೂ ಆಗಿ ದೊರೆತ ಅಂಥ ನೆರವು ಮಾನವತೆಯ ಮೌಲ್ಯದ ಮೇಲೆ ಭರವಸೆ ಇಡುವಂತೆ ಮಾಡುವುದಲ್ಲದೆ, ಕೆಲವೊಮ್ಮೆ ಅಚ್ಚರಿಯನ್ನೂ ಮೂಡಿಸುತ್ತದೆ. 

ನಾನು ಚಿಕ್ಕವನಿದ್ದಾಗ ತಮ್ಮನಿಗೆ ಅನಾರೋಗ್ಯ ಎಂದು ಹತ್ತಿರದ ಚಿಕ್ಕ ಕ್ಲಿನಿಕ್‌ಗೆ ಅವನನ್ನು ಕರೆದು ಕೊಂಡು ಹೋಗಿದ್ದೆ. ಸುಮಾರು ಹತ್ತು ನಿಮಿಷದ ಹಾದಿ. ಹೊಸದಾಗಿ ಬಂದಿದ್ದ ಯುವ ವೈದ್ಯ. ಬಡತನ ಹೆಚ್ಚಾಗಿದ್ದ ಆ ಸಮಯದಲ್ಲಿ ಆತ ರೋಗಿಗಳನ್ನು ಪ್ರೀತಿಯಿಂದ ಮಾತನಾಡಿಸಿ, ಕಡಿಮೆ ಹಣ ಪಡೆದು ಔಷಧ ಕೊಡುತ್ತಾರೆ ಎಂಬ ಮಾತಿತ್ತು. ಅದರಂತೆಯೇ ಆಯಿತು ಕೂಡ.

ಆದರೆ ಅಲ್ಲಿಂದ ಮುಖ್ಯ ರಸ್ತೆ ಬದಿಯಲ್ಲಿ ಮರಳಿ ಸಾಗುವಾಗ ಕಲ್ಲಿಗೆ ತಮ್ಮನ ಕಾಲು ಎಡವಿ ಗಾಯವಾಗಿ ರಕ್ತ ಸೋರತೊಡಗಿತು. ಅಂಗವಸ್ತ್ರವೂ ಕೈಯಲ್ಲಿರಲಿಲ್ಲ. ಮರಳಿ ಕ್ಲಿನಿಕ್‌ ಗೆ ಹೋಗಬಹುದಾಗಿತ್ತಾದರೂ, ಹಣ ಬೇಕಲ್ಲ? ಎಡವಿ ಗಾಯ ಮಾಡಿಕೊಳ್ಳುವುದು ಚಿಕ್ಕ ಹುಡುಗರಿಗೆ ವಿಶೇಷವೇನೂ ಆಗಿರಲಿಲ್ಲ. ಆದರೆ ತಮ್ಮನನ್ನು ಸಮಾಧಾನಪಡಿಸಲು ನನ್ನಿಂದಾಗಲಿಲ್ಲ. ಆದರೂ ಹೇಗೋ ಕುಂಟುತ್ತಿದ್ದ ತಮ್ಮನ ಕೈ ಹಿಡಿದು ನಿಧಾನ ನಡೆದು ಅರ್ಧ ದಾರಿ ತಲುಪುವಾಗ ನಮ್ಮ ಹಿಂಭಾಗದಿಂದ ಸ್ಕೂಟರ್‌ ಒಂದು ಬಂದು ನಿಂತಿತು. ಅಂಗಿ, ಪಂಚೆ ಉಟ್ಟಿದ್ದ ಸಾಮಾನ್ಯ ವ್ಯಕ್ತಿಯೊಬ್ಬ ಇಳಿದು ಗಾಯಕ್ಕೆ ಬ್ಯಾಂಡೇಜ್‌ ಹಚ್ಚಿದರು. ತಡ ಮಾಡದೇ ಸೀದಾ ಗಾಡಿ ಹತ್ತಿ ಹೊರಟು ಹೋದರು. ಅನಿರೀಕ್ಷಿತವಾದ ಈ ಘಟನೆಯನ್ನು ನಾನು ಅತ್ಯಂತ ಅಚ್ಚರಿಯಿಂದ ನೋಡಿದೆ. ಶಾಲೆಗೆ ಹೊಸದಾಗಿ ಬಂದಿದ್ದ ಟೀಚರ್‌, ಯಾರಾದರೂ ಉಪಕಾರ ಮಾಡಿದರೆ ‘ಥ್ಯಾಂಕ್ಸ್‌’ ಎನ್ನಬೇಕು ಎಂದು ಹೇಳಿಕೊಟ್ಟಿದ್ದು ನೆನಪಾಯಿತಾದರೂ ನಾನು ಏನನ್ನೂ ಹೇಳಲಾಗಲಿಲ್ಲ. ಆ ವ್ಯಕ್ತಿಗೆ ನಮ್ಮ ಪರಿಚಯ ಇತ್ತೋ ಇಲ್ಲವೋ ತಿಳಿಯದು. ಮುಖ್ಯ ರಸ್ತೆಯ ಬದಿಯಲ್ಲೇ ಇದ್ದ ನಮ್ಮ ಮನೆಯ ಬೇಲಿ ಬದಿ ನಿಂತು ರಸ್ತೆ ನೋಡುತ್ತಿದ್ದಾಗ ನೇರವಾದ ಆ ರಸ್ತೆಯಲ್ಲಿ ವೇಗವಾಗಿ ಸಾಗುವ ಎಲ್ಲ ವಾಹನಗಳಂತೆ ಅವರ ವಾಹನವೂ ಸಾಗಿತ್ತು. ಬಹುಶಃ ವ್ಯಾಪಾರಿಯಂತೆ ಕಾಣುತ್ತಿದ್ದ ಆ ವ್ಯಕ್ತಿಯನ್ನು ಅದಕ್ಕಿಂತ ಮೊದಲಾಗಲೀ ಅನಂತರವಾಗಲಿ ನಾನು ಎಲ್ಲೂ ಕಾಣಲಿಲ್ಲ.

ಕಲ್ಲೆಡವಿ ಆದ ಸಾಮಾನ್ಯ ಗಾಯಕ್ಕೆ ದಾರಿಹೋಕರು ಯಾರು ತಲೆಕೆಡಿಸಿಕೊಳ್ಳುತ್ತಾರೆ? ಅದೂ ವಾಹನದಲ್ಲಿ ತೆರಳುತ್ತಿರುವವರು ಯಾರೋ ಪರಿಚಯವಿಲ್ಲದ ಹುಡುಗನ, ಚಪ್ಪಲಿಯಿಲ್ಲದ, ಧೂಳು ಮೆತ್ತಿದ ಕಾಲ ಬೆರಳಿಗೆ ಬ್ಯಾಂಡೇಜ್‌ ಹಚ್ಚುವುದು ನಿರೀಕ್ಷಿಸಲು ಕಷ್ಟವಾಗಿತ್ತು. ಘಟನೆ ಬಲು ಸಣ್ಣದಾದರೂ, ಏಕಾಏಕಿ ಬಂದು ಸಹಾಯ ಮಾಡಿ ಹೊರಟು ಹೋದ ರೀತಿ ವಿಲಕ್ಷಣವೂ, ವಿಶೇಷವೂ ಆಗಿ, ಅವಿಸ್ಮರಣೀಯವಾಗಿ ಉಳಿಯಿತು.

 ಕುದ್ಯಾಡಿ ಸಂದೇಶ್‌ ಸಾಲ್ಯಾನ್‌

ಟಾಪ್ ನ್ಯೂಸ್

ಕ್ಯಾಚ್ ಆಫ್ ದಿ ಸೀಸನ್, ಪವರ್ ಪ್ಲೇಯರ್, ಗೇಮ್ ಚೇಂಜರ್ ಪ್ರಶಸ್ತಿ ಯಾರಿಗೆ? ಇಲ್ಲಿದೆ ಪಟ್ಟಿ

ಕ್ಯಾಚ್ ಆಫ್ ದಿ ಸೀಸನ್, ಪವರ್ ಪ್ಲೇಯರ್, ಗೇಮ್ ಚೇಂಜರ್ ಪ್ರಶಸ್ತಿ ಯಾರಿಗೆ? ಇಲ್ಲಿದೆ ಪಟ್ಟಿ

b-c-nagesh

1 ರಿಂದ 5ರ ವರೆಗೆ ಶಾಲೆ ಆರಂಭಕ್ಕೆ ಸರ್ವ ಸಿದ್ದತೆ : ಶಿಕ್ಷಣ ಸಚಿವ ಬಿ.ಸಿ.ನಾಗೇಶ್

20

ಶೆರ್ಲಿನ್ ದೂರು: ರಾಜ್ ಕುಂದ್ರಾ ಹಾಗೂ ಶಿಲ್ಪಾ ಶೆಟ್ಟಿಗೆ ಬಂಧನದ ಭೀತಿ

ಜೋಗ ನೋಡಲು ಸಾವಿರಾರು ಪ್ರವಾಸಿಗರ ಆಗಮನ: ಮೂರು ಕಿ.ಮೀ ಟ್ರಾಫಿಕ್ ಜಾಮ್!

ಜೋಗ ನೋಡಲು ಸಾವಿರಾರು ಪ್ರವಾಸಿಗರ ಆಗಮನ: ಮೂರು ಕಿ.ಮೀ ಟ್ರಾಫಿಕ್ ಜಾಮ್!

ದೀರ್ಘ‌ ಕಾಲದ ಆರೋಗ್ಯ ಸಮಸ್ಯೆ ನಿವಾರಣೆ ಮತ್ತು ಉತ್ತಮ ಆರೋಗ್ಯಕ್ಕಾಗಿ ಶುಂಠಿ

ದೀರ್ಘ‌ ಕಾಲದ ಆರೋಗ್ಯ ಸಮಸ್ಯೆ ನಿವಾರಣೆ ಮತ್ತು ಉತ್ತಮ ಆರೋಗ್ಯಕ್ಕಾಗಿ ಶುಂಠಿ

2022ರಲ್ಲಿ ಸಿಡಬ್ಲ್ಯುಸಿ ಚುನಾವಣೆ; ರಾಹುಲ್ ಗಾಂಧಿಗೆ ಅಧ್ಯಕ್ಷ ಪಟ್ಟ ಸಾಧ್ಯತೆ?

2022ರಲ್ಲಿ ಸಿಡಬ್ಲ್ಯುಸಿ ಚುನಾವಣೆ; ರಾಹುಲ್ ಗಾಂಧಿಗೆ ಅಧ್ಯಕ್ಷ ಪಟ್ಟ ಸಾಧ್ಯತೆ?

ವಿಕಲ ಚೇತನರಿಗೆ ದ್ವಿಚಕ್ರ ವಾಹನ ವಿತರಣೆ ಕಾರ್ಯಕ್ರಮದಲ್ಲಿ ಫಲಾನುಭವಿಯ ಪರ್ಸ್ ಎಗರಿಸಿದ ಕಳ್ಳ!

ವಿಕಲ ಚೇತನರ ದ್ವಿಚಕ್ರ ವಾಹನ ವಿತರಣೆ ಕಾರ್ಯಕ್ರಮದಲ್ಲಿ ಫಲಾನುಭವಿಯ ಪರ್ಸ್ ಎಗರಿಸಿದ ಕಳ್ಳ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ರಾಮನ ಹೆಸರಲ್ಲಿ ಅಧಿಕಾರಕ್ಕೆ ಬಂದವರಿಗೆ ಕುತ್ತು? ಮೈಲಾರಸ್ವಾಮಿ ಕಾರ್ಣಿಕ ನುಡಿ ಏನು ಗೊತ್ತಾ?

udayavani youtube

ಹುಮನಾಬಾದ್ ನಲ್ಲಿ ವಿಜಯ ದಶಮಿ ಸಂಭ್ರಮ : ನೋಡುಗರ ಗಮನ ಸೆಳೆದ ರಾವಣನ ಪ್ರತಿಕೃತಿ

udayavani youtube

ಯಾರಿಗೆ ಒಲಿಯುತ್ತೆ IPL ಟ್ರೋಫಿ|UDAYAVANI NEWS BULLETIN|15/10/2021

udayavani youtube

ನವರಾತ್ರಿ ಸಂಭ್ರಮ: ಶಿರಸಿ ಮಾರಿಕಾಂಬಾ ದೇವಸ್ಥಾನಕ್ಕೆ ಭಕ್ತರ ದಂಡು

udayavani youtube

ಅಂಬಾರಿ ಹೊರುವ ಅಭಿಮನ್ಯುಗೆ ಮತ್ತು ದಸರಾ ಗಜಪಡೆಗೆ ಬಣ್ಣದ ಅಲಂಕಾರ..

ಹೊಸ ಸೇರ್ಪಡೆ

ಕ್ಯಾಚ್ ಆಫ್ ದಿ ಸೀಸನ್, ಪವರ್ ಪ್ಲೇಯರ್, ಗೇಮ್ ಚೇಂಜರ್ ಪ್ರಶಸ್ತಿ ಯಾರಿಗೆ? ಇಲ್ಲಿದೆ ಪಟ್ಟಿ

ಕ್ಯಾಚ್ ಆಫ್ ದಿ ಸೀಸನ್, ಪವರ್ ಪ್ಲೇಯರ್, ಗೇಮ್ ಚೇಂಜರ್ ಪ್ರಶಸ್ತಿ ಯಾರಿಗೆ? ಇಲ್ಲಿದೆ ಪಟ್ಟಿ

b-c-nagesh

1 ರಿಂದ 5ರ ವರೆಗೆ ಶಾಲೆ ಆರಂಭಕ್ಕೆ ಸರ್ವ ಸಿದ್ದತೆ : ಶಿಕ್ಷಣ ಸಚಿವ ಬಿ.ಸಿ.ನಾಗೇಶ್

ಎತ್ತಿನಹೊಳೆ ಕಾಮಗಾರಿಗೆ ಹಿನ್ನಡೆ

ಎತ್ತಿನಹೊಳೆ ಕಾಮಗಾರಿಗೆ ಹಿನ್ನಡೆ

ಎಂಜಿಪಿ ಪಕ್ಷ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವ ಪ್ರಶ್ನೆಯೇ ಬರುವುದಿಲ್ಲ:ಸುದೀನ ಧವಳೀಕರ್

ಎಂಜಿಪಿ ಪಕ್ಷ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವ ಪ್ರಶ್ನೆಯೇ ಬರುವುದಿಲ್ಲ:ಸುದೀನ ಧವಳೀಕರ್

ಹಾಲು ಗುಣಮಟ್ಟ ಸರಿಯಿಲ್ಲ ಎಂದು ಕ್ಯಾತೆ- ಡೇರಿ ಅವ್ಯವಹಾರ ಬೆಳಕಿಗೆ

ಸೋಲೂರು ಹಾಲು ಉತ್ಪಾದಕರ ಪ್ರತಿಭಟನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.