ಸಾಧನೆಗೆ ಪ್ರೇರಣೆ ಏನು?

Team Udayavani, Feb 17, 2020, 5:10 AM IST

T2

ಕೆಟ್ಟು ನಿಂತ ಗಡಿಯಾರವೂ ದಿನಕ್ಕೆ ಎರಡು ಬಾರಿ ಸರಿಯಾದ ಸಮಯ ತೋರುವಂತೆ ಇರುವ ಮಿತಿಯಲ್ಲಿಯೇ ಉಪಕಾರಿಯಾಗಿ ಬಾಳಬೇಕು..

ಬದುಕಿನಲ್ಲಿ ಸಾಧನೆಗೆ ಪ್ರೇರಣೆ ಅಗತ್ಯವೂ ಹೌದು. ಅದು ಯಾವ ರೀತಿಯಲ್ಲಿ ದಕ್ಕುತ್ತದೆ ಎಂಬುದು ಗಂಭೀರ ವಿಚಾರವೇ. ಒಬ್ಬನ ಮೇಲಿನ ದ್ವೇಷ, ಅಸೂಯೆಯಿಂದ ಹುಟ್ಟಿದ ಪ್ರೇರಣೆ ಸಾಧನೆಯನ್ನೇನೋ ಮಾಡಿಸೀತು. ಆದರೆ ವಾಮಮಾರ್ಗ ಹಿಡಿಯಲು ಪ್ರೇರೇಪಿಸೀತು. ಕೆಲವೊಮ್ಮೆ ಸಾತ್ವಿಕ ರೂಪದ ಸಾಧನೆಯೂ ಸಿದ್ಧಿಸೀತು. ಬದುಕು ಹೀಗೇ ಎಂದು ಹೇಳುವುದು ಕಷ್ಟ.

ಸಾತ್ವಿಕ ರೂಪದ ಪ್ರೇರಣೆ ಸದಾ ಉತ್ತಮ ಫ‌ಲವನ್ನೇ ನೀಡುತ್ತದೆ. ಏಕೆಂದರೆ ಕಷ್ಟಗಳನ್ನು ಅನುಭವಿಸಿದ ಜೀವಕ್ಕೆ ಇತರರ ಕಷ್ಟಗಳ ಅರಿವಿರುತ್ತದೆ. ತಾನು ತನ್ನವರಿಗೆ,ಸಮಾಜಕ್ಕೆ  ಮಾಡಬೇಕಾದ ಕರ್ತವ್ಯಗಳ ಅರಿವಿರುತ್ತದೆ. ಮಹತ್ವಾಕಾಂಕ್ಷೆಯೂ ಒಳ್ಳೆಯದೇ. ಆದರೆ ಅದರಲ್ಲೂ ಎರಡು ವಿಧಗಳಿವೆ. ಒಬ್ಬನನ್ನು ತುಳಿದು ತಾನು ಮೇಲೆ ಹೋಗಬೇಕು ಎಂಬ ಮಹತ್ವಾಕಾಂಕ್ಷೆ ಅತ್ಯಂತ ಅಪಾಯಕಾರಿ. ಇದರಲ್ಲಿ ಸಿಗುವ ಸಾಧನೆಯು ವೈಯಕ್ತಿಕವಾಗಿ ಲಾಭಕರವಾಗಿರಬಹುದು ಹೊರತು, ವ್ಯಕ್ತಿತ್ವಕ್ಕೆ ಭೂಷಣವಾಗಲಾರದು. ಸಮಾಜಕ್ಕೂ ಪ್ರಯೋಜನವಾಗಲಾರದು. ತಾನೂ ಬೆಳೆದು ಜತೆಗಿರುವವರನ್ನೂ ಬೆಳೆಸುವ, ಆ ಮೂಲಕ ಮಹತ್ತರವಾದುದನ್ನು ಸಾಧಿಸುವ ಮಹತ್ವಾಕಾಂಕ್ಷೆಯು ಘನವಾದದ್ದು.

ಬದುಕಿನಲ್ಲಿ ಪ್ರಭಾವ ನೋಡಿ ಬಳಿ ಬರುವವರಿಗಿಂತ ಸ್ವಭಾವ ನೋಡಿ ಬರುವವರು ನಮ್ಮ ಹಿತೈಷಿಗಳಂತೆ. ಎಂದು ಬೇಕಾದರೂ ಹಾರಿ ಹೋಗುವ ಜೀವವನ್ನು ಹೊತ್ತ ಈ ದೇಹ ಪರರಿಗೆ ಉಪಕಾರಿಯಾಗಿರಬೇಕು. ಸಾಧನೆಯನ್ನು ಮಾಡದಿದ್ದರೂ ಅಪಕಾರಿಯಾಗಿ ಬದುಕಬಾರದು. ಕೆಟ್ಟು ನಿಂತ ಗಡಿಯಾರವೂ ದಿನಕ್ಕೆ ಎರಡು ಬಾರಿ ಸರಿಯಾದ ಸಮಯ ತೋರುವಂತೆ ಇರುವ ಮಿತಿಯಲ್ಲಿಯೇ ಉಪಕಾರಿಯಾಗಿ ಬಾಳಬೇಕು ಎಂಬುದು ಬಲ್ಲವರ ಮಾತು. ನಮ್ಮ ಹಿತೈಷಿಗಳು ಯಾರು, ತುಳಿಯುವವರು ಯಾರು, ಹಿತೈಷಿಗಳಂತೆ ಇದ್ದು ಹಳ್ಳ ತೋಡುವವರು ಯಾರು ಎಂಬುದನ್ನು ಅರಿತುಕೊಳ್ಳಬೇಕು. ಅಂಥವರ ಮಹತ್ವಾಕಾಂಕ್ಷೆಗೆ ಬಲಿಯಾಗದೇ, ನಮ್ಮೊಳಗೆ ಸಾತ್ವಿಕ ಮಹತ್ವಾಕಾಂಕ್ಷೆಯನ್ನು ಉದ್ದೀಪಿಸಿ ಸಾಧಿಸಿ ಜೀವನ ಸಾರ್ಥಕಪಡಿಸಿ ಕೊಳ್ಳುವುದರಲ್ಲಿ ಬದುಕಿನ ಅರ್ಥ ಇದೆ.

-ಕುದ್ಯಾಡಿ ಸಂದೇಶ್‌ ಸಾಲ್ಯಾನ್‌

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.