ಮನದ ಮಾತು ಕೇಳಿ ನೆರವಾದ ವ್ಯಕ್ತಿಗೊಂದು ಧನ್ಯವಾದ

ಸಾಗುವುದಕ್ಕೆ ದುರ್ಗಮ ಎನಿಸುವ ದಾರಿಗಳು ನೀವು ಕಟ್ಟಿಕೊಂಡ ಸುಂದರವಾದ ಗುರಿಗಳನ್ನು ತಲುಪಿಸುತ್ತದೆ.

Team Udayavani, Apr 29, 2019, 12:08 PM IST

29-April-12

ಹೇಳುವಂಥ ವಿಷಯಗಳು ನೂರಾರಿದ್ದರೂ ಕೆಲವೊಂದು ಬಾರಿ ನಮ್ಮಲ್ಲಿ ಹೇಳಲು ಪದಗಳೇ ಇರುವುದಿಲ್ಲ. ಈ ಸಂದರ್ಭ ಎದುರಾಗುವುದು ಕೆಲವು ನಿರ್ದಿಷ್ಟ ಸಂದರ್ಭಗಳಲ್ಲಿ ಮಾತ್ರ. ಎದುರಿಗಿದ್ದ ವ್ಯಕ್ತಿಯಿಂದ ಮನಸ್ಸಿಗೆ ನೋವಾಗಿದ್ದರೆ ಅಥವಾ ಹೆಚ್ಚು ಖುಷಿಯನ್ನು ಕೊಟ್ಟಿದ್ದರೆ ನಮ್ಮ ಮಾತು ಸೋತು ಹೋಗುತ್ತದೆ, ಮೌನವೇ ಸರಿಯಾದ ಉತ್ತರ ಎಂದೆನಿಸಿ ಬಿಡುತ್ತದೆ.

ನಾವು ಸೋಲುವ ಹಾದಿಯಲ್ಲಿದ್ದಾಗ ನಿರೀಕ್ಷೆ ಮಾಡಲೂ ಸಾಧ್ಯವಿಲ್ಲದ ವ್ಯಕ್ತಿಯೊಬ್ಬರು ನಮ್ಮ ಬೆಂಬಲಕ್ಕೆ ನಿಂತರೆ ಆ ಕ್ಷಣವೂ ನಮ್ಮ ಮಾತು ಮೌನವಾಗಿರುತ್ತದೆ. ಪ್ರತಿಯೊಬ್ಬರ ಜೀವನದಲ್ಲೂ ಒಂದಲ್ಲ ಒಂದು ಬಾರಿ ಈ ಘಟನೆಗಳು ನಡೆದಿರುತ್ತದೆ. ಮಾತು ಸೋತು ಹೋದ ಆ ಕ್ಷಣ ಮೌನ ಮಾತನಾಡಲು ಆರಂಭಿಸಿರುತ್ತದೆ. ಒಂದು ಥ್ಯಾಂಕ್ಯೂ ಹೇಳಬೇಕೆಂದೆನಿಸಿದರೂ ಅದು ಶಬ್ಧದ ರೂಪದಲ್ಲಿ ಹೊರಬರುವುದೇ ಇಲ್ಲ.

ಒಂದೆರಡು ವರ್ಷಗಳ ಹಿಂದೆ ನಡೆದ ಘಟನೆ. ನಾನು ಕಾಲೇಜಿಗೆ ಸ್ಕೂಟರ್‌ನಲ್ಲಿ ಹೋಗುತ್ತಿದ್ದೆ. ಒಂದು ದಿನ ಕಾಲೇಜಿಗೆ ತಡವಾಗುತ್ತದೆ ಎಂದು ವೇಗವಾಗಿ ಹೋಗುತ್ತಿರುವಾಗ ಎದುರಿಗೆ ವ್ಯಕ್ತಿಯೊಬ್ಬರು ರಸ್ತೆ ದಾಟುತ್ತಿದ್ದರು. ನಾನು ಎಷ್ಟೇ ಹಾರ್ನ್ ಮಾಡಿದರೂ ಆ ವ್ಯಕ್ತಿ ನೋಡಲಿಲ್ಲ. ಕಿವಿಗೆ ಇಯರ್‌ಫೋನ್‌ ಹಾಕಿದ್ದರಿಂದ ಅವರಿಗೆ ನನ್ನ ಹಾರ್ನ್ ಶಬ್ಧ ಕೇಳಲಿಲ್ಲ. ಗಾಡಿ ನಿಲ್ಲಿಸಬೇಕೆಂದುಕೊಳ್ಳುವಷ್ಟರಲ್ಲಿ ಆ ವ್ಯಕ್ತಿಗೆ ಢಿಕ್ಕಿ ಹೊಡೆಯಿತು. ಅವರಿಗೆ ತರಚಿದ ಗಾಯಗಳಾಗಿ ಪಾರಾದರು. ನನಗೆ ಅಲ್ಲಿ ಹೇಳಲು ಅಥವಾ ವಿವರಣೆ ನೀಡಲು ಯಾವುದೇ ಅವಕಾಶವಿರಲಿಲ್ಲ.

ಸುತ್ತಮುತ್ತಲಿದ್ದವರು ಬಂದು ನನ್ನನ್ನು ಅಪರಾಧಿಯಂತೆ ನೋಡಿ ಬಯ್ಯತೊಡಗಿದರು. ಅವರ ಪ್ರಕಾರ ತಪ್ಪು ನನ್ನದೇ. ಯಾಕೆಂದರೆ ಗುದ್ದಿದವಳು ನಾನು. ಆದರೆ ಆ ಅಪಘಾತ ತಪ್ಪಿಸಲು ನಾನು ಪಟ್ಟ ಪ್ರಯತ್ನಕ್ಕೆ ಸಾಕ್ಷಿ ಗಳೇ ಇರಲಿಲ್ಲ. ಹಳ್ಳಿ ಪ್ರದೇಶವಾದ್ದರಿಂದ ಅಲ್ಲಿ ಪೊಲೀಸರಿಗಿಂತ ಹೆಚ್ಚು ಜನರೇ ನ್ಯಾಯ ತೀರ್ಮಾನಿಸುತ್ತಿದ್ದರು. ಸುತ್ತ ಸೇರಿದವರೆಲ್ಲ ನನ್ನದೇ ತಪ್ಪೆಂದು ನ್ಯಾಯ ಕೊಟ್ಟು ನನ್ನ ಬಳಿ ಹಣ ಕೇಳತೊಡಗಿದರು. ನನಗೆ ಅಳು ಬರುವುದೊಂದೇ ಬಾಕಿ. ಪವಾಡ ವೆಂಬಂತೆ ಅಲ್ಲಿಗೆ ಬಂದ ಹಿರಿಯ ವ್ಯಕ್ತಿಯೊಬ್ಬರು ಏನಾಯಿತೆಂದು ನನ್ನಲ್ಲಿ ನೇರ ವಾಗಿ ಕೇಳಿದರು. ನಡೆದದ್ದನ್ನೆಲ್ಲ ಹೇಳಿದಾಗ ಆ ವ್ಯಕ್ತಿಗೆ ಬಯ್ದರು. ಕಿವಿಗೆ ಇಯರ್‌ಫೋನ್‌ ಹಾಕಿ ರಸ್ತೆ ದಾಟಿದ್ದು ಇದಕ್ಕೆ ಕಾರಣ ಎಂದರು. ನನ್ನ ಸ್ಕೂಟರ್‌ ಎತ್ತಿಕೊಟ್ಟು ನಿಧಾನವಾಗಿ ಹೋಗು ಎಂದರು. ನಾನು ಅಶ್ಚರ್ಯಚಕಿತಳಾಗಿ ಅವರು ಹೇಳಿದ್ದನ್ನು ಅನುಸರಿಸಿದೆ. ಕೊನೆಗೆ ಒಂದು ಧನ್ಯವಾದವನ್ನೂ ಅವರಿಗೆ ಹೇಳಲಿಲ್ಲ. ಸೋತು ಹೋದ ನನ್ನ ಮನಸ್ಸಿನ ಮಾತಿಗೆ ಕಿವಿಯಾದ ಆ ವ್ಯಕ್ತಿಗೆ ಈ ಮೂಲಕ ಥ್ಯಾಂಕ್ಯೂ..

ಸುಶ್ಮಿತಾ ಶೆಟ್ಟಿ

ಟಾಪ್ ನ್ಯೂಸ್

Modi (2)

ಬೆಳಗಾವಿ; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ

arrested

Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Modi (2)

ಬೆಳಗಾವಿ; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ

arrested

Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು

accident

Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.