ವ್ಯಾಯಾಮಕ್ಕೆ ಮೊದಲ ತಯಾರಿ

Team Udayavani, May 21, 2019, 6:03 AM IST

ಫಿಟ್‌ನೆಸ್‌ಗಾಗಿ ಯೋಗ, ವ್ಯಾಯಾಮ, ಜಿಮ್‌ ವರ್ಕ್‌ಔಟ್‌ಗೆ ಎಲ್ಲರೂ ಮೊರೆಹೋಗುತ್ತಾರೆ. ಆದರೆ ಮೊದಲ ಬಾರಿಗೆ ಈ ಪ್ರಯತ್ನ ನಡೆ ಸುವವರಿಗೆ ಹೇಗೆ ಅನುಸರಿಸಬೇಕು, ಅದಕ್ಕೆ ಪೂರ್ವ ತಯಾರಿ ಏನು ಎಂಬ ಬಗ್ಗೆ ಅರಿವಿರುವುದಿಲ್ಲ. ಉತ್ತಮ ಆರಂಭ ದೊರಕದೇ ಇದ್ದರೇ ದೇಹವನ್ನು ಫಿಟ್‌ ಆಗಿರಿಸಲು ಸಾಧ್ಯವಿಲ್ಲ.

ಸರಿಯಾದ ಯೋಜನೆ ಇರಲಿ
ನಮ್ಮ ಯಾವುದೇ ಚಟುವಟಿಕೆಗೆ ಒಂದು ನಿರ್ದಿಷ್ಟ ಪ್ಲ್ರಾನಿಂಗ್‌ ಕೈಗೊಂಡಾಗ ಸುಲಭವಾಗಿ ಮತ್ತು ದಿನದ ಎಲ್ಲ ಕೆಲಸಕ್ಕೂ ಸರಿಯಾದ ಸಮಯ ಹೊಂದಾಣಿಕೆ ಮಾಡಬಹುದು. ತರಾತುರಿಯಲ್ಲಿ ಕೈಗೊಂಡರೆ ಶರೀರದ ಮೇಲೆ ವ್ಯತಿರಿಕ್ತ ಪರಿಣಾಮ ಬೀಳುವುದೇ ಜಾಸ್ತಿ.

ಮನಸ್ಥಿತಿ
ಯಾವುದೇ ಕಾರ್ಯ ಕೈಗೊಳ್ಳುವ ಮೊದಲಿಗೆ ಆ ಕಾರ್ಯದ ಬಗ್ಗೆ ದೃಢ ಮನಸ್ಥಿತಿ ಬಹಳ ಮುಖ್ಯ. ನಾನು ವ್ಯಾಯಾಮ ಮಾಡಬೇಕು ಎಂಬ ದೃಢ ಮನಸ್ಸು, ಏಕಾಗ್ರತೆ ಬಹಳ ಮುಖ್ಯ. ವಕೌìಟ್‌ ಎಂದಿಗೂ ಹೊರೆ ಎನಿಸದಿರಲಿ. ಮನಸ್ಸಿನಲ್ಲಿ ತೃಪ್ತಿ ಇಲ್ಲದೆ ಮಾಡಿದ ವ್ಯಾಯಾಮ ವ್ಯರ್ಥ.

ಸ್ಥಳಗಳ ಆಯ್ಕೆ
ವ್ಯಾ ಯಾಮದ ಚಟುವಟಿಕೆಗೆ ಸ್ಥಳಗಳ ಆಯ್ಕೆಗೆ ಮೊದಲ ಆದ್ಯತೆಯನ್ನು ನೀಡಬೇಕು. ಹೊರಾಂಗಣ ಸೂಕ್ತವೇ ಇಲ್ಲವೇ ಜಿಮ್‌, ಮನೆಗಳಲ್ಲೇ ಒಳಾಂಗಣ ಸ್ಥಳಗಳು ಸಾಕೇ ಎಂಬ ಪ್ರಶ್ನೆ ಎದುರಾಗುವುದು ಸಹಜ. ಇಲ್ಲಿ ಜಾಗಿಂಗ್‌, ವಾಕಿಂಗ್‌ನಂತಹ ವ್ಯಾಯಾವಗಳು ಮುಖ್ಯವಾಗಿ ಹೊರಾಂಗಣ ಸೂಕ್ತ. ಬೆಳಗ್ಗೆ ಬೇಗ,ಸಂಜೆ ವ್ಯಾಯಮಕ್ಕೆ ಸೂಕ್ತ ಸಮಯ.

ಆಹಾರ,ಉಡುಗೆ,ತೊಡುಗೆಕರಿದ ತಿಂಡಿಗಳಿಂದ ದೂರವಿರಬೇಕು. ಹಣ್ಣು ತರಕಾರಿ ಮತ್ತು ನೀರು ಜಾಸ್ತಿ ಸೇವಿಸ ಬೇಕು. ವ್ಯಾಯಾಮಕ್ಕೆ ಟ್ರ್ಯಾಕ್‌ ಪ್ಯಾಂಟ್‌ ಜತೆಗೆ ಕಂಫ‌ಟೇìಬಲ್‌ ಡ್ರೆಸ್‌ಗಳ ಆಯ್ಕೆ ನಿಮ್ಮದಾಗಿರಲಿ. ಸಡಿಲವಾದ ಉಡುಪುಗಳನ್ನು ಆಯ್ಕೆ ಮತ್ತು ಉತ್ತಮ. ಉಡುಪು ಬಿಗಿಯಾದರೆ ವ್ಯಾಯಾಮದ ಚಲನವಲನಗಳಿಗೆ ಹಾಗೂ ರಕ್ತಸಂಚಲನೆಗೂ ತೊಂದರೆಯಾಗುತ್ತದೆ. ಹಾಗಾಗಿ ಸಡಿಲವಾದ, ಬೇಗನೆ ಒಣಗಬಲ್ಲ ಉಡುಗೆಗಳು ಸೂಕ್ತ.

ಇವುಗಳ ಜತೆಗೆ ಸ್ವಚ್ಛತೆಯನ್ನು ಕಾಪಾಡಿ. ವಕೌìಟ್‌ ಮಾಡುವಾಗ ಬೆವರು ಒರೆ ಸಲು ಸದಾ ಟವೆಲ್‌ ಬಳಿ ಇರಲಿ. ಪ್ರತಿ ವಕೌìಟ್‌ನ ನಂತರ ಸ್ನಾನ ಮಾಡುವುದು ಒಳ್ಳೆಯ ಅಭ್ಯಾಸ.

ವಾರ್ಮ್ಅಪ್‌
ವಕೌìಟ್‌ ಮುಂಚೆ ವಾರ್ಮ್ ಅಪ್‌ ಅತ್ಯಾವಶ್ಯಕ. ಸ್ನಾಯುಗಳನ್ನು ಸಡಿಲಗೊಳಿಸಲು ಜಾಗಿಂಗ್‌, ಸ್ಟ್ರೆಚಿಂಗ್‌ ನಂತಹ ವಾರ್ಮ್ ಆಪ್‌ ಸಹಕಾರಿ. ಇದರಿಂದ ಭಾರೀ ವ್ಯಾಯಾಮದ ಒತ್ತಡವನ್ನು ತಡೆದುಕೊಳ್ಳುವ ಶಕ್ತಿ ಸ್ನಾಯುಗಳು ಮತ್ತು ದೇಹ ಪಡೆದು ಕೊಳ್ಳುತ್ತದೆ. ವಕೌìಟ್‌ ಮುಂಚೆ ವಾರ್ಮ್ ಅಪ್‌ ಎಷ್ಟು ಮುಖ್ಯವೋ ಕೂಲ್‌ ಡೌನ್‌ ಕೂಡ ಅಷ್ಟೇ ಮುಖ್ಯ.ಸ್ನಾಯು,ದೇಹದ ಮೇಲೆ ಆಗಿರುವ ಒತ್ತಡ ಕಡಿಮೆ ಮಾಡಲು ಕೂಲ್‌ ಡೌನ್‌ ಅವಶ್ಯಕ.

ವಿವಿಧತೆ ಇರಲಿ
ವ್ಯಾಯಾಮದಲ್ಲಿ ವಿವಿಧತೆ ಇರಲಿ. ವಾರದಲ್ಲಿ ಇಂತಹ ದಿನ ಈ ವ್ಯಾಯಾಮ ಎಂದು ನಿಗದಿಪಡಿಸುವುದು ಉತ್ತಮ.
ಸ್ವಿಮ್ಮಿಂಗ್‌, ಬೀಚ್‌ ಸೈಡ್‌ ವಾಲಿಬಾಲ್‌ ಲಾಂಗ್‌ ವಾಕ್‌ ಒಳಾಂಗಣ ವ್ಯಾಯಾಮಗಳಾದ ಏರೋಬಿಕ್ಸ್‌ , ಯೋಗ ವಿವಿಧ ಆಯ್ಕೆ ಇರಲಿ.

-ಕಾರ್ತಿಕ್‌ ಚಿತ್ರಾಪುರ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಮರೆವು ಒಂದು ರೀತಿಯ ಮೆದುಳಿನ ನ್ಯೂನತೆ. ಭೌತಿಕ ಅಥವಾ ಮಾನಸಿಕ ಆಘಾತದಿಂದ ಉಂಟಾಗುವ ರೋಗವಿದು. ಮನಸ್ಸಿಗೆ ತೀವ್ರ ರೀತಿಯ ಆಘಾತವಾದಾಗ ಅದರಿಂದ ಘಾಸಿಯಾಗಿ ಜ್ಞಾಪಕ...

  • ಸಾಮಾನ್ಯವಾಗಿ ಹುಡುಗಿಯರಷ್ಟೇ ಸೌಂದರ್ಯದ ಬಗ್ಗೆ ಕಾಳಜಿ ವಹಿಸುತ್ತಾರೆ ಎಂಬ ಮಾತಿದೆ. ಅಂತೆಯೇ ಪುರುಷರು ಕೂಡ ಇತ್ತೀಚೆಗೆ ಹೆಚ್ಚು ಸೌಂದರ್ಯ ಕಾಳಜಿ ವಹಿಸುತ್ತಿರುವುದು...

  • ನಮ್ಮ ಮನೆಯ ಅಡುಗೆ ಮನೆಯಲ್ಲಿ ಹಲವಾರು ಔಷಧ ಗುಣಗಳಿರುವ ಮತ್ತು ಆರೋಗ್ಯದಾಯಕ ವಸ್ತುಗಳಿವೆ. ಅವುಗಳ ಪ್ರಯೋಜನವನ್ನು ತಿಳಿದು ಬಳಸಿದರೆ ರೋಗ ನಿಯಂತ್ರಣಕಾರಿಯಾಗಿ...

  • ಉಪ್ಪು ಆಹಾರ ತಯಾರಿಕೆಯಲ್ಲಿ ಮುಖ್ಯ ಪಾತ್ರವನ್ನು ವಹಿಸುತ್ತದೆ. ಆಹಾರ ಎಷ್ಟೇ ಚೆನ್ನಾಗಿದ್ದರೂ ಉಪ್ಪಿನಂಶಇಲ್ಲದಿದ್ದರೆ ಅದರ ರುಚಿ ಕೆಟ್ಟು ಹೋಗುತ್ತದೆ. ಉಪ್ಪು...

  • ಆಫೀಸ್‌ನಲ್ಲಿ ಒಂದೇ ಕಡೆ ಕುಳಿತು ಕೆಲಸ ಮಾಡುತ್ತಿದ್ದೀರಾ?ಹಾಗಾದರೆ ಕೆಲವೊಮ್ಮೆ ಸೊಂಟ ನೋವು, ಕುತ್ತಿಗೆ ನೋವು ಕಾಡಿದ ಅನುಭವ ನಿಮಗೂ ಆಗಿರಬಹುದಲ್ಲ?ಇದಕ್ಕೇನು...

ಹೊಸ ಸೇರ್ಪಡೆ