ಹಿಮೋಫಿಲಿಯಾ ಇರಲಿ ಮುನ್ನೆಚ್ಚರಿಕೆ

Team Udayavani, Apr 16, 2019, 6:00 AM IST

ಇಂದು (ಎ. 16) ಹಿಮೋಫಿಲಿಯಾ ಜಾಗೃತಿ ದಿನ. ದುಬಾರಿ ಮತ್ತು ಜೀವನಪರ್ಯಂತ ಚಿಕಿತ್ಸೆ ಮಾಡಬೇಕಾದ ಅನುವಂಶಿಕವಾಗಿ ಬರುವ ಕಾಯಿಲೆಗಳಲ್ಲಿ ಒಂದಾದ ರಕ್ತ ಹೆಪ್ಪುಗಟ್ಟದೇ ಇರುವ ಹಿಮೋಫಿಲಿಯಾದ ಬಗ್ಗೆ ತಿಳಿದುಕೊಂಡು ಸೂಕ್ತ ಮುನ್ನೆಚ್ಚರಿಕೆ ವಹಿಸುವುದು ಬಹುಮುಖ್ಯ.

ಆಧುನಿಕ ಜೀವನ ಪದ್ಧತಿಯಲ್ಲಿ ಕಾಯಿಲೆಗಳು ಸಾಮಾನ್ಯ. ಕೆಲವು ಕಾಯಿಲೆಗಳು ನಮ್ಮ ಅಜಾಗರೂಕತೆಯಿಂದ ಬಂದರೆ, ಇನ್ನು ಕೆಲವು ಆನುವಂಶಿಕವಾಗಿ ಬಂದು ಬಿಡುತ್ತವೆ. ಅನುವಂಶಿಕವಾಗಿ ಬರುವ ಕಾಯಿಲೆಗಳಲ್ಲಿ ಹಿಮೋಫಿಲಿಯಾ (ರಕ್ತ ಹೆಪ್ಪುಗಟ್ಟದೇ ಇರುವುದು) ಕೂಡ ಒಂದು.

ಹಿಮೋ ಫಿ ಲಿಯಾ ಒಂದು ಆನುವಂಶಿಕ ರೋಗ. ಗಾಯಾಗಳಾದಾಗ ರಕ್ತ ಹೆಪ್ಪುಗಟ್ಟದೇ ಇರುವುದು ಇದರ ಪ್ರಮುಖ ಲಕ್ಷಣ. ಈ ರೋಗದಿಂದ ಬಾಧಿತರಾದವರ ದೇಹದಲ್ಲಿ ರಕ್ತ ಹೆಪ್ಪುಗಟ್ಟಲು ಬೇಕಾದ ಪ್ರೋಟಿನ್‌ಅಂಶ ಕಡಿಮೆ ಇರುತ್ತದೆ. ಇದರಿಂದಾಗಿ ಚಿಕ್ಕ ಗಾಯವಾದರೂ ರಕ್ತಸ್ರಾವ ತಡೆಯುವುದು ಬಹಳ ಕಷ್ಟ.

ಸಾಮಾನ್ಯವಾಗಿ ಈ ರೋಗ ಮಕ್ಕಳಲ್ಲಿ ಕಂಡುಬರುವಂತದ್ದು. ಹೆಣ್ಣು ಮಗುವಿಗೆ ಹೋಲಿಸಿದರೆ ಗಂಡು ಮಕ್ಕಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಈ ರೋಗವು ತಾಯಿಯಿಂದ ಮಕ್ಕಳಿಗೆ ಬರುವ ಸಾಧ್ಯತೆ ಅಧಿಕವಾಗಿರುತ್ತದೆ. ಹೆಣ್ಣು ಮಕ್ಕಳ ಜನನದ ವೇಳೆ ಇದು ರೆಸೆಸ್ಸಿವ್‌ (ವಂಶಪಾರಂಪರ್ಯವಾಗಿ ಬರುವ ಸಾಧ್ಯತೆ ಕಡಿಮೆ) ಆಗಿದ್ದು, ಗಂಡು ಮಗುವಿನ ಜನನದ ವೇಳೆ ಡಾಮಿನೆಂಟ್‌ ಆಗಿರುತ್ತದೆ ಎನ್ನುವುದು ವೈದ್ಯರ ಅಭಿಪ್ರಾಯ.

ಮೂರು ವಿಧಗಳು
ಹಿಮೋಫಿಲಿಯಾವನ್ನು ಮೂರು ವಿಧವಾಗಿ ವಿಂಗಡಿಸಬಹುದು. ಹಿಮೋಫಿಲಿಯಾ ಎ, ಬಿ ಮತ್ತು ಸಿ.
ಇವುಗಳಲ್ಲಿ ಎ ಮತ್ತು ಬಿ ಸರ್ವೆ ಸಾಮಾನ್ಯವಾಗಿ ಕಂಡು ಬರು ವಂತದ್ದಾಗಿದೆ. ಹಿಮೋಫಿಲಿಯಾ ಬಿ ಗೆ ಕ್ರಿಸ್ಮಸ್‌ ಡಿಸೀಸ್‌ ಎಂದೂ ಕರೆಯಲಾಗುತ್ತದೆ. ರಕ್ತ ಹೆಪ್ಪುಗಟ್ಟಲು ನೆರವಾಗುವಂತಹ 13 ಪ್ರೋಟಿನ್‌ ಫ್ಯಾಕ್ಟರ್‌ಗಳು ರಕ್ತದಲ್ಲಿದ್ದು, 8ನೇ ಫ್ಯಾಕ್ಟರ್‌ ಕಡಿಮೆ ಇದ್ದರೆ ಅದನ್ನು ಟೈಪ್‌ ಎ ಎಂದು ಗುರುತಿಸಲಾಗುತ್ತದೆ. 9ನೇ ಫ್ಯಾಕ್ಟರ್‌ ಕಡಿಮೆ ಇದ್ದರೆ ಅದನ್ನು ಟೈಪ್‌ ಬಿ ಎಂದು ಹೇಳಲಾಗುತ್ತದೆ.
ವರ್ಷಕ್ಕನುಗುಣವಾಗಿ ಟೈಪ್‌ ಎ ವಿಧವು 5,000 ಮಕ್ಕಳ ಜನನದಲ್ಲಿ ಒಬ್ಬರಲ್ಲಿ ಕಂಡು ಬರುತ್ತದೆ. ಟೈಪ್‌ ಬಿ 20- 25 ಸಾವಿರ ಮಕ್ಕಳ ಜನನದಲ್ಲಿ ಒಬ್ಬರಲ್ಲಿ ಕಂಡು ಬರುವಂಥದ್ದಾಗಿದೆ.

ಈ ರೋಗದಿಂದ ಬಳಲುತ್ತಿರುವವರಿಗೆ ಗಂಭೀರ ಗಾಯಗಳಾದಾಗ ಶೀಘ್ರ ಚಿಕಿತ್ಸೆ ನೀಡುವುದು ಅತ್ಯವಶ್ಯಕವಾಗಿರುತ್ತದೆ.. ರಕ್ತ ಸ್ರಾವ ಜಾಸ್ತಿ ಇರುವಾಗ ಬ್ಲಿಡ್‌ ವಾಲ್ಯೂಮ್‌ ಕಡಿಮೆಯಾಗಿ ಹೃದಯ ರಕ್ತವನ್ನು ಪಂಪ್‌ ಮಾಡುವ ವೇಗವು ಕಡಿಮೆಯಾಗುತ್ತದೆ. ಈ ಸಂದರ್ಭದಲ್ಲಿ ಮೆದುಳಿಗೆ ಆಮ್ಲಜನಕದ ಪೂರೈಕೆ ಕಡಿಮೆಯಾಗಿ ಹೈಪೋ ವಾಲ್ಯೂಮಿಕ್‌ ಶಾಕ್‌ಗೆ ಒಳಗಾಗಿ ಸಾವು ಸಂಭವಿಸುವ ಸಾಧ್ಯತೆಗಳೂ ಇರುತ್ತದೆ.

ಚಿಕಿತ್ಸೆ ಇದೆ
ಈ ರೋಗವನ್ನು ಪರಿಪೂರ್ಣವಾಗಿ ಗುಣಪಡಿಸುವುದು ಕಷ್ಟ ಸಾಧ್ಯ. ಆದರೆ ರಕ್ತ ಹೆಪ್ಪುಗಟ್ಟಲು ಆವಶ್ಯಕವಿರುವ ಪ್ರೋಟಿನ್‌ ಫ್ಯಾಕ್ಟರ್‌ಗಳನ್ನು ದೇಹಕ್ಕೆ ಹಂತ ಹಂತವಾಗಿ ರಿಪ್ಲೇಸ್‌ ಮಾಡುವ ಮೂಲಕ ರಕ್ತಸ್ರಾವವನ್ನು ತಡೆಗಟ್ಟಬಹುದು.

ಹಿಮೋಫಿಲಿಯಾ ಬಗ್ಗೆ ಹೆದರಬೇಕಾದ ಅವಶ್ಯಕತೆ ಇಲ್ಲ. ಇದನ್ನು ಪ್ರಾರಂಭದಲ್ಲೇ ಪತ್ತೆ ಹಚ್ಚಬೇಕಾಗುತ್ತದೆ. ಹೀಗಾಗಿ ಗರ್ಭಿಣಿಯರು ತಮಗೆ ಅಥವಾ ತಮ್ಮ ಮನೆಮಂದಿಗೆ ಯಾರಾದರೂ ಈ ಕಾಯಿಲೆಯಿಂದ ಬಳಲುತ್ತಿದ್ದರೆ ವೈದ್ಯರಿಗೆ ತಿಳಿಸಿ ಅವರು ಹೇಳುವ ಸಲಹೆ ಸೂಚನೆಗಳನ್ನು ಪಾಲಿಸಬೇಕು. ಮಕ್ಕಳಿಗೆ ಈ ಕಾಯಿಲೆ ಬಾರದಂತೆ ಆದಷ್ಟು ಮುಂಜಾಗ್ರತೆ ವಹಿಸಲು ಏನು ಮಾಡಬಹುದು ಎಂಬುದನ್ನು ತಿಳಿದುಕೊಳ್ಳಬೇಕು. ಈ ಕಾಯಿಲೆಗೆ ಚಿಕಿತ್ಸೆಯು ದುಬಾರಿಯಾಗಿರುವುದರಿಂದ ಮತ್ತು ಜೀವನಪರ್ಯಂತ ಚಿಕಿತ್ಸೆ ಪಡೆಯಬೇಕಾದುದ್ದರಿಂದ ಸಾಕಷ್ಟು ಮುನ್ನೆಚ್ಚರಿಕೆ ವಹಿಸುವುದು ಅಗತ್ಯ

ಲಕ್ಷಣಗಳು
·  ಮೂಗಿನಲ್ಲಿ ರಕ್ತ ಸ್ರಾವ
·  ಹಲ್ಲಿನ ವಸಡಿನಲ್ಲಿ ರಕ್ತ ಸ್ರಾವ
·  ಸಂಧುನೋವು,  ಊತ,
·  ಕೆಲವರಿಗೆ ಮಲ ಮತ್ತು ಮೂತ್ರದಲ್ಲಿ ರಕ್ತ ಹೋಗುವಂತದ್ದು
·  ಮೆದುಳಿನಲ್ಲಿ ರಕ್ತ ಸ್ರಾವ (ಇಂತಹ ವ್ಯಕ್ತಿಗಳಿಗೆ ಡಬಲ್‌ ವಿಶನ್‌ ಅಂದರೆ ಎರಡೆರಡು ವಸ್ತುಗಳು ಕಾಣುವಂತದ್ದು, ತಲೆ ನೋವು, ಪದೆ ಪದೆ ವಾಂತಿಯಾಗುವುದು, ಕಡಿಮೆ ನಿದ್ರೆ, ಸುಸ್ತಿನ ಅನುಭವವಾಗುತ್ತದೆ.)

ಜಾಗೃತೆ ವಹಿಸಿ
ಹಿಮೋಫಿಲಿಯಾಕ್ಕೆ ಒಳಗಾಗಿರುವವರು ಚಿಕ್ಕ ಗಾಯಗಳು ಕೂಡ ಆಗದಂತೆ ಜಾಗೃತೆ ವಹಿಸಬೇಕು.ಒಂದು ವೇಳೆ ಗಾಯಗಳು ಆದ ಸಂದರ್ಭದಲ್ಲಿ ಅವುಗಳನ್ನು ನಿರ್ಲಕ್ಷಿಸದೆ ತತ್‌ಕ್ಷಣ ವೈದ್ಯರನ್ನು ಭೇಟಿಮಾಡಿ ಸೂಕ್ತ ಚಿಕಿತ್ಸೆ ಪಡೆಯಬೇಕು.
– ಡಾ| ರೋಹಿಣಿ ಕೆ.ತಜ್ಞರು

– ಪ್ರೀತಿ ಭಟ್‌ ಗುಣವಂತೆ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.ಈ ವಿಭಾಗದಿಂದ ಇನ್ನಷ್ಟು

  • ಸಣ್ಣಕ್ಕೆ ತಲೆನೋವಾಗುತ್ತಿದೆ. ಹೊಟ್ಟೆ ನೋವಾಗುತ್ತಿದೆ ಎಂದಾಗ ಜನರು ಮೊರೆಹೋಗುವುದು ಮನೆಮದ್ದುಗಳಿಗಲ್ಲ ಬದಲಾಗಿ ಆ್ಯಂಟಿ ಬಯೋಟಿಕ್‌ಗಳೆಂಬ ಕ್ಷಣಮಾತ್ರದಲ್ಲೇ...

  • ತೆಂಗಿನೆಣ್ಣೆಯನ್ನು ಅಮೃತವೆಂದೇ ಹೇಳಲಾಗುತ್ತದೆ. ಇದನ್ನು ಕಾಯಿಲೆ ಗುಣ ಪಡಿಸಲು ಮತ್ತು ಶ್ಯಾಂಪೂ, ಕ್ರೀಮ್‌ ಅನೇಕ ರೀತಿಯ ಬ್ಯೂಟಿ ಪ್ರೊಡಕ್ಟ್ಗಳಲ್ಲಿ ಬಳಸಲಾಗುತ್ತದೆ....

  • ನೀವು ಪ್ರವಾಸ ಪ್ರಿಯರೇ? ಹೆಚ್ಚು ಸಮಯ ವ್ಯವಹಾರ, ಉದ್ಯೋಗದ ಕಾರಣ ಇಲ್ಲವೇ ಮೋಜು ಮಸ್ತಿಯ ಪ್ರವಾಸದ ಕಾರಣದಿಂದಾಗಿ ನಿಮ್ಮ ದೈನಂದಿನ ವ್ಯಾಯಾಮದ ಚಟುವಟಿಕೆಗೆ ವಿರಾಮ...

  • ಜಾಯಿಕಾಯಿ ಚಟ ಮಾನಸಿಕ ಗೊಂದಲಗಳು, ಅನಿಶ್ಚಿತತೆ, ಮೆಮೊರಿ ಲಾಸ್‌ ಮತ್ತು ಮಾನಸಿಕ ಸ್ಥಿತಿಯಲ್ಲಿ ಖಂಡಿತವಾಗಿಯು ಏರುಪೇರು ಮಾಡುತ್ತದೆ. ಇದು ಲಿವರಿನ ಮೇಲೆ ಹಾನಿ...

  • ಚರ್ಮ ನಮ್ಮ ಸೌಂದರ್ಯ ಎಂಬ ಮಾತಿದೆ. ಸುಂದರವಾದ, ಹೊಳೆಯುವ ಚರ್ಮವನ್ನು ಹೊಂದುವುದು ಅನೇಕರ ಆಶಯ. ಆದರೆ ಮುಖದ ಸೌಂದರ್ಯಕ್ಕೆ ಹೆಚ್ಚಿನ ಮಹತ್ವ ನೀಡುವ ಎಲ್ಲರೂ ಚರ್ಮದ...

ಹೊಸ ಸೇರ್ಪಡೆ