ಕೆಲಸಕ್ಕೆ ಹೋಗವವರ ಡಯೆಟ್‌ ಪ್ಲ್ರಾನ್‌ ಹೀಗಿರಲಿ

Team Udayavani, Apr 16, 2019, 6:00 AM IST

ಅನೇಕರು ಮನೆಗಿಂತ ಹೊರಗಡೆ ಅಥವಾ ಕಚೇರಿಗಳಲ್ಲಿ ಹೆಚ್ಚಿನ ಸಮಯ ಕಳೆಯುವುದು ಸಾಮಾನ್ಯ. ಮನೆಯಲ್ಲಿರುವ ಸಮಯ ಆಹಾರ ಸೇವಿಸಲು, ಟಿ.ವಿ ನೋಡಲು ಅಥವಾ ನಿದ್ದೆಗೆ ಸೀಮಿತವಾಗಿರುತ್ತದೆ. ದಿನದ ಹೆಚ್ಚಿನ ಸಮಯ ಕಚೇರಿಯಲ್ಲೇ ಕಳೆಯುವುದರಿಂದ ಆರೋಗ್ಯದ ಮೇಲೆ ಹೆಚ್ಚಿನ ಗಮನ ನೀಡಲು ಸಾಧ್ಯವಾಗುವುದಿಲ್ಲ. ಹೀಗಾಗಿ ಕೆಲಸಕ್ಕೆ ತಕ್ಕಂತೆ ಡಯೆಟ್‌ ಯೋಜನೆ ಇದ್ದರೆ ಯಾವುದೇ ಸಮಸ್ಯೆಗಳು ಎದುರಾಗದು. ಅದಕ್ಕಾಗಿ ಇಲ್ಲಿದೆ ಕೆಲವೊಂದು ಸಲಹೆ.

-   ಕೆಲಸಕ್ಕೆ ಹೋಗುವವರಿಗೆ ಆಹಾರ ಸೇವಿಸುವ ಮತ್ತು ಮಲಗುವ ಸಮಯವನ್ನು ನಿರ್ವಹಿಸಲು ಕಷ್ಟವಾಗುತ್ತದೆ. ಆದರೆ ಇದಕ್ಕಾಗಿ ದಿನದ ವೇಳಾಪಟ್ಟಿಯನ್ನು ತಯಾರಿಸಿಕೊಂಡರೆ ಯಾವುದೇ ಸಮಸ್ಯೆ ಎದುರಾಗುವುದಿಲ್ಲ. ಇದು ದಿನ ಆರಂಭದ ಮಾನಸಿಕ ಸ್ಪಷ್ಟತೆಯ ಮಟ್ಟವನ್ನು ಹೊಂದಲು ಸಹಕರಿಸುತ್ತದೆ. ಕೆಲಸಕ್ಕೆ ಹೋಗುವವರು ಡಯೆಟ್‌ಗೆ ಹೆಚ್ಚಿನ ಸಮಯ ಮೀಸಲಿಡಲು ಸಾಧ್ಯವಾಗದೇ ಇದ್ದರೆ ಮುಂಜಾನೆ ಬೇಗ ಎದ್ದು ಕನಿಷ್ಠ 15- 21 ನಿಮಿಷಗಳ ಕಾಲ ವ್ಯಾಯಾಮ, ಸಂಜೆ ವಾಕಿಂಗ್‌ ಮಾಡುವ ಹವ್ಯಾಸ ಬೆಳೆಸಿಕೊಳ್ಳಿ. ಇದು ದೇಹವನ್ನು ಸಮತೋಲನದಲ್ಲಿರಿಸಿಕೊಳ್ಳಲು ಸಹರಿಸುತ್ತದೆ.

-   ಆರೋಗ್ಯ ಉತ್ತಮವಾಗಿರಬೇಕು ಎಂದರೆ ಬೆಳಗ್ಗೆ ತಿನ್ನುವ ಆಹಾರ ಎಂದಿಗೂ ತಪ್ಪಿಸಬಾರದು. ಕೆಲಸಕ್ಕೆ ಹೋಗುವ ಒತ್ತಡದಲ್ಲಿ ಯಾವುದೇ ಕಾರಣಕ್ಕೂ ಉಪಹಾರ ಸೇವಿಸದೇ ತೆರಳಬಾರದು. ಒಂದು ವೇಳೆ ಬೆಳಗ್ಗಿನ ಆಹಾರವನ್ನು ತಪ್ಪಿಸಿದರೆ ದೀರ್ಘ‌ಕಾಲದ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆೆ. ದೇಹದಲ್ಲಿ ರೋಗ ನಿರೋಧಕ ಶಕ್ತಿ ಕುಂಠಿತವಾಗುತ್ತದೆ ಮತ್ತು ಗ್ಯಾಸ್ಟ್ರಿಕ್‌ ಸಮಸ್ಯೆ ಕಾರಣವಾಗುತ್ತದೆ. ಡಯೆಟ್‌ ಪಾಲಿಸುವವರು ಬೆಳಗ್ಗಿನ ಜಾವ ಲೈಟ್‌ ಫ‌ುಡ್‌ಗಳಿಗೆ ಆಧ್ಯತೆ ನೀಡಿ. ತಾಜಾ ಹಣ್ಣಿನ ರಸ, ಹೆಚ್ಚಿನ ಪೋಷಕಾಂಶಗಳಿರುವ ಆಹಾರ ಬೆಳಗ್ಗಿನ ಉಪಹಾರದಲ್ಲಿರಲಿ.

-   ಕಚೇರಿಯ ಕೆಲಸದ ನಡುವೆ ಆರೋಗ್ಯಕ್ಕೆ ಪೂರಕವಾದ ಆಹಾರಗಳನ್ನು ಸೇವಿಸುವ ಅಭ್ಯಾಸ ಬೆಳೆಸಿಕೊಳ್ಳಬೇಕು. ತಾಜಾ ಹಣ್ಣುಗಳು, ಬೀಜಗಳು ಮತ್ತು ಗಿಡಮೂಲಿಕೆಗಳ ಚಹಾ ಸೇವಿಸಬೇಕು. ಇವು ನಿರ್ಜಲೀಕರಣ (ಡಿಹೈಡ್ರೇಷನ್‌) ತಡೆಯಲು ಮತ್ತು ಕೆಲಸದ ವೇಳೆ ಉತ್ಸಾಹ ತುಂಬಲ ಸಹಕಾರಿ ಮತ್ತು ಮನಸ್ಸನ್ನು ಎಲರ್ಟ್‌ ಆಗಿರಿಸಲು ನೆರವಾಗುತ್ತದೆ. ಇದರೊಂದಿಗೆ ದಿನನಿತ್ಯ ಹೊರಗಡೆ ಊಟಮಾಡುವ ಬದಲು ಮನೆಯಲ್ಲೇ ತಯಾರಿಸಿದ ಆಹಾರಗಳನ್ನು ತೆಗೆದುಕೊಂಡು ಹೋಗುವ ಅಭ್ಯಾಸ ಉತ್ತಮ. ಹೊಟೇಲ್‌ ಆಹಾರಗಳು ಸೋಡಾ ಮುಂತಾದ ಆರೋಗ್ಯಕ್ಕೆ ಮಾರಕವಾದ ಅಂಶಗಳಿಂದ ಕೂಡಿರುತ್ತವೆ. ಇವು ಆರೋಗ್ಯಕ್ಕೆ ಉತ್ತಮವಲ್ಲ.

-   ಕಾರ್ಯಕ್ಷೇತ್ರದೊಳಗೆ ಒತ್ತಡ ಒಂದು ಅವಿಭಾಜ್ಯ ಅಂಗವಾಗಿ ಮಾರ್ಪಟ್ಟಿದೆ. ಆದರೆ ಈ ಒತ್ತಡದಿಂದ ಹೊರಬರಲು ಸಾಧ್ಯವಿದೆ. ಒತ್ತಡವಾಯಿತು ಎಂದಾಗ ಕಣ್ಣು ಮುಚ್ಚಿ 5- 7 ನಿಮಿಷ ಉಸಿರಾಟದ ಮೇಲೆ ಗಮನಹರಿಸಿ. ಇದನ್ನು ದಿನದಲ್ಲಿ 3 ಬಾರಿ ಮಾಡಿದರೇ ಉತ್ತಮ. ಒತ್ತಡ ಹೆಚ್ಚಾದಲ್ಲಿ ದೇಹದ ಆರೋಗ್ಯದಲ್ಲಿ ಏರುಪೇರಾಗುವ
ಸಾಧ್ಯತೆಗಳಿವೆ.

– ಕಚೇರಿಯಲ್ಲಿ ಒಂದೇ ಕಡೆ ಕುಳಿತು ಕೆಲಸ ಮಾಡುವುದರಿಂದ ದೇಹದಲ್ಲಿ ಕೊಬ್ಬಿನಾಂಶ ಹೆಚ್ಚು ಶೇಖರಣೆಯಾಗುತ್ತದೆ. ಹೀಗಾಗಿ ಕುಳಿತಲ್ಲೇ ಇರುವ ಬದಲು ಕೆಲಸದ ನಡುವೆ ಅತ್ತಿತ್ತ ಓಡಾಡಿ. ಇದು ದೇಹವನ್ನು ಆ್ಯಕ್ಟಿವ್‌ ಆಗಿರಿಸುತ್ತದೆ. ಮಧ್ಯಾಹ್ನದ ಊಟವಾದ ಅನಂತರ ನೇರವಾಗಿ ಕೆಲಸ ಆರಂಭಿಸದೇ ಕಚೇರಿಯ ಹೊರಗಡೆ ಅತ್ತ ಇತ್ತ ಓಡಾಡಿ. ಇದು ಜೀರ್ಣಕ್ರಿಯೆಯನ್ನು ಸಕ್ರಿಯಗೊಳಿಸುತ್ತದೆ.

-   ರಮ್ಯಾ ಕೆದಿಲಾಯ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಒಬ್ಬ ವ್ಯಕ್ತಿ ದೈಹಿಕವಾಗಿ ಆರೋಗ್ಯವಂತನಾಗಿದ್ದರೆ ಮಾನಸಿಕ ಅನಾರೋಗ್ಯದಿಂದ ಬಳಲುತ್ತಿರುವ ಸಾಧ್ಯತೆಗಳಿಲ್ಲ ಎಂದು ಹೇಳುವಂತಿಲ್ಲ.ಕೌಂಟುಬಿಕ, ಸಾಮಾಜಿಕ ಮತ್ತು...

  • ಪ್ರತಿಯೊಬ್ಬರಿಗೂ ತಾನು ಚೆನ್ನಾಗಿ ಕಾಣಬೇಕೆಂಬ ಆಸೆ ಇದ್ದೇ ಇದೆ, ಈಗಿನ ವಾತಾವರಣಕ್ಕೆ ಹೊಂದಿಕೊಳ್ಳುವಂತಹ ಮನೆ ಮದ್ದು ಮುಖಕ್ಕೆ ತುಂಬಾ ಉತ್ತಮ. ಮುಖದಲ್ಲಿನ...

  • ಇತ್ತೀಚಿನ ಫಾಸ್ಟ್‌ ಫ‌ುಡ್‌ ಕಾಲಘಟ್ಟದಲ್ಲಿ ದೇಹಕ್ಕೆ ಬೇಕಾದ ಪೌಷ್ಟಿಕಾಂಶಯುಕ್ತ ಆಹಾರ ಸೇವನೆ ತೀರ ವಿರಳವೆಂಬಂತಾಗಿದೆ. ಮುಂದೆ ಬರಬಹುದಾದ ಸಮಸ್ಯೆಗಳಿಗೆ ಆಹ್ವಾನ...

  • ವ್ಯಾಯಾಮದ ಕಸರತ್ತಿಗೆ ಫೋಮ್‌ ರೋಲರ್‌ ಸಾಧನ ಹೆಚ್ಚು ಪ್ರಸಿದ್ಧವಾಗಿದೆ. ಮೂರರಿಂದ ನಾಲ್ಕು ಇಂಚುಗಳ ಅಗಲ, 36 ಇಂಚು ಉದ್ದದ ದಿಂಬಿನಂತೆ ಕಾಣುವ ಇದು ಸ್ನಾಯುಗಳಿಗೆ...

  • ಹಳ್ಳಿಮನೆಗಳಲ್ಲಿ ಮನೆ ಮದ್ದಾಗಿ ಕಾಮ ಕಸ್ತೂರಿಯನ್ನು ಸಾಮಾನ್ಯವಾಗಿ ಉಪಯೋಗಿಸುತ್ತಾರೆ. ಆದರೆ ಅನೇಕ ಮಂದಿಗೆ ಇದರಲ್ಲಿರುವ ಆರೋಗ್ಯಕರ ಅಂಶಗಳು ತಿಳಿದಿಲ್ಲ. ಹೇರಳವಾದ...

ಹೊಸ ಸೇರ್ಪಡೆ