ವೈಕಲ್ಯವುಳ್ಳ ಮಹಿಳೆಯರ ಸಶಕ್ತೀಕರಣ


Team Udayavani, Mar 14, 2021, 6:50 PM IST

ವೈಕಲ್ಯವುಳ್ಳ ಮಹಿಳೆಯರ ಸಶಕ್ತೀಕರಣ

ಕಳೆದ ಕೆಲವು ದಶಕಗಳಲ್ಲಿ ಒಂದು ಸಮುದಾಯವಾಗಿ ನಾವು ಮಹಿಳೆಯರನ್ನು ನೋಡುವ ಕಾಣುವ ದೃಷ್ಟಿಕೋನವು ಮಹತ್ತರ ಬದಲಾವಣೆಗೆ ಒಳಗಾಗಿದೆ. ಜಗತ್ತಿನೆಲ್ಲೆಡೆ ಮಹಿಳೆಯರ ಪಾತ್ರವೂ ಭಾರೀ ಬದಲಾವಣೆಗೆ ಒಳಗಾಗಿದೆ. ಒಂದು ಕಾಲದಲ್ಲಿ ಗೃಹಿಣಿ ಎಂಬಷ್ಟಕ್ಕೆ ಸೀಮಿತವಾಗಿದ್ದ ಸ್ತ್ರೀಯರು ಇಂದು ಔದ್ಯೋಗಿಕ ಕ್ಷೇತ್ರಕ್ಕೆ ಕಾಲಿರಿಸಿದ್ದಾರೆ ಮತ್ತು ಹಲವು ಕುಟುಂಬಗಳಲ್ಲಿ ಮನೆಯ ಏಕಮಾತ್ರ ಆದಾಯಮೂಲವೂ ಆಗಿದ್ದಾಳೆ. ಇದು ಹೊರಗಿನಿಂದ ಬಹಳ ಆಕರ್ಷಕವಾಗಿ, ಮೋಹಕವಾಗಿ ಕಾಣಿಸಬಹುದಾದರೂ ಮಹಿಳೆ ಮನೆಯೊಳಗೆ ಮತ್ತು ಉದ್ಯೋಗದ ಸ್ಥಳದಲ್ಲಿ ಹಲವು ಬಗೆಯ ನಿಶ್ಶಬ್ದ ಹೋರಾಟಗಳನ್ನು ನಡೆಸಬೇಕಾಗುತ್ತದೆ ಎನ್ನುವುದು ವಾಸ್ತವ. ಲಿಂಗ ಆಧಾರಿತ ವೇತನ ತಾರತಮ್ಯ, ಸಹೋದ್ಯೋಗಿಗಳಿಂದ ಶೋಷಣೆ, ಯೋಚನೆ-ಯೋಜನೆಗಳತ್ತ ನಿರ್ಲಕ್ಷ್ಯ ಮತ್ತು ಕಡೆಗಣನೆ ಉದ್ಯೋಗ ಸ್ಥಳದಲ್ಲಿ ಮಹಿಳೆಯರು ದಿನನಿತ್ಯವೂ ಎದುರಿಸುವ ಸವಾಲುಗಳಲ್ಲಿ ಕೆಲವು. ಭಾರತದಲ್ಲಿ ಮಹಿಳೆಯರು ಮನೆ ಮತ್ತು ಉದ್ಯೋಗ ಸ್ಥಳ- ಎರಡೂ ಕಡೆಗಳಲ್ಲಿಯೂ ತಾರತಮ್ಯವನ್ನು ಅನುಭವಿಸುತ್ತಿದ್ದಾರೆ, ಇಲ್ಲೆಲ್ಲ ಅವರನ್ನು ಕೀಳಾಗಿ ಕಾಣಲಾಗುತ್ತದೆ ಮತ್ತು ಲಿಂಗತ್ವ ಆಧಾರಿತ ಮತ್ತು ಕಠಿನ ನಿಯಮಗಳ ಜತೆಗೆ ರಾಜಿ ಮಾಡಿಕೊಂಡಿರುವಂತೆ ಮಾಡಲಾಗುತ್ತದೆ.

ನಮ್ಮ ಸಮಾಜದಲ್ಲಿ ಮಹಿಳೆಯರು ಈಗಾಗಲೇ ಇಷ್ಟೆಲ್ಲ ಸವಾಲುಗಳನ್ನು ಎದುರಿಸಿ ಬದುಕಬೇಕಾಗುತ್ತದೆ ಎಂದಾದರೆ, ವಿಕಲಚೇತನ ಅಥವಾ ಅಂಗವಿಕಲ ಮಹಿಳೆಯರ ಸ್ಥಿತಿ ಹೇಗಿರಬಹುದು ಎಂಬುದನ್ನು ಕಲ್ಪಿಸಿಕೊಳ್ಳುವುದು ಕಷ್ಟವೇನಲ್ಲ. ಅಂಗವಿಕಲ ಯುವತಿಯರನ್ನು ಅವರ ಸಮಪ್ರಾಯದವರು ಮತ್ತು ಹಿರಿಯರಾದಿಯಾಗಿ ಎಲ್ಲರೂ ಕಡೆಗಣಿಸುತ್ತಾರೆ ಮತ್ತು ದೂಷಿಸುತ್ತಾರೆ. ಅಂಗವೈಕಲ್ಯವನ್ನು ಸುತ್ತುವರಿದಿರುವ ಮೂಢನಂಬಿಕೆಗಳಿಂದಾಗಿ ಉತ್ತಮ ಗೆಳೆತನ ಮತ್ತು ಸಂಬಂಧಗಳನ್ನು ಸ್ಥಾಪಿಸಿಕೊಳ್ಳಲು ಅವರು ಕಷ್ಟಪಡಬೇಕಾಗುತ್ತದೆ. ಇಷ್ಟು ಸಾಲದೆಂಬಂತೆ, ಎಲ್ಲ ಕುಟುಂಬಗಳೂ ಅವರಿಗೆ ಉತ್ತಮ ಶಿಕ್ಷಣ ಒದಗಿಸಿ ಬೆಂಬಲಿಸುವಷ್ಟು ಸಹೃದಯವಾಗಿರುವುದಿಲ್ಲ. ಒಳ್ಳೆಯ ಶಿಕ್ಷಣ ಪಡೆಯುವಷ್ಟು ಅದೃಷ್ಟವಂತರಾಗಿದ್ದರೂ ಉದ್ಯೋಗ ಗಳಿಸುವುದು ಅವರಿಗೆ ಮತ್ತಷ್ಟು ದೊಡ್ಡ ಸವಾಲಾಗಿರುತ್ತದೆ. ಭಾರತದಲ್ಲಂತೂ ಅಂಗವಿಕಲ ಮಹಿಳೆಯರಿಗೆ ಪೂರಕವಾದ ವ್ಯವಸ್ಥೆಗಳನ್ನು ಹೊಂದಿರುವ ಉದ್ಯೋಗ ಸ್ಥಳವನ್ನು ಹುಡುಕುವುದು ಕಷ್ಟಸಾಧ್ಯವೇ ಸರಿ. ಅಂಗವೈಕಲ್ಯ ಹೊಂದಿರುವ ವ್ಯಕ್ತಿಗಳ ಹಕ್ಕುಗಳು, 2016 ಪ್ರಕಾರ, “ಕನಿಷ್ಠ ಶೇ. 40ರಷ್ಟು ಅಂಗವೈಕಲ್ಯ ಹೊಂದಿರುವ ವ್ಯಕ್ತಿಗಳು ಕೆಲವು ನಿರ್ದಿಷ್ಟ ಪ್ರಯೋಜನಗಳಿಗೆ ಅರ್ಹರಾಗಿರುತ್ತಾರೆ. ಅಂತಹ ಪ್ರಯೋಜನಗಳಲ್ಲಿ ಒಂದು, ಭಾರತೀಯ ಸರಕಾರಿ ಸಂಸ್ಥಾಪನೆಗಳ ನಿರ್ದಿಷ್ಟ ವರ್ಗಗಳಲ್ಲಿ ಒಟ್ಟು ಶೇ. 4ರಷ್ಟು  (ಇತರ ವರ್ಗಗಳಲ್ಲಿ ಶೇ. 1) ಉದ್ಯೋಗಗಳನ್ನು ಅಂಗವಿಕಲರಿಗಾಗಿ ಮೀಸಲಿಡುವುದು’.

ಇಂತಹ ಒಂದು ಕಾನೂನು ಇದ್ದರೂ ಅಂಗವಿಕಲರಿಗೆ ಉದ್ಯೋಗಗಳನ್ನು ಮತ್ತು ಇತರ ಜೀವನೋಪಾಯ ಅವಕಾಶಗಳನ್ನು ನಿರಾಕರಿಸಲಾಗುತ್ತದೆ; ಅವರು ಅಸಮರ್ಥರು ಎಂಬ ಪೂರ್ವಾಗ್ರಹವೇ ಇದಕ್ಕೆ ಕಾರಣವಾಗಿದೆ. ವಯಸ್ಸಿಗೆ ಬಂದ ಕೂಡಲೇ ಅವರನ್ನು ಒತ್ತಾಯಪೂರ್ವಕವಾಗಿ ಉದ್ಯೋಗದಿಂದ ಬಿಡಿಸಲಾಗುತ್ತದೆ ಮತ್ತು ಬಲವಂತವಾಗಿ ಮದುವೆ ಮಾಡಿಕೊಡಲಾಗುತ್ತದೆ. ಭಾರತದಲ್ಲಿ ಅಂಗವೈಕಲ್ಯದ ಬಗ್ಗೆ ಇರುವ ಸಾಮಾನ್ಯ ಕಲ್ಪನೆ ಎಂದರೆ, “ಅಂಗವೈಕಲ್ಯವು ಒಂದು ವೈಯಕ್ತಿಕ ತಪ್ಪು; ನೈತಿಕತೆಯ ದೃಷ್ಟಿಯಿಂದ ಅದು ಪೂರ್ವಜನ್ಮದಲ್ಲಿ ಮಾಡಿದ್ದ ಪಾಪಕರ್ಮಗಳ ಫ‌ಲ, ಅಂಗವೈಕಲ್ಯವು ಅನುಭವಿಸತಕ್ಕದ್ದು ಮತ್ತು ಶಿಕ್ಷಾತ್ಮಕವವಾದುದು’. ಅಂಗವಿಕಲ ಮಹಿಳೆಯರ ಬದುಕಿಡೀ ಇಂತಹ ದೂಷಣೆ, ನಿರ್ಲಕ್ಷ್ಯ, ಹೋರಾಟಗಳಿಂದ ಕೂಡಿದ್ದಾಗಿರುತ್ತದೆ. ಅಂಗವೈಕಲ್ಯದಿಂದ ಕೂಡಿರುವವರು ಅಸಮರ್ಥರಾಗಿರುತ್ತಾರೆ ಎಂಬ ಪೂರ್ವಾಗ್ರಹದಿಂದ ಅವರನ್ನು ಸತತವಾಗಿ ಕಡೆಗಣಿಸಲಾಗುತ್ತದೆ.

ಅಂಗವಿಕಲ ಮಹಿಳೆಯರು ಉದ್ಯೋಗದ ಹಕ್ಕುಗಳು ಮತ್ತು ಬೆಂಬಲದ ವಿಚಾರದಲ್ಲಿ ಭಾರೀ ಸವಾಲುಗಳನ್ನು ಎದುರಿಸುತ್ತಿದ್ದಾರೆ ಎಂದು ದಕ್ಷಿಣ ಭಾರತದ ಜನಸಾಮಾನ್ಯರಲ್ಲಿ ಶೇ. 53.5ರಷ್ಟು ಮಂದಿ ಅಭಿಪ್ರಾಯಪಟ್ಟಿರುವುದು ಮಾಹೆಯ ಆಕ್ಯುಪೇಶನಲ್‌ ಥೆರಪಿ ವಿಭಾಗದವರು 2020ರ ಸಪ್ಟೆಂಬರ್‌ 23ರಂದು ನಡೆಸಿದ ಸಮೀಕ್ಷೆಯಿಂದ ತಿಳಿದುಬಂದಿದೆ. ಔದ್ಯೋಗಿಕ ಅವಕಾಶಗಳ ನಿರಾಕರಣೆಯ ಜತೆಗೆ, ಅಂಗವೈಕಲ್ಯದೊಂದಿಗೆ ಬದುಕುತ್ತಿರುವ ಮಹಿಳೆಯರಲ್ಲಿ ಬಹುತೇಕ ಮಂದಿ ಪತ್ನಿ ಅಥವಾ ತಾಯಿಯಂತಹ ಸಾಮಾಜಿಕ ಪಾತ್ರ ತಳೆಯುವ ಅವಕಾಶ ವಂಚಿತರಾಗುತ್ತಿದ್ದಾರೆ. ಇವರಲ್ಲಿ ಕೆಲವು ಮಂದಿ ಸ್ತ್ರೀಯರು ತಮಗೆ ಎದುರಾದ ಕಡೆಗಣನೆ, ಪಕ್ಷಪಾತಗಳನ್ನು ಸಹಿಸಿಕೊಂಡು ಸುಮ್ಮನಿರುವುದಿಲ್ಲ. ಅಂಥವರು ಇಂತಹ ಋಣಾತ್ಮಕ ಪೂರ್ವಾಗ್ರಹಗಳ ವಿರುದ್ಧ ಸೆಟೆದುನಿಂತು, ದೈಹಿಕವಾದ ಮತ್ತು ಸಾಮಾಜಿಕವಾದ ಮಿತಿಗಳನ್ನು ಧನಾತ್ಮಕ ದೃಷ್ಟಿಕೋನದ ಮೂಲಕ ಮೀರುವ ಪ್ರಯತ್ನವನ್ನು ನಡೆಸುತ್ತಾರೆ. ಈ ಹೋರಾಟವು ಅನೇಕ ಬಾರಿ ಅಂಥ ಮಹಿಳೆಯರ ವಿಭಿನ್ನತೆ ಮತ್ತು ವೈಯಕ್ತಿಕ ಹೆಮ್ಮೆಯ ವಿಜಯವನ್ನು ಆಚರಿಸುವ ಅವಕಾಶವನ್ನೂ ಹೊಂದಿರುವುದಿಲ್ಲ ಎಂಬುದು ನೋವಿನ ಸಂಗತಿ.

ಈ ಎಲ್ಲ ಸಮಸ್ಯೆಗಳನ್ನು, ವಿಚಾರಗಳನ್ನು ಬಗೆಹರಿಸುವಲ್ಲಿ ಆಕ್ಯುಪೇಶನಲ್‌ ಥೆರಪಿಸ್ಟ್‌ ಅವರ ಪಾತ್ರ ನಿರ್ಣಾಯಕವಾಗಿದೆ. ಆಕ್ಯುಪೇಶನಲ್‌ ಥೆರಪಿಸ್ಟ್‌ಗಳ ಕಾರ್ಯವೇ ಅರ್ಥವತ್ತಾದ ಉದ್ಯೋಗಗಳ ಮೂಲಕ ವ್ಯಕ್ತಿಗಳನ್ನು ಸಮಾಜದ ಜತೆಗೆ ಸಂಯೋಜನೆಗೊಳಿಸುವುದು. ಮನುಷ್ಯರಾಗಿ ಜನಿಸಿರುವುದರ ಪೂರ್ಣ ಅನುಭವವನ್ನು ಪಡೆಯುವುದಕ್ಕಾಗಿ ಜನರು ತಮ್ಮ ಕೌಶಲಗಳನ್ನು ಅರ್ಥವತ್ತಾದ ಕಾರ್ಯಚಟುವಟಿಕೆಗಳಾಗಿ ಪರಿವರ್ತಿಸುವುದಕ್ಕೆ ನೆರವಾಗುವ ಮೂಲಕ ಅವರ ಆರೋಗ್ಯ ಮತ್ತು ಕಲ್ಯಾಣಕ್ಕಾಗಿ ಶ್ರಮಿಸುವುದು ಆಕ್ಯುಪೇಶನಲ್‌ ಥೆರಪಿಸ್ಟ್‌ಗಳ ಕಾರ್ಯವಾಗಿದೆ. ಅಂಗವಿಕಲ ಮಹಿಳೆಯರು ಮತ್ತು ಯುವತಿಯರಂತಹ ಅಲ್ಪಸಂಖ್ಯಾಕರ ಸಮೂಹಗಳ ಸಮಸ್ಯೆಗಳು ಮತ್ತು ವಿಚಾರಗಳ ಬಗ್ಗೆ ಅರಿವನ್ನು ಮೂಡಿಸುವ ಮೂಲಕ ಮತ್ತು ಅವರು ಅನುಭವಿಸಬಹುದಾದ ಯಾವುದೇ ಮಾನಸಿಕ ಅಥವಾ ದೈಹಿಕ ಅಡೆತಡೆಗಳನ್ನು ಮೀರಲು ಸೃಜನಾತ್ಮಕವಾದ ಪರಿಹಾರ ಕ್ರಮಗಳನ್ನು ರೂಪಿಸುವ ಮೂಲಕ ಆಕ್ಯುಪೇಶನಲ್‌ ಥೆರಪಿಸ್ಟ್‌ಗಳು ನೆರವಾಗುತ್ತಾರೆ. ಔದ್ಯೋಗಿಕ ಸಮಾನತೆ ಮತ್ತು ನ್ಯಾಯ ಎಂಬ ತಣ್ತೀವನ್ನು ಆಕ್ಯುಪೇಶನಲ್‌ ಥೆರಪಿಸ್ಟ್‌ ಗಳು ವಿಶ್ವಾಸವಿರಿಸುತ್ತಾರೆ ಮತ್ತು ಎತ್ತಿ ಹಿಡಿಯುತ್ತಾರೆ; ಇದೇ ಕಾರಣದಿಂದ ಈ ಸವಾಲುಗಳನ್ನು ಉತ್ತರಿಸುವಲ್ಲಿ ಅವರ ಪಾತ್ರ ನಿರ್ಣಾಯಕವಾಗಿದೆ.

ತನ್ನ ಗುರಿಯನ್ನು ಮುಟ್ಟುವುದಕ್ಕಾಗಿ ಸಮಾನ ಅವಕಾಶಗಳು ಮತ್ತು ಜೀವನೋಪಾಯಗಳನ್ನು ಗಳಿಸುವ ಪ್ರತೀ ವ್ಯಕ್ತಿಯ ಹಕ್ಕನ್ನು ಔದ್ಯೋಗಿಕ ನ್ಯಾಯ ಎನ್ನಲಾಗುತ್ತದೆ. ಔದ್ಯೋಗಿಕ ಅಸಮಾನತೆ ಅಥವಾ ಅನ್ಯಾಯ ಇರುವಲ್ಲಿ ಅಥವಾ ಈ ಅವಕಾಶಗಳನ್ನು ನಿರಾಕರಿಸಲಾಗಿದ್ದರೆ ಅದನ್ನು ಕಡಿಮೆ ಮಾಡುವತ್ತ ಕೆಲಸ ಮಾಡುವ ಸಾಮಾಜಿಕ, ವೃತ್ತಿಪರ ಮತ್ತು ನೈತಿಕ ಹೊಣೆಗಾರಿಕೆ ಆಕ್ಯುಪೇಶನಲ್‌ ಥೆರಪಿಸ್ಟ್‌ ಗಳಿಗೆ ಇರುತ್ತದೆ. ಅಂಗವಿಕಲ ಅಥವಾ ವಿಭಿನ್ನ ಸಾಮರ್ಥ್ಯ ಹೊಂದಿರುವ ಮಹಿಳೆಯರಿಗೆ ಸಹಾಯ ಮಾಡುವ ವಿಚಾರದಲ್ಲಿ ಆಕ್ಯುಪೇಶನಲ್‌ ಥೆರಪಿಸ್ಟ್‌ಗಳಿಗೆ ಇರುವ ಕೆಲವು ಪಾತ್ರ ಅಥವಾ ಹೊಣೆಗಾರಿಕೆಗಳು ಎಂದರೆ: ಔದ್ಯೋಗಿಕ ನೆರವು ಕಾರ್ಯತಂತ್ರ ಗಳನ್ನು ಖಚಿತಪಡಿಸುವುದು, ಸಹಾಯಕ ತಂತ್ರಜ್ಞಾನವು ಸಮಗ್ರವಾಗಿ ಒದಗು ವಂತಹ ಸೃಜನಶೀಲ ದಾರಿಗಳನ್ನು ರೂಪಿಸುವುದು, ಮನೆ ಅಥವಾ ಕಚೇರಿ ಸ್ಥಳದಲ್ಲಿ ಪರಿವರ್ತನೆಗಳು ಮತ್ತು ಅಂಗವೈಕಲ್ಯದೊಂದಿಗೆ ಕೆಲಸ ಮಾಡುವ ಹಕ್ಕಿನ ವೃತ್ತಿಪರ ಪ್ರತಿಪಾದನೆ. ಜನಸಾಮಾನ್ಯ ರಲ್ಲಿ ಅರಿವನ್ನು ಮೂಡಿಸುವ ಮೂಲಕ ಹಾಗೂ ಮನೆಯಲ್ಲಿ ದೌರ್ಜನ್ಯ ಮತ್ತು ಲಿಂಗ ಆಧಾರಿತ ತಾರತಮ್ಯದಂತಹ ಅನಾಚಾರಗಳ  ವಿರುದ್ಧ ತಿಳಿವಳಿಕೆಯನ್ನು ಮೂಡಿಸುವ ಮೂಲಕವೂ ಆಕ್ಯುಪೇಶನಲ್‌ ಥೆರಪಿಸ್ಟ್‌ ಗಳು ಸಾಮಾಜಿಕ ಪರಿವರ್ತನೆಯನ್ನು ತರಬಹುದಾಗಿದೆ.

ಅಂಗವೈಕಲ್ಯ ಹೊಂದಿರುವ ಮಹಿಳೆಯರಂತಹ ದೌರ್ಜನ್ಯಕ್ಕೆ ಒಳಗಾದ ಗುಂಪುಗಳ ಸದಸ್ಯರು ತಮ್ಮ ಕಾಲ ಮೇಲೆ ನಿಲ್ಲುವುದು ಮತ್ತು ಅಸಮಾನತೆಯ ವಿರುದ್ಧ ಧ್ವನಿಯೆತ್ತುವುದಕ್ಕೆ ಸಾಮರ್ಥ್ಯ ನೀಡುವಂತಹ, ವರ್ತನಾತ್ಮಕ ಚಿಕಿತ್ಸೆ (ಬಿಹೇವಿಯರಲ್‌ ಥೆರಪಿ)ಯ ಒಂದು ವಿಧವಾಗಿರುವ ಸಕಾರಾತ್ಮಕ ತರಬೇತಿ (ಅಸರ್ಟಿವ್‌ ಥೆರಪಿ)ಯನ್ನು ಆಕ್ಯುಪೇಶನಲ್‌ ಥೆರಪಿಸ್ಟ್‌ಗಳು ಒದಗಿಸುತ್ತಾರೆ. ಅನ್ಯಾಯ ಮತ್ತು ಅಸಮಾನತೆಯನ್ನು ಎದುರಿಸಿರಬಹುದಾದ ಇಂತಹ ಮಹಿಳೆಯರಿಗೆ ಶಿಕ್ಷಣ ಒದಗಿಸುವುದು ಹಾಗೂ ಸ್ವಸಂಪನ್ನರಾಗಿರುವುದು ಮತ್ತು ಆತ್ಮವಿಶ್ವಾಸ ಬೆಳೆಸಿಕೊಳ್ಳುವ ಕೌಶಲಗಳನ್ನು ಕಲಿಸಿಕೊಡುವ ಮೂಲಕ ಭಾವನಾತ್ಮಕ ಬೆಂಬಲ ನೀಡಿ ಸ್ವತಂತ್ರವಾಗಿ ಬದುಕಲು ಹಾಗೂ ಸಾಮಾಜಿಕ ರೀತಿನೀತಿಗಳಿಂದಾಗಿ ಕುಗ್ಗದೆ ಇರಲು ಅಸರ್ಟಿವ್‌ ಥೆರಪಿಯು ಕಲಿಸಿಕೊಡುತ್ತದೆ. ಗ್ರಾಹಕ ಕೇಂದ್ರಿತ ವಿಧಾನವನ್ನು ಅನುಸರಿಸುವ ಮೂಲಕ ವಿಭಿನ್ನ ಗುಂಪುಗಳ ನಿರ್ದಿಷ್ಟ ವ್ಯಕ್ತಿಗಳ ಅಗತ್ಯಗಳನ್ನು ಆಕ್ಯುಪೇಶನಲ್‌ ಥೆರಪಿಸ್ಟ್‌ಗಳು ಗಮನಿಸುತ್ತಾರೆ ಮತ್ತು ಆಯಾ ವ್ಯಕ್ತಿಗಳ ನಿರ್ದಿಷ್ಟ ವೃತ್ತಿಗೆ ಸಂಬಂಧಿಸಿದಂತೆ ನಿರ್ದಿಷ್ಟ ಪರಿಹಾರ ವಿಧಾನಗಳನ್ನು ರೂಪಿಸಿಕೊಡುತ್ತಾರೆ.

 

ಮೆಹ್ದಿಯಾ ಮತ್ತು ತ್ವಿಶಾ, ವಿದ್ಯಾರ್ಥಿನಿಯರು

ಪ್ರೇರಣಾ ಲಾಲ್‌,

ಅಸಿಸ್ಟೆಂಟ್‌ ಪ್ರೊಫೆಸರ್‌,

ಆಕ್ಯುಪೇಶನಲ್‌ ಥೆರಪಿ ವಿಭಾಗ,

ಎಂಸಿಎಚ್‌ಪಿ, ಮಾಹೆ, ಮಣಿಪಾಲ

ಟಾಪ್ ನ್ಯೂಸ್

ನೈಋತ್ಯ ಶಿಕ್ಷಕರ ಕ್ಷೇತ್ರ: ಎಸ್‌. ಆರ್‌. ಹರೀಶ್‌ ಆಚಾರ್ಯ ಸ್ಪರ್ಧೆ

ನೈಋತ್ಯ ಶಿಕ್ಷಕರ ಕ್ಷೇತ್ರ: ಎಸ್‌. ಆರ್‌. ಹರೀಶ್‌ ಆಚಾರ್ಯ ಸ್ಪರ್ಧೆ

LSGvsDC; ಪೂರನ್-ಅರ್ಷದ್ ವ್ಯರ್ಥ ಹೋರಾಟ; ಡೆಲ್ಲಿ ಸಮಾಧಾನದ ಗೆಲುವು: ಆರ್ ಸಿಬಿ ಹಾದಿ ಸಲೀಸು

LSGvsDC; ಪೂರನ್-ಅರ್ಷದ್ ವ್ಯರ್ಥ ಹೋರಾಟ; ಡೆಲ್ಲಿ ಸಮಾಧಾನದ ಗೆಲುವು: ಆರ್ ಸಿಬಿ ಹಾದಿ ಸಲೀಸು

ಮುಂದಿನ 5 ವರ್ಷಗಳಲ್ಲಿ ಅಭಿವೃದ್ಧಿಯ ನೈಜ ಸಿನೆಮಾ: ಡಾ| ಧನಂಜಯ ಸರ್ಜಿ

ಮುಂದಿನ 5 ವರ್ಷಗಳಲ್ಲಿ ಅಭಿವೃದ್ಧಿಯ ನೈಜ ಸಿನೆಮಾ: ಡಾ| ಧನಂಜಯ ಸರ್ಜಿ

Wild Elephant ಚಾರ್ಮಾಡಿಯಲ್ಲಿ ನಿತ್ಯ ಕಾಡಾನೆ ದರ್ಶನ!

Wild Elephant ಚಾರ್ಮಾಡಿಯಲ್ಲಿ ನಿತ್ಯ ಕಾಡಾನೆ ದರ್ಶನ!

Bantwal ಲಾರಿ ಹರಿದು ಬೈಕ್‌ ಸವಾರ ಸಾವು; ಸಹಸವಾರ ಗಂಭೀರ

Bantwal ಲಾರಿ ಹರಿದು ಬೈಕ್‌ ಸವಾರ ಸಾವು; ಸಹಸವಾರ ಗಂಭೀರ

Padubidri ನೀರು ಪಾಲಾಗಿದ್ದ ಅಭಿಲಾಷ್‌ ಮೃತದೇಹ ಪತ್ತೆ

Padubidri ನೀರು ಪಾಲಾಗಿದ್ದ ಅಭಿಲಾಷ್‌ ಮೃತದೇಹ ಪತ್ತೆ

Belthangady ಗೇರುಕಟ್ಟೆ ಸಮೀಪ ರಸ್ತೆ ಬದಿ ದಿಬ್ಬಕ್ಕೆ ಕಾರು ಢಿಕ್ಕಿ

Belthangady ಗೇರುಕಟ್ಟೆ ಸಮೀಪ ರಸ್ತೆ ಬದಿ ದಿಬ್ಬಕ್ಕೆ ಕಾರು ಢಿಕ್ಕಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7-hand-hygien-day

World Hand Hygiene Day: ಸ್ವಚ್ಛ ಕೈಗಳ ಶಕ್ತಿ: ಕೈಗಳ ನೈರ್ಮಲ್ಯಕ್ಕೆ ಮಾರ್ಗದರ್ಶಿ

6-health

Health: ಗೌಟ್‌: ಹಾಗೆಂದರೇನು? ಕಾರಣ ಏನು? ನಿಯಂತ್ರಣ ಹೇಗೆ?

5-asthama

Asthma ಕುರಿತಾದ ಶಿಕ್ಷಣದಿಂದ ಸಶಕ್ತೀಕರಣ; ಜಾಗತಿಕ ಅಸ್ತಮಾ ದಿನ 2024: ಮೇ 7

7-knee

Knee: ಮೊಣಗಂಟು ಸಮಸ್ಯೆ: ನಿಮ್ಮ ರೋಗಿಗಳಿಗೆ ಅರ್ಥ ಮಾಡಿಕೊಳ್ಳಲು ಸಹಾಯ ಮಾಡುವುದು ಹೇಗೆ?

6-Fibromyalgia

Fibromyalgia: ಫೈಬ್ರೊಮಯಾಲ್ಜಿಯಾ ಜತೆಗೆ ಜೀವನ

MUST WATCH

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

ಹೊಸ ಸೇರ್ಪಡೆ

ನೈಋತ್ಯ ಶಿಕ್ಷಕರ ಕ್ಷೇತ್ರ: ಎಸ್‌. ಆರ್‌. ಹರೀಶ್‌ ಆಚಾರ್ಯ ಸ್ಪರ್ಧೆ

ನೈಋತ್ಯ ಶಿಕ್ಷಕರ ಕ್ಷೇತ್ರ: ಎಸ್‌. ಆರ್‌. ಹರೀಶ್‌ ಆಚಾರ್ಯ ಸ್ಪರ್ಧೆ

LSGvsDC; ಪೂರನ್-ಅರ್ಷದ್ ವ್ಯರ್ಥ ಹೋರಾಟ; ಡೆಲ್ಲಿ ಸಮಾಧಾನದ ಗೆಲುವು: ಆರ್ ಸಿಬಿ ಹಾದಿ ಸಲೀಸು

LSGvsDC; ಪೂರನ್-ಅರ್ಷದ್ ವ್ಯರ್ಥ ಹೋರಾಟ; ಡೆಲ್ಲಿ ಸಮಾಧಾನದ ಗೆಲುವು: ಆರ್ ಸಿಬಿ ಹಾದಿ ಸಲೀಸು

ಮುಂದಿನ 5 ವರ್ಷಗಳಲ್ಲಿ ಅಭಿವೃದ್ಧಿಯ ನೈಜ ಸಿನೆಮಾ: ಡಾ| ಧನಂಜಯ ಸರ್ಜಿ

ಮುಂದಿನ 5 ವರ್ಷಗಳಲ್ಲಿ ಅಭಿವೃದ್ಧಿಯ ನೈಜ ಸಿನೆಮಾ: ಡಾ| ಧನಂಜಯ ಸರ್ಜಿ

Wild Elephant ಚಾರ್ಮಾಡಿಯಲ್ಲಿ ನಿತ್ಯ ಕಾಡಾನೆ ದರ್ಶನ!

Wild Elephant ಚಾರ್ಮಾಡಿಯಲ್ಲಿ ನಿತ್ಯ ಕಾಡಾನೆ ದರ್ಶನ!

Bantwal ಲಾರಿ ಹರಿದು ಬೈಕ್‌ ಸವಾರ ಸಾವು; ಸಹಸವಾರ ಗಂಭೀರ

Bantwal ಲಾರಿ ಹರಿದು ಬೈಕ್‌ ಸವಾರ ಸಾವು; ಸಹಸವಾರ ಗಂಭೀರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.