Udayavni Special

ನನ್ನ ದವಡೆಗಳು ಇಷ್ಟೊಂದು ನೋಯುವುದೇತಕ್ಕೆ? : ದವಡೆ ನೋವಿಗೆ ಸಾಮಾನ್ಯ ಕಾರಣಗಳು


Team Udayavani, Jan 24, 2021, 7:10 AM IST

ನನ್ನ ದವಡೆಗಳು ಇಷ್ಟೊಂದು ನೋಯುವುದೇತಕ್ಕೆ? : ದವಡೆ ನೋವಿಗೆ ಸಾಮಾನ್ಯ ಕಾರಣಗಳು

ದವಡೆ ನೋವುಗಳಲ್ಲಿ ಗಂಭೀರವಾಗಿ ಪರಿಗಣಿಸಬೇಕಾದ್ದು ಒಂದು ಬಗೆಯದು – ನಾಡಿಮಿಡಿದಂತೆಯೇ ನೋವು, ದವಡೆಗಳ ಪಾರ್ಶ್ವದಲ್ಲಿ ಎಲ್ಲಿ ಎಂದು ಗುರುತಿಸಲಾಗದ್ದು – ಇತರ ಕಾರಣಗಳ ಜತೆಗೆ ಇದು ಹೃದಯಾಘಾತದ ಮುನ್ಸೂಚನೆಯೂ ಆಗಿರಬಲ್ಲುದು. “ಹೃದಯಾಘಾತಕ್ಕೆ ಮುಂಚಿತವಾಗಿ ಕೆಲವೊಮ್ಮೆ ವ್ಯಕ್ತಿಯ ಎಡತೋಳಿನಲ್ಲಿ ಉಂಟಾಗುವಂತೆ ದವಡೆಯ ನೋವು ಕೂಡ ಸ್ಥಾನಪಲ್ಲಟಗೊಂಡು ಕಿವಿಯ ಕೆಳಭಾಗಕ್ಕೆ ಇಳಿಯಬಲ್ಲುದಾಗಿದೆ’. ಇದು ಪ್ರಾಣಾಂತಿಕವಾಗಿರುವುದರಿಂದ, ಹೃದಯಾಘಾತದ ಇತರ ಮುನ್ಸೂಚನೆಗಳಾದ ತಲೆ ಸುತ್ತುವಿಕೆ, ಉಸಿರುಗಟ್ಟುವಿಕೆ, ಚಳಿ ಹಿಡಿಯುವುದು ಅಥವಾ ಅಜೀರ್ಣದಂತಹ ಲಕ್ಷಣಗಳಿದ್ದರೆ ತತ್‌ಕ್ಷಣ ವೈದ್ಯಕೀಯ ಪರೀಕ್ಷೆಗೆ ಒಳಗಾಗಬೇಕು.

ದವಡೆಗಳು ದೇಹದ ಪ್ರಮುಖ ಅಂಗಗಳಲ್ಲಿ  ಸೇರಿವೆ. ಆದರೆ ಎಲ್ಲರೂ ಇವುಗಳನ್ನು ನಿರ್ಲಕ್ಷಿಸುತ್ತಾರೆ – ದವಡೆ ನೋವು ಆರಂಭವಾಗುವ ತನಕ! ದವಡೆ ನೋವು ಕಾಣಿಸಿಕೊಂಡು ಜಗಿಯುವಾಗ, ಮಾತನಾಡುವಾಗ ಅಥವಾ ಬಾಯಿ ಅಲ್ಲಾಡಿಸುವಾಗ ಶಾಕ್‌ನಂತಹ, ಚೂಪಾದ ಆಯುಧದಿಂದ ಇರಿದಂತಹ ಅನುಭವ ನೀಡುವಾಗ ಕಳವಳಪಡುತ್ತೇವೆ, ಅದು ದೈನಿಕ ಜೀವನವನ್ನು ಬಾಧಿಸುವಷ್ಟು ಪ್ರಬಲವೂ ಆಗಿರುತ್ತದೆ.

ದವಡೆ ನೋವಿನ ಇತರ ಸಂಭಾವ್ಯ ಕಾರಣಗಳು :

 

  • ಹಲ್ಲುಗಳಲ್ಲಿ ತೊಂದರೆ‌: ಹುಳುಕು ಹಲ್ಲು, ಸೋಂಕುಪೀಡಿತ ಹಲ್ಲು ಅಥವಾ ವಸಡಿನ ಕಾಯಿಲೆಗಳು ಹಲ್ಲುಗಳು, ವಸಡು ಅಥವಾ ದವಡೆಯಲ್ಲಿ ನೋವು ಉಂಟಾಗುವುದಕ್ಕೆ ಕಾರಣವಾಗಬಹುದು. ಬಿಸಿ ಅಥವಾ ತಣ್ಣನೆಯ ಆಹಾರ ಅಥವಾ ಪಾನೀಯಗಳನ್ನು ಸೇವಿಸುವಾಗ ಹೆಚ್ಚುವ ಜುಮುಜುಮು ನೋವು ಅನುಭವಕ್ಕೆ ಬರುತ್ತಿದ್ದರೆ ಆದಷ್ಟು ಬೇಗನೆ ದಂತವೈದ್ಯರನ್ನು ಕಾಣುವುದು ಕ್ಷೇಮಕರ. ಏಕೆಂದರೆ, ಕಾಲ ಕಳೆದಂತೆ ಸಂಕೀರ್ಣ ಸಮಸ್ಯೆಗಳು ಉಂಟಾಗಿ ಚಿಕಿತ್ಸೆ ಹೆಚ್ಚು ಕಷ್ಟಕರವೂ ದುಬಾರಿಯೂ ಆಗುವ ಸಾಧ್ಯತೆಗಳಿವೆ.
  • ಟಿಎಂಜೆ ಕಾಯಿಲೆಗಳು ಆಗಿರಬಹುದು: ಜಾಗತಿಕವಾಗಿ ಟಿಎಂಜೆ ಕಾಯಿಲೆಗಳು ಶೇ. 5ರಿಂದ 12 ಮಂದಿಯನ್ನು ಬಾಧಿಸುತ್ತವೆ. ಪುರುಷರಿಗೆ ಹೋಲಿಸಿದರೆ ಮಹಿಳೆಯರಲ್ಲಿ ಈ ತೊಂದರೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಎರಡು ಪಟ್ಟು ಹೆಚ್ಚಿದೆ. ಕುತೂಹಲಕಾರಿ ವಿಚಾರ ಎಂದರೆ, ಇತರ ದೀರ್ಘ‌ಕಾಲಿಕ ನೋವುಸಹಿತ ಅನಾರೋಗ್ಯಗಳಿಗಿಂತ ಟಿಎಂಜೆ ಸಮಸ್ಯೆಗಳು ಯುವಜನರಲ್ಲಿ ಉಂಟಾಗುವ ಸಾಧ್ಯತೆಗಳು ಹೆಚ್ಚಿರುತ್ತವೆ. ಟಿಎಂಜೆ ಅನಾರೋಗ್ಯವೇ ಹೌದಾಗಿದ್ದರೆ, ದವಡೆಯ ಚಲನೆಯನ್ನು ಸಾಧ್ಯವಾಗಿಸುವ ಸಂದುಗಳು ಅಥವಾ ಸ್ನಾಯುಗಳಲ್ಲಿ ತೊಂದರೆ ಉಂಟಾಗಿರುವ ಸಾಧ್ಯತೆ ಇರುತ್ತದೆ. ಜಗಿಯುವಾಗ, ಮಾತನಾಡುವಾಗ ಅಥವಾ ದವಡೆಯು ಚಲಿಸುವಾಗ ಕಿವಿಯ ಮುಂಭಾಗದಲ್ಲಿ ನೋವು ಅನುಭವಕ್ಕೆ ಬರುತ್ತದೆ. ಇದರ ಜತೆಗೆ ಕ್ಲಿಕ್‌ ಅಥವಾ ನಟಿಕೆ ತೆಗೆದಂತಹ ಸದ್ದು, ಕಿವಿ ನೋವು, ಹಣೆಯ ಭಾಗದಲ್ಲಿ ತಲೆನೋವು ಅಥವಾ ದವಡೆಯನ್ನು ಅಲ್ಲಾಡಿಸಲು ಕಷ್ಟ ಕಾಣಿಸಿಕೊಳ್ಳುತ್ತದೆ.

ವೈದ್ಯರ ಶಿಫಾರಸಿನಂತೆ ಮೃದು ಆಹಾರವಸ್ತುಗಳ ಸೇವನೆ, ಬಿಸಿ ಅಥವಾ ತಣ್ಣನೆಯ ಕಂಪ್ರಸ್‌ ನೀಡುವುದು, ನೋವಿನ ಪ್ರಚೋದಕಗಳನ್ನು ತಡೆಯುವುದು ಅಥವಾ ಉರಿಯೂತ ನಿವಾರಕ ಮತ್ತು ನೋವು ನಿವಾರಕಗಳನ್ನು ಸೇವಿಸುವಂತಹ ಸಾಂಪ್ರದಾಯಿಕ ಚಿಕಿತ್ಸೆಗಳ ಮೂಲಕ ಟಿಎಂಜೆ ನೋವನ್ನು ಪರಿಹರಿಸಬಹುದಾಗಿದೆ.

ಈ ಸಾಂಪ್ರದಾಯಿಕ ಚಿಕಿತ್ಸೆಯಿಂದ ನೋವು ನಿವಾರಣೆ ಆಗದೆ ಇದ್ದಲ್ಲಿ ಶಸ್ತ್ರಚಿಕಿತ್ಸೆಯಂತಹ ಮುಂದುವರಿದ ಚಿಕಿತ್ಸೆ ಅಗತ್ಯವಾಗಬಹುದು. ಇದನ್ನು ಓರಲ್‌ ಮತ್ತು ಮ್ಯಾಕ್ಸಿಲೊಫೇಶಿಯಲ್‌ ಸರ್ಜನ್‌ ನಡೆಸುತ್ತಾರೆ.

  • ಒತ್ತಡದಿಂದಲೂ ನೋವು ಉಂಟಾಗಬಹುದು: ಒತ್ತಡದಿಂದ ಹಲ್ಲು ಕಡೆಯುವುದು ಉಂಟಾಗುತ್ತದೆ. ಇದು ದವಡೆ ನೋವಿಗೆ ಕಾರಣವಾಗಬಲ್ಲುದು. ಒತ್ತಡಮಯ ಸನ್ನಿವೇಶಗಳಿಗೆ ಒಳಗಾಗಿದ್ದರೆ ವಿಶ್ರಮಿಸಿಕೊಳ್ಳಲು, ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸಿ. ಹಲ್ಲು ಕಡೆಯುವುದನ್ನು ತಪ್ಪಿಸುವ ಬಾಯಿ ರಕ್ಷಕ ಸಲಕರಣೆಗಳು ಕೂಡ ಸಹಕಾರಿಯಾಗಬಲ್ಲವು.
  • ಸೈನಸ್‌ ಸಮಸ್ಯೆ: ಮೇಲ್ದಡೆಯ ನೋವಿಗೆ ಸೈನಸೈಟಿಸ್‌ ಕೂಡ ಒಂದು ಮುಖ್ಯವಾದ ಕಾರಣವಾಗಿದೆ. ನಿಮಗೆ ಸತತವಾಗಿ ಸೈನಸೈಟಿಸ್‌ ಸಮಸ್ಯೆ ಕಂಡುಬರುತ್ತಿದ್ದರೆ ಅದಕ್ಕಾಗಿ ಚಿಕಿತ್ಸೆ ಪಡೆಯಲು ಇಎನ್‌ಟಿ ತಜ್ಞರನ್ನು ಭೇಟಿಯಾಗಿ. ದೀರ್ಘ‌ಕಾಲಿಕ ಸೈನಸೈಟಿಸ್‌ ದವಡೆ ನೋವಿಗೆ ಕಾರಣವಾಗುತ್ತದೆ.
  • ನರಗಳ ಸಮಸ್ಯೆ ಇರಬಹುದು: ದವಡೆ ನೋವಿನ ಗಂಭೀರ ಸ್ವರೂಪಗಳಲ್ಲಿ ಒಂದು ಟ್ರೈಜೆಮಿನಲ್‌ ನ್ಯೂರಾಲ್ಜಿಯಾ. ಕೆಲವು ಸೆಕೆಂಡ್‌ಗಳಿಂದ ತೊಡಗಿ ಕೆಲವು ನಿಮಿಷಗಳ ವರೆಗೆ ಇರಬಹುದಾದ, ದವಡೆಯ ಒಂದು ಪಾರ್ಶ್ವದಲ್ಲಿ ಅಥವಾ ಮುಖದ ಕೆಳಭಾಗದಲ್ಲಿ ಕಾಣಿಸಿಕೊಳ್ಳುವ, ವಿದ್ಯುತ್‌ ಆಘಾತದಂತಹ ಅಥವಾ ಉರಿಯ ಅನುಭವ ನೀಡುವ, ತೀವ್ರ ತೀಕ್ಷ್ಣ ನೋವು ಕಾಣಿಸಿಕೊಳ್ಳುವ ಸ್ಥಿತಿ ಇದು. ಸರಳ ಚಟುವಟಿಕೆಗಳಾದ ಮೇಕಪ್‌ ಮಾಡಿಕೊಳ್ಳುವುದು, ಗಡ್ಡ ತೆಗೆಯುವುದು ಅಥವಾ ಹಲ್ಲುಜ್ಜುವಂತಹ ಕ್ರಿಯೆಗಳು ಕೂಡ ಈ ತೀವ್ರ ನೋವನ್ನು ಮತ್ತು ತಲೆನೋವನ್ನು ಉಂಟುಮಾಡಬಹುದು, ಇದು ಕಾಲಾಂತರದಲ್ಲಿ ಇನ್ನಷ್ಟು ತೀವ್ರವಾಗುತ್ತದೆ. ಮಹಿಳೆಯರು ಮತ್ತು 50 ವರ್ಷಕ್ಕಿಂತ ಹೆಚ್ಚು ವಯಸ್ಸಿನವರು ಈ ತೊಂದರೆಗೆ ಒಳಗಾಗುವ ಸಾಧ್ಯತೆಗಳು ಹೆಚ್ಚು. ಈ ಅನಾರೋಗ್ಯ ಸ್ಥಿತಿಗೆ ನ್ಯೂರಾಲಜಿಸ್ಟ್‌ ಬಳಿ ಸೂಕ್ತ ಚಿಕಿತ್ಸೆಯನ್ನು ಪಡೆಯಬಹುದಾಗಿದೆ.
  • ಇದು ತೀರಾ ಅಪರೂಪ; ಎಲುಬಿನ ಸೋಂಕು ಉಂಟಾಗಿರುವ ಸಾಧ್ಯತೆಯೂ ಇರುತ್ತದೆ: ನಿಮಗೆ ಇತ್ತೀಚೆಗೆ ದಂತ ಶಸ್ತ್ರಚಿಕಿತ್ಸೆ ಆಗಿದ್ದರೆ, ಬಾಯಿಗೆ ಗಾಯವಾಗಿದ್ದರೆ ಅಥವಾ ಮಧುಮೇಹ, ಮೂತ್ರಪಿಂಡ ವೈಫ‌ಲ್ಯದಂತಹ, ರೋಗನಿರೋಧಕ ಶಕ್ತಿಗುಂದುವಂತಹ ಅನಾರೋಗ್ಯಗಳು ಉಂಟಾಗಿದ್ದರೆ ಓಸ್ಟಿಯೋಮೈಲೈಟಿಸ್‌ ಎನ್ನುವ ಗಂಭೀರ ಎಲುಬು ಸೋಂಕು ಉಂಟಾಗುವ ಸಾಧ್ಯತೆಗಳಿರುತ್ತವೆ. ದವಡೆಯ ಎಲುಬಿನಲ್ಲಿ ನೋವು, ಆ ಪ್ರದೇಶ ಕೆಂಪಾಗಿರುವುದು, ಊತ ಮತ್ತು ಬಿಸಿಯಾಗಿರುವುದು ಮತ್ತು ಜ್ವರ ಇದರ ಅಪಾಯದ ಲಕ್ಷಣಗಳಾಗಿವೆ. ಓಸ್ಟಿಯೋಮೈಲೈಟಿಸ್‌ ಉಂಟಾಗಿರಬಹುದು ಎಂಬ ಸಂಶಯ ಮೂಡಿದ್ದಲ್ಲಿ ಆ ಕೂಡಲೇ ವೈದ್ಯಕೀಯ ಸಹಾಯ ಪಡೆಯಬೇಕು. ಸಕಾಲದಲ್ಲಿ ಸೂಕ್ತ ಚಿಕಿತ್ಸೆ ಪಡೆಯದೇ ಇದ್ದರೆ ಸೋಂಕಿನಿಂದಾಗಿ ರಕ್ತಸರಬರಾಜು ನಿಂತುಹೋಗುವ ಹಾಗೂ ದವಡೆಯನ್ನೇ ತೆಗೆಯಬೇಕಾದ ಗಂಭೀರ ಅಪಾಯಗಳು ಉಂಟಾಗುವ ಸಾಧ್ಯತೆಗಳಿವೆ.
  • ಬೆಳವಣಿಗೆಯೊಂದು ದವಡೆಯ ಮೇಲೆ ಒತ್ತಡ ಹೇರುತ್ತಿರಬಹುದು: ಬೆಳೆಯುತ್ತಿರುವ ದುರ್ಮಾಂಸ ಅಥವಾ ಗಡ್ಡೆಯು ದವಡೆಯ ಮೇಲೆ ಒತ್ತಡ ಹಾಕುತ್ತಿರುವ ಕಾರಣದಿಂದಲೂ ದವಡೆ ನೋವು ಕಾಣಿಸಿಕೊಳ್ಳಬಹುದು. ದವಡೆಯ ದುರ್ಮಾಂಸಗಳು ಮತ್ತು ಗಡ್ಡೆಗಳು ಸಾಮಾನ್ಯವಾಗಿ ನಿರಪಾಯಕಾರಿಯಾಗಿದ್ದು, ಕ್ಯಾನ್ಸರ್‌ಕಾರಕ ಅಲ್ಲ. ಆದರೂ ಅವು ಕ್ಷಿಪ್ರವಾಗಿ ಬೆಳೆದು ದವಡೆಯ ಎಲುಬನ್ನು ಮತ್ತು ಹಲ್ಲುಗಳನ್ನು ಸ್ಥಾನಪಲ್ಲಟಗೊಳಿಸಬಹುದಾಗಿದೆ. ದವಡೆಯಲ್ಲಿ ಈ ಯಾವುದೇ ಬೆಳವಣಿಗೆ ಉಂಟಾಗಿದೆ ಎಂಬ ಸಂಶಯ ಉಂಟಾಗಿದ್ದರೆ ನಿಮ್ಮ ವೈದ್ಯರು ಅವುಗಳನ್ನು ಇಮೇಜಿಂಗ್‌ ಪರೀಕ್ಷೆಗಳು ಮತ್ತು ಬಯಾಪ್ಸಿಯ ಸಹಾಯದಿಂದ ಪತ್ತೆಹಚ್ಚಬಲ್ಲರು. ಆ ಬಳಿಕ ಚಿಕಿತ್ಸೆಗಳು ಮತ್ತು ಶಸ್ತ್ರಚಿಕಿತ್ಸೆಗಳ ಮೂಲಕ ಬೆಳವಣಿಗೆಯನ್ನು ನಿವಾರಿಸಿ ದವಡೆ ಗುಣವಾಗುವಂತೆ ಮಾಡಬಹುದಾಗಿದೆ.
  • ಸಂಧಿವಾತ (ಆರ್ಥೆಟಿಸ್‌): ದವಡೆಯನ್ನು ಆಚೀಚೆ ಅಲ್ಲಾಡಿಸುವಾಗ ಮುರಿದ, ನೆಟಿಕೆ ತೆಗೆದ ಅಥವಾ ಕಡೆದಂತಹ ಸದ್ದು ಉಂಟಾಗುತ್ತಿದೆಯೇ? ಟಿಎಂಜೆ ಸಹಿತ ದೇಹದ ಯಾವುದೇ ಭಾಗವನ್ನು ಸಂಧಿವಾತ ಅಥವಾ ಆರ್ಥೆಟಿಸ್‌ ಬಾಧಿಸಬಹುದಾಗಿದೆ. ಓಸ್ಟಿಯೋಆರ್ಥೆಟಿಸ್‌ನಿಂದ ಸಂಧಿಗಳು ಸುಗಮವಾಗಿ ಚಲಿಸುವುದಕ್ಕೆ ಸಹಾಯ ಮಾಡುವ ಕಾರ್ಟಿಲೇಜ್‌ ಕಾಲಾಂತರದಲ್ಲಿ ನಶಿಸುತ್ತದೆ. ಸಂಧಿವಾತವು ಸಾಮಾನ್ಯವಾಗಿ ಕೈಗಳು, ಮೊಣಕಾಲು, ಪೃಷ್ಠ ಮತ್ತು ಬೆನ್ನುಮೂಳೆಯನ್ನು ಮೊದಲಿಗೆ ಬಾಧಿಸುತ್ತದೆ. ಇದು ಹಿರಿಯರಲ್ಲಿ ಸಾಮಾನ್ಯವಾಗಿದ್ದರೂ ದವಡೆಯ ಗಾಯಗಳು ಅಥವಾ ಸೋಂಕಿನಿಂದಾಗಿ ಸಂಧಿವಾತ ಉಂಟಾಗುವ ಪ್ರಕ್ರಿಯೆಯ ವೇಗ ಹೆಚ್ಚಬಹುದು. ಇದನ್ನು ತಪಾಸಣೆ ಮತ್ತು ಕೆಲವು ಬಾರಿ ಎಕ್ಸ್‌ರೇ ಹಾಗೂ ಎಂಆರ್‌ಐಗಳಿಂದ ಪತ್ತೆಹಚ್ಚುತ್ತಾರೆ. ಸ್ಟೀರಾಯ್ಡ್ ತರ ಉರಿಯೂತ ನಿವಾರಕ ಔಷಧಗಳು (ಎನ್‌ಎಸ್‌ಎಐಡಿಗಳು), ಮನೆಮದ್ದುಗಳು, ಮೌತ್‌ಗಾರ್ಡ್‌ ಬಳಕೆ, ದವಡೆಯ ಚಲನೆಯನ್ನು ಕಡಿಮೆ ಮಾಡುವುದು ಕೆಲವು ಪರಿಹಾರಗಳಾಗಿವೆ. ಅಗತ್ಯಬಿದ್ದರೆ ಶಸ್ತ್ರಚಿಕಿತ್ಸೆಯನ್ನೂ ನಡೆಸಬಹುದಾಗಿದೆ.

ದೇಹವು ತನ್ನ ಮೇಲೆ ತಾನೇ ಆಕ್ರಮಣ ಮಾಡಿಕೊಳ್ಳುವ ಸ್ಥಿತಿಯಿಂದಾಗಿ ರುಮಟಾಯ್ಡ ಆರ್ಥೆಟಿಸ್‌ (ಆರ್‌ಎ) ಉಂಟಾಗುತ್ತದೆ. ಇದರಿಂದಾಗಿ ದವಡೆಯ ಸಹಿತ ದೇಹದಲ್ಲಿಡೀ ಸಂಧಿಗಳು ಕೂಡುವಲ್ಲಿ ನೋವುಸಹಿತ ಊತ ಉಂಟಾಗಬಹುದು. ಸಾಮಾನ್ಯವಾಗಿ ಇದು ಕೈ ಮತ್ತು ಕಾಲೆºರಳುಗಳಲ್ಲಿ ಆರಂಭವಾಗುತ್ತದೆ. ಬೆಳಗ್ಗೆ ಅಥವಾ ಸ್ವಲ್ಪ ಹೊತ್ತು ಚಲನೆಯಿಲ್ಲದೆ ಇದ್ದ ಸಂದರ್ಭದಲ್ಲಿ ನೋವು ಹೆಚ್ಚಿರುತ್ತದೆ. ದೈಹಿಕ ಪರೀಕ್ಷೆ, ರಕ್ತಪರೀಕ್ಷೆ ಮತ್ತು ಇಮೇಜಿಂಗ್‌ ಪರೀಕ್ಷೆಗಳ ಮೂಲಕ ವೈದ್ಯರು ಈ ಅನಾರೋಗ್ಯವನ್ನು ಪತ್ತೆಹಚ್ಚುತ್ತಾರೆ. ಔಷಧಗಳು, ಫಿಸಿಕಲ್‌ ಥೆರಪಿ, ಜೀವನಶೈಲಿಯಲ್ಲಿ ಬದಲಾವಣೆಗಳು ಮತ್ತು ಕೆಲವು ಪ್ರಕರಣಗಳಲ್ಲಿ ಶಸ್ತ್ರಚಿಕಿತ್ಸೆಯ ಮೂಲಕ ಈ ಅನಾರೋಗ್ಯದ ಲಕ್ಷಣಗಳನ್ನು ನಿಭಾಯಿಸಬಹುದಾಗಿದೆ.

ಇಂತಹ ಯಾವುದೇ ಲಕ್ಷಣಗಳು ಕಂಡುಬಂದಿದ್ದಲ್ಲಿ, ನಿಮ್ಮ ಓರಲ್‌ ಮತ್ತು ಮ್ಯಾಕ್ಸಿಲೊಫೇಶಿಯಲ್‌ ಶಸ್ತ್ರಚಿಕಿತ್ಸಾ ತಜ್ಞ ವೈದ್ಯರನ್ನು ಸಂಪರ್ಕಿಸಿ. ಅವರು ಸೂಕ್ತ ರೋಗ ಪತ್ತೆ ಮತ್ತು ನಿರ್ವಹಣ ವಿಧಾನಗಳಿಂದ ಅನಾರೋಗ್ಯವನ್ನು ನಿಭಾಯಿಸುವಲ್ಲಿ ಸಹಾಯ ಮಾಡುತ್ತಾರೆ.

 

ಡಾ| ಆನಂದದೀಪ್‌ ಶುಕ್ಲಾ

ಓರಲ್‌ ಮತ್ತು ಮ್ಯಾಕ್ಸಿಲೊಫೇಶಿಯಲ್‌ ವಿಭಾಗ,

ಎಂಸಿಒಡಿಎಸ್‌, ಮಾಹೆ, ಮಣಿಪಾಲ

ಟಾಪ್ ನ್ಯೂಸ್

bantwala-1

ಬಂಟ್ವಾಳ: ಶ್ರೀಗಂಧ ಮರ ಕಡಿದು ಮಾರಾಟ ಹಾಗೂ ‘ಉಡ’ ಭಕ್ಷಣೆಗೆ ಯತ್ನ: ಆರೋಪಿಗಳ ಬಂಧನ

ರೇಖಾ ಕದಿರೇಶ್ ಹತ್ಯೆ ಪ್ರಕರಣಕ್ಕೆ ಹಲವಾರು ಹಿನ್ನೆಲೆಗಳಿವೆ: ಗೃಹ ಸಚಿವ ಬಸವರಾಜ ಬೊಮ್ಮಾಯಿ

ರೇಖಾ ಕದಿರೇಶ್ ಹತ್ಯೆ ಪ್ರಕರಣಕ್ಕೆ ಹಲವಾರು ಹಿನ್ನೆಲೆಗಳಿವೆ: ಗೃಹ ಸಚಿವ ಬಸವರಾಜ ಬೊಮ್ಮಾಯಿ

ಹುಟ್ಟುಹಬ್ಬದ ದಿನವೇ ವಿಷ ಸೇವಿಸಿ ಯುವಕ ಆತ್ಮಹತ್ಯೆ: ಈ ಹಿಂದೆ ಎರಡು ಬಾರಿ ಪ್ರಯತ್ನ ಮಾಡಿದ್ದ!

ಹುಟ್ಟುಹಬ್ಬದ ದಿನವೇ ವಿಷ ಸೇವಿಸಿ ಯುವಕ ಆತ್ಮಹತ್ಯೆ: ಈ ಹಿಂದೆ ಎರಡು ಬಾರಿ ಪ್ರಯತ್ನ ಮಾಡಿದ್ದ!

ಅರುಣಾಚಲ ಗಡಿ ಸಮೀಪ…ಟಿಬೆಟ್ ನಲ್ಲಿ ಮೊದಲ ಬುಲೆಟ್ ರೈಲಿಗೆ ಚಾಲನೆ ಕೊಟ್ಟ ಚೀನಾ

ಅರುಣಾಚಲ ಗಡಿ ಸಮೀಪ…ಟಿಬೆಟ್ ನಲ್ಲಿ ಮೊದಲ ಬುಲೆಟ್ ರೈಲಿಗೆ ಚಾಲನೆ ಕೊಟ್ಟ ಚೀನಾ

ಸಹೋದರ-ಅಳಿಯನೊಂದಿಗೆ ರಮೇಶ್ ಜಾರಕಿಹೊಳಿ‌ ಸುತ್ತೂರು ಮಠಕ್ಕೆ ಪ್ರಯಾಣ

ಸಹೋದರ-ಅಳಿಯನೊಂದಿಗೆ ರಮೇಶ್ ಜಾರಕಿಹೊಳಿ‌ ಸುತ್ತೂರು ಮಠಕ್ಕೆ ಪ್ರಯಾಣ

ಸಿದ್ದರಾಮಯ್ಯನವರೇ, ಜಮೀರ್ ನ ಮುಂದಿಟ್ಟುಕೊಂಡು ಹೋಗಬೇಡಿ, ಒಳ್ಳೆದಾಗಲ್ಲ: ವಿಶ್ವನಾಥ್ ಕಿಡಿ

ಸಿದ್ದರಾಮಯ್ಯನವರೇ, ಜಮೀರ್ ನ ಮುಂದಿಟ್ಟುಕೊಂಡು ಹೋಗಬೇಡಿ, ಒಳ್ಳೆದಾಗಲ್ಲ: ವಿಶ್ವನಾಥ್ ಕಿಡಿ

ತುರ್ತು ಪರಿಸ್ಥಿತಿಯ ಕರಾಳ ದಿನ ಎಂದಿಗೂ ಮರೆಯಲು ಸಾಧ್ಯವಿಲ್ಲ: ಪ್ರಧಾನಿ ಮೋದಿ

ತುರ್ತು ಪರಿಸ್ಥಿತಿಯ ಕರಾಳ ದಿನ ಎಂದಿಗೂ ಮರೆಯಲು ಸಾಧ್ಯವಿಲ್ಲ: ಪ್ರಧಾನಿ ಮೋದಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sports-related injuries

ಮಕ್ಕಳಲ್ಲಿ  ಕ್ರೀಡೆ ಸಂಬಂಧಿ ಗಾಯಗಳು : ತಡೆ ಮತ್ತು ಆರೈಕೆ

Radiation therapy

ರೇಡಿಯೇಶನ್‌ ಥೆರಪಿ :ನೀವು ಹೊಂದಿರಬೇಕಾದ ಸಾಮಾನ್ಯ ಜ್ಞಾನ

Exome sequencing

ಎಕ್ಸೋಮ್‌ ಸೀಕ್ವೆನ್ಸಿಂಗ್‌ ಎಂದರೇನು?

Arogyavani

ದೀರ್ಘ‌ಕಾಲೀನ ಮತ್ತು ಹಸ್ತಕ್ಷೇಪಿತ ನೋವಿಗೆ ಸಂಬಂಧಿಸಿದ  ಸೇವೆಗಳು

covid 19 Lockdown Effect

ಸಂವಹನ ಮತ್ತು ಭಾಷೆಯ ಬೆಳವಣಿಗೆಯಲ್ಲಿ  ಕೋವಿಡ್‌ 19 ಲಾಕ್‌ ಡೌನ್‌ ಪರಿಣಾಮ

MUST WATCH

udayavani youtube

ಕೊಮೆ : ಮೀನುಗಾರರಿಂದ ಸಮುದ್ರ ಪೂಜೆ

udayavani youtube

ನಾನು ಸೋತು ಹೋಗಿದ್ದೇನೆ ಸ್ವಾಮಿ; ಜವಳಿ ವ್ಯಾಪಾರಿಯ ನೋವಿನ ಮಾತು

udayavani youtube

ಕಾನೂನು ಎಲ್ಲರಿಗೂ ಒಂದೇ,ಎಷ್ಟೇ ದೊಡ್ಡವನಾದರೂ ಕಾನೂನು ಪಾಲನೆ ಮಾಡಬೇಕು: ಉಡುಪಿ DC ವಾರ್ನಿಂಗ್

udayavani youtube

ನೇಗಿಲು ಹಿಡಿದು ಉಳುಮೆ ಮಾಡಿದ ಶಾಸಕ ರೇಣುಕಾಚಾರ್ಯ

udayavani youtube

ಖಾಸಗಿ TECHIE, ದೇಸಿ ದನ ಸಾಕಣೆಯಲ್ಲಿ ಯಶಸ್ಸು ಕಂಡಿದ್ದು ಹೇಗೆ ?

ಹೊಸ ಸೇರ್ಪಡೆ

bantwala-1

ಬಂಟ್ವಾಳ: ಶ್ರೀಗಂಧ ಮರ ಕಡಿದು ಮಾರಾಟ ಹಾಗೂ ‘ಉಡ’ ಭಕ್ಷಣೆಗೆ ಯತ್ನ: ಆರೋಪಿಗಳ ಬಂಧನ

ಪಿರಿಯಾಪಟ್ಟಣದ ಅರಸಿನ ಕೆರೆಯಲ್ಲಿ ಅಪರಿಚಿತ ವ್ಯಕ್ತಿ ಶವ ಪತ್ತೆ: ಕೊಲೆ ಶಂಕೆ

ಪಿರಿಯಾಪಟ್ಟಣದ ಅರಸಿನ ಕೆರೆಯಲ್ಲಿ ಅಪರಿಚಿತ ವ್ಯಕ್ತಿ ಶವ ಪತ್ತೆ: ಕೊಲೆ ಶಂಕೆ

ರೇಖಾ ಕದಿರೇಶ್ ಹತ್ಯೆ ಪ್ರಕರಣಕ್ಕೆ ಹಲವಾರು ಹಿನ್ನೆಲೆಗಳಿವೆ: ಗೃಹ ಸಚಿವ ಬಸವರಾಜ ಬೊಮ್ಮಾಯಿ

ರೇಖಾ ಕದಿರೇಶ್ ಹತ್ಯೆ ಪ್ರಕರಣಕ್ಕೆ ಹಲವಾರು ಹಿನ್ನೆಲೆಗಳಿವೆ: ಗೃಹ ಸಚಿವ ಬಸವರಾಜ ಬೊಮ್ಮಾಯಿ

ಹುಟ್ಟುಹಬ್ಬದ ದಿನವೇ ವಿಷ ಸೇವಿಸಿ ಯುವಕ ಆತ್ಮಹತ್ಯೆ: ಈ ಹಿಂದೆ ಎರಡು ಬಾರಿ ಪ್ರಯತ್ನ ಮಾಡಿದ್ದ!

ಹುಟ್ಟುಹಬ್ಬದ ದಿನವೇ ವಿಷ ಸೇವಿಸಿ ಯುವಕ ಆತ್ಮಹತ್ಯೆ: ಈ ಹಿಂದೆ ಎರಡು ಬಾರಿ ಪ್ರಯತ್ನ ಮಾಡಿದ್ದ!

ಅರುಣಾಚಲ ಗಡಿ ಸಮೀಪ…ಟಿಬೆಟ್ ನಲ್ಲಿ ಮೊದಲ ಬುಲೆಟ್ ರೈಲಿಗೆ ಚಾಲನೆ ಕೊಟ್ಟ ಚೀನಾ

ಅರುಣಾಚಲ ಗಡಿ ಸಮೀಪ…ಟಿಬೆಟ್ ನಲ್ಲಿ ಮೊದಲ ಬುಲೆಟ್ ರೈಲಿಗೆ ಚಾಲನೆ ಕೊಟ್ಟ ಚೀನಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.