ನಿಮ್ಮ ದಂತ ಪಂಕ್ತಿ ಬ್ರೇಸ್‌ಗಳ ಆರೈಕೆ


Team Udayavani, Jan 17, 2021, 6:20 AM IST

ನಿಮ್ಮ ದಂತ ಪಂಕ್ತಿ ಬ್ರೇಸ್‌ಗಳ ಆರೈಕೆ

ಬ್ರೇಸ್‌ ಹಾಕಿಸಿಯಾಗಿದೆ. ಇನ್ನೇನು? :

ನಿಮ್ಮ ಆರ್ಥೂಡಾಂಟಿಸ್ಟ್‌ ಅವರಿಂದ ಬ್ರೇಸಸ್‌ ಹಾಕಿಸಿಕೊಂಡು ಆರೋಗ್ಯಯುತವಾದ ಸುಂದರ ನಗುವಿನತ್ತ ಪ್ರಯಾಣ ಆರಂಭಿಸಿರುವುದಕ್ಕೆ ಅಭಿನಂದನೆಗಳು. ಈ ಪ್ರಯಾಣವು ಪ್ರತಿಯೊಬ್ಬರಿಗೂ ಭಿನ್ನವಾಗಿರುತ್ತದೆ. ಆಥೊìಡಾಂಟಿಕ್‌ ಚಿಕಿತ್ಸೆಯ ಅವಧಿಯು 12 ತಿಂಗಳುಗಳಿಂದ ತೊಡಗಿ 3 ವರ್ಷಗಳ ವರೆಗೆ ಇರುತ್ತದೆ. ನಿಮ್ಮ ಚಿಕಿತ್ಸೆಯು ಯಶಸ್ವಿಯಾಗಲು ಮತ್ತು ನಿಮಗೆ ಉತ್ತಮ ಫ‌ಲಿತಾಂಶ ಸಿಗಲು ನೀವು ಅನುಸರಿಸಬೇಕಾದ ಕೆಲವು ಕ್ರಮಗಳಿವೆ.

ನಿಯಮಿತವಾಗಿ  ಗಮನ ಹರಿಸಿ :

ಪ್ರತೀ 4ರಿಂದ 5 ವಾರಗಳಿಗೆ ಒಮ್ಮೆ ನಿಮ್ಮ ಬ್ರೇಸ್‌ಗಳನ್ನು ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ (ಇದು ಬದಲಾಗಬಹುದು, ಹೀಗಾಗಿ ನಿಮ್ಮ ಆಥೊìಡಾಂಟಿಸ್ಟ್‌ ಅವರೊಂದಿಗೆ ಸಮಾಲೋಚಿಸಿಕೊಳ್ಳಿ). ನೀವು ಆಥೊìಡಾಂಟಿಕ್‌ ವೈದ್ಯರನ್ನು ನಿಯಮಿತವಾಗಿ ಭೇಟಿ ಮಾಡದೆ ಇದ್ದಲ್ಲಿ ನಿಮ್ಮ ಹಲ್ಲು ಹುಳುಕಾಗುವ, ವಸಡು ಕಾಯಿಲೆಗೀಡಾಗುವ ಮತ್ತು ಇದರಿಂದಾಗಿ ಚಿಕಿತ್ಸೆಯು ದೀರ್ಘ‌ಕಾಲೀನವಾಗುವ ಅಪಾಯವಿದೆ.

ಮೃದುವಾದ ಬ್ರಶ್‌ ಮತ್ತು ಟೂತ್‌ಪೇಸ್ಟ್‌ನಿಂದ ಹಲ್ಲುಜ್ಜಿ. ಬ್ರೇಸ್‌ಗಳ ಮೇಲ್ಭಾಗದ ವಸಡಿನ ಭಾಗವನ್ನು ವೃತ್ತಾಕಾರವಾಗಿ ಮೃದುವಾಗಿ ಉಜ್ಜಿ. ಬ್ರಶ್‌ ವಸಡುಗಳತ್ತ 45 ಡಿಗ್ರಿ ಕೋನದಲ್ಲಿರಲಿ. ಬ್ರೇಸ್‌ಗಳ ಹುಕ್‌ಗಳಲ್ಲಿ ಹೆಚ್ಚು ಕೊಳೆ ಶೇಖರಗೊಂಡಿರಬಹುದಾಗಿದ್ದು, ಅತ್ತ ಗಮನ ಹರಿಸಿ.

  • ಬ್ರೇಸ್‌ಗಳು ಮತ್ತು ಹಲ್ಲುಗಳ ಮೇಲ್ಮೆ„ಯನ್ನು ಉಜ್ಜುವಾಗ ಬ್ರಶ್ಶನ್ನು ಬ್ರೇಸ್‌ಗಳತ್ತ 45 ಡಿಗ್ರಿ ಕೋನದಲ್ಲಿ ಹಿಡಿದುಕೊಳ್ಳಿ.
  • ಉಳಿದಂತೆ ಇತರ ಭಾಗಗಳನ್ನು ನೀವು ಯಾವತ್ತೂ ಉಜ್ಜುವಂತೆ ಉಜ್ಜಿ.
  • ಬ್ರೇಸ್‌ ವೈರ್‌ಗಳ ತಳಭಾಗವನ್ನು ಉಜ್ಜುವುದಕ್ಕಾಗಿ ಇಂಟರ್‌ಡೆಂಟಲ್‌ ಬ್ರಶ್‌ ಉಪಯೋಗಿಸಿ, ಹಲ್ಲುಗಳ ಮೇಲ್ಮೆ„ಯನ್ನು ಉಜ್ಜುವಾಗ ಮೃದುವಾಗಿ ಮೇಲಕ್ಕೂ ಕೆಳಕ್ಕೂ ಬ್ರಶ್‌ ಆಡಿಸಿ.

ಶುಚಿಯಾಗಿಡಿ :

ಪ್ರತೀ ದಿನ ಕನಿಷ್ಠ 2 ಬಾರಿ ಹಲ್ಲುಜ್ಜುವ ಮೂಲಕ ನಿಮ್ಮ ಹಲ್ಲುಗಳು ಮತ್ತು ಬ್ರೇಸ್‌ಗಳನ್ನು ಶುಚಿಯಾಗಿ ಇರಿಸಿಕೊಳ್ಳಿ. ವೈರ್‌ ಮತ್ತು ವಸಡಿನ ಅಂಚುಗಳಲ್ಲಿ ಉಜ್ಜುವಾಗ ಎಚ್ಚರಿಕೆ ಇರಲಿ.

ತುರ್ತು ಸಂದರ್ಭಗಳು ಬ್ರೇಸ್‌ ವಸಡುಗಳು ನಡುವೆ :

ಘರ್ಷಣೆಯಿಂದ ಮೃದು ಅಂಗಾಂಶಗಳಲ್ಲಿ ಹುಣ್ಣು/ ಗಾಯ ಉಂಟಾದ ಸಂದರ್ಭದಲ್ಲಿ ಮೃದು ವ್ಯಾಕ್ಸ್‌ ನೀಡಲಾಗುತ್ತದೆ. ಬ್ರೇಸ್‌ಗಳು ತುಂಡಾದರೆ ಹಲ್ಲುಗಳು ಬಹಳ ಬೇಗನೆ ಪಂಕ್ತಿಯಿಂದ ಹೊರಜಾರಬಹುದಾಗಿದೆ. ಹೀಗಾಗಿ ಬ್ರೇಸ್‌ ತುಂಡಾದರೆ ತುರ್ತುಗಿ ಆಥೊìಡಾಂಟಿಸ್ಟರನ್ನು ಕಾಣಿರಿ. ನಿಮ್ಮ ಚಿಕಿತ್ಸೆಯಿಂದ ಉತ್ತಮ

ಫ‌ಲಿತಾಂಶ ದೊರೆಯುವುದಕ್ಕಾಗಿ ಮತ್ತು ಚಿಕಿತ್ಸೆಯು ಉದ್ದೇಶಿತ ಸಮಯದಲ್ಲಿ ಯಶಸ್ವಿಯಾಗಿ ಪೂರೈಸುವುದಕ್ಕಾಗಿ ಬ್ರೇಸ್‌ಗಳು  ತುಂಡಾಗದಂತೆ ಕಾಪಾಡುವುದು ನಿಮ್ಮ ಹೊಣೆಯಾಗಿದೆ.

ನಾವು ಯಾವ ಆಹಾರಗಳನ್ನು ವರ್ಜಿಸಬೇಕು? :

  • ಗಟ್ಟಿಯಾದ ಆಹಾರಗಳು ಘನ ಮತ್ತು ಗಟ್ಟಿಯಾದ ಆಹಾರಗಳು ಬ್ರೇಸ್‌ಗಳನ್ನು ತುಂಡುಮಾಡಬಹುದಾದ ಮತ್ತು ಹಾನಿಗೊಳಿಸಬಹುದಾದ ಸಾಧ್ಯತೆ ಇರುವುದರಿಂದ ಅವುಗಳನ್ನು ವರ್ಜಿಸಬೇಕು. ತಾಜಾ ತರಕಾರಿಗಳು ಮತ್ತು ಗಟ್ಟಿಯಾದ ಹಣ್ಣುಗಳನ್ನು ಸಣ್ಣ ತುಂಡುಗಳಾಗಿ ಮಾಡಿ ನಿಧಾನವಾಗಿ ಹಿಂಭಾಗದ ಹಲ್ಲುಗಳ ಮೂಲಕ ಜಗಿಯಬೇಕು.
  • ಸಕ್ಕರೆ ಬೆರೆತ ಸಿಹಿಗಳು/ ಪಾನೀಯಗಳು ಇವುಗಳು ಹಲ್ಲುಗಳಿಗೆ ಹಾನಿ ಉಂಟು ಮಾಡಬಲ್ಲವು. ಹುಳುಕಾಗುವ ಕಲೆಗಳು ಎಂದು ಕರೆಯಲ್ಪಡುವ, ಹಲ್ಲುಗಳ ಮೇಲೆ ಬಿಳಿ ಅಥವಾ ಕಂದು ಕಲೆಗಳನ್ನು ಉಂಟು ಮಾಡುತ್ತವೆ. ಇವುಗಳನ್ನು ತೆಗೆದುಹಾಕಲು ಸಾಧ್ಯವಾಗುವುದಿಲ್ಲ ಮತ್ತು ಇವು ಹಲ್ಲು ಹುಳುಕಿಗೆ ಕಾರಣವಾಗುತ್ತವೆ. ಇವುಗಳ ಸೇವನೆ ಕನಿಷ್ಠ ಮಟ್ಟದಲ್ಲಿರಲಿ, ವಿಶೇಷವಾಗಿ ಎರಡು ಭೋಜನ/ ಉಪಾಹಾರಗಳ ನಡುವೆ ಸೇವನೆ ಬೇಡ.

 

ಡಾ| ರಿತೇಶ್‌ ಸಿಂಗ್ಲಾ ಅಸೊಸಿಯೇಟ್‌ ಪ್ರೊಫೆಸರ್‌,ಆರ್ಥೂಡಾಂಟಿಕ್ಸ್‌

 ಮತ್ತು ಡೆಂಟೊಫೇಶಿಯಲ್‌ ಆರ್ಥೂಪೆಡಿಕ್ಸ್‌ ವಿಭಾಗ, ಮಣಿಪಾಲ ಕಾಲೇಜ್‌ ಆಫ್ ಡೆಂಟಲ್‌ ಸೈನ್ಸಸ್‌, ಮಾಹೆ, ಮಣಿಪಾಲ

ಟಾಪ್ ನ್ಯೂಸ್

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-health-1

Autism: ಸ್ವಲೀನತೆ: ಹಾಗೆಂದರೇನು?

12-health

Ankylosing Spondylitis: ಹಾಗೆಂದರೇನು ? ಕಾರಣವೇನು ? ಚಿಕಿತ್ಸೆ ಹೇಗೆ

5-health

Health: ಸಿರಿಧಾನ್ಯಗಳು: ಪುಟ್ಟ ಧಾನ್ಯಗಳಾದರೂ ಪೌಷ್ಟಿಕಾಂಶಗಳ ಗಣಿ

5-ginger

Ginger: ಶುಂಠಿ ಆರೋಗ್ಯಕ್ಕೆ ಉಪಕಾರಿ

7-

Obsessive Psychiatry: ಗೀಳು ಮನೋರೋಗ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.