Udayavni Special

ಮುಖ ಗಾಯಗೊಂಡ ರೋಗಿಯ ಆರಂಭಿಕ ನಿಭಾವಣೆ


Team Udayavani, Jan 3, 2021, 12:56 PM IST

ಮುಖ ಗಾಯಗೊಂಡ ರೋಗಿಯ ಆರಂಭಿಕ ನಿಭಾವಣೆ

ಸಾಂದರ್ಭಿಕ ಚಿತ್ರ

ಮ್ಯಾಕ್ಸಿಲೊಫೇಶಿಯಲ್‌ ಗಾಯಗಳಿಂದ ಸಮಸ್ಯೆಗಳು ಉಂಟಾಗದಂತೆ ಮತ್ತು ಕೆಲವು ಸಂದರ್ಭಗಳಲ್ಲಿ ಪ್ರಾಣವನ್ನು  ಉಳಿಸುವುದಕ್ಕೆ ಕೂಡ ಜನಸಾಮಾನ್ಯರು ಏನು ಮಾಡಬಹುದು ಎಂಬ ಮಾಹಿತಿ ಈ ಲೇಖನದಲ್ಲಿದೆ.

ಕೆಟ್ಟದ್ದು ಮುನ್ಸೂಚನೆ ಕೊಟ್ಟು ಬರುವುದಿಲ್ಲ. ನಾವು ಅವುಗಳನ್ನು ತಡೆಯಲು ಸಾಧ್ಯವಿಲ್ಲ. ಆದರೆ ಇನ್ನಷ್ಟು ಸಮಸ್ಯೆ ಉಂಟಾಗುವುದನ್ನು ತಡೆಯಲು ಅವುಗಳನ್ನು ಸಮರ್ಥವಾಗಿ ಎದುರಿಸಲು ನಾವು ಸನ್ನದ್ಧರಾಗಬಹುದು. ಎಲ್ಲೆಂದರಲ್ಲಿ ರಸ್ತೆ ಅಪಘಾತಗಳು ಸಂಭವಿಸುತ್ತಿರುವುದರಿಂದ ಮ್ಯಾಕ್ಸಿಲೊಫೇಶಿಯಲ್‌ ಗಾಯಗಳು ಇಂದು ಅತಿ ಸಾಮಾನ್ಯವಾಗಿವೆ. ರಸ್ತೆ ಅವಘಡಗಳಲ್ಲಿ ಮ್ಯಾಕ್ಸಿಲೊಫೇಶಿಯಲ್‌ ಗಾಯ ಉಂಟಾಗುವುದು ಇಂದು ತೀರಾ ಸಾಮಾನ್ಯವಾಗಿದೆ. ಕಲಹಗಳು, ಕ್ರೀಡಾ ಸಂಬಂಧಿ ಗಾಯಗಳಲ್ಲಿ ಕೂಡ ಮ್ಯಾಕ್ಸಿಲೊಫೇಶಿಯಲ್‌ ಗಾಯ ಉಂಟಾಗುತ್ತವೆ. ಇವೆಲ್ಲವುಗಳ ಪೈಕಿ ಅಪಘಾತಗಳಿಂದ ಅತಿ ಹೆಚ್ಚು ಮ್ಯಾಕ್ಸಿಲೊಫೇಶಿಯಲ್‌ ಗಾಯಗಳು ಉಂಟಾಗುತ್ತವೆ.

 

  • ಕುತ್ತಿಗೆಯನ್ನು ಎಚ್ಚರಿಕೆಯಿಂದ ನಿಭಾಯಿಸಬೇಕು: ಯಾವುದೇ ವ್ಯಕ್ತಿಯ ಮುಖಕ್ಕೆ ಗಾಯವುಂಟಾದಾಗ ಅಂತಹ ವ್ಯಕ್ತಿಯ ಬೆನ್ನುಹುರಿಗೂ ಗಾಯವಾಗಿರಬಹುದು ಎಂದು ಶಂಕಿಸಿ ಮುನ್ನಡೆಯಬೇಕು. ಇಂತಹ ಗಾಯಾಳುಗಳನ್ನು ಕರೆದೊಯ್ಯುವಾಗ ಕುತ್ತಿಗೆ ತಿರುಗದಂತೆ, ತಿರುಚಿಕೊಳ್ಳದಂತೆ ಎಚ್ಚರಿಕೆಯಿಂದ ಆಧರಿಸಿ ನೋಡಿಕೊಳ್ಳಬೇಕು. ಇಲ್ಲವಾದರೆ ಈಗಾಗಲೇ ಇರುವ ಗಾಯ ಉಲ್ಬಣಿಸಬಹುದು.
  • ರಕ್ತಸ್ರಾವದ ನಿರ್ವಹಣೆ: ಮುಖದ ಮೇಲೆ ಯಾವುದೇ ಗಾಯ ಉಂಟಾಗಿದ್ದು, ರಕ್ತಸ್ರಾವ ಆಗುತ್ತಿದ್ದಲ್ಲಿ ಗಾಯಾಳುವನ್ನು ಆಸ್ಪತ್ರೆಗೆ ಒಯ್ಯುವ ಸಂದರ್ಭದಲ್ಲಿ ಗಾಯದಿಂದ ಆಗುತ್ತಿರುವ ರಕ್ತಸ್ರಾವವನ್ನು ನಿಯಂತ್ರಿಸಲು ಪ್ರಯತ್ನಿಸಬೇಕು. ಶುಭ್ರ ಬಟ್ಟೆ ಅಥವಾ ಗಾಸ್‌ನಿಂದ ಗಾಯವನ್ನು ಒತ್ತಿ ಹಿಡಿಯುವುದರ ಮೂಲಕ ಆಸ್ಪತ್ರೆಗೆ ತಲುಪುವಷ್ಟರಲ್ಲಿ ಹೆಚ್ಚು ರಕ್ತ ನಷ್ಟವಾಗುವುದನ್ನು ತಡೆಯಬಹುದು.
  • ಅವಘಡದಿಂದಾಗಿ ಹಲ್ಲು ಹೊರಕ್ಕೆ ಬಂದಿದ್ದರೆ: ಅವಘಡದಿಂದಾಗಿ ಹಲ್ಲು ಹೊರಬಂದಿದ್ದರೆ ಅದನ್ನು ಗಾಯಾಳುವಿನ ಬಾಯಿಯೊಳಗೆ ಇರಿಸಬೇಕು (ಪ್ರಜ್ಞೆ ಇದ್ದ ಸಂದರ್ಭದಲ್ಲಿ ಮಾತ್ರ) ಮತ್ತು ಗಾಯಾಳುವನ್ನು ಆದಷ್ಟು ಬೇಗನೆ ಆಸ್ಪತ್ರೆಗೆ ಸಾಗಿಸಬೇಕು. ಹಲ್ಲನ್ನು ಬಾಯಿಯೊಳಗೆ ಇರಿಸುವುದು ಸಾಧ್ಯವಾಗದೆ ಇದ್ದರೆ ಅದನ್ನು ಎಲ್ಲ ಮನೆಗಳಲ್ಲಿ ಲಭ್ಯವಿರುವ ಕಡಿಮೆ ಕೊಬ್ಬಿನ ಹಾಲಿನೊಳಗೆ ಮುಳುಗಿಸಿಟ್ಟು ಒಯ್ಯಬೇಕು. ಯಾವುದೇ ಸಂದರ್ಭದಲ್ಲಿ ಹಲ್ಲನ್ನು ಶುದ್ಧಗೊಳಿಸಲು ತೊಳೆಯಬಾರದು ಅಥವಾ ಉಜ್ಜಬಾರದು.
  • ಊತದ ನಿರ್ವಹಣೆ: ಅಪಘಾತದ ಬಳಿಕ ದವಡೆಯಲ್ಲಿ ಊತ ಕಂಡುಬಂದರೆ ಬಾಧಿತ ಪ್ರದೇಶ ಮೇಲೆ ಐಸ್‌ ಇರಿಸಬೇಕು. ಇದು ಆಂತರಿಕ ರಕ್ತಸ್ರಾವವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಮತ್ತು ಊತವನ್ನು ಕಡಿಮೆಗೊಳಿಸಲು ಕೂಡ ನೆರವಾಗುತ್ತದೆ.
  • ಮೂಗಿನ ರಕ್ತಸ್ರಾವದ ನಿಭಾವಣೆ: ಮೂಗಿನಲ್ಲಿ ರಕ್ತಸ್ರಾವ ಆಗುತ್ತಿದ್ದರೆ ಹೆಪ್ಪುಗಟ್ಟಿದ ರಕ್ತವು ಉಚ್ಛಾ$Ìಸ-ನಿಶ್ವಾಸಕ್ಕೆ ತಡೆಯಾಗದಂತೆ ಮುಖವನ್ನು ಕೆಳಮುಖವಾಗಿ ಬಾಗಿಸಿ ಹಿಡಿಯಬೇಕು. ಮೂಗಿನ ಹೊಳ್ಳೆಗಳನ್ನು ಸ್ವಲ್ಪಕಾಲ ಒತ್ತಿ ಹಿಡಿಯಬಹುದು. ರಕ್ತಸ್ರಾವವನ್ನು ತಡೆಯಲು ಐಸ್‌ಪ್ಯಾಕ್‌ ಅಥವಾ ಬಟ್ಟೆಯನ್ನು ಮೂಗಿನ ಮೇಲೆ ಇರಿಸಬಹುದು. ಮೂಗಿನಲ್ಲಿ ಗಾಯ ಅಥವಾ ನೋವು ಇದ್ದರೆ ಯಾವುದೇ ರೀತಿಯಲ್ಲಿ ಸರಿಪಡಿಸುವುದಕ್ಕೆ ಹೋಗಬಾರದು; ತಜ್ಞ ವೈದ್ಯರ ಸಲಹೆ ಪಡೆಯಬೇಕು.
  • ಮ್ಯಾಕ್ಸಿಲೊಫೇಶಿಯಲ್‌ ಗಾಯ ಹೊಂದಿರುವ ವ್ಯಕ್ತಿಯನ್ನು ಆಸ್ಪತ್ರೆಗೆ ರವಾನಿಸುವ ವೇಳೆ ತಲೆಯ ಭಾಗ ಎತ್ತರಿಸಿರುವಂತೆ ಒಯ್ಯಬೇಕು. ಇದು ಉಸಿರಾಟ ನಿರಾತಂಕವಾಗಿರುವುದಕ್ಕೆ ಸಹಾಯ ಮಾಡುತ್ತದೆಯಲ್ಲದೆ ನಾಲಗೆ ಒಳಕ್ಕೆಳೆದುಕೊಳ್ಳದಂತೆ ಕಾಪಾಡುತ್ತದೆ.
  • ಗಾಯಾಳುವನ್ನು ಹೆಚ್ಚು ವಿಳಂಬ ಮಾಡದೆ ಆದಷ್ಟು ಬೇಗನೆ ಆಸ್ಪತ್ರೆಗೆ ಕರೆದೊಯ್ಯಬೇಕು. ಮುಖಕ್ಕೆ ಗಾಯವಾದರೆ ನಿಭಾವಣೆ ಕಷ್ಟ. ಆದರೆ, ಸರಿಯಾದ ಎಚ್ಚರಿಕೆ ತೆಗೆದುಕೊಂಡು ಗಾಯಾಳುವನ್ನು ಕ್ಷಿಪ್ರವಾಗಿ ಆಸ್ಪತ್ರೆಗೆ ರವಾನಿಸಿದರೆ ಅನೇಕ ಸಮಸ್ಯೆಗಳನ್ನು ತಡೆಯಬಹುದು.

 

 

ಆನಂದ ದೀಪ್‌ ಶುಕ್ಲಾ

ರೀಡರ್‌, ಓರಲ್‌ ಮತ್ತು ಮ್ಯಾಕ್ಸಿಲೊಫೇಶಿಯಲ್‌  ಸರ್ಜರಿ ವಿಭಾಗ,

ಮಣಿಪಾಲ ದಂತ ವೈದ್ಯಕೀಯ ಕಾಲೇಜು, ಮಣಿಪಾಲ

ಟಾಪ್ ನ್ಯೂಸ್

ಕೋವಿಡ್ ಹೆಚ್ಚಳ ಪಾಕಿಸ್ಥಾನ ಸೂಪರ್‌ ಲೀಗ್ ಮುಂದೂಡಿಕೆ

ಕೋವಿಡ್ ಹೆಚ್ಚಳ ಪಾಕಿಸ್ಥಾನ ಸೂಪರ್‌ ಲೀಗ್ ಮುಂದೂಡಿಕೆ

Untitled-1

ದುಬೈನಲ್ಲಿ 24 ಕೋಟಿ ರೂ. ಲಾಟರಿ ಗೆದ್ದ ಶಿವಮೊಗ್ಗದ ಅದೃಷ್ಟವಂತ!

ಮಗಳ ತಲೆ ಕಡಿದು, ಕೈಯಲ್ಲಿ ಹಿಡಿದು ತಣ್ಣಗೆ ನಡೆದ ಅಪ್ಪ

ಮಗಳ ತಲೆ ಕಡಿದು, ಕೈಯಲ್ಲಿ ಹಿಡಿದು ತಣ್ಣಗೆ ನಡೆದ ಅಪ್ಪ

ನಂದಿಯ ಶ್ರೀ ಭೋಗನಂದೀಶ್ವರ ದೇವಾಲಯದಲ್ಲಿ ಹುಂಡಿ ಹಣ ಕದ್ದಿದ್ದ ಆರೋಪಿಗಳ ಬಂಧನ

ನಂದಿಯ ಶ್ರೀ ಭೋಗನಂದೀಶ್ವರ ದೇವಾಲಯದಲ್ಲಿ ಹುಂಡಿ ಹಣ ಕದ್ದಿದ್ದ ಆರೋಪಿಗಳ ಬಂಧನ

My sugar Factory

ಬಜೆಟ್‌ನಲ್ಲಿ ಮೈಷುಗರ್‌ಗೆ ಸಿಗುತ್ತಾ ಮುಕ್ತಿ !

ಕೃಷಿ ಇಲಾಖೆ ರಾಯಭಾರಿಯಾಗಿ ದರ್ಶನ್ ನಾಳೆ ಅಧಿಕಾರ ಸ್ವೀಕಾರ

Siddaramaiah

ಸಚಿವರಾದವರು ಇಂತಹ ಕೆಲಸ ಮಾಡುತ್ತಾರಾ?: ಸಿದ್ದರಾಮಯ್ಯಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ವಿಶ್ವ ಅತೀ ವಿರಳ ಕಾಯಿಲೆಗಳ ದಿನಾಚರಣೆ

ವಿಶ್ವ ಅತೀ ವಿರಳ ಕಾಯಿಲೆಗಳ ದಿನಾಚರಣೆ

ಪ್ರಶ್ನೋತ್ತರಗಳ ಮೂಲಕ ರಕ್ತದ ಕ್ಯಾನ್ಸರ್‌ ಅರಿವು

ಪ್ರಶ್ನೋತ್ತರಗಳ ಮೂಲಕ ರಕ್ತದ ಕ್ಯಾನ್ಸರ್‌ ಅರಿವು

ಎಂಡೊಮೆಟ್ರಿಯೋಸಿಸ್‌

ಎಂಡೊಮೆಟ್ರಿಯೋಸಿಸ್‌

Congenital heart disease

ಹುಟ್ಟಿನಿಂದ ಬರುವ ಹೃದಯ ಕಾಯಿಲೆಗಳ ಬಗ್ಗೆ ಜಾಗೃತಿ ಮೂಡಿಸುವ ಮಾಸಾಚರಣೆ

health related articles

ದಂತ ವೈದ್ಯಕೀಯ ತಪಾಸಣೆಗಳನ್ನು ತಪ್ಪಿಸಿಕೊಳ್ಳದಿರಿ

MUST WATCH

udayavani youtube

ಸುಲಲಿತ ಜೀವನ ಸೂಚ್ಯಂಕ: ದೇಶದಲ್ಲಿ 20ನೇ ಸ್ಥಾನ ಪಡೆದ ಮಂಗಳೂರು

udayavani youtube

ಕೂದಲಿನ ಸಮಸ್ಯೆಗೂ ಪಿಸಿಓಡಿ ಗೂ ಏನು ಸಂಬಂಧ?

udayavani youtube

ಇಂದಿನ ಸುದ್ದಿ ಸಮಾಚಾರ | Udayavani 04-March-2021 News Bulletin | Udayavani

udayavani youtube

ಪುತ್ತೂರು: ಜೆಸಿಬಿಯಲ್ಲಿ ಗುಂಡಿ ಅಗೆಯುವ ವೇಳೆ ಮಣ್ಣಿನಡಿ ಸಿಲುಕಿದ ಕಾರ್ಮಿಕರು!

udayavani youtube

ಗದ್ದೆಗೆ ಉಪ್ಪುನೀರು ಹರಿದು ಬಂದು ಬೆಳೆಗಳು ನಾಶ! |Udayavani

ಹೊಸ ಸೇರ್ಪಡೆ

ಜನವಸತಿ ಪ್ರದೇಶಗಳಲ್ಲಿ 10,748 ಆಸ್ತಿ ಗುರುತು

ಜನವಸತಿ ಪ್ರದೇಶಗಳಲ್ಲಿ 10,748 ಆಸ್ತಿ ಗುರುತು

ನಳ್ಳಿ  ತಿರುಗಿಸಿದರೆ ಬರೋದು ಬರಿ ಗಾಳಿ!

ನಳ್ಳಿ ತಿರುಗಿಸಿದರೆ ಬರೋದು ಬರಿ ಗಾಳಿ!

ಲಸಿಕೆ  ಸ್ವೀಕರಿಸಲು ಸರ್ವರ್‌ ಅಡ್ಡಿ!

ಲಸಿಕೆ  ಸ್ವೀಕರಿಸಲು ಸರ್ವರ್‌ ಅಡ್ಡಿ!

ಹೀಗೊಂದು ವೀಗನ್‌ ಶೈಲಿಯ ಮದುವೆ!

ಹೀಗೊಂದು ವೀಗನ್‌ ಶೈಲಿಯ ಮದುವೆ!

ಜಾಗತಿಕ ವಿವಿ ರ್‍ಯಾಂಕಿಂಗ್‌ಗೆ ಮಾಹೆ

ಜಾಗತಿಕ ವಿವಿ ರ್‍ಯಾಂಕಿಂಗ್‌ಗೆ ಮಾಹೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.