ಇದು ಸ್ನೇಹ ತರಂಗ: ಶುದ್ಧ ಶಾಸ್ತ್ರೀಯ ಸಂಗೀತದ ಬ್ಯಾಂಡ್‌ 

Team Udayavani, Dec 8, 2018, 3:08 PM IST

2556.jpg

 ಶಾಲೆಯಲ್ಲಿ ಹುಟ್ಟಿದ ಗೆಳೆತನ ಮುಂದೆ ಸಂಗೀತವಾಗಿ, ಅದರ ಕುರುಹಾಗಿ ಹುಟ್ಟಿದ್ದು ಈ “ಲಯತರಂಗ’ ತಂಡ. ಈ ತಂಡದಲ್ಲಿರುವವರು ಪಂಡಿತ್‌ ರವಿಶಂಕರ್‌, ಉಸ್ತಾದ್‌ ಝಾಕೀರ್‌ಹುಸೇನ್‌, ಎ.ಆರ್‌. ರೆಹಮಾನ್‌, ಹರಿಹರನ್‌ ಮುಂತಾದವರ ಜೊತೆ ವೇದಿಕೆ ಹಂಚಿಕೊಂಡವರು.  50 ದೇಶಗಳು ತಿರುಗಿ, ನಮ್ಮ ದೇಶದ ಎಲ್ಲ ವೇದಿಕೆಗಳಲ್ಲೂ ಲಯತರಂಗ ಹರಡಿ- ಈಗ 20 ವರ್ಷ ತುಂಬಿದೆ. ಆ ನೆಪದಲ್ಲಿ ಡಿ.13ರಂದು ಚೌಡಯ್ಯ ಸ್ಮಾರಕ ಭವನದಲ್ಲಿ ಸಂಗೀತ ಸಮಾರಾಧನೆ ಏರ್ಪಡಿಸಿದೆ. 

ಬ್ಯಾಂಡ್‌ ಅಂದರೆ ವಿದೇಶಿ ಸ್ವರಗಳ ಸಮ್ಮೇಳನ ಅನ್ನೋ ಕಲ್ಪನೆ ಇದೆ. ಹಾಡುವ ಶೈಲಿ, ಬಳಸುವ ವಾದ್ಯಗಳೂ ಈ ಕಲ್ಪನೆ ಹುಟ್ಟಲು ಪೂರಕ ಅನ್ನಿ. ಆದರೆ, ಈ ಬ್ಯಾಂಡ್‌ ಹಾಗಲ್ಲ. ಶುದ್ಧ ಶಾಸ್ತ್ರೀಯ ಸಂಗೀತದ ತಳಹದಿಯಲ್ಲೇ ಎದ್ದುನಿಂತಿದೆ. ಕರ್ನಾಟಕಿ, ಹಿಂದೂಸ್ತಾನಿ, ಪಾಶ್ಚಿಮಾತ್ಯ ಸಂಗೀತ ಎರಕವಾಗಿ ಮತ್ತೂಂದು ಸಂಗೀತವಾಗಿ ಕೇಳುತ್ತದೆ. ಹೀಗಾಗಿ, ಇವತ್ತು ಇಡೀ ಜಗತ್ತಿನ ಎಲ್ಲೆಡೆ ಸಂಗೀತ ಪ್ರಿಯರನ್ನು ತಲೆದೂಗುವಂತೆ ಮಾಡಿದ ಹೆಗ್ಗಳಿಕೆ ಈ ಲಯತರಂಗಕ್ಕಿದೆ.

ಈಗ ಅದಕ್ಕೆ 20 ವರ್ಷ… ವಿಶೇಷ ಎಂದರೆ, ಈ ತಂಡದ ಸದಸ್ಯರೆಲ್ಲಾ ಅಂತಾರಾಷ್ಟ್ರೀಯ ಮಟ್ಟದ ಕಲಾವಿದರು. ಐದು ಜನರ, ಲಯತರಂಗವು 12 ವಾದ್ಯಗಳ ಸಂಗಮ. ಒಬ್ಬೊಬ್ಬರೂ ಮೂರ್‍ನಾಲ್ಕು ವಾದ್ಯಗಳನ್ನು ನುಡಿಸುವ ನಿಪುಣರು. ತಾವು ಎಷ್ಟೇ ಬೆಳೆದರೂ ಈ “ಲಯ’ವನ್ನು ಮರೆತಿಲ್ಲ. ಹೀಗಾಗಿಯೇ, ಎರಡು ದಶಕದಿಂದ ಗಟ್ಟಿಯಾಗಿ ತಳವೂರಿ, ನಾಡಿನ ಹಾಗೂ ದೇಶ- ವಿದೇಶಗಳಲ್ಲಿ ಕಾರ್ಯಕ್ರಮ ಕೊಟ್ಟ ಹೆಗ್ಗಳಿಕೆ ಈ ತಂಡಕ್ಕಿದೆ. 

ವಿದ್ವಾನ್‌ ರವಿಚಂದ್ರ ಕುಲೂರ್‌, ಪಂಡಿತ್‌ ರವಿಶಂಕರ್‌ರ ಜೊತೆ ಪ್ರಪಂಚ ಪರ್ಯಟನೆ ಮಾಡಿದ ಕೀರ್ತಿ ಹೊಂದಿದ್ದಾರೆ. ವಿದ್ವಾನ್‌ ಗಿರಧರ್‌ ಉಡುಪ, ಅರುಣ್‌ ಸುಕುಮಾರ್‌ ಕಾಲಿಗೆ ವಿಮಾನದ ಗಾಲಿ ಹಾಕಿಕೊಂಡು ಇಡೀ ಪ್ರಪಂಚವನ್ನೆಲ್ಲಾ ಸುತ್ತುತ್ತಲೇ ಇರುತ್ತಾರೆ. ಪ್ರಮಥ್‌ ಕಿರಣ್‌ಗೆ ಜಗದ ಎಲ್ಲ ಕಲಾವಿದರ ಜೊತೆ ವೇದಿಕೆ ಹಂಚಿಕೊಂಡ ಅಗಾಧ ಅನುಭವ ಜೊತೆಗಿದೆ. ಹೀಗೆ ಎಲ್ಲರೂ ಗಾಂಧಾರ ರಾಗದಂತೆ ಬೆಳೆದು, ವಿಸ್ತಾರವಾಗಿ ಸಂಗೀತ ಪ್ರೇಮಿಗಳು ಮನಸ್ಸಿನಲ್ಲಿ ಹರಿದವರೇ. 
ಹೀಗಿದ್ದರೂ, 20 ವರ್ಷಗಳಿಂದ ತಂಡ “ಲಯ’ದಲ್ಲಿರುವುದಕ್ಕೆ ಹೇಗೆ ಸಾಧ್ಯ?  ಹೆಸರು, ಪ್ರಚಾರ, ಹಣ ಇವರಲ್ಲಿ ಅಹಂ ಮೂಡಿಸಿಲ್ಲವೇ? ಈ ಅನುಮಾನಕ್ಕೆ ಡ್ರಮ್ಮರ್‌ ಅರುಣ್‌ ಸುಕುಮಾರ್‌ ಹೀಗಂದರು… “ನಾವೆಷ್ಟೇ ಬೆಳೆದರೂ ಸ್ನೇಹ, ಸಂಗೀತವನ್ನು ಮರೆತಿಲ್ಲ. ಹೀಗಾಗಿ, ನಮ್ಮಲ್ಲಿ ಯಾರಲ್ಲೂ ಅಹಂ ಹುಟ್ಟಿಲ್ಲ. ವೇದಿಕೆ ಏರಿದಾಕ್ಷಣ ನೇಮು- ಫೇಮುಗಳನ್ನೆಲ್ಲಾ ಮರೆತು ಸಂಗೀತದೊಟ್ಟಿಗೆ ಬೆರೆತುಹೋಗುತ್ತೇವೆ. ಅದೇ ನಮ್ಮನ್ನು ಒಗ್ಗೂಡಿಸಿರುವುದು’ ಅಂದರು.  

 ಈ ಮನೋ ಹೊಂದಾಣಿಕೆಯೇ ಲಯತರಂಗದ ಶಕ್ತಿ  

 ಲಯತರಂಗವನ್ನು ಆರಂಭಿಸಿದವರು ವಿದ್ವಾನ್‌ ಅರುಣ ಸುಕುಮಾರ್‌, ಗಿರಿಧರ್‌ ಉಡುಪ. ಬೆಂಗಳೂರಿನ ಚಾಮರಾಜಪೇಟೆಯ ಮಹಿಳಾಮಂಡಳಿ ಶಾಲೆಯಲ್ಲಿ ಒಂದೇ ಬೆಂಚಿನ ಗೆಳೆಯರು. ಅರುಣ್‌ ಡ್ರಂ, ಗಿರಿಧರ್‌ ಉಡುಪ ಘಟಂ ನುಡಿಸುತ್ತಿದ್ದರು. ಬದುಕಿನಲ್ಲಿ ಏನಾದರು ಮಾಡಬೇಕಲ್ಲ ಅಂತ ಅಂದುಕೊಳ್ಳುವ ಹೊತ್ತಿಗೆ ಹೊಳೆದದ್ದು ಲಯತರಂಗ ತಂಡ ಕಟ್ಟುವ ಐಡಿಯಾ.

ಆರಂಭದಲ್ಲಿ ಇವರೇ ಎರಡು ಕಂಬಗಳಾದರು. ಡಾ. ವಿಷ್ಣು ಸ್ವರೂಪ್‌, ಪ್ರಮಥ್‌ ಕಿರಣ್‌ ಜೊತೆಯಾದಾಗ ಕಂಬ ನಾಲ್ಕಾಯಿತು. ವಿಷ್ಣು ಸ್ವರೂಪ್‌ ವಿದೇಶಕ್ಕೆ ಹಾರಿದರು. ರವಿಚಂದ್ರ ಕುಲೂರ್‌, ಜಯಚಂದ್ರ ತಂಡ ಸೇರಿಕೊಂಡರು. ಈ ತಂಡ ರೂಪಿಸಿದ ಪುನರ್‌ನವ ಆಲ್ಬಂನಲ್ಲಿದ್ದ ಭಾಗ್ಯದಲಕ್ಷಿ$¾àಬಾರಮ್ಮ ಕಂಪೋಸಿಷನ್‌ ಮನಮೆಚ್ಚಿದ ಹಾಡಾಯಿತು. ತಾಂಡವ, ಪ್ರಣವ, ಸ್ಮತಿ, ಆನಂದಂ ಆಲ್ಬಂಗಳು ಹಿಟ್‌ ಆದವು. ಆಗಲೇ ಲಯತರಂಗಕ್ಕೆ ದೊಡ್ಡ ಕೇಳುವ ವರ್ಗ ಹುಟ್ಟಿಕೊಂಡಿದ್ದು. 

 ಈ ಐದೂ ಜನ ಲಯತರಂಗದ ಅಂತರಂಗ. ಎರಡು ದಶಕದಲ್ಲಿ 50 ದೇಶ ತಿರುಗಿದ್ದಾರೆ. ಈ ತಂಡ ಒಂದೇ ಸಂಗೀತಕ್ಕೆ ಅಂಟಿಕೊಂಡಿಲ್ಲ. ಹಿಂದೂಸ್ತಾನಿ, ಕರ್ನಾಟಕಿ, ಪಾಶ್ಚಾತ್ಯ ಸಂಗೀತ ಸೇರಿದ ಪ್ರಸ್ತುತಿಯೇ ಇದರ ವಿಶೇಷ. ಪ್ರಮಥ್‌ ಕಿರಣ್‌ ಲ್ಯಾಟಿನ್‌ ವಾದ್ಯಗಳನ್ನು ಬಳಸುವುದರಿಂದ “ಲಯತರಂಗ’ದ ಅಂತರಂಗದ ಸಂಗೀತದ ಹರಿವೇ ಬೇರೆ ರೀತಿಯಾಗಿದೆ. ಸಮಯ ಸಿಕ್ಕರೆ ಸಾಕು. ಎಲ್ಲರೂ ಕಲೆತು, ಸಂಗೀತದ ಬಗ್ಗೆ ಚರ್ಚಿಸಿ, ರಿಯಾಜು ಮಾಡುವ ರೂಢಿ ಇಂದಿಗೂ ಇಟ್ಟುಕೊಂಡಿದ್ದಾರೆ. ಜಗದ ಸಂಗೀತ ವೇದಿಕೆಯ ಎಲ್ಲ ಅನುಭವಗಳನ್ನು ಕಲೆಸಿ ಇಲ್ಲಿ ಪ್ರಸ್ತುತಪಡಿಸುವುದರಿಂದಲೇ “ಲಯತರಂಗ ಸಂಗೀತೋ ಭಿನ್ನ ರುಚಿಃ’ ಅಂತಾಗಿದೆ.

ಟಾಪ್ ನ್ಯೂಸ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Father; ಚಂದ್ರು ನಿರ್ಮಾಣದ ‘ಫಾದರ್‌’ ಚಿತ್ರಕ್ಕೆ ಮುಹೂರ್ತ

Father; ಚಂದ್ರು ನಿರ್ಮಾಣದ ‘ಫಾದರ್‌’ ಚಿತ್ರಕ್ಕೆ ಮುಹೂರ್ತ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.