ಪರೋಟಾ ಪ್ರಪಂಚ : ಐಟಿ ಮಂದಿಯ ಹೊಟ್ಟೆ ಸೇರುವ 50 ವೆರೈಟಿ

Team Udayavani, Jun 30, 2018, 4:15 PM IST

2556.jpg

ಸ್ವಲ್ಪ ರಶ್‌ ಇದೆ ಸಾರ್‌… ಪ್ಲೀಸ್‌ ಒಂದಿಪ್ಪತ್‌ ನಿಮಿಷ ವೇಯ್ಟ್‌  ಮಾಡಿ… ಹೋಟೆಲ್‌ನ ಮ್ಯಾನೇಜರ್‌, ಸಂಕೋಚದಿಂದಲೇ ಹೀಗೆ ವಿನಂತಿಸುತ್ತಾರೆ. “ಪರವಾಗಿಲ್ಲ ರೀ, ಅರ್ಧ ಗಂಟೆಯಾದ್ರೂ ಚಿಂತೆಯಿಲ್ಲ, ನಾವು ಪರೋಟಾ ತಿನ್ನದೇ ಹೋಗುವುದಿಲ್ಲ’ ಎಂಬ ಉತ್ತರ ಆ ಚಿಕ್ಕ ಹೋಟೆಲ್‌ನ ಎದುರು ನಿಂತ ಗ್ರಾಹಕರಿಂದ ಬರುತ್ತದೆ. ಇದು, ಎಲೆಕ್ಟ್ರಾನಿಕ್‌ ಸಿಟಿ ಮೊದಲ ಹಂತದ ಇನ್‌ಫೋಸಿಸ್‌ ಕಂಪನಿಗೆ ಸಮೀಪವಿರುವ “ಪರಾಠ ವಾಲಿ ಗಲಿ’ ಹೋಟೆಲ್‌ನಲ್ಲಿ ದಿನವೂ ಕೇಳಿಬರುವ ಸಂಭಾಷಣೆಯ ತುಣುಕು.

ವಿಶೇಷವೇನೆಂದರೆ, ವಿಪ್ರೋ, ಇನ್ಫೋಸಿಸ್‌ ಮತ್ತು ಇನ್ನೊಂದಷ್ಟು ಎಂಎನ್‌ಸಿಗಳ ನೌಕರರೇ ಈ ಹೋಟೆಲ್‌ನ ಕಾಯಂ ಗ್ರಾಹಕರು. ಶನಿವಾರ ಹಾಗೂ ಭಾನುವಾರಗಳಂದು ಕಾರ್ಪೊರೇಟ್‌ ಕಂಪನಿಗಳಿಗೆ ರಜೆ ಇರುತ್ತದೆ. ಹಾಗಿದ್ದರೂ, ಪರೋಟಾ ತಿನ್ನಬೇಕೆಂಬ ಒಂದೇ ಉದ್ದೇಶದಿಂದ ಹಲವರು ಶನಿವಾರ ಹಾಗೂ ಭಾನುವಾರದಂದು ಈ ಹೋಟೆಲ್‌ಗೆ ಬರುತ್ತಾರೆ!  ಈ ಹೋಟೆಲ್‌ನ ಓನರ್‌ ಕಂ ಮ್ಯಾನೇಜರ್‌ ಆಗಿರುವವರು ದೇವೇಂದ್ರ. ರಾಜಾಸ್ಥಾನ ಮೂಲದ ಅವರು ಈ ಮೊದಲು ಮನೆಯಲ್ಲಿಯೇ ಪರೋಟಾ ಮಾಡಿ ಅದನ್ನು ಬಾಕ್ಸ್‌ಗಳಲ್ಲಿ ತುಂಬಿಕೊಂಡು ಹೋಗಿ ಕಾರ್ಪೊರೇಟ್‌ ಕಂಪನಿಗಳಲ್ಲಿ ಮಾರುತ್ತಿದ್ದರಂತೆ. ಕ್ರಮೇಣ ಪರೋಟಾಗಳಿಗೆ ಬೇಡಿಕೆ ಹೆಚ್ಚಿದ್ದರಿಂದ ಒಂದು ಚಿಕ್ಕ ಜಾಗವನ್ನು ಬಾಡಿಗೆಗೆ ಹಿಡಿದು ಅಲ್ಲಿ “ಪರಾಠ ವಾಲಿ ಗಲಿ’ ಹೋಟೆಲ್‌ ಅನ್ನು ಆರಂಭಿಸಿದ್ದಾರೆ.

ಪರೋಟಾ ಗರಿಗರಿಯಾಗಿ ಬಿಸಿಬಿಸಿಯಾಗಿ ಇರಬೇಕು. ಆಗ ಅದರ ಟೇಸ್ಟ್‌ ಬಾಯಿ ಚಪ್ಪರಿಸುವಂತೆ ಇರುತ್ತದೆ. ನಾವು ಯಾವುದೇ ಕೃತಕ ಪದಾರ್ಥಗಳನ್ನೂ ಬಳಸುವುದಿಲ್ಲ. ಪರೋಟಾದ ಜೊತೆಗೆ ಹಾಕಿಕೊಡುವ ಟೊಮೇಟೊ ಚಟ್ನಿ ಚೆನ್ನಾಗಿದ್ದರೆ, ಒಂದು ಪರೋಟಾವನ್ನು ಜಾಸ್ತಿ ತಿನ್ನುವ ಮನಸ್ಸಾಗುತ್ತದೆ. ನಾವು ಈಗಲೂ ಚಟ್ನಿ ತಯಾರಿಕೆಗೆ ಮಿಕ್ಸಿ ಬಳಸುವುದಿಲ್ಲ. ಒರಳು ಕಲ್ಲಿನಲ್ಲಿ ರುಬ್ಬಿಯೇ ಟೊಮೇಟೊ ಚಟ್ನಿ ತಯಾರಿಸುತ್ತೇವೆ. ಗ್ರಾಹಕರು ನಮ್ಮ ಹೋಟೆಲ್‌ನ ರುಚಿಗೆ ಮಾರುಹೋಗಲು ಇದೂ ಒಂದು ಮುಖ್ಯ ಕಾರಣ ಎನ್ನುತ್ತಾರೆ ದೇವೇಂದ್ರ.

ಚಿಲ್ಲರೆ ಸಮಸ್ಯೆ ಇಲ್ಲ…
ಚಿಲ್ಲರೆ ಇಲ್ಲ ಅನ್ನೋದು ಈಗ ಎಲ್ಲ ಹೋಟೆಲ್‌ ಗಳಲ್ಲೂ ಮಾಮೂಲಿ ಆಗಿರುವ ಸಮಸ್ಯೆ. ಪರಾಠಾ ವಾಲಿ ಗಲಿ ಹೋಟೆಲ್‌ನಲ್ಲಿ ಈ ಸಮಸ್ಯೆಗೂ ಪರಿಹಾರ ಕಂಡುಕೊಂಡಿದ್ದಾರೆ. ಪೇಟಿಎಂ, ಫೋನ್‌ ಪೇ, ತೇಜ್‌ ಆ್ಯಪ್‌ ಹಾಗೂ ಆನ್‌ಲೈನ್‌ ಮೂಲಕ ಹಣ ಪಾವತಿಸುವ ವ್ಯವಸ್ಥೆ ಈ ಹೋಟೆಲಿನಲ್ಲಿದೆ

50 ಥರದ ಪರೋಟಾ…
ಈ ಹೋಟೆಲ್‌ನಲ್ಲಿ ಒಂದೆರಡಲ್ಲ, ಬರೋಬ್ಬರಿ 50 ಬಗೆಯ ಪರೋಟಾಗಳು ಸಿಗುತ್ತವೆ. ಅವುಗಳ ಬೆಲೆ, ಒಂದಕ್ಕೆ 30 ರೂ.ನಿಂದ ಶುರುವಾಗಿ 150 ರೂ.ವರೆಗೂ ಇದೆ. ಉತ್ತರಭಾರತದಲ್ಲಿ, ಅದರಲ್ಲೂ ದೆಹಲಿ ಹಾಗೂ ರಾಜಾಸ್ಥಾನ ಸೀಮೆಯ ಎಲ್ಲ ಪರೋಟಾಗಳನ್ನು ನಾವು ತಯಾರಿಸುತ್ತೇವೆ. ಅಮೃತ್‌ಸರಿ ಪರೋಟಾಕ್ಕೆ ಬೇಡಿಕೆ ಹೆಚ್ಚು. ಒಂದು ದಿನಕ್ಕೆ 1,200ರಿಂದ 1,500 ರವರೆಗೂ ಪರೋಟಾಗಳು ಮಾರಾಟವಾಗುತ್ತವೆ ಎನ್ನುತ್ತಾರೆ ದೇವೇಂದ್ರ. “ಈ ಹೋಟೆಲ್‌ನಲ್ಲಿ ಬರೀ ಪರೋಟಾ ಮಾತ್ರ ಸಿಗೋದಾ? ಅದು ಇಷ್ಟವಿಲ್ಲ ಅನ್ನುವವರು ಏನ್ಮಾಡ್ಬೇಕು?’ ಎಂಬ ಚಿಂತೆ ಬೇಡ. ಬಿಸಿಬೇಳೆಬಾತ್‌, ಪೊಂಗಲ್‌, ವಾಂಗೀಬಾತ್‌, ಪಪ್ಸ್‌, ಸಮೋಸಾ ಹಾಗೂ ಕಚೋರಿ ಕೂಡ ಇಲ್ಲಿ ಲಭ್ಯ. ಡ್ರೈಫ‌ೂÅಟ್ಸ್‌ಗಳಿಂದ ತಯಾರಿಸಲಾಗುವ ಮಹಾರಾಜ ಲಸ್ಸಿ ಈ ಹೋಟೆಲ್‌ನ ಇನ್ನೊಂದು ಆಕರ್ಷಣೆ. ಬೆಳಗ್ಗೆ 9ರಿಂದ ರಾತ್ರಿ 10ರವರೆಗೆ ಈ ಹೋಟೆಲ್‌ ತೆರೆದಿರುತ್ತದೆ. 

ಟಾಪ್ ನ್ಯೂಸ್

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಸಾವು, 22 ಮಂದಿಗೆ ಗಾಯ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ

Untitled-1

MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಸಾವು, 22 ಮಂದಿಗೆ ಗಾಯ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ

Untitled-1

MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.