ಟ್ರಾಫಿಕ್‌ ಜಾಮ್‌ ಕತೆಗಳು : ಕಾಯುವುದಕ್ಕಿಂತ ಬೇರೆ ತಮಾಷೆಯಿಲ್ಲ…


Team Udayavani, Jun 30, 2018, 4:33 PM IST

4-aa.jpg

ಬೆಂಗಳೂರು ಅಂದ ಕೂಡಲೇ ಥಟ್ಟನೆ ನೆನಪಾಗೋದು ಟ್ರಾಫಿಕ್‌. ಪ್ಯಾರಿಸ್‌ಗೆ ಹೋದವರು ಹೇಗೆ ಐಫೆಲ್‌ ಟವರ್‌ ನೋಡದೇ ಬರುವುದಿಲ್ಲವೋ, ಹಾಗೇ ಬೆಂಗಳೂರಿಗೆ ಬಂದವರು ಟ್ರಾಫಿಕ್‌ ಜಾಮ್‌ಅನ್ನು ಅನುಭವಿಸದೇ ವಾಪಸಾಗುವುದಿಲ್ಲ. ಇಲ್ಲಿನ ನಿವಾಸಿಗಳಿಗಂತೂ ಇದು ನಿತ್ಯ ಕಾಡುವ ಮೈಗ್ರೇನ್‌ ತಲೆನೋವು. ಕೆಲವೊಮ್ಮೆ ಈ ಸಮಸ್ಯೆ ನೋವಿಗಷ್ಟೇ ಅಲ್ಲ, ನಗುವಿಗೂ ಕಾರಣವಾಗುತ್ತದೆ. ಯಾಕಂದ್ರೆ, ಟ್ರಾಫಿಕ್‌ ಎಷ್ಟೇ ಕಿರಿಕಿರಿ ಮಾಡಿದರೂ, ಅದರ ಕುರಿತಾದ ಜೋಕುಗಳು, ತಮಾಷೆಯ ಮಾತುಗಳು ನಮ್ಮನ್ನು ನಗಿಸದೇ ಇರುವುದಿಲ್ಲ. “ಹ್ಯಾಗಿದೇ ಬೆಂಗ್ಳೂರ ಭಾರೀ ಜೋರು ಟ್ರಾಫಿಕ್ಕು’ ಅಂತ “ಅಮೆರಿಕ ಅಮೆರಿಕ’ ಸಿನಿಮಾದಲ್ಲಿ ಕೇಳಿರುವಂತೆ, ಇದು ಬಹುಚರ್ಚಿತ ವಿಷಯವೂ ಹೌದು. ಸಿನಿಮಾ, ಶಾರ್ಟ್‌ ಮೂವಿಗಳ ಸೃಷ್ಟಿಗೂ ಟ್ರಾಫಿಕ್‌ ಕಾರಣವಾಗಿದೆ. ಟ್ರಾಫಿಕ್‌ನ ಕುರಿತಾದ ಕೆಲವು ತಮಾಷೆಗಳು ಇಲ್ಲಿವೆ…

1.ಪ್ರಧಾನಿ ಮೋದಿ ಮಾಸ್ಕೋದಲ್ಲಿದ್ದಾಗ, ಬೆಂಗಳೂರಿನ ಐಟಿ ಹುಡುಗ ಮನೆಯಿಂದ ಆಫೀಸಿಗೆ ಹೊರಟ. ಅವನು ಸಿಲ್ಕ್ಬೋರ್ಡ್‌ ತಲುಪುವಾಗ, ಮೋದಿ ಕಾಬೂಲ್‌ ನಲ್ಲಿದ್ದರು. ಮೋದಿ ಲಾಹೋರ್‌ಗೆ ಹೋಗುವಷ್ಟರಲ್ಲಿ ನಮ್ಮ ಹುಡುಗ ಅಂತೂ ಇಂತೂ ಮಾರತ್‌ಹಳ್ಳಿ ಫ್ಲೈಓವರ್‌ ಸೇರಿದ್ದ. ಮೋದಿ ದೆಹಲಿಗೆ ವಾಪಸಾದರೂ, ಅವನು ವೈಟ್‌ಫೀಲ್ಡ್‌ ಟ್ರಾಫಿಕ್‌ ದಾಟಿ ಆಫೀಸ್‌ ಸೇರಲಿಲ್ಲ.

2.ನಾನು ಕ್ಯಾಬ್‌ನಲ್ಲಿ ಮನೆಗೆ ಹೋಗುತ್ತಿದ್ದೆ. ಪಕ್ಕದ ಮನೆಯವನು ನಡೆದುಕೊಂಡು ಹೋಗುತ್ತಿರುವುದು
ಕಾಣಿಸಿತು. “ನೀವೂ ಜೊತೆಗೆ ಬನ್ನಿ’ ಅಂದೆ. ಅದಕ್ಕವನು,”ಇಲ್ಲ ಇಲ್ಲ, ನಾನು ಸ್ವಲ್ಪ ಬೇಗ ಮನೆಗೆ ಹೋಗಬೇಕು. ನೀವು ನಿಧಾನಕ್ಕೆ ಬನ್ನಿ’ ಅಂದ!

3.ಉತ್ತರ ಭಾರತೀಯ: ನನ್ನ ಗರ್ಲ್ಫ್ರೆಂಡ್‌ ಮೊದಲ ಬಾರಿಗೆ ಬೆಂಗಳೂರಿಗೆ ಬರುತ್ತಿದ್ದಾಳೆ. ಅವಳಿಗೆ ಎಲ್ಲಿ ಪ್ರಪೋಸ್‌ ಮಾಡಿದರೆ ಸರಿ ಅಂತೀಯಾ?
ಬೆಂಗಳೂರಿನವ: ಸಿಲ್ಕ್ ಬೋರ್ಡ್‌ ಟ್ರಾಫಿಕ್‌… ಪ್ರಪೋಸ್‌ ಅಲ್ಲ, ಮದುವೆ ಮಾಡಿಕೊಳ್ಳುವಷ್ಟು ಟೈಮ್‌ ಸಿಗುತ್ತೆ ಅಲ್ಲಿ

4.ಒಬ್ಬ: (ಫೋನ್‌ನಲ್ಲಿ) ಎಲ್ಲಿ ಇರೋದು ನೀವು?
 ಮತ್ತೂಬ್ಬ: ಬೆಂಗಳೂರಲ್ಲಿ
 ಒಬ್ಬ: ಅಲ್ಲಿ ಎಲ್ಲಿರೋದು?
 ಮತ್ತೂಬ್ಬ: ಟ್ರಾಫಿಕ್‌ನಲ್ಲಿ!

5.ಜೀವನದಲ್ಲಿ ಯಶಸ್ಸು ಪಡೆಯೋಕೆ 3 ಬ್ರಿಡ್ಜ್ಗಳನ್ನು ದಾಟಬೇಕು.
ಕೆ.ಆರ್‌. ಪುರಂ ಬ್ರಿಡ್ಜ್
ಮಾರತ್‌ಹಳ್ಳಿ ಬ್ರಿಡ್ಜ್
ಸಿಲ್ಕ್ಬೋರ್ಡ್‌ ಬ್ರಿಡ್ಜ್ 

6. ಬೇರೆ ಕಡೆ: ಮಳೆ ಬಂದ ಮೇಲೆ ಕಾಮನಬಿಲ್ಲು ಮೂಡುತ್ತದೆ
ಬೆಂಗಳೂರಿನಲ್ಲಿ: ಮಳೆ ಬಂದ ಮೇಲೆ ಟ್ರಾಫಿಕ್‌ ಜಾಮ್‌ ಹೆಚ್ಚುತ್ತದೆ

7.ನಾನು ಮುಂದಕ್ಕೆ ಹೋಗೋದಿಲ್ಲ, ನಿನ್ನನ್ನೂ ಹೋಗೋಕೆ ಬಿಡೋದಿಲ್ಲ
ನೀನು ಮುಂದೆ ಹೋಗ್ತಿಯಾ, ನಾನೂ ಹೋಗ್ತಿನಿ ಕೊನೆಗೆ ಯಾರೂ ಹೋಗುವುದಿಲ್ಲ ಬೆಂಗಳೂರಿನಲ್ಲಿ ಟ್ರಾಫಿಕ್‌ ಸೃಷ್ಟಿಯಾಗೋದು ಹೀಗೆ!

8.ಸಂದರ್ಶಕ: ರ್‍ಯಾಂಕ್‌ ಪಡೆಯೋಕೆ ಎಷ್ಟು ಶ್ರಮಪಟ್ಟಿದ್ದೀರಿ?
ರ್‍ಯಾಂಕ್‌ ಪಡೆದವ: ನಾನು ದಿನಾ ಸಿಲ್ಕ್ಬೋರ್ಡ್‌ ಟ್ರಾಫಿಕ್‌ನಲ್ಲಿ, ಕ್ಯಾಬ್‌ನಲ್ಲೇ ಕುಳಿತು 3 ಮಾದರಿ ಪ್ರಶ್ನೆಪತ್ರಿಕೆ ಸಾಲ್ವ್‌ ಮಾಡ್ತಿದ್ದೆ.

9.ಬೆಂಗಳೂರಿನಲ್ಲಿ ಸೆಟಲ್‌ ಆಗೋ ಪ್ಲಾನ್‌ ಇದ್ಯಾ? ಹಾಗಾದ್ರೆ ನಿಮ್ಮ ಆಯಸ್ಸಿನ ಒಂದು ಭಾಗವನ್ನು, “ಟ್ರಾಫಿಕ್‌ನಲ್ಲಿ ಕಳೆಯಲು’ ಎಂದೇ ಎತ್ತಿಟ್ಟುಬಿಡಿ.

10.ನನ್ನ ಗರ್ಲ್ಫ್ರೆಂಡ್‌ ಪುಣೆಯಿಂದ ಬೆಂಗಳೂರಿಗೆ ಬರುತ್ತಿದ್ದಾಳೆ. ಏರ್‌ಪೋರ್ಟ್‌ನಿಂದ ಅವಳನ್ನು ಕರೆದುಕೊಂಡು ಬರಬೇಕು. ಅವಳು ಪುಣೆಯಿಂದ ಹೊರಡೋದಕ್ಕಿಂತ ಅರ್ಧ ಗಂಟೆ ಮುಂಚೆಯೇ ನಾನು ವೈಟ್‌ ಫೀಲ್ಡ್‌ನಿಂದ ಹೊರಟಿದ್ದೇನೆ. ದೇವರೇ, ನನ್ನ ಪ್ರೀತಿಯನ್ನು ಉಳಿಸಪ್ಪಾ!

11.ಸಾಮಾನ್ಯ ಮನುಷ್ಯನ ಸಹನಾಶಕ್ತಿ- 100ರಷ್ಟು ಇದ್ದರೆ, ಬೆಂಗಳೂರಿನಲ್ಲಿ ಗಾಡಿ ಓಡಿಸುವವರದ್ದು-1,00,00,00,000ರಷ್ಟು!

12.ಎರಡು ದೇಹ, ಒಂದು ಜೀವ ಅನ್ನೋದಕ್ಕೆ ಸರಿಯಾದ ಉದಾಹರಣೆ, ಬೆಂಗಳೂರು-ಟ್ರಾಫಿಕ್‌!

13.ಜೀವನದ ಎಲ್ಲ ಸಮಸ್ಯೆಗಳೂ ನಗಣ್ಯ ಅಂತ ಅನ್ನಿಸುವುದು ಸಿಲ್ಕ್ಬೋರ್ಡ್‌ ಟ್ರಾಫಿಕ್‌ನಲ್ಲಿ ಸಿಲುಕಿದಾಗ ಮಾತ್ರ!

14. ಒಬ್ಬ ಮನುಷ್ಯನ ನಿಜ ವ್ಯಕ್ತಿತ್ವವೇನು ಅಂತ ತಿಳಿದುಕೊಳ್ಳಬೇಕಾ? ಅವನನ್ನು ಬೆಂಗಳೂರಿನ ಟ್ರಾಫಿಕ್‌ನಲ್ಲಿ ಸಿಲುಕಿಸಿ. ಅವನ ನಿಜ ಬಣ್ಣ ಬಯಲಾಗುತ್ತೆ.

15.ಎವರಿತಿಂಗ್‌ ಈಸ್‌ ಫೇರ್‌ ಇನ್‌ ಲವ್‌, ವಾರ್‌ ಆ್ಯಂಡ್‌ ಸಿಲ್ಕ್ಬೋರ್ಡ್‌ ಟ್ರಾಫಿಕ್‌ (ಪ್ರೀತಿ, ಯುದ್ಧ ಮತ್ತು ಸಿಲ್ಕ್ಬೋರ್ಡ್‌ ಟ್ರಾಫಿಕ್‌ನಲ್ಲಿ ಏನು ಮಾಡಿದರೂ ಸರಿಯೇ!)

16. ಸಂದರ್ಶಕ: “ಲಾಂಗ್‌ಟರ್ಮ್’ನಲ್ಲಿ ನೀವು ಎಲ್ಲಿರಲು ಬಯಸುತ್ತೀರಿ?
ಅಭ್ಯರ್ಥಿ: ಸಿಲ್ಕ್ಬೋರ್ಡ್‌ ಟ್ರಾಫಿಕ್‌ ದಾಟಿ ಮನೆ ಸೇರಲು ಬಯಸುತ್ತೇನೆ ಸಾರ್‌!

17.ನೀವು ಯಾರನ್ನಾದರೂ ಲವ್‌ ಮಾಡುತ್ತಿದ್ದೀರ ಮತ್ತು ಬೆಂಗಳೂರಿನಲ್ಲಿದ್ದೀರ ಅಂತಾದರೆ, ಅವರನ್ನು ಹೋಗಲು ಬಿಡಿ. ಅವರಾದರೂ ಎಷ್ಟು ದೂರ ಹೋಗೋಕೆ ಸಾಧ್ಯ?

18.ಬೆಂಗಳೂರಿನಲ್ಲಿ ರಸ್ತೆಗಿಳಿಯೋಕೆ ಗಾಡಿ, ಪೆಟ್ರೋಲ್‌ ಅಷ್ಟೇ ಅಲ್ಲ, ಬೆಟ್ಟದಷ್ಟು ತಾಳ್ಮೆ ಕೂಡ ಬೇಕು

ಮದುವೆ ಮುರಿದ ಟ್ರಾಫಿಕ್‌
ಯಾವ್ಯಾವುದೋ ವಿಷಯಕ್ಕೆ ಮದುವೆ ಮುರಿಯುವುದನ್ನು ಕೇಳಿದ್ದೇವೆ. ಆದರೆ, ಕಳೆದ ವರ್ಷ ಬೆಂಗಳೂರಿನ ಐಟಿ ಹುಡುಗನ ಮದುವೆಗೆ ಟ್ರಾಫಿಕ್ಕೇ ವಿಲನ್‌ ಆಗಿ ಕಾಡಿತ್ತು. ಸಿಲ್ಕ್ ಬೋರ್ಡ್‌ ಜಂಕ್ಷನ್‌ ಬಳಿ ವಾಸವಿರುವ ಹುಡುಗನನ್ನು, ಟ್ರಾಫಿಕ್‌ ಕಾರಣ ಹೇಳಿ ಹುಡುಗಿಯ ಅಪ್ಪ ನಿರಾಕರಿಸಿಬಿಟ್ಟರು. ನಮಗಿರುವುದು ಒಬ್ಬಳೇ ಮಗಳು. ಅವಳನ್ನು ನೋಡಬೇಕೆನಿಸದಾಗೆಲ್ಲಾ, ಸಿಲ್ಕ್ ಬೋರ್ಡ್‌ ಟ್ರಾಫಿಕ್‌ ದಾಟಿ ಬರಲು ಸಾಧ್ಯವಿಲ್ಲ. ಬೇಕಿದ್ದರೆ, ಹುಡುಗನೇ ನಮ್ಮ ಏ ರಿಯಾದ ಹತ್ತಿರ ಮನೆ ಮಾಡಲಿ ಎಂಬುದು ಹುಡುಗಿಯ ಅಪ್ಪನ ವಾದವಂತೆ

ಟಾಪ್ ನ್ಯೂಸ್

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

1-qweqweqw

Chennai ಅಪಾರ್ಟ್‌ಮೆಂಟ್‌ನ ಟಿನ್ ರೂಫ್‌ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ

1-weweqwe

Vande Bharat Metro ರೈಲು ಸೇವೆ ಜುಲೈಯಿಂದ ಶುರು? ವಿಶೇಷತೆಗಳೇನು?

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!

Temperature; ಮುಂದಿನ 5 ದಿನ ಅರ್ಧ ರಾಜ್ಯಕ್ಕೆ ಉಷ್ಣ ಅಲೆ ಮುನ್ನೆಚ್ಚರಿಕೆ

Temperature; ಮುಂದಿನ 5 ದಿನ ಅರ್ಧ ರಾಜ್ಯಕ್ಕೆ ಉಷ್ಣ ಅಲೆ ಮುನ್ನೆಚ್ಚರಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

1-qweqweqw

Chennai ಅಪಾರ್ಟ್‌ಮೆಂಟ್‌ನ ಟಿನ್ ರೂಫ್‌ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ

1-weweqwe

Vande Bharat Metro ರೈಲು ಸೇವೆ ಜುಲೈಯಿಂದ ಶುರು? ವಿಶೇಷತೆಗಳೇನು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.