ನೆರಳ ಚಾವಣಿ

Team Udayavani, Apr 10, 2017, 11:54 AM IST

h.jpg

ಬಿಸಿಲು ಯಾವ ಕೋನದಲ್ಲಿ ಮನೆಗೆ ತಾಗುತ್ತದೆ ಎಂಬುದನ್ನು ತಿಳಿಯಲು ಇದಕ್ಕೆಂದೇ ವಿಶೇಷವಾಗಿ ತಯಾರು ಮಾಡಿರುವ ಸನ್‌ ಆ್ಯಂಗಲ್‌ ಪೊ›ಟ್ರಾಕ್ಟರ್‌ – ಸೂರ್ಯಕಿರಣಗಳ ಕೋನ ಕೋಷ್ಠಕ ಲಭ್ಯ. ಇದನ್ನು ಬಳಸಿ ಯಾವ ಕಾಲದಲ್ಲಿ ಸೂರ್ಯ ಎಷ್ಟು ಹೊತ್ತು ಇಲ್ಲವೇ ದಿನವಿಡೀ ನಮ್ಮ ಮನೆಯನ್ನು ಪ್ರವೇಶಿಸುತ್ತಾನೆ? ಎಂಬುದನ್ನು ಪತ್ತೆಹಚ್ಚಬಹುದು! ಈ ವಿಜಾnನ ಹೊಸದೇನಲ್ಲ, ನಮ್ಮ ಪೂರ್ವಜರು ಇಂಥ ಅಧ್ಯಯನದ ಲಾಭ ಪಡದೇ ಬೆಂಗಳೂರಿನ ಗವಿ ಗಂಗಾಧರೇಶ್ವರ ದೇವಸ್ಥಾನದ ಲಿಂಗದ ಮೇಲೆ ನಿರ್ಧಿಷ್ಠ ದಿನದಂದು ಬಿಸಿಲಿನ ಅರ್ಚನೆ ಆಗುವಂತೆ ದೇವಸ್ಥಾನದ ವಿನ್ಯಾಸವನ್ನು ಮಾಡಿದ್ದರು.

ಸೂರ್ಯ ವರ್ಷವಿಡೀ ಪೂರ್ವದಲ್ಲಿ ಹುಟ್ಟಿ ಪಶ್ಚಿಮದಲ್ಲಿ ಮುಳುಗಿದಂತೆ ಕಾಣುವುದು ಸಾಮಾನ್ಯವೇ.  ಆದರೂ ರವಿಯ ಕಿರಣಗಳು ನಮ್ಮನ್ನು ಯಾವ ಕೋನದಲ್ಲಿ ದಿನವಿಡೀ ತಾಗುತ್ತದೆ ಎಂಬುದನ್ನು ಆದರಿಸಿ ವರ್ಷದ ವಿವಿಧ ಋತುಗಳು ನಿರ್ಣಯವಾಗುತ್ತದೆ. ಕೆಳಕೋನದಲ್ಲಿ ಭೂಮಿಯ ನಾವಿರುವ ಪ್ರದೇಶದಲ್ಲಿ ತಗುಲಿದರೆ ಆಗ ಚಳಿಗಾಲ, ಏರುಕೋನದಲ್ಲಿ, ತಲೆಗೆ ನೇರವಾಗಿ ತಾಗಿದರೆ ಆಗಲೇ ಬಿಸಿಲುಗಾಲ. ಹಾಗಾಗಿ ಸೂರ್ಯ  ಯಾವ ಕೋನದಲ್ಲಿ ಆಯಾ ಋತುವಿನಲ್ಲಿ ಇರುತ್ತಾನೆ ಎಂಬುದನ್ನು ಅರಿತು ಅದಕ್ಕೆ ತಕ್ಕಂತೆ ನಮ್ಮ ಮನೆಯ ವಿನ್ಯಾಸ ಮಾಡಿಕೊಂಡರೆ ಬಿಸಿಲುಗಾಲದಲ್ಲೂ ನಮ್ಮ ಮನೆ ತಂಪಾಗಿರುತ್ತದೆ.

ಬಿಸಿಲು ಯಾವ ಕೋನದಲ್ಲಿ ಮನೆಗೆ ತಾಗುತ್ತದೆ ಎಂಬುದನ್ನು ತಿಳಿಯಲು ಇದಕ್ಕೆಂದೇ ವಿಶೇಷವಾಗಿ ತಯಾರು ಮಾಡಿರುವ ಸನ್‌ ಆ್ಯಂಗಲ್‌ ಪೊ›ಟ್ರಾಕ್ಟರ್‌ – ಸೂರ್ಯಕಿರಣಗಳ ಕೋನ ಕೋಷ್ಠಕ ಲಭ್ಯ. ಇದನ್ನು ಬಳಸಿ ಯಾವ ಕಾಲದಲ್ಲಿ ಸೂರ್ಯ ಎಷ್ಟು ಹೊತ್ತು ಇಲ್ಲವೇ ದಿನವಿಡೀ ನಮ್ಮ ಮನೆಯನ್ನು ಪ್ರವೇಶಿಸುತ್ತಾನೆ? ಎಂಬುದನ್ನು ಪತ್ತೆಹಚ್ಚಬಹುದು! ಈ ವಿಜಾnನ ಹೊಸದೇನಲ್ಲ, ನಮ್ಮ ಪೂರ್ವಜರು ಇಂಥ ಅಧ್ಯಯನದ ಲಾಭ ಪಡದೇ ಬೆಂಗಳೂರಿನ ಗವಿ ಗಂಗಾಧರೇಶ್ವರ ದೇವಸ್ಥಾನದ ಲಿಂಗದ ಮೇಲೆ ನಿರ್ಧಿಷ್ಠ ದಿನದಂದು ಬಿಸಿಲಿನ ಅರ್ಚನೆ ಆಗುವಂತೆ ದೇವಸ್ಥಾನದ ವಿನ್ಯಾಸವನ್ನು ಮಾಡಿದ್ದರು.

ನೀವೂ ಕೂಡ ನಿಮ್ಮ ಮನೆಗೆ ಇದೇ ರೀತಿಯಲ್ಲಿ ರವಿಯ ಸ್ಥಾನಮಾನಗಳನ್ನು ಅರಿತು ಬೇಕಾದ ಋತುವಿನಲ್ಲಿ ಅಂದರೆ ಚಳಿಗಾಲದಲ್ಲಿ ಸೂರ್ಯ ಕಿರಣಗಳನ್ನು ಆಹ್ವಾನಿಸಿ, ಬೇಸಿಗೆಯಲ್ಲಿ ದೂರವಿಡಬಹುದು. ನಮಗೆ ನಮ್ಮ ಮನೆಯ ಯಾವ ಗೋಡೆ, ಕಿಟಕಿಗಳ ಮೇಲೆ ಯಾವ ಕೋನದಲ್ಲಿ ಸೂರ್ಯ ಕಿರಣಗಳು ತಾಗುತ್ತವೆ ಎಂಬುದು ತಿಳಿದರೆ, ಅದಕ್ಕೆ ಸೂಕ್ತವಾದ ನೆರಳು ಬೀಳುವ ಸಾಧನವನ್ನು ಇಲ್ಲವೇ ಉಷ್ಣನಿರೋಧಕ ವಸ್ತುಗಳ‌ನ್ನು ಬಳಸಬಹುದು.

ಕಿರಣಗಳ ಲೆಕ್ಕಾಚಾರ
ಸೂರ್ಯ ಉತ್ತರಕ್ಕೆ ಚಲಿಸುತ್ತಿರುವಂತೆ ಡಿಸೆಂಬರ್‌ 22ರ ನಂತರ ಅನುಭವವಾಗಲು ಶುರುವಾಗಿದ್ದು ಅದು ಚಳಿಗಾಲವಾದ ಕಾರಣ ಸುಮಾರು 60 ಡಿಗ್ರಿಯಷ್ಟು ಕೆಳಕೋನದಲ್ಲಿ ನಮಗೆ ತಾಗಿದಾಗ, ಆಗ ಚಳಿಗಾಲವಾದ ಕಾರಣ ಆಹ್ಲಾದಕರವಾಗಿರುತ್ತದೆ. ಆದರೆ ಈಗ ಅಂದರೆ ಮಾರ್ಚ್‌ ನಂತರ ತಲೆಯಮೇಲೆ ಏರು ಕೋನದಲ್ಲಿ ಸುಡಲು ಶುರುವಾಗಿದೆ. ಸೂರ್ಯಕಿರಣಗಳ ಕೋನ ಸುಮಾರು 75 ಡಿಗ್ರಿಯಷ್ಟಿದ್ದು ಸೆಖೆಯ ಅನುಭವ ತೀವ್ರವಾಗತೊಡಗಿದೆ. ಇನ್ನು ಏಪ್ರಿಲ್‌ 15 ರಿಂದ ಮೇ 15ರವರೆಗೆ  ನೇರಾತಿನೇರವಾಗಿ ತಲೆಯ ಮೇಲೆಯೇ ಹೆಚ್ಚಾಕಡಿಮೆ 90 ಡಿಗ್ರಿ ಕೋನದಲ್ಲಿ ಎರಗುವುದರಿಂದ ನಮಗೆ ಬಿಸಿಲಿನ ಅಡ “ಕತ್ತರಿ’ ಯಲ್ಲಿ ಸಿಲುಕಿದಷ್ಟು ತೀಕ್ಷ್ಣವಾದ ಸೂರ್ಯನ ಕಿರಣಗಳ ತಾಪಕ್ಕೆ ಒಳಗಾಗಬೇಕಾಗುತ್ತದೆ. ಈ ಎಲ್ಲ ಲೆಕ್ಕಾಚಾರಗಳನ್ನಿಟ್ಟುಕೊಂಡು ನಮ್ಮ ಮನೆಯನ್ನು ಬೇಸಿಗೆಯಲ್ಲಿ ತಂಪಾಗಿ ಇಟ್ಟುಕೊಳ್ಳುವುದು ಹೇಗೆ?

ಬಿಸಿಲಿಗೆ ತಡೆಗಳನ್ನು ಬಳಸಿ
ಬಿಸಿಲಿಗೆ ನೇರವಾಗಿ ತೆರೆದುಕೊಂಡಾಗ, ಅದರಲ್ಲೂ ಗಾಢ ಅಂದರೆ ಕಪ್ಪು ಬಣ್ಣದ ವಸ್ತು ಆಗಿದ್ದರಂತೂ ಅತಿ ಹೆಚ್ಚು ತಾಪಮಾನ ಏರಿಕೆಗೆ ಒಳಗಾಗುತ್ತದೆ.  70- 80 ಡಿಗ್ರಿ ಸೆಲಿÒಯಸ್‌ ನಷ್ಟು ಬಿಸಿಯಾಗುತ್ತದೆ.  ಸೋಲಾರ್‌ ಮೀಟರ್‌ ನೀರನ್ನು ಉಪಯೋಗಿಸಿದವರಿಗೆ ಇದರ ಅನುಭವ ಬೇಸಿಗೆಯಲ್ಲಿ ಚೆನ್ನಾಗಿ ಆಗಿರುತ್ತದೆ.  ನಿಮ್ಮ ಮನೆ ಈ ರೀತಿಯಲ್ಲಿ ಸೂರ್ಯ ಕಿರಣಗಳಿಗೆ ಒಳಗಾದರೆ ಬಿಸಿಯೇರಿ ಒಳಗಿರಲು ಅಸಾಧ್ಯವಾಗಬಹುದು. ಹಾಗಾಗಿ ಸೂಕ್ತ ನೆರಳುನೀಡುವ ಶೇಡ್‌ – ಸಜಾj ಹಾಗೂ ಇತರೆ ವಿಧಾನಗಳನ್ನು ಅಳವಡಿಸುವುದು ಅನಿವಾರ್ಯ. ನೆರಳಿನಲ್ಲಿ ಸಾಮಾನ್ಯವಾಗಿ ಮಧ್ಯಾಹ್ನದ ಹೊತ್ತು ಸುಮಾರು 30 ಡಿಗ್ರಿಯಷ್ಟಿದ್ದು ರಾತ್ರಿ ಅದಕ್ಕಿಂತ ಕೆಳಗಿರುತ್ತದೆ.  

ಗೋಡೆಗಳಿಗೆ ನೆರಳು
ಗೋಡೆ ದಪ್ಪಗಾದಷ್ಟೂ ಬಿಸಿಲಿನ ಝಳ ಒಳಹರಿಯಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಎಂಬುದು ನಿಜ. ಆದರೂ ಅವು ಅದೇ ರೀತಿಯಲ್ಲಿ ರಾತ್ರಿಯ ಹೊತ್ತು ಒಳಗೂ ಅದೇ ಬಿಸಿಯನ್ನು ಹರಿಸುವ ಸಾಧ್ಯತೆ ಇರುತ್ತದೆ. ಹಾಗಾಗಿ ಗೋಡೆಗಳು ಬಿಸಿಯೇರದಂತೆ ಸೂಕ್ತ ನೆರಳು ಸಾಧನಗಳನ್ನು ಅಳವಡಿಸಬಹುದು. 

ಬೇಸಿಗೆಯಲ್ಲಿ ಉತ್ತರದ ಗೋಡೆಗಳಿಗೆ ದಿನದ ಹೆಚ್ಚುಹೊತ್ತು ಸುಮಾರು 75 ಡಿಗ್ರಿ ಕೋನದಿಂದ ಬಿಸಿಲು ಬೀಳುತ್ತದೆ. ಇದರಿಂದ ಸೂರು ಹಾಗೂ  ಲಿಂಟಲ್‌ವುಟ್ಟದಲ್ಲಿ ಒಂದು ಹಾಗೂ ಎರಡು ಅಡಿ ಪೊ›ಜೆಕ್ಷನ್‌ ಕೊಟ್ಟರೆ, ಮಧ್ಯಾಹ್ನದ ಸೂರ್ಯನ ಕಿರಣಗಳಿಂದ ರಕ್ಷಣೆ ಪಡೆದು ಗೋಡೆ ಬಿಸಿಯೇರುವುದನ್ನು ತಡೆಯಬಹುದು. ಈ ಚಾಚು ಸಜಾjಗಳು ಕಿಟಕಿಗಳ ಮೇಲೆ ಹಾಕುವ ಸಾಮಾನ್ಯ ಸಜಾjಗಳಂತಿರಬಹುದು. ಇಲ್ಲವೇ ಇನ್ನೂ ಹೆಚ್ಚು ತೆರೆದುಕೊಂಡಿರುವ ಪೆರೊYಲ ಫಿನ್‌ ಮಾದರಿಯಲ್ಲೂ ಇರಬಹುದು.

ಸೂರಿಗೆ ನೆರಳು
ಮನೆಯ ಗೋಡೆಗಳಿಗಿಂತ ದಿನದ ಬಹುಹೊತ್ತು ಬಿಸಿಲು ತಾಗುವುದು ಸೂರಿಗೆ, ಹಾಗಾಗಿ ಸೂಕ್ತ ನೆರಳಿನ ವ್ಯವಸ್ಥೆ ಮಾಡಿದರೆ ನಮ್ಮ ಸೂರು ತಣ್ಣಗಾಗಿ, ಮನೆಯ ಒಳಗೂ ತಂಪಾಗಿರುತ್ತದೆ. ಸಾಮಾನ್ಯವಾಗಿ ಬೇಸಿಗೆಯ ಬಿಸಿಲಿನಿಂದ ನೆರಳು ಪಡೆಯಲು ಪಶ್ಚಿಮ ಹಾಗೂ ಉತ್ತರದಿಕ್ಕಿನಲ್ಲಿ  ಪೆರೊYಲಗಳನ್ನು ವಿನ್ಯಾಸ ಮಾಡಲಾಗುವುದು.  ಇವು ಗಾಳಿ ಹರಿದಾಡಲು ಅಡ್ಡಿಪಡಿಸದೆ ಸಾಕಷ್ಟು ನೆರಳನ್ನು ನೀಡುತ್ತವೆ.  ಇನ್ನು ಈ ಪೆರೊYಲಾಗಳಿಗೆ ಹಸಿರು ಬಳ್ಳಿಗಳನ್ನು ಹಾುಸಿದರೆ ನಮ್ಮ ಮನೆ ಇನ್ನೂ ತಂಪಾಗುವುದು ಖಚಿತ.

ಗಿಡಮರಗಳ ನೆರಳಿನ ಲೆಕ್ಕಾಚಾರ 
ಮನೆಗೊಂದು ಮರವಿದ್ದರೆ ಸಾಕಷ್ಟು ನೆರಳು ಬಿದ್ದು ಮನೆ ತಂಪಾಗುವುದು ನಮಗೆಲ್ಲ ಗೊತ್ತೇ ಇದೆ. ಆದರೆ ಮರ ಎಲ್ಲಿದ್ದರೆ ಒಳ್ಳೆಯದು? ಪೂರ್ವದಿಕ್ಕಿನಲ್ಲಿ ಬೆಳಗಿನ ಸೂರ್ಯ ಕಿರಣಗಳ ತೀಕ್ಷ್ಣತೆ ಹೆಚ್ಚಾಗಿ ಅರಿವಿಗೆ ಬರುವುದಿಲ್ಲ. ವಾತಾವರಣ ಹಾಗೂ ಮನೆಯೂ ರಾತ್ರಿ ಇಡೀ ಶಾಖ ಕಳೆದುಕೊಂಡು ತಂಪಾಗಿರುವ ಕಾರಣ ನಮಗೆ ಹೆಚ್ಚು ತಾಪತ್ರಯವಿರುವುದಿಲ್ಲ. ಆದರೆ ಮಧ್ಯಾಹ್ನ ಬಿಸಿಯೇರಿದ ಹೊತ್ತು ಹಾಗೂ ಸಂಜೆಯ ವೇಳೆ ಪಶ್ಚಿಮ ಹಾಗೂ ಉತ್ತರದಿಂದ ನಮಗೆ ತೀಕ್ಷ್ಣವಾದ ಬಿಸಿಲಿನ ಅನುಭವವಾಗುತ್ತದೆ. ಹಾಗಾಗಿ ಈ ದಿಕ್ಕಿನಿಂದ ನೆರಳು ಬೀಳುವಂತೆ ಮರಗಿಡ ನೆಡಿ. 

ಬೆಂಗಳೂರಿನಂಥ ತಂಪು ಹವಾಮಾನಕ್ಕೆ ಹೆಸರಾದ ನಗರದಲ್ಲಿ ಮನೆಯ ಮೇಲೆ ಚಳಿಗಾಲದಲ್ಲಿ ಮರದ ನೆರಳು ಬೀಳದಂತೆ ಎಚ್ಚರ ವಹಿಸುವುದು ಒಳ್ಳೆಯದು. ಇಲ್ಲದಿದ್ದರೆ ತಿಕ್ಷ್ಣವಾದ ಚಳಿಯ ಅನುಭವವಾಗುವುದು ಖಚಿತ.
ಸೂರ್ಯನ ಕಿರಣಗಳು ಯಾವಯಾವ ಕೋನಗಳಿಂದ ಭೂಮಿಯನ್ನು ಸ್ಪರ್ಶಿಸಿ ಚಳಿ, ಬೇಸಿಗೆ, ಮಳೆಗಾಲಗಳಿಗೆ ಕಾರಣವಾಗುತ್ತದೆ ಎಂಬುದರ ಜಾnನ ನೂರಾರು ವರ್ಷಗ ಹಿಂದೆಯೇ ನಮಗೆ ಲಭ್ಯವಾಗಿದೆ. ಸೂರ್ಯನ ಉತ್ತರಾಯಣ- ದಕ್ಷಿಣಾಯಣ ಪ್ರಯಾಣಗಳೆಲ್ಲವೂ ಜನಸಾಮಾನ್ಯರಿಗೂ ತಿಳಿದ ವಿಷಯವಾಗಿರುತ್ತದೆ. ಇದೇ ಮಾಹಿತಿಯನ್ನಾಧರಿಸಿ  ಚಳಿಗಾಲದಲ್ಲಿ ಮನೆಯನ್ನು ಬೆಚ್ಚಗಿಟ್ಟುಕೊಳ್ಳುವ ರೀತಿಯಲ್ಲೇ ಬೇಸಿಗೆಯಲ್ಲೂ ನೆರಳು ಪಡೆದು ನಮ್ಮ ಮನೆಯನ್ನು ತಂಪಾಗಿ ಇಟ್ಟುಕೊಳ್ಳಬಹುದು.

ಟಾಪ್ ನ್ಯೂಸ್

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

1-aaasdeqweqw

India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್‌ ಯುಗಾರಂಭ

1-hockey

Paris Olympics ಹಾಕಿ ಕಂಚಿನಿಂದಾಚೆ ಮಿಂಚಲಿ ಭಾರತ

modi (4)

NITI Aayog ಸಭೆ ಇಂದು; “ವಿಕಸಿತ ಭಾರತ’ದ ಬಗ್ಗೆ ಚರ್ಚೆ: 7 ರಾಜ್ಯಗಳಿಂದ ಬಹಿಷ್ಕಾರ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

1-aaasdeqweqw

India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್‌ ಯುಗಾರಂಭ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.