ಸೂಪರ್‌ “6 T’


Team Udayavani, Nov 5, 2018, 6:00 AM IST

moblie-aa.jpg

ಫ್ಯಾನ್‌ಗಳು ಕಾಯುತ್ತಿದ್ದ ಒನ್‌ ಪ್ಲಸ್‌ 6 ಟಿ ಇದೀಗ ತಾನೇ ಬಿಡುಗಡೆಯಾಗಿದೆ. ಇದರ ಹಿಂದಿನ 6 ಮಾಡೆಲ್‌ಗಿಂತ 6ಟಿ ಹೇಗೆ ಭಿನ್ನ? ಅದರಲ್ಲಿ ಇಲ್ಲದ್ದು ಇದರಲ್ಲಿ ಏನಿದೆ? ನೋಡೋಣ ಬನ್ನಿ

ಮೊಬೈಲ್‌ ಫೋನ್‌ ಮಾರುಕಟ್ಟೆಯಲ್ಲಿ ಒನ್‌ ಪ್ಲಸ್‌ ಬ್ರಾಂಡ್‌ಗೆ ತನ್ನದೇ ಆದ ಸ್ಥಾನವಿದೆ. ಉತ್ತಮ ಫೀಚರ್‌ಗಳುಳ್ಳ, ಅತ್ಯುನ್ನತ ಪ್ರೊಸೆಸರ್‌ ಹಾಕಿರುವ ಪ್ರೀಮಿಯಂ ವಿಭಾಗದ ಫೋನ್‌ ಗಳನ್ನು ಕೊಳ್ಳಬೇಕಾದರೆ 70 ಸಾವಿರದಿಂದ 1 ಲಕ್ಷ ರೂ. ಕೊಡಬೇಕು ಎಂಬ ಮಾತುಗಳನ್ನು ಸುಳ್ಳು ಮಾಡಿದ ಬ್ರಾಂಡ್‌ ಇದು. 2014 ರಲ್ಲಿ ಈ ಬ್ರಾಂಡ್‌ ಹೊರ ತಂದ ಒನ್‌ ಪ್ಲಸ್‌ ಒನ್‌, ಮೊಬೈಲ್‌ ಫೋನ್‌,  ಕ್ರಾಂತಿಯನ್ನೇ ಉಂಟು ಮಾಡಿತು. ದೊಡ್ಡ ಬ್ರಾಂಡ್‌ ಕಂಪನಿಗಳು ಕನಿಷ್ಠ  50 ರಿಂದ 70 ಸಾವಿರಕ್ಕೆ ಮಾರುವ ಫೋನನ್ನು 19999 ರೂ.ಗೆ ನೀಡುವ ಮೂಲಕ ಅಚ್ಚರಿ ಮೂಡಿಸಿತು. ಒನ್‌ ಪ್ಲಸ್‌ ಬ್ರಾಂಡ್‌ನ‌ ಪಿತಾಮಹ ಕಂಪೆನಿ, ಚೀನಾದ ಬಿಬಿಕೆ. ವಿವೋ ಮತ್ತು ಒಪ್ಪೋ, ರಿಯಲ್‌ಮಿ ಮತ್ತು ಒನ್‌ಪ್ಲಸ್‌ ಇಷ್ಟೂ ಕೂಡ ಒಂದೇ ಕುಟುಂಬಕ್ಕೆ ಸೇರಿದವು!  ಈ ಪೈಕಿ ವಿವೋ ಒಪ್ಪೋ ಆಫ್ಲೈನ್‌ (ಅಂಗಡಿ ಮಾರಾಟ)ಕ್ಕೆ ಒತ್ತು ನೀಡಿದರೆ, ಒನ್‌ಪ್ಲಸ್‌ ಮತ್ತು ರಿಯಲ್‌ಮಿ ಆನ್‌ಲೈನ್‌ ಮಾರಾಟದ ಬ್ರಾಂಡ್‌ಗಳಾಗಿವೆ.

ನೆವರ್‌ ಸೆಟ್ಲ ಎಂಬುದು ಈ ಒನ್‌ ಪ್ಲಸ್‌ ಬ್ರಾಂಡ್‌ನ‌ ಧ್ಯೇಯ ವಾಕ್ಯ. ಯಾವುದೋ ಒಂದು ಉತ್ತಮವಾದುದಕ್ಕೆ ಸೆಟ್ಲ ಆಗಬೇಡಿ. ಅದಕ್ಕಿಂತಲೂ ಉತ್ತಮವಾದುದನ್ನು ಹುಡುಕಿ. ಅತ್ಯುತ್ತಮವಾದುದನ್ನು, ಲೇಟೆಸ್ಟ್‌ ಆದುದನ್ನು ನೀಡುತ್ತಲೇ ಇರುವ ಉದ್ದೇಶ ನಮ್ಮದು. ನಾವು ಸೆಟ್ಲ ಆಗುವುದಿಲ್ಲ ಎನ್ನುತ್ತದೆ ಕಂಪೆನಿ. ಮೊಬೈಲ್‌ ಗಿಕಿಗಳು, ಸಾಫ್ಟ್ವೇರ್‌ ಇಂಜಿನಿಯರ್‌ಗಳು, ತಂತ್ರಜ್ಞಾನದ ಬಗ್ಗೆ ಚೆನ್ನಾಗಿ ಗೊತ್ತಿರುವವರು ಒನ್‌ ಪ್ಲಸ್‌ ಫೋನ್‌ಗಳನ್ನು ಹೆಚ್ಚು ಇಷ್ಟಪಡುತ್ತಾರೆ. ಈ ಬ್ರಾಂಡ್‌ಗೆ ದೊಡ್ಡ ಫ್ಯಾನ್‌ಗಳ ಪಡೆಯಿದೆ. ಸದ್ಯ ಭಾರತದಲ್ಲಿ ಪ್ರೀಮಿಯಂ ಫೋನ್‌ಗಳ ವಿಭಾಗದಲ್ಲಿ ಒನ್‌ಪ್ಲಸ್‌ ನಂ. 1 ಸ್ಥಾನದಲ್ಲಿದೆ. 

ಇದು ಫ್ಲಾಗ್‌ಶಿಪ್‌ ಅಂದರೆ, ಪ್ರೀಮಿಯಂ ಫೋನ್‌ಗಳನ್ನು ಮಾತ್ರ ತಯಾರಿಸುತ್ತದೆ. 20 ಸಾವಿರ ಇದ್ದ ಅದರ ಫೋನ್‌ಗಳು ಈಗ 37 ಸಾವಿರ ರೂ. ಆರಂಭಿಕ ದರಕ್ಕೆ ಬಂದಿವೆ! ಬರಬರುತ್ತಾ ದುಬಾರಿಯಾಗುತ್ತಿದೆ ಎಂಬ ಆರೋಪವೂ ಒನ್‌ ಪ್ಲಸ್‌ ವಿರುದ್ಧ ಇದೆ. ಒನ್‌ಪ್ಲಸ್‌ 1, ಒನ್‌ಪ್ಲಸ್‌2, ಒನ್‌ಪ್ಲಸ್‌ 3 ಮತ್ತು ಒನ್‌ಪ್ಲಸ್‌3ಟಿ, ಒನ್‌ಪ್ಲಸ್‌ 5 ಮತ್ತು ಒನ್‌ಪ್ಲಸ್‌5ಟಿ, ಒನ್‌ಪ್ಲಸ್‌6 ಆಗಿ, ಇದೀಗ ತಾನೇ ಒನ್‌ಪ್ಲಸ್‌ 6 ಟಿ ಬಿಡುಗಡೆ ಮಾಡಿದೆ. (ಒನ್‌ಪ್ಲಸ್‌ 4 ಹೆಸರಿನಲ್ಲಿ ಮೊಬೈಲ್‌ ಬರಲಿಲ್ಲ. ಚೀನಾದವರಿಗೆ 4 ಸಂಖ್ಯೆ ಅಶುಭವಂತೆ!)

ಒನ್‌ ಪ್ಲಸ್‌ 3 ಬಂದ ನಂತರ ಕಂಪೆನಿ ಅದರಲ್ಲಿ ಸಣ್ಣಪುಟ್ಟ ಬದಲಾವಣೆ ಮಾತ್ರ ಮಾಡಿ 3ಟಿ ಎಂಬ ಮಾಡೆಲ್‌ ಅನ್ನು ನಾಲ್ಕೈದು ತಿಂಗಳ ನಂತರ ಬಿಡುಗಡೆ ಮಾಡಿತು. ಈ ಸಂಪ್ರದಾಯವನ್ನು ಒನ್‌ಪ್ಲಸ್‌5ಟಿ ಗೂ ಮುಂದುವರೆಸಿತು. ಈಗ ಇದೇ ವರ್ಷದ ಮೇನಲ್ಲಿ ಒನ್‌ ಪ್ಲಸ್‌ 6 ಬಂದಿತ್ತು. ನಂತರ, ಈಗ ನವೆಂಬರ್‌ನಲ್ಲಿ 6ಟಿ ತಂದಿದೆ. ಅದೇ ಸರಣಿಯಲ್ಲಿ ಟಿ ಎಂಬ ಅಕ್ಷರ ಬರುವ ಈ ಮಾಡೆಲ್‌ಗ‌ಳ ಅಚ್ಚು ಆಕಾರ ಅದೇ ಇರುತ್ತದೆ. ಪ್ರೊಸೆಸರ್‌, ಕ್ಯಾಮರಾದ ಪಿಕ್ಸಲ್‌ ಅದೇ ಇರುತ್ತದೆ. ಆದರೆ ಕೆಲವು ಟೆಕ್ನಾಲಜಿಗಳನ್ನು ಮತ್ತಷ್ಟು ಉನ್ನತೀಕರಿಸಿ ಹೊಸದನ್ನು ಬಿಟ್ಟು, ಹಳೆಯ ಮಾಡೆಲ್‌ನ ಮಾರಾಟ ನಿಲ್ಲಿಸುತ್ತದೆ.  ಹಾಗಾದರೆ ಮೊನ್ನೆಯಷ್ಟೇ ಬಿಡುಗಡೆಯಾಗಿರುವ ಒನ್‌ ಪ್ಲಸ್‌ 6ಟಿಯಲ್ಲಿ ಕಳೆದ ವರ್ಷನ್‌ 6 ನಲ್ಲಿ ಇರದ ಹೊಸದೇನಿದೆ? ನೋಡೋಣ.

3.5 ಆಡಿಯೋ ಜಾಕ್‌ ಇಲ್ಲ: ಒನ್‌ ಪ್ಲಸ್‌ ಟಿಯಲ್ಲಿ ಸಾಂಪ್ರದಾಯಿಕವಾಗಿ ನಾವೆಲ್ಲ ಹಾಡು ಕೇಳಲು ಇಯರ್‌ಫೋನ್‌ ಅನ್ನು ಫೋನ್‌ಗೆ ಸಿಕ್ಕಿಸುವ 3.5ಎಂಎಂ ಆಡಿಯೋ ಜಾಕ್‌ ಇಲ್ಲ. ಯುಎಸ್‌ಬಿ ಟೈಪ್‌ ಸಿ ಕೇಬಲ್‌ ಇರುವ ಇಯರ್‌ಫೋನ್‌ಗಳನ್ನು ಬಳಸಬೇಕು. ಆದರೆ ಅದೃಷ್ಟವಶಾತ್‌, ಒನ್‌ ಪ್ಲಸ್‌ ಈ ಫೋನ್‌ ಜೊತೆಗೇನೇ,  ಟೈಪ್‌ ಸಿಯಿಂದ 3.5ಎಂಎಂ ಆಡಿಯೋ ಜಾಕ್‌ಗೆ ಪರಿವರ್ತಿತವಾಗುವ ಅಡಾಪ್ಟರ್‌ ನೀಡಿದೆ. ಇದಕ್ಕೆ ನಿಮ್ಮ ಹಳೆಯ 3.5 ಎಂಎಂ ಇಯರ್‌ ಫೋನ್‌ ಹಾಕಿ ಹಾಡು ಕೇಳಬಹುದು.

ಸ್ಕ್ರೀನ್‌ ಅನ್‌ ಲಾಕ್‌: ಒನ್‌ ಪ್ಲಸ್‌ 6ನಲ್ಲಿ ಫೋನ್‌ ರಕ್ಷಣೆಗೆ ಬೆರಳಚ್ಚು ಸ್ಕ್ಯಾನರ್‌ ಫೋನ್‌ನ ಹಿಂಬದಿಯಲ್ಲಿತ್ತು. 6 ಟಿಯಲ್ಲಿ ಪರದೆಯ ಮೇಲೆ (ಇನ್‌ ಡಿಸ್‌ಪ್ಲೇ ಫಿಂಗರ್‌ಪ್ರಿಂಟ್‌ ಸ್ಕ್ಯಾನರ್‌) ಬೆರಳಚ್ಚು ಸ್ಕ್ಯಾನರ್‌ ಇದೆ.

ನೀರಿನ ಹನಿಯಂಥ ಡಿಸ್‌ಪ್ಲೇ: ಇಡೀ ಪರದೆಯನ್ನಾವರಿಸುವ ನಾಚ್‌ ಡಿಸ್‌ ಪ್ಲೇ ಗಿಂತಲೂ ಮುಂದಿನ ಹಂತವಾದ ವಾಟರ್‌ ಡ್ರಾಪ್‌ ಡಿಸ್‌ಪ್ಲೇ ಇದರಲ್ಲಿದೆ. ಸೆಲ್ಫಿà ಕ್ಯಾಮರಾಕ್ಕೆ ಮಾತ್ರ ಜಾಗ ಕೊಡಲು, ನೀರಿನ ಹನಿಯ ಆಕಾರದಲ್ಲಿ ಖಾಲಿ ಬಿಡಲಾಗಿರುತ್ತದೆ. ಇದೇ ವಾಟರ್‌ ಡ್ರಾಪ್‌ ಡಿಸ್‌ಪ್ಲೇ!

ಬ್ಯಾಟರಿ ಸಾಮರ್ಥ್ಯ ಹೆಚ್ಚಳ: 6 ಮಾಡೆಲ್‌ನಲ್ಲಿ 3300 ಎಂಎಎಚ್‌ ಬ್ಯಾಟರಿ ಇತ್ತು. 6 ಟಿಯಲ್ಲಿ 3700 ಎಂಎಎಚ್‌ ಬ್ಯಾಟರಿ ಇದೆ. 6ನಲ್ಲಿ ಆರಂಭಿಕ ಶ್ರೇಣಿಗೆ 64 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ ಇತ್ತು. ಈ ಮಾಡೆಲ್‌ಗೆ 128 ಜಿಬಿ ಸ್ಟೋರೇಜ್‌ ಆರಂಭಿಕ. 64 ಜಿಬಿ ವರ್ಷನ್‌ ಮಾಡೆಲ್‌ ಇಲ್ಲ. 6ಗೆ ಅಂಡ್ರಾಯ್ಡ ಓರಿಯೋ ಓಎಸ್‌ ಇತ್ತು, ಬಳಿಕ ಇತ್ತೀಚೆಗೆ ಅಂಡ್ರಾಯ್ಡ 9ಪೈ ಅಪ್‌ಡೇಟ್‌ ನೀಡಲಾಗಿತ್ತು. 6ಟಿ ಮೂಲದಿಂದಲೇ 9ಪೈ ಕಾರ್ಯಾಚರಣಾ ವ್ಯವಸ್ಥೆ ಹೊಂದಿದೆ.

ಇನ್ನುಳಿದಂತೆ ಒನ್‌ ಪ್ಲಸ್‌ 6ನಲ್ಲಿ ಏನಿತ್ತೋ ಅವೆಲ್ಲ 6ಟಿಯಲ್ಲೂ ಇವೆ. ಅವೆಂದರೆ: ಸ್ನಾಪ್‌ಡ್ರಾಗನ್‌ 845 ಎಂಟು ಕೋರ್‌ಗಳ (2.8ಗಿ.ಹ) ಪ್ರೊಸೆಸರ್‌. 20+16 ಮೆಗಾಪಿಕ್ಸಲ್‌ ಹಿಂಬದಿ ಮತ್ತು 16 ಮೆ.ಪಿ. ಸೆಲ್ಫಿà ಕ್ಯಾಮರಾ ಹೊಂದಿದೆ.  ಕ್ಯಾಮರಾವನ್ನು ಇನ್ನಷ್ಟು ಉತ್ತಮಪಡಿಸಿ ಕಡಿಮೆ ಬೆಳಕಿನಲ್ಲೂ ಉತ್ತಮ ಫೋಟೋ ಬರುವಂತೆ ವಿನ್ಯಾಸ ಮಾಡಲಾಗಿದೆ ಎಂದು ಕಂಪೆನಿ ಹೇಳಿಕೊಂಡಿದೆ. ಹಿಂಬದಿ ವಿನ್ಯಾಸ ಬೆರಳಚ್ಚು ಸ್ಕ್ಯಾನರ್‌ ತೆಗೆದಿರುವುದನ್ನು ಬಿಟ್ಟರೆ ಇನ್ನುಳಿದಂತೆ ಅದೇ ರೀತಿ ಇದೆ. 6.41 ಇಂಚಿನ, ಫ‌ುಲ್‌ಎಚ್‌ಡಿಪ್ಲಸ್‌ ಆಪ್ಟಿಕ್‌ ಅಮೋಲೆಡ್‌ ಪರದೆ. ಶೇ.86ರಷ್ಟು ಜಾಗ ಪರದೆಯೇ ಇದ್ದು, ಇನ್ನು ಶೇ. 14ರಷ್ಟು ಮಾತ್ರ ಬೆಜೆಲ್ಸ್‌ ಇದೆ. (ಅಂದರೆ ಪರದೆಯ ಅಕ್ಕಪಕ್ಕ, ಮೇಲೆ ಕೆಳಗಿನ ಅಂಚುಗಳು). 

6 ಜಿಬಿ ರ್ಯಾಮ್‌ 128 ಜಿಬಿ ಆಂತರಿಕ ಸಂಗ್ರಹವಿರುವುದು ಆರಂಭಿಕ ಮಾಡೆಲ್‌ ಆಗಿದ್ದು, ಇದರ ದರ 37,999 ರೂ. ಇದೆ. 8 ಜಿಬಿ ರ್ಯಾಮ್‌ 128 ಜಿಬಿ ಸಂಗ್ರಹದ ಮಾಡೆಲ್‌ಗೆ  41999 ರೂ. ದರವಿದೆ. 8 ಜಿಬಿ ರ್ಯಾಮ್‌, 256 ಆಂತರಿಕ ಸಂಗ್ರಹದ ಮಾಡೆಲ್‌ಗೆ 45,999 ರೂ. ದರವಿದೆ. ಭಾರತದಲ್ಲಿ ಅಮೆಜಾನ್‌.ಇನ್‌ ನಲ್ಲಿ ಮತ್ತು ಒನ್‌ಪ್ಲಸ್‌ ಸ್ಟೋರ್‌ನಲ್ಲಿ ಮಾತ್ರ ಲಭ್ಯ.

– ಕೆ.ಎಸ್‌. ಬನಶಂಕರ ಆರಾಧ್ಯ

ಟಾಪ್ ನ್ಯೂಸ್

369 ಕೋಟಿ ರೂ.ಗಳ ಫ್ಲ್ಯಾಟ್‌ ಖರೀದಿ! ಭಾರತದ ಅತ್ಯಂತ ದುಬಾರಿ ಅಪಾರ್ಟ್‌ಮೆಂಟ್‌

369 ಕೋಟಿ ರೂ.ಗಳ ಫ್ಲ್ಯಾಟ್‌ ಖರೀದಿ! ಭಾರತದ ಅತ್ಯಂತ ದುಬಾರಿ ಅಪಾರ್ಟ್‌ಮೆಂಟ್‌

vote

ಉಡುಪಿ ಜಿಲ್ಲೆಯಲ್ಲಿ 206 ಶತಾಯುಷಿ ಮತದಾರರು

hazelwood

ಏಳು ಪಂದ್ಯಗಳಿಗೆ ಹೇಝಲ್‌ವುಡ್‌ ಇಲ್ಲ

ರೂಪಾಯಿ ಆಗಲಿದೆ ಕಿಂಗ್‌; ವಿದೇಶಿ ವಹಿವಾಟಿಗೆ ದೇಶಿ ಟಚ್‌ ನೀಡಲು ಯತ್ನ

ರೂಪಾಯಿ ಆಗಲಿದೆ ಕಿಂಗ್‌; ವಿದೇಶಿ ವಹಿವಾಟಿಗೆ ದೇಶಿ ಟಚ್‌ ನೀಡಲು ಯತ್ನ

6 ರಾಜ್ಯಗಳಲ್ಲಿ ಹಿಂಸಾಚಾರ; ರಾಮನವಮಿ ಮೆರವಣಿಗೆ ವೇಳೆ ಘರ್ಷಣೆ: ಹೌರಾದಲ್ಲಿ ಗಲಭೆ

6 ರಾಜ್ಯಗಳಲ್ಲಿ ಹಿಂಸಾಚಾರ; ರಾಮನವಮಿ ಮೆರವಣಿಗೆ ವೇಳೆ ಘರ್ಷಣೆ: ಹೌರಾದಲ್ಲಿ ಗಲಭೆ

police

ಮದ್ರಸಾ ಅಧ್ಯಾಪಕನಿಗೆ 53 ವರ್ಷ ಕಠಿಣ ಸಜೆ, ದಂಡ

pun kkr

ಪಂಜಾಬ್‌-ಕೆಕೆಆರ್‌ ಪಂದ್ಯಕ್ಕೆ ಮಳೆ ಭೀತಿ : ಇತ್ತಂಡಗಳಿಗೂ ಗಾಯಾಳುಗಳದ್ದೇ ಚಿಂತೆ



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಸ್ನೇಕ್ ಶಾಮ್ ಹಾವುಗಳ ರಕ್ಷಣೆಗೆ ಮುಂದಾಗಲು ಇದೇ ಕಾರಣ | ಸ್ನೇಕ್ ಶ್ಯಾಮ್ ಮನದಾಳದ ಮಾತು

udayavani youtube

ಎವರೆಸ್ಟ್ ಹತ್ತುವವರ ಊಟ ತಿಂಡಿ ಕ್ರಮ ಹೇಗಿರುತ್ತೆ ನೋಡಿ !

udayavani youtube

ಮೈಸೂರಿಗೆ ಬಂದವರು ಇಲ್ಲಿಗೊಮ್ಮೆ ಭೇಟಿ ಕೊಡಲೇಬೇಕು

udayavani youtube

ಜಗತ್ತಿನ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನೊಮ್ಮೆ ನೋಡಿಬಿಡಿ | Udayavani

udayavani youtube

ಎವರೆಸ್ಟ್ ತುದಿಯಲ್ಲಿ 14 ವರ್ಷಗಳಿಂದಲೂ ಇದೇ ಆ ಒಂದು ಮೃತ ದೇಹ

ಹೊಸ ಸೇರ್ಪಡೆ

369 ಕೋಟಿ ರೂ.ಗಳ ಫ್ಲ್ಯಾಟ್‌ ಖರೀದಿ! ಭಾರತದ ಅತ್ಯಂತ ದುಬಾರಿ ಅಪಾರ್ಟ್‌ಮೆಂಟ್‌

369 ಕೋಟಿ ರೂ.ಗಳ ಫ್ಲ್ಯಾಟ್‌ ಖರೀದಿ! ಭಾರತದ ಅತ್ಯಂತ ದುಬಾರಿ ಅಪಾರ್ಟ್‌ಮೆಂಟ್‌

vote

ಉಡುಪಿ ಜಿಲ್ಲೆಯಲ್ಲಿ 206 ಶತಾಯುಷಿ ಮತದಾರರು

hazelwood

ಏಳು ಪಂದ್ಯಗಳಿಗೆ ಹೇಝಲ್‌ವುಡ್‌ ಇಲ್ಲ

ರೂಪಾಯಿ ಆಗಲಿದೆ ಕಿಂಗ್‌; ವಿದೇಶಿ ವಹಿವಾಟಿಗೆ ದೇಶಿ ಟಚ್‌ ನೀಡಲು ಯತ್ನ

ರೂಪಾಯಿ ಆಗಲಿದೆ ಕಿಂಗ್‌; ವಿದೇಶಿ ವಹಿವಾಟಿಗೆ ದೇಶಿ ಟಚ್‌ ನೀಡಲು ಯತ್ನ

6 ರಾಜ್ಯಗಳಲ್ಲಿ ಹಿಂಸಾಚಾರ; ರಾಮನವಮಿ ಮೆರವಣಿಗೆ ವೇಳೆ ಘರ್ಷಣೆ: ಹೌರಾದಲ್ಲಿ ಗಲಭೆ

6 ರಾಜ್ಯಗಳಲ್ಲಿ ಹಿಂಸಾಚಾರ; ರಾಮನವಮಿ ಮೆರವಣಿಗೆ ವೇಳೆ ಘರ್ಷಣೆ: ಹೌರಾದಲ್ಲಿ ಗಲಭೆ