ಬಾಳೆ ಎಲೆ ಊಟಕ್ಕೆಬಂಗಾರಪೇಟೆಗೆ ಬನ್ನಿ

ನಮ್ಮೂರ ಹೋಟೆಲ್‌

Team Udayavani, May 13, 2019, 6:30 AM IST

ಜಾಗತೀಕರಣದ ಪ್ರಭಾವದ ನಡುವೆಯೂ ಕೆಲವು ಹೋಟೆಲ್‌ಗ‌ಳು ಇಂದಿಗೂ ತಮ್ಮ ಹಳೇ ರುಚಿ, ಸಂಪ್ರದಾಯವನ್ನು ಉಳಿಸಿಕೊಂಡು ಬರುತ್ತಿವೆ. ಅಂಥ ಹೋಟೆಲ್‌ಗ‌ಳಲ್ಲಿ ಬಂಗಾರಪೇಟೆಯ ಸುಜಾತ ಹೋಟೆಲ್‌ ಕೂಡ ಒಂದು. ಈ ಹೋಟೆಲ್‌, ಅದರ ಮಾಲೀಕರು, ಅವರ ಹಿನ್ನೆಲೆ ಹೀಗಿದೆ.

1979ರಲ್ಲಿ ನಾಗರಾಜರಾವ್‌ ಅವರು ಸುಜಾತ ಹೆಸರಿನ ಹೋಟೆಲ್‌ ಆರಂಭಿಸಿದ್ದರು. ಆಂಧ್ರದ ಬಡಿಕಾಯನಪಲ್ಲಿ ಇವರ ಮೂಲ ಸ್ಥಳ. ಇವರ ತಂದೆ ಸೀತರಾಮಯ್ಯ ಬಂಗಾರಪೇಟೆ ತಾಲೂಕಿನ ಹುದುಕುಲ ಸಮೀಪದ ವಟ್ರಾಕುಂಟೆಯ ಗೌರಮ್ಮ ಅವರನ್ನು ಮದುವೆಯಾಗಿ ಇಲ್ಲಿಯೇ ನೆಲೆಸಿದ್ದರು. ಸೀತಾರಾಮಯ್ಯ ಹುದುಕುಲ ರೈಲ್ವೆ ನಿಲ್ದಾಣದ ಬಳಿ ಪುಟ್ಟದಾದ ಹೋಟೆಲ್‌ ಮಾಡಿಕೊಂಡು ಇಡ್ಲಿ, ವಡೆ, ಚಿತ್ರಾನ್ನ ಹೀಗೆ ಎರಡು ಮೂರು ಬಗೆಯ ತಿಂಡಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಇವರಿಗೆ ನಾಲ್ವರು ಪುತ್ರರು, ಪುತ್ರಿ ಇದ್ದು, ಇವರಲ್ಲಿ ಸುಜಾತ ಹೋಟೆಲ್‌ ಮಾಲೀಕ ನಾಗರಾಜರಾವ್‌ ಕೂಡ ಒಬ್ಬರು.

ಚಿಕ್ಕವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡ ಇವರನ್ನು ಸೋದರ ಮಾವ ಸುಬ್ಬಣ್ಣ ಸಾಕಿ ಸಲಹಿದರು. ಎಸ್ಸೆಸ್ಸೆಲ್ಸಿಗೆ ವಿದ್ಯಾಭ್ಯಾಸ ಮೊಟಕುಗೊಳಿಸಿದ ನಾಗರಾಜರಾವ್‌, ಅಡುಗೆ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ನಂತರ ಚೂಡನಾಥ್‌ ಎಂಬುವರು ನಡೆಸುತ್ತಿದ್ದ ಹೋಟೆಲ್‌ನಲ್ಲಿ ಕೆಲಸಕ್ಕೆ ಸೇರಿಕೊಂಡರು. ಮುಂದೆ ವಯಸ್ಸಾಯ್ತು ಎಂಬ ಕಾರಣಕ್ಕೆ ಚೂಡನಾಥ್‌ ಅವರು ಹೋಟೆಲ್‌ ಮುಚ್ಚಲು ಮುಂದಾಗಿದ್ದರು. ಆಗ ನಾಗರಾಜರಾವ್‌ ಅವರೇ ಹೋಟೆಲ್‌ ಅನ್ನು ಖರೀದಿಸಿ ಅದಕ್ಕೆ ತಮ್ಮ ಸಹೋದರಿಯ ಪುತ್ರಿ ಸುಜಾತ ಅವರ ಹೆಸರನ್ನೇ ನಾಮಕರಣ ಮಾಡಿದರು.

ನಂತರ ಮೀನಾಕ್ಷಮ್ಮ ಅವರನ್ನು ಮದುವೆಯಾದ ನಾಗರಾಜರಾವ್‌ಗೆ, ಎನ್‌.ಸೀತಾರಾಮ ಎಂಬ ಪುತ್ರ ಇದ್ದಾರೆ. ಪಿಯುಸಿ ನಂತರ ತಮ್ಮದೇ ಹೋಟೆಲ್‌ನಲ್ಲಿ ಸಪ್ಲೈ ಅಡುಗೆ ಕೆಲಸಕ್ಕೆ ಸೇರಿಕೊಂಡ ಸೀತಾರಾಮ, ಈಗ ಹೋಟೆಲ್‌ನ ಪೂರ್ಣ ಜವಾಬ್ದಾರಿ ಹೊತ್ತಿದ್ದಾರೆ. ನಾಗರಾಜರಾವ್‌ಗೆ ವಯಸ್ಸಾಗಿರುವ ಕಾರಣ ಹಳ್ಳಿಯಲ್ಲೇ ವಿಶ್ರಾಂತಿ ಪಡೆಯುತ್ತಾ, ಆಗಾಗ ಹೋಟೆಲ್‌ಗ‌ೂ ಬಂದು ನೋಡಿಕೊಂಡು ಹೋಗುತ್ತಾರೆ.

ಈಗ ಸುಜಾತ ನ್ಯೂ
ಹೋಟೆಲ್‌ನ ಜವಾಬ್ದಾರಿ ವಹಿಸಿಕೊಂಡ ನಂತರ ಎನ್‌.ಸೀತಾರಾಮ, 10 ವರ್ಷ ನಾಮಫ‌ಲಕವಿಲ್ಲದೇ ನಡೆಯುತ್ತಿದ್ದ ಸುಜಾತ ಹೋಟೆಲ್‌ಗೆ “ನ್ಯೂ’ ಅನ್ನು ಸೇರಿಸಿದ್ದಾರೆ. ಆದ್ರೆ, ಕಟ್ಟಡ, ಕುರ್ಚಿ, ಚೇರು, ಅಡುಗೆ ರುಚಿಯನ್ನು ಹಾಗೇ ಉಳಿಸಿಕೊಂಡು ಬರುತ್ತಿದ್ದಾರೆ. ಹೊಸದಾಗಿ ಬರುವ ಗ್ರಾಹಕರಿಗೆ ಗೊತ್ತಾಗಲಿ ಎಂಬ ಕಾರಣಕ್ಕೆ ಹೊಸದಾಗಿ ನೇಮ್‌ ಬೋರ್ಡ್‌ ಬರೆಸಿದ್ದೇನೆ ಎನ್ನುತ್ತಾರೆ ಸೀತಾರಾಮ.

ಈಗಲೂ ಬಾಳೆ ಎಲೆ ಬಳಕೆ
ಸಣ್ಣಪುಟ್ಟ ಹೋಟೆಲ್‌ಗ‌ಳಲ್ಲೂ ಈಗ ಪ್ಲಾಸ್ಟಿಕ್‌ ಬಳಕೆ ಮಾಡ್ತಾರೆ. ಆದರೆ, ಸುಜಾತ ನ್ಯೂ ಹೋಟೆಲ್‌ನಲ್ಲಿ ಬಾಳೆ ಎಲೆಯಲ್ಲೇ ಊಟ ಹಾಕ್ತಾರೆ. ಒಮ್ಮೆಗೆ 20 ಜನ ಕೂತು ಊಟ ಮಾಡುತ್ತಾರೆ. ಒಂದು ರೀತಿಯಲ್ಲಿ ಮದುವೆ ಮನೆಯಲ್ಲಿ ಊಟ ಮಾಡಿದ ಅನುಭವ ಆಗುತ್ತದೆ ಎನ್ನುತ್ತಾರೆ ಗ್ರಾಹಕರು. ಮಧ್ಯಾಹ್ನ 1.30ರಿಂದ 3ಗಂಟೆವರೆಗೂ ಗ್ರಾಹಕರು ಕಾದು ನಿಂತು ಊಟ ಮಾಡುತ್ತಾರೆ.

— ಭೋಗೇಶ ಆರ್‌.ಮೇಲುಕುಂಟೆ / ಎಂ.ಸಿ.ಮಂಜುನಾಥ್‌

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ