ತೋಳದಿಂದ ಪಾರಾದ ಕುದುರೆ!


Team Udayavani, Sep 28, 2017, 10:47 AM IST

ch9.jpg

ಕಾಡಿನ  ಪಕ್ಕದ ಬಯಲಿನಲ್ಲಿ ಕುದುರೆಯೊಂದು ಮೇಯುತ್ತಿತ್ತು. ಅಕ್ಕಪಕ್ಕದಲ್ಲಿ ಯಾವ ಪ್ರಾಣಿಯೂ ಇರಲಿಲ್ಲ. ಹುಲುಸಾಗಿ ಹುಲ್ಲು ಬೆಳೆದಿತ್ತು. ಹಸಿದಿದ್ದ ಕುದುರೆ ಹುಲ್ಲು ತಿನ್ನುವುದರಲ್ಲಿ ಮಗ್ನವಾಗಿತ್ತು. ಸ್ವಲ್ಪ ಸಮಯದ ನಂತರ ಆ ಮಾರ್ಗವಾಗಿ ತೋಳವೊಂದು ಬಂದಿತು. ಕೊಬ್ಬಿದ ಆ ಕುದುರೆಯನ್ನು ಕಂಡು ಅದರ ಬಾಯಲ್ಲಿ ನೀರೂರಿತು. “ಕುದುರೆಗಳು ಬಹಳ ಬಲಿಷ್ಠವಾಗಿರುತ್ತವೆ ಎಂದು ಯೋಚಿಸಿದ ತೋಳ ಅದನ್ನು ತಿನ್ನುವ ಉಪಾಯವನ್ನು ಚಿಂತಿಸುತ್ತಾ ಮೆಲ್ಲಗೆ ಹೋಗುತ್ತಿತ್ತು.

ಇಂತಹ ಕ್ರೂರ ತೋಳನಿಗೇ ವರ್ಷಗಳ ಹಿಂದೆ ನನ್ನ ತಾತ ಬಲಿಯಾದ ಬಗ್ಗೆ ಅಜ್ಜಿಯು ನೆನೆಯುತ್ತಾ ಪ್ರತಿದಿನ ಕಣ್ಣೀರು ಸುರಿಸುವುದನ್ನು ನೆನೆಸಿಕೊಂಡು ಆ ಕುದುರೆ ಕ್ಷಣಕಾಲ ಕಂಪಿಸಿತು. ನಂತರ ಧೈರ್ಯ ತಂದುಕೊಂಡು ಅದರಿಂದ ತಪ್ಪಿಸಿಕೊಳ್ಳುವ ಉಪಾಯವನ್ನು ಯೋಚಿಸಿ ಕುಂಟತೊಡಗಿತು. ಗಟ್ಟಿಮುಟ್ಟಾದ ಕುದುರೆ ಕುಂಟುವುದನ್ನು ಕಂಡ ತೋಳ ಸ್ವಲ್ಪ ಧೈರ್ಯ ತಂದುಕೊಂಡು ಅದರ ಬಳಿಗೆ ಹೋಗಿ ಕುದುರೆಯನ್ನು ಏತಕ್ಕೆ ಕುಂಟುತ್ತಿರುವೆ? ಎಂದು ಪ್ರಶ್ನಿಸಿತು.

ನನ್ನ ಬಲಗಾಲಿನ ಗೊರಸಿನಲ್ಲಿ ಮುಳ್ಳಿದೆ. ಅದಕ್ಕೇ ನೋವಿನಿಂದ ಕುಂಟುತ್ತಿರುವೆ… ಎಂದು ಉತ್ತರಿಸಿತು ಆ ಕುದುರೆ. ಈ ಮಾತು ಕೇಳಿ ತೋಷಕ್ಕೆ ಖುಷಿಯಾಯಿತು. ಮುಳ್ಳು ತೆಗೆಯುವ ನೆಪದಲ್ಲಿ ಕುದುರೆಯನ್ನೂ ನಯವಾದ ಮಾತುಗಳಿಂದ ಮರುಳು ಮಾಡಬೇಕು. ಆನಂತರ, ಅದನ್ನು ಅಟ್ಟಿಸಿಕೊಂಡು ಹೋಗಿ ಬೇಟೆಯಾಡಬೇಕು. ಹೇಗಿದ್ದರೂ ಕಾಲಿಗೆ ಗಾಯವಾಗಿರುವುದರಿಂದ ಅದು ವೇಗವಾಗಿ ಓಡಲು ಸಾಧ್ಯವಿಲ್ಲ. ಅಂತೂ ಇವತ್ತು ನನಗೆ ರುಚಿರುಚಿಯಾದ ಭೋಜನ ಸಿಗುತ್ತದೆ ಎಂದೆಲ್ಲಾ ಲೆಕ್ಕಾಚಾರ ಮಾಡಿಕೊಂಡಿತು ತೋಳ.

ಇದೇನನ್ನೂ ಹೊರನೋಟಕ್ಕೆ ತೋರ್ಪಡಿಸದೆ, ಅನುಕಂಪದ ದನಿಯಲ್ಲಿ “ಹೌದಾ…? ಹಾಗಾದರೆ ಆ ಮುಳ್ಳನ್ನು ನಾನು ತೆಗೆಯುವೆ’ ಎಂದು, ಅದರ ಹಿಂಗಾಲಿನ ಗೊರಸನ್ನು ಹತ್ತಿರದಿಂದ ಬಗ್ಗಿ ನೋಡಿತು. ಅದೇ ಸಮಯವನ್ನು ಕಾಯುತ್ತಿದ್ದ ಆ ಕುದುರೆ, ತನ್ನೆರಡು ಕಾಲುಗಳಿಂದ ಬಲವಾಗಿ ತೋಳಕ್ಕೆ ಒದೆಯಿತು. ಇಂಥದ್ದೊಂದು ಅನಿರೀಕ್ಷಿತ ಹೊಡೆತವನ್ನು ಕನಸಿನಲ್ಲೂ ನಿರೀಕ್ಷಿಸಿರದ ತೋಳ ಗಾಳಿಯಲ್ಲಿ ಹಾರುತ್ತ, ಮಾರುದೂರ ಎಗರಿ ಹೋಗಿ ಕೆಳಕ್ಕೆ ದೊಪ್ಪೆಂದು ಬಿದ್ದಿತು. ಆ ಏಟಿಗೆ ಗಾಯಗೊಂಡ ಅದು ಹಿಂದಿರುಗಿ ನೋಡದೇ ಓಟಕಿತ್ತಿತು.

* ಪ್ರೊ. ಎಚ್‌. ಗವಿಸಿದ್ದಯ್ಯ

ಟಾಪ್ ನ್ಯೂಸ್

ಸಂಸದ ಶ್ರೀನಿವಾಸ್‌ ಪ್ರಸಾದ್‌ ಆರೋಗ್ಯ ಗಂಭೀರ; ಆಸ್ಪತ್ರೆಗೆ ದಾಖಲು

ಸಂಸದ ಶ್ರೀನಿವಾಸ್‌ ಪ್ರಸಾದ್‌ ಆರೋಗ್ಯ ಗಂಭೀರ; ಆಸ್ಪತ್ರೆಗೆ ದಾಖಲು

Modi (2)

Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ

arrested

Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಸಂಸದ ಶ್ರೀನಿವಾಸ್‌ ಪ್ರಸಾದ್‌ ಆರೋಗ್ಯ ಗಂಭೀರ; ಆಸ್ಪತ್ರೆಗೆ ದಾಖಲು

ಸಂಸದ ಶ್ರೀನಿವಾಸ್‌ ಪ್ರಸಾದ್‌ ಆರೋಗ್ಯ ಗಂಭೀರ; ಆಸ್ಪತ್ರೆಗೆ ದಾಖಲು

Modi (2)

Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ

arrested

Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು

accident

Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.