ದುಡ್ಡನ್ನು ಡಬಲ್‌ ಮಾಡೋ ಮ್ಯಾಜಿಕ್‌

Team Udayavani, Jan 11, 2018, 1:39 PM IST

22-23.jpg

ಅಪ್ಪ- ಅಮ್ಮ ಕೊಟ್ಟಿದ್ದರಲ್ಲಿ ಐದೋ-ಹತ್ತೋ ರೂಪಾಯಿ ಉಳಿಸಿ ಪಿಗ್ಗಿ ಬ್ಯಾಂಕ್‌ನಲ್ಲಿ ಕೂಡಿಡುತ್ತೀರಿ. ಅದು ತುಂಬಿದ ಮೇಲೆ ಗೊಂಬೆ, ಆಟಿಕೆ, ಚಾಕ್ಲೇಟ್‌ ಹೀಗೆ ಏನೇನೋ ತಗೋಬೇಕು ಅಂತ ಮನಸಲ್ಲೇ ಲೆಕ್ಕ ಹಾಕ್ತೀರಿ. ಆಗೆಲ್ಲ, ದುಡ್ಡನ್ನು ಡಬಲ್‌ ಮಾಡೋ ಮಂತ್ರ ಗೊತ್ತಿದ್ದರೆ ಚೆನ್ನ ಅನಿಸುತ್ತೆ ಅಲ್ವಾ? ಅಂಥದ್ದೊಂದು ಮ್ಯಾಜಿಕ್‌ ಇಲ್ಲಿದೆ. ಇದನ್ನು ಕಲಿತರೆ, ಒಂದು ನಾಣ್ಯದಿಂದ ಎರಡು ನಾಣ್ಯಗಳನ್ನು ಸೃಷ್ಟಿಸಿ ಗೆಳೆಯರ ಮುಂದೆ ಮಿಂಚಬಹುದು. 
ಬೇಕಾಗುವ ವಸ್ತು: ಒಂದು ಸಣ್ಣ ನಾಣ್ಯ (ಹೊಸ 1. ರೂ. ನಾಣ್ಯ), 2 ದೊಡ್ಡ ನಾಣ್ಯಗಳು (ಹಳೆ 2 ರೂ. ನಾಣ್ಯ)

ಪ್ರದರ್ಶನ: ಜಾದೂಗಾರನ ಹೆಬ್ಬೆರಳು ಮತ್ತು ತೋರು ಬೆರಳಿನ ಮಧ್ಯೆ ಒಂದು ನಾಣ್ಯ ಇರುತ್ತದೆ. ಆತ ಅದನ್ನು ಪ್ರೇಕ್ಷಕರಿಗೆ ತೋರಿಸುತ್ತಾನೆ. ನಂತರ ತನ್ನ ಮಂತ್ರದಂಡವನ್ನು ನಾಣ್ಯದ ಸುತ್ತ ತಿರುಗಿಸಿ, ಇನ್ನೊಂದು ಕೈನ ಹೆಬ್ಬೆರಳನ್ನು ಹತ್ತಿರ ತೆಗೆದುಕೊಂಡು ಬಂದು, ಕೈ ಬಿಡಿಸುತ್ತಾನೆ. ಏನಾಶ್ಚರ್ಯ! ಜಾದೂಗಾರನ ಅಂಗೈಯಲ್ಲಿ ಎರಡು ನಾಣ್ಯಗಳಿವೆ.

ತಯಾರಿ: ಇದೊಂದು ಕೈ ಚಳಕ ಮತ್ತು ಕಣRಟ್ಟಿನ ಜಾದೂ. ಚೂರು ಯಾಮಾರಿದರೂ ನಿಮ್ಮ ಮ್ಯಾಜಿಕ್‌ ಶೋ ಫ್ಲಾಪ್‌ ಆಗುತ್ತೆ. ಯಾಕೆ ಗೊತ್ತಾ? ನಿಜವಾಗಿಯೂ ನಿಮ್ಮ ಕೈಯಲ್ಲಿರೋದು ಒಂದಲ್ಲ, ಮೂರು ನಾಣ್ಯಗಳು. ಒಂದು ಸಣ್ಣ ನಾಣ್ಯ, ಎರಡು ದೊಡ್ಡ ನಾಣ್ಯಗಳು.
ಮೊದಲು, ಹೆಬ್ಬೆರಳು ಮತ್ತು ತೋರುಬೆರಳಿನ ಮಧ್ಯೆ ಎರಡು ದೊಡ್ಡ ನಾಣ್ಯಗಳನ್ನು ಅಡ್ಡವಾಗಿ (ಮಲಗಿಸಿ) ಹಿಡಿದುಕೊಳ್ಳಿ. ಆ ನಾಣ್ಯಗಳು ನೋಡುಗರಿಗೆ ಕಾಣಿಸದಂತೆ ಸಣ್ಣ ನಾಣ್ಯವನ್ನು ಉದ್ದಕ್ಕೆ ಹಿಡಿಯಿರಿ. ಪ್ರೇಕ್ಷಕರಿಗೆ ಸಣ್ಣ ನಾಣ್ಯ ಮಾತ್ರ ಕಾಣಿಸುತ್ತಿರುತ್ತಿದೆ. ನಂತರ ಮಂತ್ರದಂಡ ಹಿಡಿದು ಮ್ಯಾಜಿಕ್‌ ಮಾಡುವವರಂತೆ ನಟಿಸುತ್ತಾ, ನಿಧಾನಕ್ಕೆ ಇನ್ನೊಂದು ಕೈನ ಹೆಬ್ಬೆರಳಿನಿಂದ ಸಣ್ಣ ನಾಣ್ಯವನ್ನು ಅಂಗೈಗೆ ತಳ್ಳಿ, ಎರಡು ನಾಣ್ಯಗಳನ್ನು ಜನರಿಗೆ ಕಾಣಿಸುವಂತೆ ಮಾಡಿ. ಪ್ರಯೋಗಕ್ಕೂ ಮುನ್ನ, ಕನ್ನಡಿಯ ಮುಂದೆ ನಿಂತು ಚೆನ್ನಾಗಿ ಪ್ರ್ಯಾಕ್ಟೀಸ್‌ ಮಾಡಿ. ಕೈ ಚಳಕದಲ್ಲಿ ಚೂರೇ ಚೂರು ಮಿಸ್‌ ಆದರೂ ಗುಟ್ಟು ರಟ್ಟಾಗಿ ಬಿಡುತ್ತದೆ. 

ಟಾಪ್ ನ್ಯೂಸ್

PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್

PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್

Davanagere ಮೋದಿ ಸಮಾವೇಶ: ಬಿಸಿಲಿನ ನಡುವೆಯೂ ಸೇರಿದ ಸಹಸ್ರಾರು ಜನರು

Davanagere ಮೋದಿ ಸಮಾವೇಶ: ಬಿಸಿಲಿನ ನಡುವೆಯೂ ಸೇರಿದ ಸಹಸ್ರಾರು ಜನರು

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

5-araga

LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ

ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

4-heart-diseases

Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!

3-

LS Polls: ರಾಷ್ಟ್ರ ಪ್ರೇಮ ಬಿಜೆಪಿಯವರಿಂದ ಕಲಿಯಬೇಕಾಗಿಲ್ಲ: ಮಂಜುನಾಥ್ ಭಂಡಾರಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

8

Devanahalli: ಬೇಸಿಗೆ ಬಿಸಿ; ಹುರುಳಿಕಾಯಿ ದರ ದುಬಾರಿ

PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್

PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್

Davanagere ಮೋದಿ ಸಮಾವೇಶ: ಬಿಸಿಲಿನ ನಡುವೆಯೂ ಸೇರಿದ ಸಹಸ್ರಾರು ಜನರು

Davanagere ಮೋದಿ ಸಮಾವೇಶ: ಬಿಸಿಲಿನ ನಡುವೆಯೂ ಸೇರಿದ ಸಹಸ್ರಾರು ಜನರು

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

5-araga

LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.